ಸುಚಿತ್ರ ಫಿಲಂ ಸೊಸೈಟಿ ಆವರಣದಲ್ಲಿ ಚಿತ್ರ ಸುಗ್ಗಿ ಎನ್ನುವ ಕನ್ನಡ ಸಿನಿಮಾ ಇಂಡಸ್ಟ್ರಿ ಸಂಬಂಧಿತ ಸಂವಾದ ಕಾರ್ಯಕ್ರಮ (Film Industry Debate program) ನಡೆದಿತ್ತು. ಅನೇಕ ಹಳೆಯ ಕನ್ನಡ ಚಲನಚಿತ್ರಗಳ ಪ್ರದರ್ಶನದ ಜೊತೆಗೆ ಕನ್ನಡದಲ್ಲಿ ಸಿನಿಮಾ ಬೆಳವಣಿಗೆ ಬೇಕಾದ ಅಂಶಗಳ ಮತ್ತು ಕೊರತೆಗಳ ಕುರಿತಾಗಿ ಚರ್ಚೆಗಳು ನಡೆದವು.
ಇದರಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಳೆದ 20 ವರ್ಷಗಳಿಂದ ವಿತರಕನಾಗಿ, ಸಹ ನಿರ್ಮಾಪಕನಾಗಿ ಮತ್ತು ಕಲಾವಿದನಾಗಿಯೂ ಗುರುತಿಸಿಕೊಂಡಿರುವ ಪ್ರಶಾಂತ್ ಸಂಬರ್ಗಿ (Prashanth Sambargj) ಅವರು ಭಾಗಿಯಾಗಿ ರಿಮೇಕ್ ಸಿನಿಮಾಗಳು ವಿರುದ್ಧ (apposed remake Movied) ತಮ್ಮ ಚರ್ಚೆ ಮಂಡಿಸಿದರು.
ನೇರವಾಗಿ ಅವರು ಆರಡಿ ಕಟೌಟ್ ಗಳಿಂದಲೇ ಕನ್ನಡ ಸಿನಿಮಾ ಇಂಡಸ್ಟ್ರಿ ಹಾಳಾಯಿತು ಹಳಸಿದ ಅನ್ನದಿಂದ ಇಂಡಸ್ಟ್ರೀ ಬೆಳವಣಿಗೆ ಆಗಲಿಲ್ಲ ಎನ್ನುವ ನೇರ ಆರೋಪವನ್ನು ರಿಮೇಕ್ ಸಿನಿಮಾ ಮಾಡಿದ ನಿರ್ಮಾಪಕರು ಹಾಗೂ ನಾಯಕ ನಟರ ಮೇಲೆ ಹೊರಿಸಿದ್ದಾರೆ.
ಅಮ್ಮ ಲೀಲಾವತಿ ನೆನಪಿಗಾಗಿ 55 ಲಕ್ಷ ಖರ್ಚು ಮಾಡಲು ಹೊರಟ ವಿನೋದ್ ರಾಜ್, ಎಲ್ಲರೂ ಮೆಚ್ಚಿದ ಆ ಕಾರ್ಯ ಯಾವುದು ಗೊತ್ತಾ.?.
2014ರಲ್ಲಿಯೇ ಇವರು ಡಬ್ಬಿಂಗ್ ಪರವಾದ ಮಾಡಿ ರಿಮೇಕ್ ಸಿನಿಮಾಗಳ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಹೊರ ಬಿದ್ದಿದ್ದರು. ಇದೇ ಕಾರಣಕ್ಕಾಗಿ ಅವರಿಗೆ ಸಿಕ್ಕಿದ ಅನೇಕ ಸಿನಿಮಾಗಳ ಅವಕಾಶ ಕೈ ತಪ್ಪಿ ಹೋಗಿ ಕೆಲವು ವರ್ಷಗಳ ಕಾಲ ತಬ್ಬಲಿಯಂತಾಗಿ ಹೋಗಿದ್ದರು.
