Tuesday, October 3, 2023
Home Blog Page 2

ಮೊಬೈಲ್ ಚಾರ್ಜಿಂಗ್ ಗೆ ಹಾಕಿ ಬಳಸಿದ ಪರಿಣಾಮ ಮೊಬೈಲ್ ಸ್ಪೋಟಗೊಂಡು ಮಹಿಳೆ ಸಾ’ವು.!

0

 

ಈ ಜನರಿಗೆ ಎಷ್ಟು ಹೇಳಿದರು ಪ್ರಯೋಜನವಿಲ್ಲ. ಅದರಲ್ಲೂ ಯುವಜನತೆ ಈ ಬಗ್ಗೆ ಬಹಳಷ್ಟು ತಾತ್ಸರ ತೋರುತ್ತಾರೆ. ಅಲ್ಲೊಂದು ಇಲ್ಲೊಂದು ಈ ರೀತಿಯ ಘಟನೆಗಳು ಬೆಳಕಿಗೆ ಬಂದಾಗ ಎರಡು ದಿನ ಭಯವಿರುತ್ತದೆ. ಆದರೆ ನಂತರ ಮತ್ತೆ ಅದೇ ಹಳೇ ಚಾಳಿ. ಈಗ ನಾವು ಹೇಳುತ್ತಿರುವುದು ಯಾವ ವಿಷಯದ ಬಗ್ಗೆ ಎಂದು ಬಹಳಷ್ಟು ಜನರಿಗೆ ಅರ್ಥ ಆಗಿದೆ.

ಅದೇನೆಂದರೆ, ಮೊಬೈಲ್ ಗೀಳು ಹತ್ತಿರುವುದರಿಂದ ಚಾರ್ಜ್ ಗೆ ಹಾಕಿದ ಮೇಲೂ ಕೂಡ ಮೊಬೈಲ್ ಬಳಸುವ ಗೀಳು ನಮ್ಮಲ್ಲಿ ಬಹುತೇಕ ಈಗ ಎಲ್ಲರೂ ಕೂಡ ಮೊಬೈಲ್ ಗೆ ಅಡಿಕ್ಟ್ ಆಗಿ ಹೋಗಿದ್ದೇವೆ. ನಮ್ಮ ಮನೆಯಲ್ಲಿರುವ ಪುಟ್ಟ ವರ್ಷದ ಮಗು ಕೂಡ ಊಟ ಮಾಡಿಸುವುದಕ್ಕೂ ಮೊಬೈಲ್ ಮೊರೆ ಹೋಗಿದ್ದೇವೆ.

ನಟ ನಾಗಭೂಷಣ್ ಬಂಧನ FIR ದಾಖಲು.!

ಅದಕ್ಕೆ ಮೊಬೈಲ್ ಕೊಟ್ಟು ಊಟ ಮಾಡಿಸುವುದರಿಂದ ಹಿಡಿದು ವೃದ್ದರು ಸಮಯ ಕಳೆಯುವುದಕ್ಕೆಂದು ಬಳಸುವುದರವರೆಗೆ ಮೊಬೈಲ್ ಬೇಕು. ನಮಗೆ ಟಿವಿ ಸೀರಿಯಲ್ ನೋಡುವುದಕ್ಕೆ, ಸಿನಿಮಾ ನೋಡುವುದಕ್ಕೆ, ಅಲಾರಾಂ ಇಡುವುದಕ್ಕೆ, ಚಾಟ್ ಮಾಡುವುದಕ್ಕೆ, ಗೇಮ್ ಆಡುವುದಕ್ಕೆ, ಕರೆ ಮಾಡುವುದಕ್ಕೆಹೀಗೆ ಹತ್ತು ಹಲವು ಕಾರಣಗಳು ಎದೆಲ್ಲದಕ್ಕೂ ಈಗ ಮೊಬೈಲ್ ಅವಶ್ಯಕವೂ ಹೌದು, ಅನಿವಾರ್ಯವೂ ಹೌದು.

ನಮ್ಮ ಇದರ ಬಳಕೆ ವಿಪರೀತವಾಗಿರುವುದರಿಂದ ಇದು ಅಡಿಕ್ಷನ್ ಆಗಿರುವುದು ಸಹಾ ಹೌದು. ಕೆಲವರು ಅವಶ್ಯಕತೆಗೆಂದು ಇದನ್ನು ಬಳಸಿದರೆ, ಇನ್ನೂ ಕೆಲವರು ಟೈಮ್ ಪಾಸ್ ಗಾಗಿ ಬಳಸುತ್ತಿದ್ದಾರೆ. ಒಟ್ಟಾರೆಯಾಗಿ ಮೊಬೈಲ್ ನಮ್ಮ ಜೀವನದ ಅತಿ ಮುಖ್ಯ ವಸ್ತುವಾಗಿ ಬಿಟ್ಟಿದೆ. ಅದಕ್ಕೂ ಚಾರ್ಜಿಂಗ್ ಅವಶ್ಯಕತೆ ಇರುತ್ತದೆ ಆ ಸಮಯದಲ್ಲಾದರೂ ಅದರಿಂದ ದೂರ ಇರುವುದು ಒಳ್ಳೆಯದು.

ಹಲವು ವರ್ಷಗಳ ಕಾಲ ಒಂದೇ ಮನೆಯಲ್ಲಿ ಬಾಡಿಗೆಗೆ ಇದ್ದರೆ ನೀವೇ ಆ ಮನೆ ಮಾಲೀಕರು ನೀವೆ ಆಗುತ್ತೀರಾ.! ಹೋಸ ರೂಲ್ಸ್ ಜಾರಿ

ಈಗಾಗಲೇ ಸಾಕಷ್ಟು ವೈದ್ಯರು ವಿಜ್ಞಾನಿಗಳು ಇದರ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಮೊಬೈಲ್ ಚಾರ್ಜಿಂಗ್ ಆಗುವಾಗ ಅದರಲ್ಲಿ ರೇಡಿಯೇಶನ್ ಹೆಚ್ಚಿಗೆ ಇರುತ್ತದೆ ಹಾಗಾಗಿ ಚಾರ್ಜಿಂಗ್ ಗೆ ಹಾಕಿ ಮೊಬೈಲ್ ಬಳಸುವುದು ಅದರಲ್ಲೂ ಕರೆ ಮಾಡುವುದು ಚಾರ್ಜಿಂಗ್ ಗೆ ಹಾಕಿ ಹೆಡ್ಫೋನ್ ಹಾಕಿಕೊಳ್ಳುವುದು ಈ ರೀತಿಯ ಕೆಲಸ ಮಾಡಲೇಬೇಡಿ, ಇದರಿಂದ ಪ್ರಾಣಕ್ಕೆ ಕುತ್ತಾಗಬಹುದು ಎಂದು.

ಆದರೆ ಅಪಾಯ ಮನೆ ಬಾಗಿಲಿಗೆ ಬರುವ ತನಕ ಯಾರು ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ ಇದೇ ರೀತಿ ತಪ್ಪಿನಿಂದಾಗಿ 33 ವರ್ಷದ ಮಹಿಳೆ ಪ್ರಾಣ ಕಳೆದುಕೊಳ್ಳುವ ಹಾಗಾಗಿದೆ. ತಮಿಳುನಾಡಿನ ತಂಜಾವೂರು ಜಿಲ್ಲೆಯ ಪಾಪನಾಶಂ ಬಳಿಯಿರುವ ವಿಶಿಷ್ಟರಾಜಪುರಂ ಮೂಲದ ಕೋಕಿಲಾಂಪಾಲ್ ಎನ್ನುವ ಮಹಿಳೆ ಈ ರೀತಿ ದು’ರಂ’ತ ಅಂತ್ಯ ಕಂಡಿದ್ದಾರೆ.

ತಲಕಾವೇರಿಯಲ್ಲಿ ಕಾವೇರಮ್ಮನಿಗೆ ವಿಶೇಷ ಪೂಜೆ ಕೈಗೊಂಡ ಅಭಿಷೇಕ್ ಅವಿವಾ ದಂಪತಿ, ಮಳೆಗಾಗಿ ಉಪವಾಸ, ಪ್ರಾರ್ಥನೆ.!

ಈಕೆಗೆ ಮದುವೆಯಾಗಿದ್ದು, ಓರ್ವ ಗಂಡು ಮಗನಿದ್ದಾನೆ. ಪತಿ ಪ್ರಭಾಕರನ್ ಅನಾರೋಗ್ಯ ಕಾರಣದಿಂದ ಕೆಲವು ವರ್ಷಗಳ ಹಿಂದೆಯೇ ಮೃ.ತ ಪಟ್ಟಿದ್ದಾನೆ. ಗಂಡ ಸ.ತ್ತ ನಂತರ ಸಂಸಾರದ ಹೊರೆ ಈಕೆಯ ಮೇಲಿತ್ತು, ಜೀವನ ನಿರ್ವಹಣೆಗಾಗಿ ಮೇಲಕಾಪಿಸ್ಥಳದಲ್ಲಿ ವಾಚ್ ಮತ್ತು ಸೆಲ್ ಫೋನ್ ರಿಪೇರಿ ಅಂಗಡಿ ನಡೆಸುತ್ತಿದ್ದಳು ಬುಧವಾರ ಮಧ್ಯಾಹ್ನ ಸೆಲ್ ಫೋನ್ ಚಾರ್ಜ್ ಗೆ ಹಾಕಿ ಕಿವಿಯಲ್ಲಿ ಹೆಡ್ ಫೋನ್ ಹಾಕಿಕೊಂಡು ಮಾತನಾಡುತ್ತಿದ್ದರು.

