ಸೌತ್ ಸಿನಿಮಾ ಇಂಡಸ್ಟ್ರಿಯ ಲೇಡಿ ಸೂಪರ್ ಸ್ಟಾರ್ ನಯನತಾರಾ (Lady Super star Nayanathara) ಅವರ ಅನ್ನಪೂರ್ಣಿ ಸಿನಿಮಾ (Annapoorni Cinema) ಡಿಸೆಂಬರ್ 1, 2023 ರಂದು ರಿಲೀಸ್ ಆಗಿತ್ತು. ಬಿಗ್ ಸ್ಕ್ರೀನ್ ಮೇಲೆ ಅಷ್ಟೊಂದು ಸದ್ದು ಮಾಡದ ಸಿನಿಮಾ ಡಿಸೆಂಬರ್ ಅಂತ್ಯದಲ್ಲಿ OTT ಯಲ್ಲಿ ರಿಲೀಸ್ ಆಗಿತ್ತು. ನೆಟ್ ಫ್ಲಿಕ್ಸ್ ನಲ್ಲಿ (Netflix) ರಿಲೀಸ್ ಆದ ನಂತರ ಸೂಪರ್ ಹಿಟ್ ಆಯಿತು.
ಏಳು ತಲೆಮಾರಿನಿಂದ ಶ್ರೀರಂಗನ ದೇವಸ್ಥಾನದಲ್ಲಿ ದೇವರಿಗೆ ನೈವೇದ್ಯ ತಯಾರಿಸುವ ಬ್ರಾಹ್ಮಣ ಕುಟುಂಬದ, ಇಂಜಿನಿಯರಿಂಗ್ ಓದಿ ಕೈ ತುಂಬಾ ಸಂಬಳ ಬರುವ ಪ್ರತಿಷ್ಠಿತ ಹುದ್ದೆಯಲ್ಲಿದ್ದರೂ ಕೆಲಸಕ್ಕೆ ರಾಜೀನಾಮೆ ಕೊಟ್ಟು ಕುಟುಂಬ ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವನ್ನು ಬಹಳ ಭಯ ಭಕ್ತಿಯಿಂದ ಶ್ರೀರಂಗನ ಸೇವೆ ಮಾಡುವ ಅದೃಷ್ಟ ಎಂದು ನಂಬಿ ಆದರ್ಶ ಜೀವನ ನಡೆಸುತ್ತಿದ್ಧ ರಂಗರಾವ್ ಮಗಳು ಅನ್ನಪೂರ್ಣಿ ನಂಬರ್ 1 ಶೆಫ್ ಆಗಲೇಬೇಕು ಎಂದು ಹಠಕ್ಕೆ ಬಿಡುತ್ತಾಳೆ.
ಆಕೆ ಆ ರೀತಿಯಾಗಲು ಮಾಂಸ ಮುಟ್ಟಬೇಕಾಗುತ್ತದೆ, ಸಸ್ಯಹಾರಿ ಅಡುಗೆ ಮಾತ್ರವಲ್ಲದೇ ಮಾಂಸಾಹಾರಿ ಅಡುಗೆಗಳನ್ನು ಮಾಡಿ ಅದರ ರುಚಿ ನೋಡಿ ಕಲಿಯಬೇಕಾಗುತ್ತದೆ, ನಮ್ಮ ಕುಟುಂಬಕ್ಕೆ ಅದು ಆಗಿ ಬರುವುದಿಲ್ಲ ಎನ್ನುವ ಕಾರಣಕ್ಕೆ ತಂದೆ ಅಡ್ಡಿ ಪಡಿಸುತ್ತಾರೆ ಕನಸು ಮತ್ತು ಕುಟುಂಬದ ಸಂಪ್ರದಾಯದ ಮಧ್ಯೆ ಸಿಲುಕಿಕೊಂಡ ನಾಯಕಿ ಎಲ್ಲವನ್ನು ಮೀರಿ ಹೇಗೆ ಗುರಿ ಸಾಧಿಸುತ್ತಾಳೆ ಎನ್ನುವುದು ಸಿನಿಮಾದ ಸ್ಟೋರಿ.