ಆದರೆ ಈಗ ಅವರು ಗಟ್ಟಿಯಾಗಿ ಹೇಳುತ್ತಾರೆ ಅಂದು ಯಾರ ವಿರೋಧ ಮಾಡಿದ್ದರು ಅದೇ ಜನರು ಇವತ್ತು ನನ್ನ ಆಲೋಚನೆ ಏನಿತ್ತು ಎಂದು ಅರ್ಥ ಮಾಡಿಕೊಂಡಿದ್ದಾರೆ. ಆದರೆ ನಾನು ನನ್ನ ಸ್ವಾರ್ಥಕ್ಕಾಗಿ ಅಂದು ಆ ರೀತಿ ಮಾಡಿರಲಿಲ್ಲ, ಕನ್ನಡ ಸಿನಿಮಾ ಇಂಡಸ್ಟ್ರಿಗಾಗಿ ಎಲ್ಲರಿಗೂ ಮಾಡಿದ್ದು ಯಾಕೆಂದರೆ ಇಂದು ಕನ್ನಡದಲ್ಲಿ ಸ್ವಮೇಕ್ ಚಿತ್ರವಾದ ಕಾಂತರಾ ಮತ್ತು KGF ಬಗ್ಗೆ ಇದೇ ದೇಶ ಮಾತನಾಡುತ್ತದೆ ಇದು ಸ್ವಮೇಕ್ ಗೆ ಇರುವ ಶಕ್ತಿ.
ಈ ರೀತಿ ಹೊಸ ಕಥೆಗಾರನಿಗೆ, ಪ್ರತಿಭೆಗೆ ಪ್ರೋತ್ಸಾಹಿಸಿ ಕಾಪಾಡ ಬೇಕಿರುವುದು ಚಲನಚಿತ್ರ ಮಂಡಳಿ ಯಾವಾಗಲೂ ಸಿನಿಮಾಗೆ ಕಥೆಯೇ ರಾಜನಾಗಿರುತ್ತಾನೆ. ಕಥೆ ಚೆನ್ನಾಗಿದ್ದರೆ ಖಂಡಿತ ಸಿನಿಮಾ ಗೆಲ್ಲುತ್ತದೆ. 70-80 ದಶಕದಲ್ಲೂ ಬಂಗಾರದ ಮನುಷ್ಯ, ಕಸ್ತೂರಿ ನಿವಾಸ, ಮಲಯ ಮಾರುತ, ಇಂತಹ ಎಷ್ಟೋ ಸಿನಿಮಾಗಳ ಉದಾಹರಣೆ ಕೊಡಬಹುದು.
ವಂಶಿಕ ಇಷ್ಟು ದೊಡ್ಡ ಹೆಸರು ಮಾಡಿದ್ದರೂ ಯಾವ ದೊಡ್ಡ ಹೀರೋನು ವಿಶ್ ಮಾಡಿಲ್ಲಾ.!
ಬಂಧನ, ಶರಪಂಜರ ಕಾದಂಬರಿ ಆಧಾರಿತ ಸಿನಿಮಾವಾಗಿತ್ತು ಆದರೆ ಇಂದು ಎಷ್ಟು ಜನರಿಗೆ ಆ ತಾಳ್ಮೆ ಇದೆ. ಸುಲಭವಾಗಿ ಸಿಗುತ್ತದೆ ಎಂದು ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಹಿಟ್ ಆದ ಸಿನಿಮಾಗಳನ್ನು ತಂದು ರಿಮೇಕ್ ಮಾಡುತ್ತಾರೆ. ಇಂದು A ಗ್ರೇಡ್ ಸ್ಟಾರ್ ಗಳು ನಟಿಸಿರುವ ಸಿನಿಮಾಗಳಲ್ಲಿ 45 ಕ್ಕಿಂತ ಹೆಚ್ಚು ರಿಮೇಕ್ ಸಿನಿಮಾಗಳೇ ಇವೆ. ಇದು ಇಂಡಸ್ಟ್ರಿ ಬೆಳವಣಿಗೆಗೆ ಮಾರಕ.