ಆಗ ಅನಿರೀಕ್ಷಿತವಾಗಿ ಮೊಬೈಲ್ ಸ್ಫೋಟಗೊಂಡಿದೆ. ಪರಿಣಾಮ ಕೋಕಿಲಾಂಪಲ್ ಸ್ಥಳದಲ್ಲೇ ಮೃ.ತ ಪಟ್ಟಿದ್ದಾಳೆ. ಅಲ್ಲದೆ ಅಂಗಡಿಯಲ್ಲಿದ್ದ ಸಾಮಗ್ರಿಗಳು ಕೂಡ ಬೆಂಕಿಗೆ ಆಹುತಿಯಾಗಿವೆ. ಸದ್ಯ ಈ ಸಂಬಂಧ ಕೋಕಿಲಂಪಾಲ್ ತಂದೆ ಕಪಿಸ್ತಲಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಬಗ್ಗೆ ತಿಳಿದ ಬಳಿಕ ಇನ್ನಷ್ಟು ಜನರು ಎಚ್ಚರಗೊಳ್ಳಲಿ ಎನ್ನುವುದಷ್ಟೇ ನಮ್ಮ ಆಶಯ.

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೂಕ ವಕೀಲೆಯೊಬ್ಬರು ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಣೆ ಮಾಡಿದ್ದಾರೆ.! ಹೇಗೆ ಗೊತ್ತ.?

ನಟ ನಾಗಭೂಷಣ್ ಬಂಧನ FIR ದಾಖಲು.!

0

 

ಕನ್ನಡ ಚಲನಚಿತ್ರರಂಗದಲ್ಲಿ ಈಗಷ್ಟೇ ಮಿಂಚಿನ ವೇಗದಲ್ಲಿ ಬೆಳೆಯುತ್ತಿದ್ದ ಅಪ್ಪಟ ಕನ್ನಡದ ಪ್ರತಿಭೆ ಹನಿಮೂನ್ ವೆಬ್ ಸೀರೀಸ್ ಖ್ಯಾತಿಯ ನಾಗಭೂಷಣ್ (Honeymoon web series famous actor Nagabhushan arrest). ಆರಂಭದಲ್ಲಿ ಹಾಸ್ಯ ನಟರಾಗಿ ಕಾಣಿಸಿಕೊಂಡ ಇವರು ಈಗಷ್ಟೇ ನಾಯಕ ನಟರಾಗಿ ಬಡ್ತಿ ಪಡೆಯುತ್ತಿದ್ದರು.

ತನ್ನ ಆತ್ಮೀಯ ಗೆಳೆಯ ಡಾಲಿ ಧನಂಜಯ್ (Dolly Dhananjay) ನಿರ್ಮಾಣದ ಟಗರು ಪಲ್ಯ (Tagaru palya Movie) ಸಿನಿಮಾದಲ್ಲಿ ನಾಯಕ ನಟನಾಗಿ ಲಾಂಚ್ ಆಗಬೇಕಿದ್ದ ನಟ ನಾಗಭೂಷಣ್ ನಮ್ಮ ಬೇಜವಾಬ್ದಾರಿತನದ ಕಾರ್ ಡ್ರೈವಿಂಗ್ (Rash driving) ಪರಿಣಾಮ ಮಹಿಳೆಯೊಬ್ಬರ ಸಾ’ವಿ’ಗೆ ಕಾರಣರಾಗಿ ಅ’ರೆ’ಸ್ಟ್ ಆಗಿದ್ದಾರೆ. ಸೆಪ್ಟೆಂಬರ್ 29ರ ತಡರಾತ್ರಿ ಘಟನೆ ನಡೆದಿದ್ದು, ಪ್ರಕರಣ ಈಗಷ್ಟೇ ಬೆಳಕಿಗೆ ಬಂದಿದೆ ಇದರ ಕುರಿತು ವಿವರ ಇಲ್ಲಿದೆ ನೋಡಿ.

ಹಲವು ವರ್ಷಗಳ ಕಾಲ ಒಂದೇ ಮನೆಯಲ್ಲಿ ಬಾಡಿಗೆಗೆ ಇದ್ದರೆ ನೀವೇ ಆ ಮನೆ ಮಾಲೀಕರು ನೀವೆ ಆಗುತ್ತೀರಾ.! ಹೋಸ ರೂಲ್ಸ್ ಜಾರಿ

ಬೆಂಗಳೂರಿನಲ್ಲಿ ಶನಿವಾರ ರಾತ್ರಿ ತಮ್ಮ ಅತಿವೇಗದ SUV ಕಾರ್ ನ್ನು ದಂಪತಿಗಳ ಮೇಲೆ ಹೇರಿದ ಆರೋಪದ ಮೇಲೆ ಕನ್ನಡ ನಟ ನಾಗಭೂಷಣ ಅವರನ್ನು ಬಂಧಿಸಲಾಗಿದೆ. ಕೋಣನಕುಂಟೆ ಮಾರ್ಗವಾಗಿ ಚಲಿಸುತ್ತಿದ್ದ ನಾಗಭೂಷಣ್ ಅವರು ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿ ವಸಂತಪುರದ ಮುಖ್ಯರಸ್ತೆಯ ಬಳಿ ಕಾಲು ದಾರಿಯಲ್ಲಿ ಸಾಗುತ್ತಿದ್ದ ದಂಪತಿಗಳಿಗೆ ಮೇಲೆ ಹರಿಸಿ ಮುಂದೆ ಇದ್ದ ವಿದ್ಯುತ್ ಕಂಬಕ್ಕೆ ಗುದ್ದಿದ್ದಾರೆ.

ಉತ್ತರಹಳ್ಳಿಯಿಂದ ಕನಕಪುರ ಮಾರ್ಗವಾಗಿ ಅತಿ ವೇಗವಾಗಿ ಕಾರ ಸಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತಮ್ಮಿಂದ ಆ’ಕ್ಸಿ’ಡೆಂ’ಟ್ ಆದ ಕೂಡಲೇ ಕೆಳಗಿಳಿದು ತಕ್ಷಣವೇ ದಂಪತಿಗಳನ್ನು ಆಸ್ಪತ್ರೆ ಸಾಗಿಸುವ ಕೆಲಸವನ್ನು ಕೂಡ ಮಾಡಿದ್ದಾರೆ.

ತಲಕಾವೇರಿಯಲ್ಲಿ ಕಾವೇರಮ್ಮನಿಗೆ ವಿಶೇಷ ಪೂಜೆ ಕೈಗೊಂಡ ಅಭಿಷೇಕ್ ಅವಿವಾ ದಂಪತಿ, ಮಳೆಗಾಗಿ ಉಪವಾಸ, ಪ್ರಾರ್ಥನೆ.!

ಆದರೆ ದುರಾದೃಷ್ಟವಶಾತ್ 48 ವರ್ಷದ ಪ್ರೇಮಾ ಎನ್ನುವ ಮಹಿಳೆಯು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ, ಆಕೆಯ ಪತಿ ಕೃಷ್ಣ ಬಿ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಕೃಷ್ಣ ಅವರಿಗೂ ಕೂಡ ಸಾಕಷ್ಟು ಪೆಟ್ಟಾಗಿದ್ದು ದೇಹದ ಹಲವು ಭಾಗಗಳು ಫ್ರಾಕ್ಚರ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾಗಿ ದಂಪತಿಗಳ ಮಕ್ಕಳು ಹೇಳುತ್ತಿದ್ದಾರೆ.

ಘಟನೆಯಲ್ಲಿ ಅಪಘಾತಕ್ಕೊಳಗಾದ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು, ಅವರ ರೋ’ಧ’ನೆ ಮುಗಿಲು ಮುಟ್ಟುವಂತಿದೆ. ಸೋಶಿಯಲ್ ಮೀಡಿಯಾದಲ್ಲಿ ನಟನನ್ನು ಶಪಿಸುತ್ತಾ ಮಕ್ಕಳು ಕಣ್ಣೀರಿಡುತ್ತಿರುವ ದೃಶ್ಯ ಮನ ಕಲಕುವಂತಿದೆ. ಕುಮಾರಸ್ವಾಮಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ, ನಟನನ್ನು ಬಂಧಿಸಿ, ಹೆಚ್ಚಿನ ತನಿಖೆಗಾಗಿ ಅವರ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೂಕ ವಕೀಲೆಯೊಬ್ಬರು ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಣೆ ಮಾಡಿದ್ದಾರೆ.! ಹೇಗೆ ಗೊತ್ತ.?

ಮೂಲಗಳ ಪ್ರಕಾರ ನಿರ್ಲಕ್ಷ್ಯ ಮತ್ತು ಅತಿವೇಗದ ಚಾಲನೆಗಾಗಿ ಪೊಲೀಸರು ಅವರ ವಿರುದ್ಧ ಸೆಕ್ಷನ್ 304 ನಡಿ FIR ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. 2021 ರಲ್ಲಿ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ನೇರವಾಗಿ ರಿಲೀಸ್ ಆದ ಕನ್ನಡ ಹಾಸ್ಯ ಚಲನಚಿತ್ರ ಇಕ್ಕಟ್ ಇವರಿಗೆ ಹೆಚ್ಚು ಹೆಸರು ತಂದು ಕೊಟ್ಟಿತ್ತು.

ಅದರಿಂದ ಈಚೆಗೆ ಸಿನಿಮಾ ರಂಗದಲ್ಲಿ ಬಹಳ ಬ್ಯುಸಿಯಾಗಿದ್ದರು. 2022ರಲ್ಲಿ ಲಕ್ಕಿ ಮ್ಯಾನ್ , ಮೇಡ್ ಇನ್ ಚೈನಾ, ನೋಡಿ ಸ್ವಾಮಿ ಇವನು ಇರೋದೇ ಹೀಗೆ ಮತ್ತು ಡೇರ್‌ಡೆವಿಲ್ ಮುಸ್ತಫಾ ಮುಂತಾದ ಬಹು ಚಲನಚಿತ್ರಗಳಲ್ಲಿ ಹಾಸ್ಯ ನಟನಾಗಿ ಮಿಂಚಿದ್ದರು. ಅವರು ಕನ್ನಡ ಭಾಷೆಯ ರೊಮ್ಯಾಂಟಿಕ್ ಹಾಸ್ಯ ವೆಬ್ ಸರಣಿ ಹನಿಮೂನ್ ಕೂಡ ಇವರಿಗೆ ಹೆಚ್ಚಿನ ಹೆಸರು ನೀಡಿದ್ದು.