ಆದರೆ ಈಗ ಸಿನಿಮಾ ತಂಡದ ಮೇಲೆ ಮುಂಬೈನಲ್ಲಿ ದೂರು (FIR against Annapoorni team) ದಾಖಲಾಗಿದೆ. boycot Netflix trending ಶುರುವಾಗಿದ್ದು ಎಚ್ಚೆತ್ತುಕೊಂಡ ಪ್ಲಾಟ್ ಫಾರ್ಮ್ ಸಿನಿಮಾ ಡಿಲೀಟ್ (Movie delete) ಕೂಡ ಮಾಡಿದೆ. ಮುಂಬೈನ ರಮೇಶ್ ಸೋಲಂಕಿ ಎನ್ನುವ ವ್ಯಕ್ತಿಯು ಜನವರಿ 6ರಂದು ಸಿನಿಮಾ ತಂಡದ ವಿರುದ್ಧ ಕಂಪ್ಲೇಂಟ್ ಕೊಟ್ಟಿದ್ದಾರೆ.
ಇಡಿ ದೇಶ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಸಂದರ್ಭ ಕಂಡು ಕಣ್ತುಂಬಿಕೊಳ್ಳಲು ಕಾದು ಕುಳಿತಿರುವ ಇಂತಹ ದಿವ್ಯ ಸಮಯದಲ್ಲಿ ಸಿನಿಮಾದಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತರುವಂತಹ ಸನ್ನಿವೇಶಗಳಿವೆ, ಜೊತೆಗೆ ಅದೇ ರೀತಿ ಡೈಲಾಗ್ ಗಳನ್ನು ಬರೆಯಲಾಗಿದೆ. ಶ್ರೀ ರಾಮನ ಕುರಿತು ತಪ್ಪಾಗಿ ಬಿಂಬಿಸಲಾಗಿದೆ.
ಶ್ರೀರಂಗನಿಗೆ ಪ್ರಸಾದ ಮಾಡುವ ಅರ್ಚಕರ ಮಗಳು ಬಿರಿಯಾನಿ ಮಾಡಲು ನಮಾಜ್ ಮಾಡುವಂತೆ ತೋರಿಸಲಾಗಿದೆ, ಲವ್ ಜಿಹಾದ್ ಪ್ರಮೋಟ್ ಮಾಡುವಂತಿದೆ ಸಿನಿಮಾ, ಸಂದರ್ಭದಲ್ಲಿ ಒಂದರಲ್ಲಿ ಸಿನಿಮಾ ನಾಯಕ (ಫರಾನ್) ನಾಯಕಿ (ಅನ್ನಪೂರ್ಣಿ) ಮಾಂಸ ಮುಟ್ಟಲು ಮಾಂಸದ ಅಡುಗೆ ಮಾಡಲು ಒಪ್ಪದ ಸಂದರ್ಭದಲ್ಲಿ ಶ್ರೀರಾಮ ಕೂಡ ವನವಾಸದಲ್ಲಿದ್ದಾಗ.
ಜಿಂಕೆ ಭೇಟೆಯಾಡಿ ಲಕ್ಷ್ಮಣ ಸಮೇತರಾಗಿ ಎಲ್ಲರೂ ಜಿಂಕೆ ಮಾಂಸ ಸೇವನೆ ಮಾಡಿದ್ದರು ಎನ್ನುವುದಕ್ಕೆ ಶ್ಲೋಕಗಳಲ್ಲಿ ಪುರಾವೆ ಇದೆ ಎಂದು ಹೇಳಿ ಬ್ರೈನ್ ವಾಶ್ ಮಾಡಿದ್ದಾರೆ. ಇದು ದೇಶದ ಅಪಾರ ಸಂಪ್ರದಾಯಸ್ಥರ ಭಾವನೆಗಳಿಗೆ ನೋ’ವುಂ’ಟು ಮಾಡಿದೆ ಎಂದು ನಿರ್ದೇಶಕ ನೀಲಕೃಷ್ಣ, ಆಕ್ಟರ್ ಗಳಾದ ಜೈ ಮತ್ತು ನಯನತಾರ ಸೇರಿದಂತೆ ನಿರ್ಮಾಣ ಸಂಸ್ಥೆಗಳಾದ Zee Studios, tridentartsoff, naddstudios ಮಾಲೀಕರುಗಳ ಮೇಲೆ ದೂರು ಕೊಟ್ಟಿದ್ದಾರೆ.
