ಅಮ್ಮ ಲೀಲಾವತಿ ನೆನಪಿಗಾಗಿ 55 ಲಕ್ಷ ಖರ್ಚು ಮಾಡಲು ಹೊರಟ ವಿನೋದ್ ರಾಜ್, ಎಲ್ಲರೂ ಮೆಚ್ಚಿದ ಆ ಕಾರ್ಯ ಯಾವುದು ಗೊತ್ತಾ.?.
ಕನ್ನಡ ಚಿತ್ರರಂಗದ ದಂತಕಥೆ ಹಿರಿಯ ನಟಿ ಲೀಲಾವತಿಯವರು (Actress Leelavathi) ಸಾವಿರಾರು ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕಾಗಿ ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ. ಕಪ್ಪು ಬಿಳುಪು ಕಾಲದಿಂದ ಹಿಡಿದು ಸರಿಸುಮಾರು ಜೀವಮಾನದ ಇಳಿ ವಯಸ್ಸಿನವರೆಗೆ ಚಿತ್ರರಂಗಕ್ಕಾಗಿ ದುಡಿದ ಇವರು ಕನ್ನಡ ಚಿತ್ರರಂಗ ಕಟ್ಟುವುದಕ್ಕೆ ಬುನಾದಿ ಕೊಟ್ಟ ಪ್ರಮುಖರಲ್ಲಿ ಒಬ್ಬರು ಎಂದರೆ ತಪ್ಪಾಗಲಾರದು. ಡಿಸೆಂಬರ್ 8 ರಂದು ವಯೋ ಸಹಜ ಕಾರಣಗಳಿಂದ ಲೀಲಾವತಿಯವರು ಇಹಲೋಕ ತ್ಯಜಿಸಿದ್ದಾರೆ. ನೆಲಮಂಗಲ ಅಂಬೇಡ್ಕರ್ ಕಾಲೋನಿ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇವರ…