ಜನವರಿ 8ರಂದು ರಾಕಿಂಗ್ ಸ್ಟಾರ್ ಯಶ್ (Rocking Star Yash Birthday) ಅವರ ಹುಟ್ಟು ಹಬ್ಬದ ಪ್ರಯುಕ್ತ ಮಧ್ಯರಾತ್ರಿ ಕಟೌಟ್ ನಿಲ್ಲಿಸಲು ಹೋಗಿದ್ದ ಲಕ್ಷ್ಮೇಶ್ವರ ಬಳಿಯ ಸೂರಣಗಿ ಗ್ರಾಮದ ಯಶ್ ಅಭಿಮಾನಿಗಳ ತಂಡವು ಹೈ ಟೆನ್ಷನ್ ತಂತಿ ತಗುಲಿ ಅ’ಪ’ಘಾ’ತಕ್ಕೊಳಕಾಗಿದ್ದರು.
ಈ ಘಟನೆಯಲ್ಲಿ ಸ್ಥಳದಲ್ಲಿಯೇ ಮೂವರು ಮೃ’ತ ಪಟ್ಟಿದ್ದರು ನಾಲ್ವರು ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಸದ್ಯ ಅವರು ಚೇತರಿಸಿಕೊಂಡಿದ್ದಾರೆ. ಯಶ್ ಕೂಡ ಅಂದಿನ ತಮ್ಮ ಕಾರ್ಯಕ್ರಮ ರದ್ದುಪಡಿಸಿ ಬಂದು ಮೃ’ತ’ರ ಕುಟುಂಬ ಭೇಟಿ ಮಾಡಿ ಸಾಂತ್ವನ ತುಂಬಿದ್ದರು ಮತ್ತು ಅಭಿಮಾನಿಗಳಿಗೆ ಮುಂದೆಂದೂ ಇಂತಹ ಅ’ವ’ಘ’ಡ ಆಗಬಾರದು ಎನ್ನುವ ಕಾರಣಕ್ಕಾಗಿ ಬೇಸರ ತಂದುಕೊಂಡು ಬುದ್ಧಿವಾದ ಕೂಡ ಹೇಳಿದ್ದರು.
ಹಾಗೆ ಆ ಕುಟುಂಬಕ್ಕೆ ನೆರವಾಗುವ ಭರವಸೆಯನ್ನು ನೀಡಿದ್ದರು, ಈಗ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಅಭಿಮಾನಿಗಳು ತೀರಿಕೊಂಡು 11 ದಿನದಲ್ಲಿ ಯಶ್ ಕಡೆಯಿಂದ ಕುಟುಂಬಸ್ಥರಿಗೆ 5 ಲಕ್ಷ ತಲುಪಿದೆ. ಯಶ್ ಸ್ನೇಹಿತರಾದ ಚೇತನ್ ಹಾಗೂ ರಾಕೇಶ್ ಅವರು ಮತ್ತು ಗದಗದ ಯಶ್ ತಂಡದೊಂದಿಗೆ ಹೋಗಿ ಮತ್ತೊಮ್ಮೆ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ನೀಡಿದ್ದಾರೆ.
ಎಣ್ಣೆಯನ್ನೇ ಮುಟ್ಟದ ವಿಷ್ಣು ಮನೆಯಲ್ಲೇ ಬಾರ್ ಕಟ್ಟಿಸಿದ್ರು ಯಾಕೆ ಗೊತ್ತ.? ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತೀರಾ.!
ಇದೇ ಸಂದರ್ಭದಲ್ಲಿ ಚೇತನ್ ಹಾಗೂ ರಾಕೇಶ್ ಅವರು ರೂ.5 ಲಕ್ಷ ಚೆಕ್ ಹಸ್ತಾಂತರಿಸಿದ್ದಾರೆ. ಇದನ್ನು ಸ್ವೀಕರಿಸಿದ ಮೃ’ತ ಅಭಿಮಾನಿ ಮುರಳಿ ಅವರ ತಾಯಿ ಬಹಳ ದುಃ’ಖಿತರಾಗಿ ಮಾತನಾಡಿದ್ದಾರೆ. ನನ್ನ ಮಗನ ಕೂಲಿಗೆ ಹೋಗಿದ್ದ, ಕೂಲಿ ಕೆಲಸದಲ್ಲಿ ಅವನಿಗೆ ಅ’ಪ’ಘಾ’ತ’ವಾದದಕ್ಕಾಗಿ ಪರಿಹಾರ ಸಿಕ್ಕಿದೆ ಎಂದು ಕೊಳ್ಳಬೇಕಾ?