ಈಗ ಸೋಶಿಯಲ್ ಮೀಡಿಯಾದಲ್ಲಿ ಪರ ಹಾಗೂ ವಿರೋಧ ಬ್ಯಾಟಿಂಗ್ ಜೋರಾಗಿ ನಡೆಯುತ್ತಿದ್ದು ಕೆಲವರ ವಾದವೇನೆಂದರೆ,
ಹುಟ್ಟುವಾಗಲೇ ರುಚಿ ಬಗ್ಗೆ ಅತಿಂದ್ರೀಯ ಜ್ಞಾನ ಹೊಂದಿ ಹುಟ್ಟಿದ ಅನ್ನಪೂರ್ಣಿ ಕನಸೇ ತಾನು ವಿಶ್ವದಲ್ಲೇ ನಂಬರ್ 1 ಶೆಫ್ ಆಗಬೇಕು ಎನ್ನುವುದಾಗಿತ್ತು ಊಟ ತನ್ನಿಚ್ಛೆ ನೋಟ ಪರರಿಚ್ಛೆ ಎನ್ನುವ ಗಾದೆಯು ಇದೆ ಅನ್ನಂ ಪರಬ್ರಹ್ಮ ಸ್ವರೂಪಂ ಎನ್ನುತ್ತಾರೆ.
ಇಲ್ಲಿ ಅನ್ನ ಎಂದರೆ ಆಹಾರವಾಗಿ ಸೇವಿಸುವ ಎಲ್ಲವೂ ಸೇರುತ್ತದೆ ಅಲ್ಲವೇ.? ಆಕೆ ರುಚಿಗಾಗಿ ಮಾಂಸಹಾರ ಸೇವಿಸಲಿಲ್ಲ, ಅವಳಿಗೆ ಮುಂದೆ ಬರುವ ಎಡರು ತೊಡರುಗಳ ಬಗ್ಗೆ ಅರಿವಿಲ್ಲದೆ ಬಾಲ್ಯದಿಂದಲೂ ಅನ್ನಪೂರ್ಣಿ ತಾನು ಅಡುಗೆ ಮಾಡುವವಳು ಆಗುತ್ತೇನೆ ಎಂದುಕೊಂಡೆ ಹೇಳುತ್ತಾ ಕಲಿಯುತ್ತಾ ಬಂದಿದ್ದಳು ತನ್ನ ಸಾಧನೆಗಾಗಿ ಸಮುದಾಯದ ಸಂಪ್ರದಾಯ ಮುರಿದಳು ಎನ್ನುವ ಮೊಂಡು ವಾದವು ಇದೆ.
ಆದರೆ ಸಿನಿಮಾವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅನ್ನಪೂರ್ಣಿ ಶೆಫ್ ಆಗಬೇಕು ಎಂದು ಆಸೆ ಪಡುವ ಬದಲು ಆಕೆ ಸೈಂಟಿಸ್ಟ್ ಆಗಬೇಕು ಅಥವಾ ಪೈಲೆಟ್ ಆಗಬೇಕು ಇನ್ನಿತರ ಯಾವುದೇ ಕನಸು ಕಂಡಿದ್ದರು ಆಕೆಗೆ ಸಂಪ್ರದಾಯವಾಗಲಿ ಕುಟುಂಬ ವಾಗಲಿ ಅಡ್ಡಿ ಆಗುತ್ತಿರಲಿಲ್ಲ. ಯಾಕೆಂದರೆ ಸಿನಿಮಾದಲ್ಲಿ ಕೆಲಸ ಸಾಕಾಯ್ತು ನಾನು ನನ್ನ ಇಷ್ಟದ ಕೆಲಸವನ್ನೇ ಮಾಡುತ್ತೇನೆ.