ದರ್ಶನ್ ವೇದಿಕೆ ಏರಿದ್ರು ಕ್ಯಾರೆ ಅನ್ನದ ಧ್ರುವ.! ಡಿ-ಬಾಸ್ & ಧ್ರುವ ಸರ್ಜಾ ನಡುವೆ ವೈಮನಸ್ಸು.?

ಈಗಷ್ಟೇ ಬಿಡುಗಡೆಗೊಂಡು ಉತ್ತಮ ಪ್ರದರ್ಶನ ಕಂಡಿದ್ದ ಕೌಸಲ್ಯ ಸುಪ್ರಜಾ ರಾಮ ಸಿನಿಮಾದಲ್ಲಿ ಕೂಡ ಬಹು ಮುಖ್ಯಪಾತ್ರ ನಿರ್ವಹಿಸಿದ್ದರು. ಟಗರು ಪಲ್ಯ ಸಿನಿಮಾದ ಕುರಿತಾಗಿ ಹೆಚ್ಚು ಸುದ್ದಿಯಲ್ಲಿದ್ದರು.

ಹಲವು ವರ್ಷಗಳ ಕಾಲ ಒಂದೇ ಮನೆಯಲ್ಲಿ ಬಾಡಿಗೆಗೆ ಇದ್ದರೆ ನೀವೇ ಆ ಮನೆ ಮಾಲೀಕರು ನೀವೆ ಆಗುತ್ತೀರಾ.! ಹೋಸ ರೂಲ್ಸ್ ಜಾರಿ

0

 

ಬಾಡಿಗೆ ಮನೆಗಳಲ್ಲಿ ವಾಸಿಸುವವರ ಸಂಖ್ಯೆ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಹೆಚ್ಚಿಗೆ ಇರುತ್ತದೆ. ಹಳ್ಳಿಗಳಲ್ಲಿ ಬಹುತೇಕ ಎಲ್ಲರಿಗೂ ಕೂಡ ಸ್ವಂತ ಮನೆ ಇರುತ್ತದೆ, ಬಾಡಿಗೆ ಮನೆಯಲ್ಲೇ ವಾಸಿಸುವುದು ಬೆರಳೆಣಿಕೆಯಷ್ಟು ಮಂದಿ ಮಾತ್ರ, ಆದರೆ ಎಲ್ಲರಿಗೂ ಕೃಷಿ ಮಾಡಲು ಜಮೀನು ಇರುವುದಿಲ್ಲ. ಆಗ ಅವರು ಬೇರೆಯವರ ಜಮೀನನ್ನು ಗೇಣಿ ರೂಪದಲ್ಲಿ ಪಡೆದು ತಮ್ಮ ಕೃಷಿ ಚಟುವಟಿಕೆ ನಡೆಸಿ ಜೀವನ ನಡೆಸುತ್ತಾರೆ.

ಈ ರೀತಿಯಾಗಿ ಬೇರೆಯವರಿಗೆ ನಿಮ್ಮ ಜಮೀನನ್ನು ಕೊಡುತ್ತಿದ್ದರು ಅಥವಾ ಬಾಡಿಗೆಗಾಗಿ ಮನೆಗಳನ್ನು ಕೊಡುತ್ತಿದ್ದರೂ ಕೂಡ ನೀವು ಒಂದಿಷ್ಟು ನಿಯಮಗಳನ್ನು ತಿಳಿದುಕೊಳ್ಳಬೇಕು. ಇಲ್ಲವಾದಲ್ಲಿ ನಿಮ್ಮ ಮನೆ ನಿಮ್ಮ ಕೈತಪ್ಪಿ ಹೋಗಬಹುದು ಅದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.

ತಲಕಾವೇರಿಯಲ್ಲಿ ಕಾವೇರಮ್ಮನಿಗೆ ವಿಶೇಷ ಪೂಜೆ ಕೈಗೊಂಡ ಅಭಿಷೇಕ್ ಅವಿವಾ ದಂಪತಿ, ಮಳೆಗಾಗಿ ಉಪವಾಸ, ಪ್ರಾರ್ಥನೆ.!

ಯಾವುದಾದರೂ ಒಬ್ಬ ವ್ಯಕ್ತಿ ಒಂದೇ ಮನೆಯಲ್ಲಿ 12 ವರ್ಷಗಳ ಕಾಲ ವಾಸ ಮಾಡುತ್ತಿದ್ದರೆ ಆ ಮನೆಯನ್ನು ಆತ ತನ್ನ ಸ್ವಂತ ಮನೆ ಮಾಡಿಕೊಳ್ಳಲು ಅವಕಾಶ ಇದೆ ಎಂದು ಕಾನೂನು ಹೇಳುತ್ತದೆ. ಇದೇ ನಿಯಮ ಭೂ ಹಿಡುವಳಿಗೂ ಕೂಡ ಅನ್ವಯಿಸುತ್ತದೆ. ನಿಮ್ಮ ಜಮೀನಿನಲ್ಲಿ ಯಾರಾದರೂ 12 ವರ್ಷಗಳ ಕಾಲ ಅವರೇ ಕೃಷಿ ಚಟುವಟಿಕೆ ಮಾಡಿಕೊಂಡು ಬರುತ್ತಿದ್ದರೆ ಮುಂದೆ ಅವರೇ ಅದರ ಒಡೆತನವನ್ನು ಗಿಟ್ಟಿಸಿಕೊಳ್ಳಬಹುದು.

ಕಾನೂನಿನಲ್ಲಿ ಇದಕ್ಕೆ ಅವಕಾಶವಿದ್ದು ದೀರ್ಘಾವಧಿಯಲ್ಲಿ ಬಾಡಿಗೆಗೆ ಇದ್ದವರು ಈ ಅಧಿಕಾರ ಚಲಾಯಿಸಲು ಪ್ರಯತ್ನಿಸುತ್ತಾರೆ. ಪ್ರತಿಕೂಲ ಸ್ವಾಧೀನದ ಕಾನೂನು ಎಂದು ಹೇಳಲಾಗುವ ಇದು ಬ್ರಿಟಿಷರ ಕಾಲದ್ದು. ಸರಳವಾಗಿ ಹೇಳುವುದಾದರೆ ಇದನ್ನು ಭೂ ಕಬಳಿಕೆ ಕಾಯ್ದೆ ಎಂದೂ ಕರೆಯಬಹುದು. ಅನೇಕ ಬಾರಿ ಈ ಕಾಯ್ದೆಯು ಮಾಲೀಕರು ತಮ್ಮ ಆಸ್ತಿಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೂಕ ವಕೀಲೆಯೊಬ್ಬರು ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಣೆ ಮಾಡಿದ್ದಾರೆ.! ಹೇಗೆ ಗೊತ್ತ.?

ಹಾಗಾಗಿ ಮನೆ ಬಾಡಿಗೆಗೆ ಕೊಡುವವರು ಜಮೀನುಗಳನ್ನು ಗುತ್ತಿಗೆ ಕೊಡುವವರು ಸತತವಾಗಿ 12 ವರ್ಷಗಳ ಕಾಲ ಒಬ್ಬರ ಹಿಡಿತದಲ್ಲಿ ಇರುವಂತೆ ಕೊಡಬಾರದು. ಬಾಡಿಗೆಗೆ ಮನೆ ಕೊಡುವವರು 11 ತಿಂಗಳಿಗೆ ಅಗ್ರಿಮೆಂಟ್ ಮಾಡಿಕೊಳ್ಳುತ್ತಾರೆ, ಅದರಲ್ಲಿ ಮನೆ ಬಾಡಿಗೆ ಕೊಡುವುದಕ್ಕೆ ಇರುವ ನೀತಿಗೆ ನಿಬಂಧನೆಗಳು ಮತ್ತು ಇನ್ನಿತರ ಕಂಡಿಷನ್ ಕುರಿತ ಎಲ್ಲಾ ವಿಷಯಗಳನ್ನು ಪ್ರಸ್ತಾಪಿಸಿ ಸಹಿ ಮಾಡಿರಲಾಗುತ್ತದೆ.

ಈ ಅಗ್ರಿಮೆಂಟ್ ನ್ನು ಅವರು 11 ತಿಂಗಳಿಗೂ ಹೆಚ್ಚು ಕಾಲ ಇರಲು ಬಯಸಿದರೆ ನವೀಕರಣಗೊಳಿಸಿಕೊಳ್ಳಬೇಕು. ಅದೇ ಮಾಲೀಕರಿಗೆ ಆಧಾರವಾಗುತ್ತದೆ ಎನ್ನಬಹುದು. ಇಲ್ಲವಾದಲ್ಲಿ ಈಗ ನಾವು ಹೇಳಿದ ರೀತಿಯಲ್ಲಿ 12 ವರ್ಷಗಳ ಕಾಲ ಒಂದೇ ಮನೆಯಲ್ಲಿ ವಾಸವಿದ್ದರೆ ಈ ಪ್ರತಿಕೂಲ ಸ್ವಾಧೀನದ ಕಾನೂನಿನಡಿ ಕೋರ್ಟಿನಲ್ಲಿ ದಾವೆ ಹೂಡಬಹುದು ಹಾಗಾಗಿ ಅವರು ನಿಮ್ಮ ಮನೆಯಲ್ಲಿ ಬಾಡಿಗೆಗೆ ಇದ್ದಾರೆ ಎನ್ನುವುದಕ್ಕೆ ಪುರಾವೆ ನೀಡಬೇಕಾಗುತ್ತದೆ.

ವೇ-ಶ್ಯಾ-ವಾಟಿಕೆ ಕಾನೂನು ಬದ್ಧಗೊಳಿಸಿ ಎಲ್ಲರಿಗೂ ಸಹಾಯವಾಗುತ್ತದೆ ಎಂದ ಖ್ಯಾತ ನಟಿ, ನಟಿ ಹೇಳಿಕೆಯಿಂದ ಇಂಡಸ್ಟ್ರಿಯಲ್ಲಿ ತಳಮಳ ಶುರು.!

