ಕೆಲ ದಿನಗಳ ಹಿಂದೆ ನಟ ದುನಿಯಾ ವಿಜಯ್ ರವರು (Duniya Vijay), ತಮ್ಮ ಹುಟ್ಟುರಾದ ಕುಂಬಾರಹಳ್ಳಿಗೆ ಭೇಟಿ ಕೊಟ್ಟಿದ್ದರು. ಹುಟ್ಟೂರಲ್ಲಿ ಆಡಿ ಬೆಳೆದ ಜಾಗಗಳಿಗೆ ಹೋಗಿ ಬಾಲ್ಯದ ಸವಿನೆನಪುಗಳನ್ನು ನೆನೆದ ಅವರು ಗ್ರಾಮಸ್ಥರೊಂದಿಗೆ ಕೆಲ ಸಮಯ ಕಳೆದು, ಕಷ್ಟ ಸುಖ ವಿಚಾರಿಸಿದ್ದರು.
ಈ ವೇಳೆ ಅವರಿಗೆ ಸಿಕ್ಕಿದ ಮಾಹಿತಿಯೊಂದನ್ನು ಅನುಸರಿಸಿ ಹುಟ್ಟೂರಲ್ಲಿ ಜೈಲು ಪಾಲಾಗಿರೋ ಅಮಾಯಕ ಜೀವಿಗಳ ಬಿಡುಗಡೆಗೆ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಇದೀಗ ಇಂದು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿನ 6 ಕೈದಿಗಳನ್ನು ಬಿಡುಗಡೆ ಮಾಡಿಸಿದ್ದಾರೆ.
ಕೋರ್ಟ್ ವಿಧಿಸಿದ ದಂಡ ಕಟ್ಟಲಾಗದೆ ಈ ಖೈದಿಗಳು ಜೈಲಿನಲ್ಲಿದ್ದರು ಎಂದು ತಿಳಿದು ಬಂದಿದೆ. ಈ ಆರು ಮಂದಿ ಕುಂಬಾರಹಳ್ಳಿಯಲ್ಲಿ ಯಾವುದೋ ತಪ್ಪಿಗೆ ಜೈಲು ಸೇರಿದ್ದ ಬಡ ಜನರಾಗಿದ್ದರು, ಮತ್ತು ಇವರಲ್ಲಿ ಮಹಿಳಾ ಖೈದಿಗಳು ಇದ್ದರು. ಹಿಂದೊಮ್ಮೆ ಇದೇ ರೀತಿ ಮೈಸೂರಿನ ಕಾರಗೃಹದಿಂದ ಅನೇಕ ಖೈದಿಗಳಿಗೆ ಬಿಡುಗಡೆ ಭಾಗ್ಯ ದೊರಕಿಸಿ ಕೊಟ್ಟಿದ್ದರು ದುನಿಯಾ ವಿಜಯ್.
ಸುದೀಪ್ ಏನು ದೇವ್ರಾ.? ಅವ್ರ ಮುಂದೇಕೆ ಕೈಕಟ್ಟಿ ಭಕ್ತರ ಥರ ನಿಲ್ಲಬೇಕಾ.? ನಾಲಿಗೆ ಹರಿಬಿಟ್ಟದ ರಕ್ಷಕ್ ಬುಲೆಟ್.!
ಈ ವಿಷಯ ತಿಳಿದಿದ್ದ ಕುಟುಂಬಸ್ಥರು ನಟನ ತನ್ನೂರಿಗೆ ಹೋಗಿದ್ದಾಗ ಭೇಟಿಯಾಗಿ ನಮ್ಮ ಮನೆಯವರನ್ನ ಜೈಲಿನಿಂದ ಬಿಡಿಸಿ ಎಂದು ಕೇಳಿಕೊಂಡಿದ್ದರಂತೆ. ಅದರಂತೆ ಇಂದು ದುನಿಯಾ ವಿಜಯ್ ತಮ್ಮ ಹುಟ್ಟೂರಿನ 6 ಜನ ಖೈದಿಗಳನ್ನು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿನ ದಂಡ ಕಟ್ಟಿ ಬಿಡುಗಡೆ ಮಾಡಿಸಿದ್ದಾರೆ. ಇಂತಹ ನೋ’ವು ಯಾರಿಗೂ ಬಾರದಿರಲಿ ಎಂದು ವಿಜಯ್ ಅವರಿಗೆ ಹರಸಿದ್ದಾರೆ.