ಯಶ್ ಅವರು ದೊಡ್ಡ ಮನಸ್ಸು ಮಾಡಿದ್ದಾರೆ ಎಂದು ದೇವರು ಅನ್ನಬೇಕಾ? ಮಗ ಸತ್ತು ಹೋಗಿದ್ದಾನೆ ಈಗ ಅದಕ್ಕೆ ಪರಿಹಾರ ಬಂದಿರುವ ಹಣದಲ್ಲಿ ನಾನು ಹೊಟ್ಟೆ ತುಂಬಿಸಿಕೊಳ್ಳಬೇಕಾ? ನನ್ನ ಮಗನಿಗೆ ಬೈಕ್ ತೆಗೆದುಕೊಳ್ಳಬೇಕು ಎಂದು ಬಹಳ ಆಸೆ ಇತ್ತು, ಅದಕ್ಕಾಗಿ ಕಷ್ಟ ಪಡುತ್ತಿದ್ದ ಈಗ ನಾನು ಅವನ ಬೈಕ್ ಹಿಂದೆ ಕುಳಿತುಕೊಳ್ಳಲು ಆಗುವುದಿಲ್ಲ ಇದಕ್ಕೇನು ಮಾಡಲಿ ಎಂದು ರೋಧಿಸಿದ್ದಾರೆ.
ಕೊಟ್ಟ ಮಾತು ಉಳಿಸಿಕೊಂಡಿದ್ದಕ್ಕಾಗಿ ಧನ್ಯವಾದಗಳು ನನ್ನ ಮಗನಂತೆ ನಮ್ಮ ಕುಟುಂಬಕ್ಕೆ ಇರಿ ಎಂದು ಕೇಳಿಕೊಂಡಿದ್ದಾರೆ. ಯಶ್ ಅಭಿಮಾನಿಗಳ ತಂಡ ಮತ್ತು ಸ್ನೇಹಿತರು ಮತ್ತೊಮ್ಮೆ ಕುಟುಂಬಸ್ಥರನ್ನು ಭೇಟಿಯಾಗಿ ಚೆಕ್ ಹಸ್ತಾಂತರಿಸಿದಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಕುಟುಂಬವು ಕೂಡ ತಂಡಕ್ಕೆ ಹಾಗೂ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
ಆರಡಿ ಕಟೌಟ್ ಗಳಿಂದ ಕನ್ನಡ ಇಂಡಸ್ಟ್ರಿ ಕ’ಗ್ಗೊ’ಲೆ ಆಗ್ತಿದೆ, ಹಳಸಿದ ಅನ್ನದಿಂದ ಇಂಡಸ್ಟ್ರಿ ಹಾಳಾಯ್ತು ಗಂಭೀರ ಅರೋಪ ಮಾಡಿದ ಪ್ರಶಾಂತ್ ಸಂಬರ್ಗಿ.!
ಕರ್ನಾಟಕ ಸರ್ಕಾರವು ಕೂಡ ಘಟನೆ ನಡೆದದ್ದು ಕುಟುಂಬಕ್ಕೆ ಪರಿಹಾರ ಮತ್ತು ಅಪಘಾತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಿಗೂ ಕೂಡ ಪರಿಹಾರ ನೀಡುವುದಾಗಿ ಘೋಷಣೆ ಮಾಡಿತ್ತು. ನೊಂ’ದ ಕುಟುಂಬಕ್ಕಾಗಿರುವ ಭಾವನಾತ್ಮಕ ನ’ಷ್ಟವನ್ನು ಯಾರಿಂದಲೂ ತುಂಬಲು ಖಂಡಿತ ಸಾಧ್ಯವಿಲ್ಲ ಆದರೆ ತಮ್ಮ ಕೈಮೀರಿ ನಡೆದ ಘಟನೆಯ ಜವಾಬ್ದಾರಿಯನ್ನು ಒಪ್ಪಿಕೊಂಡ ಯಶ್ ಅವರು ಕುಟುಂಬಸ್ಥರನ್ನು ಭೇಟಿ ಮಾಡಿ ತಮ್ಮ ಕೈಲಾದ ನೆರವನ್ನು ಸಲ್ಲಿಸಿದ್ದಾರೆ.
ಆ ದಿನ ಕೂಡ ಯಶ್ ಇದನ್ನೇ ನುಡಿದಿದ್ದರು. ಈ ರೀತಿ ಆದಾಗ ನಾವು ಅವರ ತಂದೆ ತಾಯಿಯ ಮೇಲಿರುವ ಗೌರವದಿಂದ ಬಂದು ನೋಡುತ್ತೇವೆ. ದಯವಿಟ್ಟು ಅಭಿಮಾನ ಮನಸ್ಸಿನಲ್ಲಿ ಇರಲಿ ನಾವು ಮಾಡುವ ಸಿನಿಮಾಕೆ ಬೆಲೆ ಕೊಟ್ಟು ಸಿನಿಮಾ ಆನಂದಿಸಿ.
ನಿಮ್ಮ ನಿಮ್ಮ ಕುಟುಂಬಗಳಿಗೆ ಹೀರೋ ಆಗಿರಿ, ಹೊರತು ಇಂತಹ ಹುಚ್ಛಾಟಗಳಿಂದ ಹಾನಿ ಮಾಡಿಕೊಳ್ಳಬೇಡಿ, ಇದರಿಂದ ಯಾವುದೇ ಸಂತೋಷ ಸಿಗುವುದಿಲ್ಲ ಎಂದು ಹೇಳಿದ್ದರು. ಇನ್ನಾದರೂ ಇಂತಹ ಘಟನೆಗಳು ಮರಿಕಳಿಸದೇ ಇರಲಿ ಯಶ್ ಅವರ ಕಳಕಳಿ ಕೂಡ ಅಭಿಮಾನಿಗಳಿಗೆ ಅರಿವಾಗಲಿ.