ಈ ಪ್ರತಿಕೂಲ ಸ್ವಾಧೀನದ ಕಾನೂನು ಚಾಲ್ತಿಯಲ್ಲಿ ಇದ್ದರೂ ಕೂಡ ನ್ಯಾಯಾಲಯಲ್ಲಿ ಅದನ್ನು ನಿರೂಪಿಸುವುದಕ್ಕೆ ಅವರಿಗೂ ಕೂಡ ಸಾಕಷ್ಟು ಸವಾಲುಗಳು ಇರುತ್ತವೆ. ಆದ್ದರಿಂದ ಯಾವುದೇ ಕಾರಣಕ್ಕೂ ಕಷ್ಟಪಟ್ಟು ಸಂಪಾದನೆ ಮಾಡಿದ್ದ ಮನೆಯಾಗಲಿ, ಜಮೀನಾಗಲಿ ಅವರ ಕೈ ತಪ್ಪಿ ಹೋಗಬಾರದು, ಹಾಗಾಗಿ ಎಚ್ಚರಿಕೆಯಿಂದ ಇರಲಿ ಎಂದು ತಿಳಿಸುತ್ತಿದ್ದೇವೆ.

ಆದರೆ ಈ 12 ವರ್ಷಗಳ ನಿಯಮ ಸರ್ಕಾರಿ ಜಮೀನುಗಳನ್ನು ಆಶ್ರಯಿಸುವವರಿಗೆ ಇರುವುದಿಲ್ಲ. ಈ ವಿಚಾರದ ಕುರಿತು ಏನೇ ಗೊಂದಲಗಳು ಇದ್ದರೂ ಕೂಡ ನೀವು ಕಾನೂನು ಸಲಹಾ ಕೇಂದ್ರಕ್ಕೆ ಹೋಗಿ ಉಚಿತವಾಗಿ ಸಲಹೆ ಪಡೆಯಬಹುದು ಅಥವಾ ನಿಮ್ಮ ಪರಿಚಯದ ವಕೀಲರ ಬಳಿ ಈ ಕುರಿತು ಕೇಳಿ ಮಾಹಿತಿ ಪಡೆಯಿರಿ.

ತಲಕಾವೇರಿಯಲ್ಲಿ ಕಾವೇರಮ್ಮನಿಗೆ ವಿಶೇಷ ಪೂಜೆ ಕೈಗೊಂಡ ಅಭಿಷೇಕ್ ಅವಿವಾ ದಂಪತಿ, ಮಳೆಗಾಗಿ ಉಪವಾಸ, ಪ್ರಾರ್ಥನೆ.!

0

 

ಕರ್ನಾಟಕದ ಮೇಲೆ ಅದ್ಯಾಕೋ ವರುಣಾ ದೇವ ಮುನಿಸಿಕೊಂಡಿದ್ದಾನೆ. ನಿರೀಕ್ಷೆಯಂತೆ ಈ ಬಾರಿ ಮುಂಗಾರು ಮಳೆ ಬಿದ್ದಿಲ್ಲ, ರಾಜ್ಯದಲ್ಲಿ 130 ವರ್ಷಗಳಲ್ಲೇ ಅತಿ ಕಡಿಮೆ ಮಳೆ ಬಿದ್ದಿರುವ ಉಲ್ಲೇಖವಾಗಿದೆ. ಪರಿಣಾಮವಾಗಿ ರಾಜ್ಯದ 195 ತಾಲೂಕು ಈಗಾಗಲೇ ಬರಘೋಷಿತ ತಾಲೂಕುಗಳಾಗಿವೆ. ಇನ್ನುಳಿದ ತಾಲೂಕುಗಳ ಪರಿಸ್ಥಿತಿಯು ಕೂಡ ಅಷ್ಟಕಷ್ಟೇ.

ಕಾವೇರಿ ಕೊಳ್ಳದ ರೈತರ ಪರಿಸ್ಥಿತಿ ಅಂತೂ ಹೇಳುತ್ತೀರದ್ದಾಗಿದೆ ಇಂತಹ ಪರಿಸ್ಥಿತಿಯಲ್ಲಿ ಕೂಡ ವಾಡಿಕೆಯಂತೆ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಮೈಸೂರು ಮಂಡ್ಯ ಬೆಂಗಳೂರು ಭಾಗದಲ್ಲಿ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಬಂದ್ ನಡೆಸುತ್ತಿವೆ. ಇದಕ್ಕೆ ರಾಜ್ಯದ ಎಲ್ಲಾ ಸಂಘ ಸಂಸ್ಥೆಗಳ ಸಮೇತ ಕನ್ನಡ ಚಲನಚಿತ್ರ ಮಂಡಳಿ ಕೂಡ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ರಾಜ್ಯ ಸರ್ಕಾರ ಶೀಘ್ರವೇ ಪರಿಹಾರ ಸೂಚಿಸುವಂತೆ ಆಗ್ರಹಿಸುತ್ತಿದ್ದಾರೆ.

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೂಕ ವಕೀಲೆಯೊಬ್ಬರು ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಣೆ ಮಾಡಿದ್ದಾರೆ.! ಹೇಗೆ ಗೊತ್ತ.?

ಇಂತಹ ಸಂದರ್ಭದಲ್ಲಿ ಮಂಡ್ಯದ (Mandya) ಜನತೆ ಅಣ್ಣನಂತಿದ್ದ ಅಂಬರೀಶ್ (Ambarish) ಅವರನ್ನು ಮರೆಯದೇ ಇರಲಾರರು. ಯಾಕೆಂದರೆ ಕಾವೇರಿ ಹೋರಾಟ, ರೈತರ ಪ್ರತಿಭಟನೆ ಎಂದ ತಕ್ಷಣ ಮಂಡ್ಯದ ಜನತೆಗೆ ಮೊದಲು ನೆನಪಾಗುವುದು ರೆಬಲ್ ಸ್ಟಾರ್ (Rebel star) ತಮ್ಮ ರೆಬಲ್ ಮಾತುಗಳಿಂದ ಸರ್ಕಾರವನ್ನೇ ಆಗಲಿ ಯಾವುದೇ ಮಿನಿಸ್ಟರ್ನೇ ಆಗಲಿ ಗಡಗಡನೆ ನಡುಸುತ್ತಿದ್ದ ಬೆವರಿಳಿಸುತ್ತಿದ್ದ ಅಂಬರೀಶ್ ಅವರು ರೈತರ (Farmers) ಪರವಾಗಿ ಯಾವುದೇ ಹೋರಾಟ ಪ್ರತಿಭಟನೆ ಎಲ್ಲದಕ್ಕೂ ಕೂಡ ಬದ್ಧರಾಗಿದ್ದರು.

ಕನ್ನಡ ಚಲನಚಿತ್ರ ಮಂಡಳಿ ಕೂಡ ಅಂಬಿ ಅವರ ಮಾತಿಗೆ ಎದುರು ಮಾತಾಡದೆ ಹಿಂದೆ ಬರುತ್ತಿತ್ತು. ಅಂಬರೀಶ್ ಅವರು ಈಗ ಇದ್ದಿದ್ದರೆ ರೈತರ ಹೋರಾಟಕ್ಕೆ ಆನೆ ಬೆಂಬಲ ಸಿಗುತ್ತಿತ್ತು ಅವರಿಲ್ಲದೆ ಮಂಡ್ಯ ನಾಡಿನ ಜನತೆ ಅಕ್ಷರಶಃ ಅಸಹಾಯಕರಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಮಗನಾಗಿ ಅಭಿಷೇಕ್ ಅಂಬರೀಶ್ (Abhishek Ambarish) ಅವರು ಅವರ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ವೇ-ಶ್ಯಾ-ವಾಟಿಕೆ ಕಾನೂನು ಬದ್ಧಗೊಳಿಸಿ ಎಲ್ಲರಿಗೂ ಸಹಾಯವಾಗುತ್ತದೆ ಎಂದ ಖ್ಯಾತ ನಟಿ, ನಟಿ ಹೇಳಿಕೆಯಿಂದ ಇಂಡಸ್ಟ್ರಿಯಲ್ಲಿ ತಳಮಳ ಶುರು.!

ವಾರದ ಹಿಂದಿನಿಂದಲೂ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಹೋರಾಟದಲ್ಲಿ ಪಾಲ್ಗೊಂಡು ತನ್ನ ಬೆಂಬಲವನ್ನು ಸೂಚಿಸಿದ ಅಭಿಷೇಕ್ ಅಂಬರೀಶ್ ವೇದಿಕೆಯಲ್ಲಿ ರಾಜ್ಯ ಸರ್ಕಾರವನ್ನು ಮನಪೂರ್ವಕವಾಗಿ ವಿನಾರಮಿಸಿಕೊಂಡಿಲ್ದಾರೆ. ನಮ್ಮ ಜಿಲ್ಲೆಯ ರೈತರ ಪರಿಸ್ಥಿತಿ ಹೀಗಾಗಿದೆ, ರಾಜ್ಯ ಸರ್ಕಾರಕ್ಕೆ ಕೈ ಕಾಲು ಹಿಡಿದು ಬೇಡಿಕೊಳ್ಳುತ್ತೇವೆ, ಅನ್ಯಾಯ ಮಾಡಬೇಡಿ ಇಂಥ ಸಂದರ್ಭದಲ್ಲಿ ಕೂಡ ತಮಿಳುನಾಡಿಗೆ ನೀರು ಹರಿಸುವುದು ತಪ್ಪು, ರಾಜ್ಯಕ್ಕೆ ಅನ್ಯಾಯವಾಗುತ್ತಿದೆ.