ಆ ಸಿನಿಮಾದಲ್ಲಿ ಹಾಕುವ ಬಟ್ಟೆಯಿಂದ ಹಿಡಿದು, ಸ್ಟೆಪ್ ಗಳು, ಡೈಲಾಗ್ ಗಳು ಎಲ್ಲವೂ ಅವರು ಮಾಡಿರುವ ಜೆರಾಕ್ಸ್ ಆದರೆ ನಾವಿನ್ನು ಅ ಆ ಇ ಈ ಕಲಿತಿಲ್ಲ ಎಂದರ್ಥ ಹಾಗಾದ್ರೆ ನಾವು ಕಾಗುಣಿತ ಕಲಿಯುವುದು ಯಾವಾಗ? ಗಾದೆ ಬಳಸುವುದು ಯಾವಾಗ? ಪದ್ಯ ಗದ್ಯ ಬರೆಯುವುದು ಯಾವಾಗ? ಹಾಗಾಗಿ ನಾನು ಡಬ್ಬಿಂಗ್ ಪರ ಮಾತನಾಡಿ ರಿಮೇಕ್ ದ್ವೇಷಿಸಿದ್ದು.
ರಿಸರ್ಚ್ ಆಧಾರಿತ ಎಷ್ಟು ಸಿನಿಮಾಗಳಿವೆ ಕರ್ನಾಟಕದ ಸಾಧಕ ಗೋಪಿನಾಥನ್ ಸಿನಿಮಾ ವನ್ನು ತಮಿಳು ಭಾಷೆಯಲ್ಲಿ ಮಾಡಿ ಗೆದ್ದರು. ಮಲ್ಲಿಕಾ ಸೈನೆಡ್ ಕಥೆ ಇಲ್ಲಿಯವರು ಮಾಡಲಿಲ್ಲ ಆದರೆ ಇಂತಹದೇ ಕೇರಳದಲ್ಲಿ ಆದ ಘಟನೆ ಆಧಾರಿತ ಸಿನಿಮಾ ಅವರು ಮಾಡಿದರು. ಈಗ ಎಲ್ಲರೂ ಅವರ ನೆಲದ ಕಥೆಗಳನ್ನು ಮಾಡುತ್ತಿದ್ದಾರೆ.
ರವಿಚಂದ್ರನ್ ನಟಿಸಿದ 20 ಚಿತ್ರಗಳಿಗೆ ಧ್ವನಿ ಕೊಟ್ಟೆ, ಆದ್ರೆ ಅವರಿಂದ ಆ ಗೌರವ ಮಾತ್ರ ಸಿಗಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ ಕಂಠದಾನ ಕಲಾವಿದ ಶ್ರೀನಿವಾಸ್ ಪ್ರಭು.!
ನಮ್ಮಲ್ಲಿ ಎಷ್ಟೊಂದು ಇಂತಹ ಇನ್ಸಿಡೆಂಟ್ ಗಳು ಆಗಿವೆ, ಡಾಕ್ಯುಮೆಂಟರಿಗಳು, ರಾಜಕೀಯ ಸನ್ನಿವೇಶಗಳು, ಕೃತಿಗಳಿವೆ. ಹಾಗಾಗಿ ಕ್ರಿಯೇಟಿವಿಟಿ, ಸ್ವಂತಿಗೆ ಇದ್ದರೆ ಮಾತ್ರ ಇಂಡಸ್ಟ್ರಿ ಉಳಿಯುತ್ತದೆ. ಕನ್ನಡಿಗರು ಕೂಡ ಬುದ್ಧಿವಂತರಾಗಿದ್ದಾರೆ ಅವರಿಗೆ ಸಿನಿಮಾ ಟೇಸ್ಟ್ ಗೊತ್ತಾಗಿದೆ, ಇದನ್ನೇ ನಾವು ಅವತ್ತಿನಿಂದ ಹೇಳುತ್ತಿರುವುದು. ರೀಮೇಕ್ ಮಾಡಿ ಹಳಸಿದ ಅನ್ನ ಕೊಡಬೇಡಿ, ಸ್ವಮೇಕ್ ಮಾಡಿ ಚಿತ್ರರಂಗ ಉಳಿಸಿ ಎಂದಿದ್ದಾರೆ.