ಬೇರೆ ಎಲ್ಲೂ ಹೋಗುವುದಿಲ್ಲ ಎಂದು ಮತ್ತೆ ಅಡುಗೆ ಕಲಿಯುವ ಕೋರ್ಸ್ ಓದುತ್ತೇನೆ ಎಂದು ಮನೆಗೆ ಬಂದಾಗ ಅನ್ನಪೂರ್ಣಿ ತಂದೆ ಮಗಳಿಗೆ ನಿನ್ನ ಕನಸುಗಳಿಗೆ ಅಡ್ಡಿ ಬರುವುದು ನನ್ನ ಉದ್ದೇಶವಲ್ಲ ಎಂದು ಬುದ್ಧಿ ಹೇಳುತ್ತಾರೆ. ನೀನು ಈ ಕನಸಿಗಾಗಿ ಎಲ್ಲೆಲ್ಲೋ ನಿಲ್ಲಬೇಕಾಗುತ್ತದೆ, ನಮ್ಮ ಕುಟುಂಬದ ಆಚಾರ ವಿಚಾರ ಮೀರಿ ಬದುಕಬೇಕಾಗುತ್ತದೆ ಅದು ನನಗೆ ಇಷ್ಟ ಇಲ್ಲ.
ನಿನಗೆ ಕೆಲಸಕ್ಕೆ ಹೋಗಲು ಇಷ್ಟ ಇಲ್ಲ ಎಂದರೆ ಮನೆಯಲ್ಲಿ ಇರು ಅಥವಾ ನಿನಗೆ ಆ ವಿಷಯ ಬಿಟ್ಟು ಬೇರೆ ಯಾವುದೇ ವಿಷಯದ ಬಗ್ಗೆ ಆಸಕ್ತಿ ಇದ್ದರೂ ಅದಕ್ಕೆ ಸಂಬಂಧಿಸಿದ ಹಾಗೆ ಓದು ಮುಂದುವರಿಸಲು ನಾನು ಸಪೋರ್ಟ್ ಮಾಡುತ್ತೇನೆ, ನಿನಗೆ ಮದುವೆ ಆಗು ಎಂದು ಬಲವಂತ ಕೂಡ ಮಾಡುವುದಿಲ್ಲ ಆದರೆ ನೀನು ಅಡುಗೆ ಕಲಿಯುವ ಕೋರ್ಸ್ ಗೆ ಹೋಗಿ ಮಾಂಸ ಮುಟ್ಟುವುದು ತಿನ್ನುವುದಾದರೆ ನನಗೆ ಶ್ರೀರಂಗನಿಗೆ ನೈವೇದ್ಯ ಮಾಡುವ ಮನಸ್ಸು ಹೇಗೆ ಬರುತ್ತದೆ. ಆ ಅವಕಾಶ ಕಳೆದುಕೊಳ್ಳಬೇಕಾಗುತ್ತದೆ ಎಂದು ಕೇಳಿಕೊಳ್ಳುತ್ತಾರೆ.
ಆದರೂ ಅಪ್ಪನ ಕಣ್ತಪ್ಪಿಸಿ MBA ಓದುತ್ತಿದ್ದೇನೆ ಎಂದು ಹೇಳಿ ತನ್ನ ಇಷ್ಟದ Cooking course ಕಲಿಯುತ್ತಾಳೆ. ಇದಕ್ಕೆಲ್ಲ ಆಕೆಗೆ ಆತನ ಗೆಳೆಯ ಸಪೋರ್ಟ್ ಮಾಡುತ್ತಾನೆ ಆತನೇ ಫರಾನ್. ಸಿನಿಮಾದಲ್ಲಿ ಬೇಕೆಂದಲೇ ನಾಯಕನನ್ನು ಮುಸ್ಲಿಂ ಪಾತ್ರಧಾರಿಯಾಗಿ ತೋರಿಸಲಾಗಿದೆ.
ತರಗತಿಯಲ್ಲಿ ಮಾಂಸ ಕಟ್ ಮಾಡುವ ಸಿಚುವೇಶನ್ ಬಂದಾಗ, ಆಕೆ ಮಾಂಸ ಮುಟ್ಟಲು ಹೆದರಿ ಆಚೆ ಬಂದಾಗ ರಾಮಾಯಣದಲ್ಲಿ ಒಂದು ಶ್ಲೋಕ ರಾಮ ಮತ್ತು ಲಕ್ಷ್ಮಣರು ಕಾಡಿನಲ್ಲಿ ಮಾಂಸ ತಿಂದಿದ್ದರು ಎನ್ನುವುದನ್ನು ಹೇಳುತ್ತದೆ. ನೀನು ಮಾಂಸಹಾರ ಅಡುಗೆ ಮಾಡುವುದು ತಪ್ಪಲ್ಲ, ಎಷ್ಟೋ ಜನ ಮಾಂಸ ತಿನ್ನದಿದ್ದರೂ ತಮಗೆ ಇಷ್ಟ ಆದವರಿಗೆ ಮಾಡಿಕೊಡಲು ಕಲಿಯುತ್ತಾರೆ ಅದರಲ್ಲಿ ಏನು ತಪ್ಪು?.