ದಯವಿಟ್ಟು ಈ ವಿವಾದಕ್ಕೆ ಒಂದು ಮುಕ್ತಿ ಕೊಡಿ ಇನ್ನು ಎಷ್ಟು ವರ್ಷ ಇದೇ ರೀತಿಯಾಗಿ ವಿವಾದದಲ್ಲೇ ಇರಬೇಕು. ನಮ್ಮ ರಾಜ್ಯದ ರೈತರ ಪರಿಸ್ಥಿತಿಯನ್ನು ಸುಪ್ರೀಂಕೋರ್ಟ್ ಗೆ ಮತ್ತು ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡಿ ಎಂದು ಬೇಡಿಕೊಂಡರು. ಇಷ್ಟಲ್ಲದೆ ಕಾವೇರಮ್ಮನಿಗೆ ಕೂಡ ದಂಪತಿ ಸಮೇತ ಹೋಗಿ ಪೂಜೆ ಸಲ್ಲಿಸಿದ್ದಾರೆ. ತಲಕಾವೇರಿಗೆ ಹೋದ ಅಂಬರೀಶ್ ಹಾಗೂ ಅವಿವಾ ಅವರು ನಿಯಮ ಪ್ರಕಾರವಾಗಿ ಪೂಜಾ ಕಾಂಕರ್ಯ ಕೈಕೊಂಡು ಉಪವಾಸ ವೃತ ಆಚರಿಸಿ ಮಳೆಗಾಗಿ ಪ್ರಾರ್ಥಿಸಿದ್ದಾರೆ ಎಂದು ತಿಳಿದುಬಂದಿದೆ.

ದರ್ಶನ್ ವೇದಿಕೆ ಏರಿದ್ರು ಕ್ಯಾರೆ ಅನ್ನದ ಧ್ರುವ.! ಡಿ-ಬಾಸ್ & ಧ್ರುವ ಸರ್ಜಾ ನಡುವೆ ವೈಮನಸ್ಸು.?

ಮೀಡಿಯ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ನವ ದಂಪತಿಗಳಾದ ಅವಿವಾ ಹಾಗೂ ಅಭಿಷೇಕ್ ಅಂಬರೀಶ್ ಹೋಮ ಆಚರಿಸಿ ಪ್ರಾರ್ಥನೆಯಲ್ಲಿ ತೊಡಗಿಕೊಂಡಿರುವುದು ಕಾಣಿಸುತ್ತಿದೆ. ಸ್ವತಃ ಸುಮಲತಾ ಅಂಬರೀಶ್ ಅವರು ತಮ್ಮ ಇನ್ಸ್ಟಾಗ್ರಾಂ (Sumalatha Ambarish) ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡು ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ಅಂಬರೀಶ್ ಅವರು ಸದಾ ರೈತರನ್ನು ಬೆಂಬಲಿಸುತ್ತಿದ್ದರು ಅದನ್ನೇ ಪಾಲಿಸುತ್ತಿರುವ ಅಭಿಷೇಕ್ ಕೂಡ ಹೆಗಲಿಗೆ ಹಸಿರು ಟವಲು ಹಾಕಿಕೊಂಡೆ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ಅವಿವಾ ಮೊದಲೇ ಪ್ಯಾಶನ್ ಒಗ್ಗಿಕೊಂಡ ಕುಟುಂಬದವರು ಇವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಂಬಿಕೆ ಇಡುತ್ತಾರೆ, ಪಾಲ್ಗೊಳ್ಳುತ್ತಾರೆ ಎನ್ನುವುದು ಅನುಮಾನ ಹೀಗಾಗಿ ಸಂಪ್ರದಾಯಬದ್ದ ಗೌಡರ ಕುಟುಂಬಕ್ಕೆ ಸಲ್ಲುವುದಿಲ್ಲ ಎಂದವರು ಈಗ ಅವಿವಾ ಅವರನ್ನು ನೋಡಿ ತೆಪ್ಪಗಾಗಿದ್ದಾರೆ.

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೂಕ ವಕೀಲೆಯೊಬ್ಬರು ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಣೆ ಮಾಡಿದ್ದಾರೆ.! ಹೇಗೆ ಗೊತ್ತ.?

0

 

ಮನುಷ್ಯ ಮನಸ್ಸು ಮಾಡಿದರೆ ದೇಹದ ನ್ಯೂನತೆ ಆತನ ಸಾಧನೆಯನ್ನು ಹಿಂದಿಕ್ಕಲಾಗದು ಎನ್ನುವುದು ಸಾಕಷ್ಟು ಉದಾಹರಣೆಗಳ ಮೂಲಕ ಸಾಬೀತಾಗಿದೆ. ಅದಕ್ಕಾಗಿ ಈಗ ಅವರನ್ನು ಅಂಗವಿಕಲರು ಎಂದು ಕರೆಯುವುದನ್ನು ಬಿಟ್ಟು ವಿಶೇಷ ಚೇತನರು ಎಂದು ಕರೆಯಲಾಗುತ್ತಿದೆ. ದೇಹದ ಯಾವುದಾದರೂ ಒಂದು ಅಂಗ ಹೂನವಾಗಿದ್ದರೆ ಅದರ ನೂರರಷ್ಟು ಬುದ್ಧಿಶಕ್ತಿ ಜಾಣತನ ದೇವರು ಕೊಟ್ಟಿರುತ್ತಾನೆ.

ಸಾಮಾನ್ಯವಾಗಿ ಈ ರೀತಿ ಸಮಸ್ಯೆ ಹೊಂದಿದವರು ಸಂಗೀತ ಅಥವಾ ಕಲೆ ಬಗ್ಗೆ ಆಸಕ್ತಿ ಹೊಂದಿ ಆ ಕ್ಷೇತ್ರವನ್ನು ಆರಿಸಿಕೊಂಡು ಸಾಧನೆ ಮಾಡಿದ ಉದಾಹರಣೆ ಹೆಚ್ಚು. ಇದನ್ನು ಹೊರತುಪಡಿಸಿ ಬೇರೆ ಕ್ಷೇತ್ರದಲ್ಲಿ ಕೂಡ ಹೆಸರು ಮಾಡಿದವರು ಇದ್ದಾರೆ ಆದರೆ ಬೆರಳೆಣಿಕೆಯಷ್ಟು ಮಂದಿ. ನ್ಯಾಯಾಂಗ ಇಲಾಖೆಯಲ್ಲಂತೂ ದೃಷ್ಟಿ ದೋಷ ಅಥವಾ ವಾಕ್-ಶ್ರವಣ ದೋಷ ಉಳ್ಳವರು ಸೈ ಎನಿಸಿಕೊಳ್ಳುವುದು ಅಸಾಧ್ಯದ ಮಾತೇ ಎಂದು ಭಾವಿಸಲಾಗಿತ್ತು.

ವೇ-ಶ್ಯಾ-ವಾಟಿಕೆ ಕಾನೂನು ಬದ್ಧಗೊಳಿಸಿ ಎಲ್ಲರಿಗೂ ಸಹಾಯವಾಗುತ್ತದೆ ಎಂದ ಖ್ಯಾತ ನಟಿ, ನಟಿ ಹೇಳಿಕೆಯಿಂದ ಇಂಡಸ್ಟ್ರಿಯಲ್ಲಿ ತಳಮಳ ಶುರು.!

ಆದರೆ ಈಗ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಸುಪ್ರೀಂಕೋರ್ಟ್‌ನಲ್ಲಿ (Supreme court) ವಾಕ್-ಶ್ರವಣ ದೋಷವುಳ್ಳ ವಕೀಲೆಯೊಬ್ಬರು (handicap advocate) ಸಂಕೇತ ಭಾಷೆಯ ಅಂದರೆ ಸಂಜ್ಞೆ ಮೂಲಕ ವಾದ ಮಂಡಿಸಿದ್ದಾರೆ. ವಕೀಲರ ವೃತ್ತಿ ಮಾಡುವವರು ಚಾಣಕ್ಯನಂತಿರಬೇಕು.

ಚಾಣಾಕ್ಷನಂತಹ ಬುದ್ಧಿವಂತಿಕೆ ಜೊತೆಗೆ ಹದ್ದಿನಂತಹ ತೀಕ್ಷ್ಣ ದೃಷ್ಟಿ ಕೂಡ ಬೇಕು, ಮುಖ್ಯವಾಗಿ ವಾಚಾಳಿ ಆಗಿರಬೇಕು ಅದರಲ್ಲೂ ಸುಪ್ರೀಂಕೋರ್ಟ್ ನಲ್ಲಿ ಪಾದ ಮಾಡುವುದು ಎಂದರೆ ಅವರ ಬುದ್ಧಿವಂತಿಕೆ ನೆಕ್ಸ್ಟ್ ಲೆವೆಲ್ ಇರಬೇಕು ಎನ್ನುವುದೇ ನಮ್ಮೆಲ್ಲರ ಅಭಿಪ್ರಾಯ. ಆದರೆ ಈ ಎಲ್ಲಾ ಪೂರ್ವಗ್ರಹ ಪೀಡಿತ ಆಲೋಚನೆಗಳಿಗೆ ಬ್ರೇಕ್ ಹಾಕುವಂತಹ ಅದೊಂದು ಬದಲಾವಣೆ ದೇಶದ ಇತಿಹಾಸದಲ್ಲಿ ನಡೆದಿದೆ.

ದರ್ಶನ್ ವೇದಿಕೆ ಏರಿದ್ರು ಕ್ಯಾರೆ ಅನ್ನದ ಧ್ರುವ.! ಡಿ-ಬಾಸ್ & ಧ್ರುವ ಸರ್ಜಾ ನಡುವೆ ವೈಮನಸ್ಸು.?

ಸೆಪ್ಟೆಂಬರ್ 25ರಂದು ಭಾರತದ ಮುಖ್ಯ ನ್ಯಾಯಾಧೀಶ ನ್ಯಾ. ಡಿ.ವೈ ಚಂದ್ರಚೂಡ್ (Chief justice of India Chandrachoodud) ಅವರಿದ್ದ ಪೀಠವು ವರ್ಚುವಲ್ ఆగి ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ವೇಳೆ ಸಾರಾ ಸನ್ನಿ (Sara Sanny) ಎಂಬ ವಾಕ್ ಶ್ರವಣ ದೋಷವುಳ್ಳ ನ್ಯಾಯವಾದಿಯು ತಮ್ಮ ವ್ಯಾಖ್ಯಾನಕಾರ ಸೌರಭ್ ರಾಯ್ ಚೌಧರಿ (Sourabh Roy Choudary) ಮೂಲಕ ವಾದ ಮಂಡಿಸಿದ್ದಾರೆ.