2013 ರಲ್ಲಿ ದುನಿಯಾ ವಿಜಯ್ ತಮ್ಮ ಸಿನಿಮಾ ಚಿತ್ರೀಕರಣಕ್ಕಾಗಿ ಮೈಸೂರು ಜೈಲಿಗೆ ಹೋಗಿದ್ದಾಗ ಅಲ್ಲಿದ್ದ ಸಾಕಷ್ಟು ಖೈದಿಗಳ ಜೊತೆ ಮಾತನಾಡಿ ಅವರ ಕ’ಷ್ಟ ಸುಖಗಳನ್ನ ವಿಚಾರಿಸಿದರು. ಆ ಸಮಯದಲ್ಲಿ ಕೆಲವು ವಯಸ್ಸಾದ ಖೈದಿಗಳಿಗೆ ದಂಡವನ್ನು ಪಾವತಿಸಿದರೆ ಬಿಡುಗಡೆ ಮಾಡುವ ಅವಕಾಶವಿತ್ತು.
ಇದನ್ನು ತಿಳಿದ ನಟ ಅವರಿಗೆ ನೆರವು ನೀಡಿ 62 ಜನ ಖೈದಿಗಳನ್ನ ಬಿಡುಗಡೆ ಮಾಡಿಸಿದ್ದರು ಮತ್ತೀಗ ತಮ್ಮ ಹುಟ್ಟೂರಿನ ಕುಂಬಾರನಹಳ್ಳಿಯ 6 ಜನ ಕೈದಿಗಳು ದಂಡ ಕಟ್ಟದೆ ಹೆಚ್ಚುವರಿ ಶಿಕ್ಷೆಯನ್ನು ಅನುಭವಿಸುತ್ತಿದ್ದನ್ನು ತಿಳಿದಾಗ ಅವರ ಸಹಾಯಕ್ಕೆ ನಿಂತು ಬಂಧನದಿಂದ ಮುಕ್ತಗೊಳಿಸಿ ಹೊಸ ಜೀವನ ಕಟ್ಟಿಕೊಳ್ಳಲು ಅವಕಾಶ ಒದಗಿಸಿ ಕೊಟ್ಟಿದ್ದಾರೆ.
ನಯನತಾರ ಸಿನಿಮಾವನ್ನೇ ಡಿಲೀಟ್ ಮಾಡಿದ ನೆಟ್ ಫ್ಲಿಪ್ಸ್.! ಕಾರಣವೇನು ಗೊತ್ತ.?
ಇದೇ ಜನವರಿ 20ರಂದು ನಟನ ಹುಟ್ಟುಹಬ್ಬ (Duniya Vijay Birthday) ಇದೆ. ಈ ಬಾರಿ ಕೂಡ ತಮ್ಮ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿರ್ಧರಿಸಿರುವ ದುನಿಯಾ ವಿಜಯ್ ಅವರು ತಮ್ಮ ಹುಟ್ಟೂರಾದ ಕುಂಬಾರ ಹಳ್ಳಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ ಮತ್ತು ಈಗಲೇ ತಮ್ಮ ಅಭಿಮಾನಿಗಳಿಗೆ ಯಾವುದೇ ಕಾರಣಕ್ಕೂ ಕಟ್ ಔಟ್ ಕಟ್ಟಬಾರದು ಹಾಲಿನ ಅಭಿಷೇಕ ಮಾಡಬಾರದು ಎಂದು ಕೇಳಿಕೊಂಡಿದ್ದಾರೆ.
ಹುಟ್ಟು ಹಬ್ಬದ ಪ್ರಯುಕ್ತ ಬ್ಲಾಕ್ ಕೋಬ್ರಾ ಬಹು ನಿರೀಕ್ಷಿತ ಚಿತ್ರ ಭೀಮಾ ಚಿತ್ರದ ಟೀಸರ್ ರಿಲೀಸ್ (Bheema Movie teaser) ಆಗಲಿದೆ. ಭೀಮಾ ಸಿನಿಮಾದ ಎರಡು ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು ಎರಡನೇ ಹಾಡದ ಐ ಲವ್ ಯು ಕಣೇ ಸಕ್ಕತ್ ಟ್ರೆಂಡಿಯಾಗಿ ಎಲ್ಲರ ಬಾಯಿಯಲ್ಲೂ ಗುನುಗುತ್ತಿದೆ. ಭೀಮ ಸಿನಿಮಾವು ನೈಜ ಕಥೆ ಆಧಾರಿತ ಸಿನಿಮಾ ಆಗಿತ್ತು ಈ ಸಿನಿಮಾದ ಮೇಲೆ ಬಹಳಷ್ಟು ನಿರೀಕ್ಷೆ ಇದೆ. ಶೀಘ್ರದಲ್ಲಿ ಸಿನಿಮಾ ರಿಲೀಸ್ ಆಗಲಿ ಮತ್ತು ದುನಿಯಾ ವಿಜಯ್ ಅವರ ವೈಯಕ್ತಿಕ ಜೀವನ ಮತ್ತು ವೃತ್ತಿ ಜೀವನ ಎರಡರಲ್ಲೂ ಸಂತೋಷ ಸಮೃದ್ಧಿ ತುಂಬಿರಲಿ ಎಂದು ನಾವು ಸಹ ಹರಸೋಣ.