ಅಪ್ಪು ಮನೆಗೆ ಹೋಗುವ ಕನಸು ಹೊಂದಿದ್ದ ಪುಟ್ಟ ಅಭಿಮಾನಿ, ಕ್ಯಾನ್ಸರ್ ಪೀಡಿತ ಬಾಲಕನ ಆಸೆ ನೆರವೇರಿಸಿದ ಅಶ್ವಿನಿ ಪುನೀತ್…
ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Punith Raj Kumar) ಎಂದರೆ ಮನೆ ಮಂದಿಗೆಲ್ಲ ಬಹಳ ಇಷ್ಟ. ಮಕ್ಕಳಿಗೆ ಪ್ರೀತಿಯ ಅಪ್ಪು, ಯುವಕರಿಗೆ ಯೂತ್ ಐಕಾನ್ ಮತ್ತು ವೃದ್ಧರಿಗೆ ಮನೆ ಮಗನಂತೆ ಕಾಣಿಸಿಕೊಳ್ಳುತ್ತಿದ್ದರು. ಪುನೀತ್ ಅವರ ಡ್ಯಾನ್ಸ್ ಫೈಟ್ ಮಕ್ಕಳಿಗೆ ಇಷ್ಟವಾದರೆ ಅವರು ಆರಿಸಿಕೊಳ್ಳುತ್ತಿದ್ದ ಕಥೆಗಳು ಮನೆಮಂದಿಯೆಲ್ಲಾ ಕುಳಿತು ನೋಡುವಂತೆ ಇರುತ್ತಿತ್ತು. ಜೊತೆಗೆ ಅಪ್ಪು ಚಿಕ್ಕ ವಯಸ್ಸಿನಿಂದಲೂ ಕೂಡ ಸಿನಿಮಾಗಳಲ್ಲಿ ಪಾತ್ರ ಮಾಡುತ್ತಾ ಬಂದ ಕಾರಣ ಈಗಲೂ ಕೂಡ ಕರ್ನಾಟಕದ ಜನತೆಗೆ ತಮ್ಮ ಮನೆಯ ಸದಸ್ಯನೆನಿಸಿದ್ದಾರೆ. ಹಾಗೆ ತುಂಬಿದ…