ವಿಚಾರಣೆಯೊಂದರ ಆರಂಭದ ವೇಳೆ ವರ್ಚುವಲ್ ವಿಚಾರಣೆಯ ತಾಂತ್ರಿಕ ತಂಡವು ಸಾರಾಗೆ ಸ್ಟೀನ್ ಮೇಲೆ ಬರಲು ಅನುಮತಿ ನೀಡಿರಲಿಲ್ಲ ಕೇವಲ ಒಬ್ಬರಿಗೆ ಮಾತ್ರ ಅವಕಾಶ ಇದ್ದಿದ್ದರಿಂದ ಸಾರ ಅವರ ವ್ಯಾಖ್ಯಾನಕಾರ ಸೌರಬ್‌ಗೆ ಮಾತ್ರ ಅನುಮತಿ ನೀಡಿತು. ಹೀಗಾಗಿ ಮೊದಲಿಗೆ ಸ್ಟೀನ್‌ನಲ್ಲಿ ಸೌರಭ್ ಮಾತ್ರ ಕಾಣಿಸಿಕೊಂಡು ಸಾರಾ ತೆರೆಯ ಹಿಂದೆ ಮಾಡುತ್ತಿದ್ದ ಸಂಜ್ಞೆಗಳಿಗೆ ವಿವರ ನೀಡುತ್ತಿದ್ದರು.

ನಾನು ನಿಜವಾದ ಪ್ರೇಮಿ, ಜಾತಿ-ಧರ್ಮ ಮೀರಿ ಹುಡುಗಿ ಇಷ್ಟ ಪಟ್ಟಿರುವೆ – ನಟ ಧನಂಜಯ್.!

ಬಹಳ ಸೂಕ್ಷ್ಮವಾಗಿ ಇದನ್ನು ಗಮನಿಸಿ ಮಧ್ಯಪ್ರವೇಶಿಸಿದ ನ್ಯಾ. ಚಂದ್ರಚೂಡ್ ಅವರು ವಕೀಲೆ ಸಾರಾ ಅವರಿಗೂ ಸ್ಟೀನ್ ಮೇಲೆ ಬರಲು ಅವಕಾಶ ನೀಡಿ ಎಂದು ಆದೇಶಿಸಿದರು. ಆಗ ಸಾರಾ ಅವರು ಒಂದು ಸ್ಟೀನ್‌ನಲ್ಲಿ ಸಂಜ್ಞೆಗಳ ಮೂಲಕ ವಾದ ಮಂಡಿಸಿದರೆ ಅವರ ವ್ಯಾಖ್ಯಾನಕಾರ ಸೌರಭ್ ಅವರು ಸಾರಾ ಸಂಜ್ಞೆಗಳನ್ನು ಬಾಯಿ ಮಾತಿನಲ್ಲಿ ಮತ್ತೊಂದು ಸ್ಕ್ರೀನ್ ನಲ್ಲಿ ವಿವರಿಸಿದರು.

ನ್ಯಾಯಕ್ಕೆ ಸಮಾನ ನ್ಯಾಯದಾನದ ಪ್ರತಿಪಾದಕರು ಎನಿಸಿರುವ ನ್ಯಾಯಮೂರ್ತಿ ಚಂದ್ರಚೂಡ್ ಅವರು ಇಬ್ಬರು ಅಂಗವಿಕಲ ಬಾಲಕಿಯರ ದತ್ತು ತಂದೆಯೂ ಹೌದು ಎನ್ನುವುದು ಅನೇಕರಿಗೆ ತಿಳಿದಿರದ ವಿಷಯ. ಈ ವರ್ಷದ ಹೊಸ ವರ್ಷದ ದಿನದಂದು ಅವರು ತಮ್ಮ ಇಬ್ಬರು ದತ್ತು ವಿಶೇಷ ಚೇತನ ಹೆಣ್ಣುಮಕ್ಕಳನ್ನು ತಮ್ಮ ಕಚೇರಿಗೆ ಕರೆತಂದು ಎಲ್ಲರನ್ನೂ ಚಕಿತಗೊಳಿಸಿದ್ದರು.

ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಸರ್ಕಾರದ ವಿಭಿನ್ನ ಪ್ಲಾನ್, ಸರ್ಕಾರಿ ಕಚೇರಿಗಳಿಗೆ ಶಾ-ಕ್, 15 ದಿನಗಳಲ್ಲಿ 760 ಕೋಟಿ ಬಾಕಿ ವಸೂಲಿ.!

ನ್ಯಾಯಾಲಯವು ಹೇಗೆ ಕೆಲಸ ಮಾಡುತ್ತದೆ ಮತ್ತು ಅಲ್ಲಿ ತಮ್ಮ ಕೆಲಸವೇನು ಎಂಬುದನ್ನು ಅವರು ತಮ್ಮ ಹೆಣ್ಣುಮಕ್ಕಳಿಗೆ ವಿವರಿಸಿದ್ದರು. ಮಾಧ್ಯಮಗಳಲ್ಲಿ ಸಾರ ಅವರ ವಿಚಾರ ವರದಿಯಾಗುತ್ತಿದ್ದಂತೆ ಸಾರ ಸಾಧನೆಗೆ ಮತ್ತು ಚಂದ್ರಚೂಡ್ ಅವರ ಹೃದಯ ವೈಶಾಲ್ಯತೆಗೆ ಜನರು ಶಹಭಾಷ್ ಗಿರಿ ನೀಡುತ್ತಿದ್ದಾರೆ.

ವೇ-ಶ್ಯಾ-ವಾಟಿಕೆ ಕಾನೂನು ಬದ್ಧಗೊಳಿಸಿ ಎಲ್ಲರಿಗೂ ಸಹಾಯವಾಗುತ್ತದೆ ಎಂದ ಖ್ಯಾತ ನಟಿ, ನಟಿ ಹೇಳಿಕೆಯಿಂದ ಇಂಡಸ್ಟ್ರಿಯಲ್ಲಿ ತಳಮಳ ಶುರು.!

0

 

ರಾಕಿಂಗ್ ಸ್ಟಾರ್ ಯಶ್ (Rocking star Yash) ಅವರ ಅಭಿನಯದ ಕಿರಾತಕ (Kirathaka) ಸಿನಿಮಾ ಯಶ್ ಅವರ ಸಿನಿ ಜರ್ನಿಯಲ್ಲಿ ಬಹಳ ದೊಡ್ಡ ತಿರುವು ನೀಡಿದ ಸಿನಿಮಾ. ಈ ಚಿತ್ರದ ಮೂಲಕ ಯಶ್ ಮಾತ್ರವಲ್ಲದೇ ಚಿಕ್ಕಣ್ಣನಂತಹ ಕಾಮಿಡಿ ಕಲಾವಿದ ಕನ್ನಡಕ್ಕೆ ಸಿಗುವ ರೀತಿ ಆಯ್ತು. ಯಶ್, ನಾಗಾಭರಣ, ಚಿಕ್ಕಣ್ಣ, ತಾರಾ, ಕಾಶಿ ಮುಂತಾದ ತಾರಬಣಗಳನ್ನು ಹೊಂದಿದ್ದ ಪಕ್ಕ ಮಂಡ್ಯ ಸೊಗಡಿನ ಈ ಸಿನಿಮಾ ನಂತರ ಕನ್ನಡದಲ್ಲಿ ಮೂಡಿ ಬಂದ ಅಂಜದಗಂಡು, ರಾಜಹುಲಿ, ಅಯೋಗ್ಯದಂತಹ ಸಿನಿಮಾಗಳಿಗೆ ಸ್ಪೂರ್ತಿ ಆಗಿತ್ತು ಎಂದರೆ ಬಹುಶಃ ತಪ್ಪಾಗಲಾರದು.

ಈ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದು ಓವಿಯಾ (Actress Oviya). ಕನ್ನಡ ಭಾಷೆ ಗೊತ್ತಿಲ್ಲದದ್ದರೂ ಕೂಡ ಅಪ್ಪಟ ಕನ್ನಡಿಯಂತೆ ಇಲ್ಲಿನ ನೇಟಿವಿಟಿಗೆ ತಕ್ಕಹಾಗೆ ಒಗ್ಗಿ ಹಳ್ಳಿ ಹುಡುಗಿ ಪಾತ್ರ ನಿರ್ವಹಿಸಿದ್ದ ಓವಿಯಾ ಈಗ ಸಿನಿಮಾ ವಿಚಾರಕ್ಕಿಂತ ಅದ್ಯಾಕೋ ಕಾಂ’ಟ್ರ’ವ’ರ್ಸಿಗಳ ಮೂಲಕವೇ ಸುದ್ದಿಯಲ್ಲಿದ್ದಾರೆ.

ದರ್ಶನ್ ವೇದಿಕೆ ಏರಿದ್ರು ಕ್ಯಾರೆ ಅನ್ನದ ಧ್ರುವ.! ಡಿ-ಬಾಸ್ & ಧ್ರುವ ಸರ್ಜಾ ನಡುವೆ ವೈಮನಸ್ಸು.?

