ನಂಬರ್ ಎಂದರೆ ನಾನು, ನಾನು ಎಂದರೆ ನಂಬರ್ ಡೈಲಾಗ್ ಮೂಲಕ ಕರ್ನಾಟಕದಾದ್ಯಂತ ನಂಬರ್ ಗುರೂಜಿ ಎಂದೇ ಫೇಮಸ್ ಆಗಿರುವ ಬಿಗ್ ಬಾಸ್ ಖ್ಯಾತಿಯ ಆರ್ಯವರ್ಧನ್ (numerologist Aryavardhan) ಅವರು ಕಾಟೇರಾ ಸಿನಿಮಾ (Katera Cinema) ಕುರಿತು ಯುಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ಕೊಟ್ಟಿದ್ದಾರೆ.
ಸಿನಿಮಾವನ್ನು ಕುಟುಂಬ ಸಮೇತವಾಗಿ ಊರ್ವಶಿ ಥಿಯೇಟರ್ ನಲ್ಲಿ ನೋಡಿದ ಆರ್ಯವರ್ಧನ್ ಅವರು ಮತ್ತೊಮ್ಮೆ ಸಿನಿಮಾ ವನ್ನು ನೋಡಲು ಹೋಗುತ್ತಾರಂತೆ. ಅವರಿಗೆ ಸಿನಿಮಾ ಬಹಳ ಇಷ್ಟವಾಗಿದೆಯಂತೆ.
ಸಿನಿಮಾದ ಕಥೆ ಬಹಳ ಚೆನ್ನಾಗಿದೆ ಶ್ರುತಿ ಅವರು ಮಾಲಾಶ್ರೀ ಅವರ ಮಗಳು ಆರಾಧನ ರಿಯಲೆಸ್ಟಿಕ್ ಆಕ್ಟಿಂಗ್ ಮತ್ತು ದರ್ಶನ್ ಅವರ ಫೈಟಿಂಗ್, ಡೈಲಾಗ್, ಆಕ್ಟಿಂಗ್ ಎಲ್ಲವೂ ಬಹಳ ಇಷ್ಟವಾಯ್ತು ಎಂದು ಹೇಳುತ್ತಾರೆ ಜೊತೆಗೆ ದರ್ಶನ್ ಅವರು ಸಿನಿಮಾ ಇಂಡಸ್ಟ್ರಿಗೆ ಕುಬೇರ (Kannada Industry Kubera) ಇದ್ದಂತೆ ಎಂದು ಅವರ ಕುಬೇರ ಲಕ್ಷಣದ ಬಗ್ಗೆ ತಿಳಿಸಿದ್ದಾರೆ.
ಸುದೀಪ್ ಏನು ದೇವ್ರಾ.? ಅವ್ರ ಮುಂದೇಕೆ ಕೈಕಟ್ಟಿ ಭಕ್ತರ ಥರ ನಿಲ್ಲಬೇಕಾ.? ನಾಲಿಗೆ ಹರಿಬಿಟ್ಟದ ರಕ್ಷಕ್ ಬುಲೆಟ್.!
ದರ್ಶನ್ ಅವರು ಬಹಳ ದಪ್ಪಾಗಿದ್ದಾರೆ ಈ ರೀತಿ ದಪ್ಪ ಆಗಿರುವುದು ಕುಬೇರನ ಲಕ್ಷಣ ಮತ್ತು ಕುಬೇರನಿಗೆ ಯಾವಾಗಲೂ ನಗುಮುಖ ಇರುವಂತೆ ದರ್ಶನ್ ಅವರಿಗೂ ಸಹ ಯಾವಾಗಲೂ ನಗು ಮುಖದಲ್ಲಿ ಇರುತ್ತಾರೆ. ಹಾಗಾಗಿ ಅವರ ಜೊತೆ ಇರುವವರಿಗೂ ಆ ಗುಡ್ ವೈಬ್ಸ್ ಬರುತ್ತದೆ. ದರ್ಶನ್ ಅವರ ಸಿನಿಮಾದಲ್ಲಿ ಇರುವ ಕಾರಣ ಅನೇಕರು ಜೀವನದಲ್ಲಿ ಕ್ಲಿಕ್ ಆಗಿದ್ದಾರೆ.
ರಚಿತರಾಮ್, ವಿ.ಯಹರಿಕೃಷ್ಣ, ಇತ್ತೀಚಿಗೆ ಗಾಯಕಿ ಮಂಗಲಿ ಅವರ ಹೆಸರನ್ನು ಕೂಡ ಉದಾಹರಿಸಿದ ಆರ್ಯವರ್ಧನ್ ಈ ಸಿನಿಮಾ ಮೂಲಕ ಆರಾಧನಾ ಅವರು ಸಿನಿಮಾ ಇಂಡಸ್ಟ್ರಿಗೆ ಲಾಂಚ್ ಆಗಿರುವುದು ಅವರ ಅದೃಷ್ಟಕ್ಕೆ ಹಿಡಿದಿರುವ ಕನ್ನಡಿ ಎಂದು ಭವಿಷ್ಯವನ್ನು ಕೂಡ ನೋಡಿದಿದ್ದಾರೆ.
