ನಟ ದರ್ಶನ್ ಸುದೀಪ್ ಯಶ್ ಧ್ರುವ ನಿಖಿಲ್ ಎಲ್ಲರೂ ಕೂಡ ನಮ್ಮ ಕನ್ನಡ ಚಿತ್ರರಂಗದ ಹೆಸರಾನ್ವಿತ ನಟರಾಗಿದ್ದು ಇವರೆಲ್ಲರೂ ಕೂಡ ಸಂಕ್ರಾಂತಿ ಹಬ್ಬವನ್ನು ಬಹಳ ವಿಶೇಷವಾಗಿ ಆಚರಣೆ ಮಾಡಿದ್ದಾರೆ ಎಂದು ಹೇಳಬಹುದು.
ಹೌದು ಕಳೆದ ಎರಡು ದಿನಗಳ ಹಿಂದೆ ಸಂಕ್ರಾಂತಿ ಹಬ್ಬ ಇತ್ತು ಈ ಒಂದು ದಿನ ಪ್ರತಿಯೊಬ್ಬ ನಟರು ಕೂಡ ಈ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ ದೇವರನ್ನು ಪೂಜೆ ಮಾಡುವುದರ ಮೂಲಕ ತಮ್ಮ ಮನೆಗಳಲ್ಲಿ ಇರುವಂತಹ ಹಸು ದನ ಕರುಗಳಿಗೆ ಪೂಜೆ ಮಾಡುವುದರ ಮೂಲಕ ಪ್ರತಿಯೊಬ್ಬರು ಅವರದೇ ಆದ ಸಂಪ್ರದಾಯದಂತೆ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ತೋಟದ ಮನೆಯಲ್ಲಿ ಇರುವಂತಹ ಪ್ರಾಣಿಗಳನ್ನು ಪೂಜೆ ಮಾಡುವ ಮೂಲಕ ಅವುಗಳಿಗೆ ಅಲಂಕಾರ ಮಾಡಿ ಸಂಕ್ರಾಂತಿ ಹಬ್ಬವನ್ನು ಬಹಳ ವಿಶೇಷವಾಗಿ ಆಚರಣೆ ಮಾಡಿದ್ದಾರೆ.
ನಟ ದರ್ಶನ್ ಅವರಿಗೆ ಪ್ರಾಣಿ ಪಕ್ಷಿಗಳು ಎಂದರೆ ತುಂಬಾ ಇಷ್ಟ ಆದ್ದರಿಂದ ಅವರು ಪ್ರತಿಯೊಂದು ಹಬ್ಬದಲ್ಲಿಯೂ ಕೂಡ ಅವರ ಫಾರ್ಮ್ ಹೌಸ್ ಅಂದರೆ ತೋಟದ ಮನೆಗೆ ಹೋಗಿ ಅಲ್ಲಿ ಪ್ರಾಣಿಗಳನ್ನು ಪೂಜೆ ಮಾಡುವುದರ ಮೂಲಕ ಅವುಗಳ ಜೊತೆ ಸಮಯ ಕಳೆಯುವುದರ ಮೂಲಕ ಪ್ರತಿಯೊಂದು ಹಬ್ಬವನ್ನು ಆಚರಣೆ ಮಾಡುತ್ತಾರೆ.
ಅದರ ಜೊತೆ ಅವುಗಳ ಆರೋಗ್ಯದ ಬಗ್ಗೆಯೂ ಕೂಡ ಹೆಚ್ಚಿನ ಗಮನವಹಿಸಿ ಅವುಗಳಿಗೂ ಕೂಡ ಉತ್ತಮವಾದಂತಹ ಆಹಾರಗಳನ್ನು ನೀಡುವುದರ ಮೂಲಕ ಅವುಗಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಇವರ ಒಂದು ಈ ಬಾಂಧವ್ಯ ವನ್ನು ನೋಡಿದ ಕೆಲವೊಂದಷ್ಟು ಜನ ಅಭಿಮಾನಿಗಳು ಕೂಡ.