ತಮಿಳು ಬಿಗ್ ಬಾಸ್ ಸೀಸನ್ ನಲ್ಲಿ ಭಾಗವಹಿಸಿದ ನಂತರದಿಂದ ಸದಾ ಸುದ್ದಿಯಲ್ಲಿರುವ ಈ ನಟಿ ಈಗಲೂ ಕೂಡ ವೇ’ಶ್ಯಾ’ವಾ’ಟಿ’ಕೆಯನ್ನು ಕಾನೂನು ಬದ್ಧಗೊಳಿಸಿ ಎಲ್ಲರಿಗೂ ಸಹಾಯವಾಗುತ್ತದೆ ಎನ್ನುವ ಹೇಳಿಕೆ ಕೊಡುವ ಮೂಲಕ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಓವಿಯಾ ಯವರು ಗಲ್ಲತ್ತ ಪಿಂಕ್(Galatta Pink) ಎಂಬ ಖಾಸಗಿ ತಮಿಳು ಯೂಟ್ಯೂಬ್ ಚಾನೆಲ್ ಒಂದರಲ್ಲಿ ಸಂದರ್ಶನ ನಡೆಸಿದರು. ಆ ಸಂದರ್ಶನದಲ್ಲಿ ನಮ್ಮ ಸಮಾಜದಲ್ಲಿ ಅ’ತ್ಯಾ’ಚಾ’ರ ಹೆಚ್ಚಾಗುತ್ತಿರುವುದರ ಹಿಂದಿನ ಅಸಲಿ ಕಾರಣವೇನು? ಅದನ್ನು ಹೇಗೆ ತಡೆಗಟ್ಟಬಹುದು? ಅದಕ್ಕೆ ಪರಿಹಾರ ಏನು? ಎಂಬುದನ್ನೆಲ್ಲಾ ವಿವರಿಸುತ್ತಾ ಹೋದಂತಹ ಅವರು ವೇಶ್ಯಾವಾಟಿಕೆಯನ್ನು ಕಾನೂನು ಬದ್ಧಗೊಳಿಸಬೇಕು ಎಂಬ ಹೇಳಿಕೆ ನೀಡಿದರು.

ನಾನು ನಿಜವಾದ ಪ್ರೇಮಿ, ಜಾತಿ-ಧರ್ಮ ಮೀರಿ ಹುಡುಗಿ ಇಷ್ಟ ಪಟ್ಟಿರುವೆ – ನಟ ಧನಂಜಯ್.!

ಆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ವಿಚಾರಗಳನ್ನು ತಮ್ಮ ಬದುಕಿನ ಅನುಭವಗಳನ್ನು ಹಂಚಿಕೊಳ್ಳುತ್ತಾ ಹೋದಂತಹ ನಟಿ ತಾವೊಬ್ಬ ಸ್ಟ್ರೈಟ್ ಫಾರ್ವರ್ಡ್ ಎಂದು ನೇರ ಮಾತುಗಳ ಮೂಲಕ ಮಾತನ್ನು ಮುಂದುವರಿಸಿ ಪ್ರತಿಯೊಬ್ಬರಿಗೂ ಆಸೆಯೆಂಬುದು ಇದ್ದೇ ಇರುತ್ತದೆ ಅದನ್ನು ತಡೆದರೆ ಏನೇನೋ ಆಗುತ್ತದೆ, ಹಲವರು ಸಂಸ್ಕೃತಿಯ ಹಿಂದೆ ಅಡಗಿದ್ದಾರೆ ಈ ಕಾರಣದಿಂದಾಗಿ ನಮ್ಮಲ್ಲಿ ಅ’ತ್ಯಾ’ಚಾ’ರಗಳು ಹೆಚ್ಚಾಗುತ್ತಿದೆ ಎಂದಿದ್ದಾರೆ.

ವೇ’ಶ್ಯಾ’ವಾ’ಟಿ’ಕೆಯನ್ನು ಕಾನೂನು ಬದ್ಧ ಗೊಳಿಸಿದರೆ ಒಳ್ಳೆಯದು, ಇದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ಸ್ಟೇಟ್ಮೆಂಟ್ ನೀಡಿದ್ದಾರೆ. ಸದ್ಯಕ್ಕೆ ತಮಿಳು ಹಾಗೂ ಮಲಯಾಳಂ ಸಿನಿಮಾರಂಗದಲ್ಲಿ ಹೆಚ್ಚು ಸಕ್ರಿಯವಾಗಿರುವ ನಟಿ, ಮೋಹಕ ಅಭಿನಯದ ಜೊತೆ ಈ ರೀತಿ ಮುಕ್ತವಾಗಿ ಮಾತನಾಡುವ ಮೂಲಕ ಓಪನ್ ಹಾರ್ಟೆಡ್ (Open hearted) ನಟಿ ಎಂದೇ ಹೆಸರುವಾಸಿಯಾಗಿದ್ದರು.

ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಸರ್ಕಾರದ ವಿಭಿನ್ನ ಪ್ಲಾನ್, ಸರ್ಕಾರಿ ಕಚೇರಿಗಳಿಗೆ ಶಾ-ಕ್, 15 ದಿನಗಳಲ್ಲಿ 760 ಕೋಟಿ ಬಾಕಿ ವಸೂಲಿ.!

ಓವಿಯಾ(Oviya) ಅವರು ಈ ರೀತಿಯಾದಂತಹ ಹೇಳಿಕೆ ನೀಡಿರುವುದು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದ್ದು ನೆಟ್ಟಿಗರು ಇದಕ್ಕೆ ತರಹವಾರಿ ಪ್ರತಿಕ್ರಿಯಸುತ್ತಿದ್ದಾರೆ. ಕೆಲವರು ಸಕಾರಾತ್ಮಕವಾಗಿ ಒಪ್ಪಿಕೊಂಡು ಓವಿಯಾ ಹೇಳಿದ್ದು ಸರಿ ಇರಬಹುದು ಎಂದಿದ್ದರೆ, ಇನ್ನೂ ಕೆಲವರು ಓರ್ವ ಹೆಣ್ಣು ಮಗಳಾಗಿ ಈ ರೀತಿ ಮಾತನಾಡುವುದು ಸರಿಯಲ್ಲ ಸೆಲೆಬ್ರೆಟಿಗಳೆ ಇಂತಹ ವರ್ತನೆಯನ್ನು ತೋರಿದರೆ ನಿಮ್ಮನ್ನು ಅನುಸರಿಸುವವರು ನಿಮ್ಮಿಂದ ಹಾಳಾಗುತ್ತಾರೆ.

ಒಬ್ಬ ಸೆಲೆಬ್ರೆಟಿ ಯಾಗಿ ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಈ ರೀತಿ ಹೇಳಿಕೆ ಸಲ್ಲದು ಎಂದು ನೆ’ಗೆ’ಟಿ’ವ್ ಕಾಮೆಂಟ್ ಗಳ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ನಟಿ ಈ ಹೇಳಿಕೆ ಬಗ್ಗೆ ನಿಮಗೇನು ಅನಿಸಿತು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

ರಾತ್ರೋ ರಾತ್ರಿ ನೀರು ಬಿಟ್ಟು ಈಗ ಮೋದಿನಾ ಕರೆದ್ರೆ ಹೇಗೇ.? – ಚಕ್ರವರ್ತಿ ಸೂಲಿಬೆಲೆ.!

ದರ್ಶನ್ ವೇದಿಕೆ ಏರಿದ್ರು ಕ್ಯಾರೆ ಅನ್ನದ ಧ್ರುವ.! ಡಿ-ಬಾಸ್ & ಧ್ರುವ ಸರ್ಜಾ ನಡುವೆ ವೈಮನಸ್ಸು.?

0

 

ಕನ್ನಡ ಚಿತ್ರರಂಗವೂ ಕೂಡ ನೆನ್ನೆ ನಡೆದ ಕರ್ನಾಟಕ ಬಂದ್ ಗೆ ಬೆಂಬಲ ನೀಡಿದೆ. ಕಾವೇರಿ ನಮ್ಮದು ಎಂದು ಕೂಗಿ ಹೇಳುತ್ತಾ ಕನ್ನಡ ಫಿಲಂ ಚೇಂಬರ್ ಬಳಿ ಹೋರಾಟಕ್ಕೆ ಕಲಾವಿದರೆಲ್ಲರೂ ಬಾಗಿಯಾಗಿದ್ದಾರೆ. ನಿನ್ನೆ ಬೆಳಿಗ್ಗೆಯಿಂದಲೇ ಚಿತ್ರರಂಗದ ತಾರೆಗಳಾದ ಶ್ರೀನಾಥ್, ಶ್ರೀನಿವಾಸ್ ಮೂರ್ತಿ, ಪದ್ಮ ವಾಸಂತಿ, ಸುಂದರ್ ರಾಜ್, ಪ್ರಮೀಳಾ ಜೋಶಾಯ್, ಉಮಾಶ್ರೀ, ರೂಪಿಕ, ಅನಿರುದ್ಧ, ಚಿಕ್ಕಣ್ಣ, ಅನುಪ್ರಭಾಕರ್, ರಘು ಮುಖರ್ಜಿ, ಭಾವನ, ದುನಿಯಾ ವಿಜಿ, ಲೂಸ್ ಮಾದ, ಶಿವಣ್ಣ, ಧ್ರುವ ಮುಂತಾದವರು ಭಾಗಿಯಾಗಿದ್ದರು ಸುಮಾರು ಹನ್ನೊಂದು ಗಂಟೆಗೆ ದರ್ಶನ್ ರವರು ಕೂಡ ಇದಕ್ಕೆ ಜೊತೆಯಾದರು.

ದರ್ಶನ್ ಅವರು ಬರುತ್ತಿದ್ದಂತೆ ಕ್ಯಾಮೆರಾ ಕಣ್ಣೆಲ್ಲಾ ದರ್ಶನ್ ಅವರ ಮೇಲೆಯೇ ಇತ್ತು ಎನ್ನಬಹುದು ದರ್ಶನ್ ಅವರು ವೇದಿಕೆ ಹತ್ತಿದೊಡನೆ ಶಿವಣ್ಣನ ಆಶೀರ್ವಾದ ಪಡೆದರು. ವೇದಿಕೆ ಮೇಲೆ ಶಿವಣ್ಣ, ಅನುಪ್ರಭಾಕರ್, ಧ್ರುವ, ಉಮಾಶ್ರೀ ಮುಂತಾದವರಿದ್ದರು. ಪಕ್ಕದಲ್ಲಿದ್ದ ಅನುಪ್ರಭಾಕರ್ ಅವರಿಗೂ ಶೇಕ್ ಹ್ಯಾಂಡ್ ನೀಡಿ ಮಾತನಾಡಿಸಿದರು ಆದರೆ ಶಿವಣ್ಣನ ಪಕ್ಕದಲ್ಲಿ ಇದ್ದ ಧ್ರುವ ಅವರ ಕಡೆ ನೋಡಿಲ್ಲ.