ಇದೇ ಕಾರಣಕ್ಕೆ ಅವರು ರಾಜಕೀಯದಲ್ಲಿ ಯಾರಿಗೆ ಕ್ಯಾನ್ವಾಸ್ ಮಾಡಲು ಹೋದರು ಕೂಡ ಅವರು ಗೆಲ್ಲುತ್ತಾರೆ ಎಂದು ಹೇಳಿದ್ದಾರೆ. ಹೀರೋಗಳು ಹೀಗಿರಬೇಕು ಹಾಗಿರಬೇಕು ಎಂದೆಲ್ಲ ಕಷ್ಟ ಪಡುತ್ತಾರೆ, ದರ್ಶನ್ ರೀತಿ ಇದ್ದರೆ ಸಾಕು.
ದರ್ಶನ್ ಅವರಿಗೆ ಎಂದೂ ಕೂಡ ಮಾರ್ಕೆಟ್ ಕಮ್ಮಿ ಆಗಿಲ್ಲ, ಅವರು ದಪ್ಪಾಗಾದರೂ ಆ ಮಾರ್ಕೆಟ್ ಹೋಗಿಲ್ಲ ತಮಿಳುನಲ್ಲಿ ಕೂಡ ಪ್ರಭು ಎನ್ನುವ ಆಕ್ಟರ್ ಇದ್ದಾರೆ ಅವರ ಜೊತೆ ಆಕ್ಟಿಂಗ್ ಮಾಡಿದ ಎಲ್ಲರೂ ಕೂಡ ಹಿಟ್ ಆಗುತ್ತಿದ್ದರು ಯಾಕೆಂದರೆ ಅವರಿಗೆ ಬಹಳ ಒಳ್ಳೆಯ ಮನಸ್ಸು ಹಾಗೂ ನಗುಮುಖ ಇತ್ತು ಅದು ಕುಬೇರ ಲಕ್ಷಣ.
ಅನುಶ್ರೀ ಜೊತೆಗಿನ ಲವ್ ಸ್ಟೋರಿ ಗುಟ್ಟು ಬಿಚ್ಚಿಟ್ಟ ನಟ ಚಿಕ್ಕಣ್ಣ.!
ಬಹುಶಃ ದರ್ಶನ್ ರವರು ಕೂಡ ತಮ್ಮ ಜೊತೆ ಯಾರು ಲಾಂಚ್ ಆಗುತ್ತಾರೆ ಅಥವಾ ಬಹಳ ಕಷ್ಟಪಟ್ಟು ಯಾರು ತಮ್ಮ ಜೊತೆ ಕೆಲಸ ಮಾಡುತ್ತಾರೆ ಅವರನ್ನು ನೋಡಿ ಮನಸಾರೆ ಹರಸುತ್ತಾರೆ ಎನಿಸುತ್ತದೆ ಅದಕ್ಕಾಗಿ ದರ್ಶನ್ ಅವರ ಜೊತೆಗೆ ಕೆಲಸ ಮಾಡಿದವರು ಬಹಳ ಅವಕಾಶಗಳನ್ನು ಪಡೆದು ಸಕ್ಸಸ್ ಆಗುತ್ತಾರೆ ಎಂದಿದ್ದಾರೆ.
ಕಾಟೇರ ಸಿನಿಮಾ ಹಿಟ್ ಆಗುತ್ತದೆ ಎಂದು ನನಗೆ ಮೊದಲೇ ಅನಿಸಿತ್ತು ಈಗ ಸಿನಿಮಾ ನೋಡಿದ ಮೇಲೆ ಬಹಳ ಖುಷಿಯಾಯಿತು, ಮತ್ತೆ ಮತ್ತೆ ನೋಡುವಂತಹ ಸಿನಿಮಾ ಇದು. ನಮ್ಮ ನೆಲದ ಕಥೆ ಎಂದು ಹೇಳಿ, ಸಿನಿಮಾದಲ್ಲಿ ತಮಗೆ ಇಷ್ಟವಾದ ಡೈಲಾಗ್ ತಮಗೆ ಇಷ್ಟವಾದ ಸೀನ್ ಹಾಗೂ ಸಿನಿಮಾ ಕುರಿತು ಒಂದಿಷ್ಟು ವಿಚಾರದ ಬಗ್ಗೆ ಮಾತನಾಡಿದ ಅವರು ಸಿನಿಮಾ ಇನ್ನಷ್ಟು ಸಕ್ಸಸ್ ಕಾಣಬೇಕು ಎಂದಿದ್ದಾರೆ.
ನಾನು ದರ್ಶನ್ ಸಿನಿಮಾ ಮಾತ್ರವಲ್ಲ ಸುದೀಪ್, ಯಶ್ ಸಿನೆಮಾ ಕೂಡ ನೋಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ನೀವು ಕೂಡ ಕಾಟೇರ ನೋಡಿದ್ದರೆ ಸಿನಿಮಾ ಹೇಗಿದೆ ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.