ನೀನು ಮಾಂಸಹಾರ ತಿನ್ನುವುದು ಬಿಡುವುದು ನಿನ್ನ ಚಾಯ್ಸ್ ಅಷ್ಟೇ ಅದನ್ನು ಯಾರು ಪ್ರಶ್ನೆ ಮಾಡುವಂತಿಲ್ಲ ಎಂದು ಮೋಟಿವೇಟ್ ಮಾಡುತ್ತಾರೆ ಆದರೆ ಇದು ಬ್ರೈನ್ ವಾಶ್ ಎನ್ನುವುದು ಹೆಚ್ಚು ನೋಡುಗರ ಅಭಿಪ್ರಾಯ. ನಂತರ ಆಕೆ ಮುಟ್ಟುವುದು ಮಾತ್ರವಲ್ಲ, ರಂಜಾನ್ ಇಫ್ತಾರ್ ಕೂಟಗಳಿಗೂ ಬಾಗಿಯಾಗಿ ಅನ್ನಪೂರ್ಣಿ ಮಾಂಸ ಸೇವಿಸುತ್ತಾಳೆ.
ತಂದೆ ಕೈಗೆ ಸಿಕ್ಕಿ ಬಿದ್ದಾಗ ಮನೆ ಬಿಟ್ಟು ಕನಸನ್ನೇ ಬೆನ್ನತ್ತಿ ಹೋಗುವ ನಿರ್ಧಾರ ಮಾಡುತ್ತಾಳೆ, ಈ ನಡುವೆ ಸಾಕಷ್ಟು ಅಡೆತಡೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಕೊನೆಯಲ್ಲಿ ಕ್ಲೈಮ್ಯಾಕ್ಸ್ ನಲ್ಲಿ ಅನ್ನಪೂರ್ಣಿ ನಂಬರ್ 1 ಶೆಫ್ ಆಗುವ ಕಾಂಪಿಟೇಶನ್ ನಲ್ಲಿ ಬಿರಿಯಾನಿ ಮಾಡಬೇಕಾದ ಸಂದರ್ಭ ಬರುತ್ತದೆ. ತಮ್ಮ ದುಪ್ಪಟವನ್ನು ಹಿಜಾಬ್ ಮಾಡಿಕೊಂಡು ನಮಾಜ್ ಮಾಡಿ ಬಿರಿಯಾನಿ ಅಡುಗೆ ಮಾಡುತ್ತಾಳೆ,
ಇದು ನನಗೆ ಬಿರಿಯಾನಿ ಕಲಿಸಿಕೊಟ್ಟವರ ನಂಬಿಕೆ ಎಂದು ಹೇಳುತ್ತಾಳೆ. ಇದೆಲ್ಲಾ ಅಂಶವು ಬ್ರಾಹ್ಮಣ ಹುಡುಗಿಗೆ ತಲೆ ಕೆಡಿಸಿ ಮಾಂಸಾಹಾರಿ ಮಾಡುವುದಲ್ಲದೆ ನಮಾಜ್ ಮಾಡುವ ತನಕ ಬದಲಾಯಿಸಿದ್ದಾರೆ, ಇದರಲ್ಲಿ ಗೊತ್ತಿದ್ದು ಕೆಲವು ಅಂಶಗಳನ್ನು ಬೇಕೆಂದಲೇ ತುರುಕಿದ್ದಾರೆ. ಕೆಲವು ಸೀನ್ ಗಳು, ಡೈಲಾಗ್ ಗಳು ಆ ರೀತಿ ಇರಬೇಕಾದ ಅವಶ್ಯಕತೆ ಇಲ್ಲ ಆದರೂ ಉದ್ದೇಶಪೂರ್ವಕವಾಗಿ ಇದನ್ನು ಮಾಡಿದ್ದರೆ ಎನ್ನುವುದು ಸಂಪ್ರದಾಯಸ್ಥರ ಆಕ್ರೋ.ಶವಾಗಿದೆ.