ಈ ಬಾರಿಯ ಕನ್ನಡದ ಬಿಗ್ ಬಾಸ್ ಸೀಸನ್ 10 ರಲ್ಲಿ (Bigboss S10) ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್ (Rakshak Bullet) ಕೂಡ ಕಂಟೆಸ್ಟೆಂಟ್ ಆಗಿ ಭಾಗಿಯಾಗಿದ್ದರು, ಕಾರ್ಯಕ್ರಮಕ್ಕೆ ಹೋಗುವ ಮುನ್ನ ಬಿಗ್ ಬಾಸ್ ಯಾಕೆ ಅಂತ ಕೇಳಿದ್ದಕ್ಕೆ ವೇದಿಕೆ ಮೇಲೆ ನೇಮ್, ಫೇಮ್ ಮತ್ತು ಹಣಕ್ಕಾಗಿ ಎಲ್ಲರಿಗೂ ಪರಿಚಯ ಆಗುವುದಕ್ಕಾಗಿ ಹೋಗಬೇಕು ಎಂದು ಹೇಳಿದ್ದರು.
ಗುರು ಶಿಷ್ಯರು ಸಿನಿಮಾ (Gurushisyaru) ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರೂ ಅದಕ್ಕೂ ಮುನ್ನವೇ ರಕ್ಷಕ್ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು ಮತ್ತು ಕೆಲವು ವಿಚಾರವಾಗಿ ನೆಗೆಟಿವ್ ಆಗಿ ಕೂಡ ಟ್ರೋಲ್ ಆಗಿದ್ದರು.
ತಮ್ಮನ್ನು ತಾವು ಸಾಬೀತು ಪಡಿಸಿಕೊಳ್ಳುವುದಕ್ಕಾಗಿ ಬಿಗ್ ಬಾಸ್ ಮನೆಗೆ ಹೋಗುತ್ತೇನೆ ಎಂದು ಹೇಳಿಕೊಂಡು ಹೋಗಿದ್ದ ಇವರ ಆಟವು ಒಂದೇ ತಿಂಗಳಿಗೆ ಕೊನೆಯದಾಗಿತ್ತು. ನಾಲ್ಕನೇ ವಾರಕ್ಕೆ ಮನೆಯಿಂದ ಹೊರ ಬಿದ್ದ ಇವರು ಸತತವಾಗಿ ಹಲವಾರು ಇಂಟರ್ವ್ಯೂ ನಲ್ಲಿ ಭಾಗಿಯಾಗಿದ್ದಾರೆ.
ಆಚೆ ಬಂದ ಮೇಲೆ ಕೆಲವು ಸಂದರ್ಶನಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಅ’ಸ’ಮಾ’ಧಾ’ನ ಕೂಡ ವ್ಯಕ್ತಪಡಿಸಿದ್ದರು. ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೆ ಕೆಲವು ಕಂಟೆಸ್ಟೆಂಟ್ ಗಳ ವರ್ತನೆ ಇದೆ ರೀತಿ ಇರುತ್ತದೆ ಇದು ಸಾಮಾನ್ಯ ಎಂದು ಜನರೂ ಅಂದುಕೊಂಡಿದ್ದರು.