ಅವರಂತೆಯೇ ನಾವು ಪ್ರಾಣಿ ಪಕ್ಷಿಗಳನ್ನು ನೋಡಿಕೊಳ್ಳಬೇಕು ನಾವು ಇದೇ ರೀತಿಯಾಗಿ ಅವುಗಳಿಗೆ ಉತ್ತಮವಾದ ಜೀವನವನ್ನು ಕೊಡ ಬೇಕು ಎನ್ನುವಂತಹ ತೀರ್ಮಾನ ಮಾಡಿ ಅನಾಥವಾಗಿರುವಂತಹ ಕೆಲವೊಂದಷ್ಟು ಪ್ರಾಣಿಗಳನ್ನು ತಮ್ಮ ಬಳಿ ಇಟ್ಟುಕೊಂಡು ಅವುಗಳನ್ನು ಸಾಕುತ್ತಿದ್ದಾರೆ ಹೌದು.
ಅದರಂತೆಯೇ ನಟ ಯಶ್ ನಿಖಿಲ್ ಕುಮಾರ ಸ್ವಾಮಿ ಅವರು ಕೂಡ ಸಂಕ್ರಾಂತಿ ಹಬ್ಬವನ್ನು ಬಹಳ ವಿಶೇಷವಾಗಿ ಆಚರಣೆ ಮಾಡಿದ್ದಾರೆ ಕುರಿ ಹಸುಗಳನ್ನು ಪೂಜೆ ಮಾಡುವುದರ ಮೂಲಕ ಆ ಒಂದು ಫೋಟೋಗಳನ್ನು ತಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಪೇಜ್ ಗಳಲ್ಲಿ ಹಾಕುವುದರ ಮೂಲಕ ಹಬ್ಬವನ್ನು ಆಚರಣೆ ಮಾಡುವ ವಿಷಯವನ್ನು ಪ್ರತಿಯೊಬ್ಬ ಅಭಿಮಾನಿಗಳಿಗೂ ಕೂಡ ತಿಳಿಸಿದ್ದಾರೆ. ಇದನ್ನು ನೋಡಿದಂತಹ ಅಭಿಮಾನಿಗಳು ಕೂಡ ಒಂದು ಮೆಚ್ಚುಗೆ ಯನ್ನು ವ್ಯಕ್ತಪಡಿಸಿದ್ದಾರೆ.
ನಟ ಯಶ್ ರಾಧಿಕಾ ಪಂಡಿತ್ ಅವರು ಕೂಡ ಸಂಕ್ರಾಂತಿ ಹಬ್ಬವನ್ನು ಬಹಳ ವಿಶೇಷವಾಗಿ ಆಚರಣೆ ಮಾಡಿದ್ದು ತಮ್ಮ ಇಬ್ಬರೂ ಮುದ್ದಾದ ಮಕ್ಕಳ ಜೊತೆ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಿದ್ದಾರೆ ಈ ಹಬ್ಬದ ದಿನ ಗಾಳಿಪಟ ಹಾರಿಸುವ ಮೂಲಕ ಈ ಒಂದು ಫೋಟೋವನ್ನು ಹಂಚಿಕೊಂಡಿರುವಂತಹ ನಟ ಯಶ್ ಅವರು ಪ್ರತಿಯೊಬ್ಬರಿಗೂ ಕೂಡ ಸಂಕ್ರಾಂತಿ ಹಬ್ಬದ ಶುಭಾಶಯಗಳು ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಈ ಒಂದು ಫೋಟೋ ಬಹಳ ಸುಂದರವಾಗಿದ್ದು ಈ ಒಂದು ಫೋಟೋಗೆ ಅಭಿಮಾನಿಗಳು ಕೂಡ ಒಂದು ಉತ್ತಮವಾದ ಮೆಚ್ಚುಗೆ ಕೊಟ್ಟಿದ್ದಾರೆ. ಒಟ್ಟಾರೆಯಾಗಿ ಪ್ರತಿಯೊಬ್ಬರೂ ಕೂಡ ಈ ಒಂದು ವರ್ಷದ ಮೊದಲನೇ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಣೆ ಮಾಡಿದ್ದು ಈ ಹಬ್ಬ ಪ್ರತಿಯೊಬ್ಬರಿಗೂ ಕೂಡ ಸುಖ ಶಾಂತಿ ನೆಮ್ಮದಿ ಆಯಸ್ಸು, ಆರೋಗ್ಯವನ್ನು ಕೊಟ್ಟು ಕಾಪಾಡಲಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.