ಈಗ ಮಿತಿಮೀರಿ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮನೆಯೊಳಗೆ ವಿನಯ್ ಗುಂಪು ಎಂದು ಕರೆಸಿಕೊಂಡಿದ್ದ ಸ್ನೇಹಿತ್, ನೀತು, ಪವಿಪೂವಯ್ಯ, ಮೈಕಲ್ ನೊಟ್ಟಿಗೆ ಭಾಗಿಯಾಗಿದ್ದ ರಕ್ಷಕ್ ಸುದೀಪ್ ಅವರು ದೇವರು, ನಾವು ಅವರ ಮುಂದೆ ಭಕ್ತರಂತೆ ಕೈ ಕೊಟ್ಟು ನಿಂತುಕೊಂಡು ಕೊಟ್ಟಿದ್ದನ್ನೇ ವರ ಎಂದು ತೆಗೆದುಕೊಳ್ಳಬೇಕಾ ಎಂಬ ಸ್ಟೇಟ್ಮೆಂಟ್ ಕೊಟ್ಟು ಸುದೀಪ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕಳೆದೆರಡು ದಿನಗಳಿಂದ ಈ ವಿಚಾರ ಹೆಚ್ಚು ಸುದ್ದಿಯಾಗುತ್ತಿದ್ದು, ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗುತ್ತಿದ್ದಾರೆ ಮತ್ತು ಅವರು ಮಾತನಾಡಿದ ಆಗಿ ಯತೇಚ್ಛವಾಗಿ ನೆ’ಗೆ’ಟಿ’ವ್ ಕಮೆಂಟ್ ಕಳೆದುಕೊಳ್ಳುತ್ತಿದೆ. ಈ ಬಗ್ಗೆ ತಕ್ಷಣವೇ ಎಚ್ಚೆತ್ತುಕೊಂಡ ರಕ್ಷಕ್ ವಿಡಿಯೋ ಮಾಡಿ ಹಂಚಿಕೊಳ್ಳುವ ಮೂಲಕ ಅದಕ್ಕೆ ಸ್ಪಷ್ಟನೆ ಕೊಟ್ಟು, ಸುದೀಪ್ ಹಾಗೂ ಸುದೀಪ್ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದಾರೆ (Sorry to Kichcha Sudeep and Fans).
ಆ ಕಾರ್ಯಕ್ರಮದಲ್ಲಿ ಉತ್ತಮ ಮತ್ತು ಕಳಪೆ ಕೊಡುವುದರ ಬಗ್ಗೆ ಚರ್ಚೆ ಆಗುತ್ತಿತ್ತು ಆಗ ರಕ್ಷಕ್ ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಡ್ರಾಮ ಮಾಡುತ್ತಾರೆ. ಉತ್ತಮ ಕಳಪೆ ಕೊಡುವಾಗ ಲೆಕ್ಕಾಚಾರ ಹಾಕಿ ಕೊಡುತ್ತಾರೆ ಆದರೆ ಸುದೀಪ್ ಅವರು ಬಂದ ಮೇಲೆ ಎಲ್ಲವೂ ಬದಲಾಗುತ್ತದೆ.
ಸುದೀಪಣ್ಣ ಬಂದ ಬಳಿಕ, ದೇವರು ನಿಂತಿದ್ದಾರೆ. ನಾವೆಲ್ಲ ಭಕ್ತಾದಿಗಳು, ಅವರು ಹೆಂಗೆ ವರ ಕೊಡ್ತಾರೋ, ಹಂಗೆ ತೆಗೋಬೇಕು ಅನ್ನೋ ಥರ ಎಲ್ಲರೂ ಇರ್ತಾರೆ ಎಂದು ರಕ್ಷಕ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈಗ ವಿಡಿಯೋ ಮಾಡಿ ಸ್ಪಷ್ಟಣೆ ಕೊಡಲು ಯತ್ನಿಸಿರುವ ಬುಲೆಟ್ ಎರಡು ದಿನಗಳಿಂದ ಒಂದು ವಿಡಿಯೋ ಹರಿದಾಡ್ತಿದೆ.
ಅಂದ್ರೆ, ನಾನು ಸುದೀಪ್ ಅಣ್ಣನ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದೆ ಎಂದು. ನಾನು ಹೇಳಿದ್ದು ಆ ಅರ್ಥದಲ್ಲಿ ಅಲ್ಲ, ಇಡೀ ಸಂದರ್ಶನ ನೋಡಿದರೆ ನಿಮಗೆ ತಿಳಿಯುತ್ತದೆ. ಯಾವಾಗ ಯಾಕಾಗಿ ಯಾವ ಲೈನ್ ಹೇಳಿದೆ ಎಂದು ಗೊತ್ತಾಗುತ್ತದೆ. ಬೇಜಾರಾಗಿದ್ದರೆ, ಸುದೀಪ್ ಅಣ್ಣನಿಗೂ ಮತ್ತು ಸುದೀಪ್ ಅಣ್ಣನ ಫ್ಯಾನ್ಸ್ಗೂ ಸಾರಿ, ಸುದೀಪಣ್ಣನ ಮೇಲೆ ಬಹಳ ಗೌರವ ಇದೆ ಎಂದು ಹೇಳಿ ವೀಡಿಯೋ ಮೂಲಕ ಕ್ಷಮೆ ಕೇಳಿದ್ದಾರೆ ರಕ್ಷಕ್.