ನಾನು ನಿಜವಾದ ಪ್ರೇಮಿ, ಜಾತಿ-ಧರ್ಮ ಮೀರಿ ಹುಡುಗಿ ಇಷ್ಟ ಪಟ್ಟಿರುವೆ – ನಟ ಧನಂಜಯ್.!

ದರ್ಶನ್ ಅವರು ಬರುತ್ತಿದ್ದಂತೆ ವೇದಿಕೆ ಮೇಲೆ ಇದ್ದ ಎಲ್ಲರೂ ಕೂಡ ಎದ್ದು ನಿಂತರು ಆದರೆ ಧ್ರುವ ಎಲ್ಲರನ್ನು ನೋಡಿ ನಂತರ ಎದ್ದು ನಿಂತದ್ದು ಕಾಟಾಚಾರದಿಂದ ಮಿಡಿದ ರೀತಿ ಇತ್ತು. ಇದು ಇಷ್ಟಕ್ಕೆ ನಿಲ್ಲದೆ ದರ್ಶನ್ ಅವರು ಮೈಕ್ ಹಿಡಿದು ಮಾತನಾಡಿ ಮುಗಿಸುತ್ತಿದ್ದಂತೆ ಸೀಟ್ ಬಿಟ್ಟುಕೊಟ್ಟು ವೇದಿಕೆಯಿಂದ ಕೆಳಗಿಳಿದರು ಇದೆಲ್ಲವೂ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿಯಲ್ಪಟ್ಟಿದೆ.

ಈಗ ಹರಿದಾಡುತ್ತಿರುವ ಈ ಫೋಟೋಗಳು ಹಾಗೂ ವಿಡಿಯೋಗಳನ್ನು ಅನುಸರಿಸಿ ದರ್ಶನ್ ಮತ್ತು ಧ್ರುವ ನಡುವೆ ಎಲ್ಲವೂ ಸರಿ ಇಲ್ಲ ಎಂದು ಹೇಳಲಾಗುತ್ತಿದೆ. ಅದಕ್ಕೆ ಧ್ರುವ ಅವರನ್ನು ಇದೇ ವಿಷಯಕ್ಕೆ ಟ್ರೋಲ್ ಕೂಡ ಮಾಡಲಾಗುತ್ತಿದೆ. ಹಿಂದೆ ಧ್ರುವ ನಾನು ದರ್ಶನ್ ಅಭಿಮಾನಿ ಎಂದು ಹೇಳಿದ್ದು ಅವರನ್ನು ಡಿ ಬಾಸ್ ಎಂದು ಕರೆದಿದ್ದು ಅವುಗಳನ್ನು ಈ ವಿಡಿಯೋ ಜೊತೆ ಸೇರಿಸಿ ಟ್ರೋಲ್ ಮಾಡಿ ಹರಿ ಬಿಡಲಾಗುತ್ತಿದೆ.

ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಸರ್ಕಾರದ ವಿಭಿನ್ನ ಪ್ಲಾನ್, ಸರ್ಕಾರಿ ಕಚೇರಿಗಳಿಗೆ ಶಾ-ಕ್, 15 ದಿನಗಳಲ್ಲಿ 760 ಕೋಟಿ ಬಾಕಿ ವಸೂಲಿ.!

ದರ್ಶನ್ ಮತ್ತು ಧ್ರುವ ನಡುವೆ ಏನೋ ಸರಿ ಇಲ್ಲ ಎನ್ನುವುದು ಇವತ್ತಿನ ತನಕ ಯಾರಿಗೂ ಕೂಡ ಅನುಮಾನವೂ ಬಂದಿರಲಿಲ್ಲ, ಹಾಗಾಗಿ ಇದು ಉದ್ದೇಶಪೂರ್ವಕವಾಗಿ ಹಾಗಿರುವುದಲ್ಲ, ಹಿರಿಯರಿಗೆ ಗೌರವ ಕೊಡುವ ಸಲುವಾಗಿ ಅವರು ವೇದಿಕೆ ಬಿಟ್ಟು ಕೆಳಗಿರುವುದು ಇದಕ್ಕೆಲ್ಲ ಇಲ್ಲಸಲ್ಲದ ಬಣ್ಣ ಕಟ್ಟುವ ಅವಶ್ಯಕತೆ ಇಲ್ಲ ಎಂದು ಒಂದು ವರ್ಗ ಹೇಳುತ್ತಿದೆ.

ದರ್ಶನ್ ಅವರು ಅರ್ಜುನ್ ಸರ್ಜಾ ಅವರಿಗೆ ಬಹಳ ಆತ್ಮೀಯರು, ಕುರುಕ್ಷೇತ್ರದಲ್ಲಿ ಒಟ್ಟಿಗೆ ನಟಿಸಿದ್ದಾರ ಸಾಲದಕ್ಕೆ ಮೊದಲಿಂದಲೂ ಇವರಿಬ್ಬರ ನಡುವೆ ಬಾಂಡಿಂಗ್ ಚೆನ್ನಾಗಿದೆ. ದರ್ಶನ್ ಅವರು ಸಹ ಅರ್ಜುನ್ ಸರ್ಜಾ ಅವರ ನಿರ್ದೇಶನದ ಅವರ ಪುತ್ರಿ ಕನ್ನಡದಲ್ಲಿ ಲಾಂಚ್ ಆಗಿದ್ದ ಪ್ರೇಮ ಬರಹ ಸಿನಿಮಾದಲ್ಲಿ ಆಂಜನೇಯನ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು.

ರಾತ್ರೋ ರಾತ್ರಿ ನೀರು ಬಿಟ್ಟು ಈಗ ಮೋದಿನಾ ಕರೆದ್ರೆ ಹೇಗೇ.? – ಚಕ್ರವರ್ತಿ ಸೂಲಿಬೆಲೆ.!

ಹಾಡಿನಲ್ಲಿ ಅರ್ಜುನ್ ಸರ್ಜಾ, ಐಶ್ವರ್ಯ ಸರ್ಜಾ, ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಜೊತೆ ದರ್ಶನ್ ಕುಣಿದಿದ್ದರು. ಹೀಗಾಗಿ ಈ ಮಾತುಗಳೆಲ್ಲ ಊಹಾಪೋಹ ಹಾಗೇನಿಲ್ಲ ಎಂದು ಹೇಳಲಾಗುತ್ತಿದೆ. ಈ ಹಿಂದೆ ದುನಿಯಾ ವಿಜಯ್ ಮತ್ತು ದರ್ಶನ್ ನಡುವೆ ಮನಸ್ತಾಪವಿದೆ ಎಂದು ಹೇಳಲಾಗುತ್ತಿತ್ತು. ವೇದಿಕೆ ಮೇಲಿದ್ದ ದುನಿಯಾ ವಿಜಯ ಅವರ ಜೊತೆ ಕೂಡ ದರ್ಶನ್ ಅವರು ಆತ್ಮೀಯವಾಗಿ ಮಾತನಾಡಿದರು.

ಆದರೆ ಪಕ್ಕದಲ್ಲಿ ಇದ್ದ ಧ್ರುವ ಸರ್ಜಾ ಕಡೆ ಗಮನ ಕೊಡಲಿಲ್ಲ ಹೀಗಾಗಿ ಇವೆಲ್ಲವೂ ಸೂಕ್ಷ್ಮವಾಗಿ ನೋಡುವವರಿಗೆ ಅನುಮಾನ ಹುಟ್ಟಿಸುತ್ತದೆ ಆದರೆ ಇಬ್ಬರಲ್ಲಿ ಒಬ್ಬರು ಮುಕ್ತವಾಗಿ ಮಾತನಾಡುವವರೆಗೆ ಯಾವುದನ್ನು ನಂಬುವಂತಿಲ್ಲ ಹಾಗಾಗಿ ಚಿತ್ರರಂಗ ಒಗ್ಗಟ್ಟಾಗಿದೆ ಎಂದು ನಂಬೋಣ.

ಹೌದು, ಕಾವೇರಿ ನಮ್ದೇ ಆದ್ರೆ ಪ್ರಶ್ನೆ ಮಾಡ್ಬೇಕಾಗಿರೋದು ನಟರನ್ನಲ್ಲಾ ನಾಲಾಯಕ್ ರಾಜಕಾರಣಿಗಳನ್ನ.! ಎಂದು ಕಿಡಿ ಕಾರಿದ ಬಹುಭಾಷಾನಟ ಪ್ರಕಾಶ್ ರಾಜ್

ನಾನು ನಿಜವಾದ ಪ್ರೇಮಿ, ಜಾತಿ-ಧರ್ಮ ಮೀರಿ ಹುಡುಗಿ ಇಷ್ಟ ಪಟ್ಟಿರುವೆ – ನಟ ಧನಂಜಯ್.!

0

 

ಯಾವಾಗಲೂ ವೇದಿಕೆಗಳಲ್ಲಿ ತಪ್ಪದೇ ಡಾಲಿ ಜನಾರ್ಧನ್ (Dolly Dhananjay) ಅವರಿಗೆ ಎದುರಾಗುವ ಸಾಮಾನ್ಯ ಪ್ರಶ್ನೆ ಎಂದರೆ ಅವರ ಮದುವೆಯ ಬಗ್ಗೆ. ಇದೀಗ ಅವರು ಮದುವೆ ಬಗ್ಗೆ ಅಲ್ಲದಿದ್ದರೂ ಪ್ರೀತಿ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನಾನು ನಿಜವಾದ ಪ್ರೇಮಿ, ಜಾತಿ-ಧರ್ಮ ಮೀರಿ ಹುಡುಗಿ ಇಷ್ಟ ಪಟ್ಟಿರುವೆ ಎಂದು ಹೇಳುವ ಮೂಲಕ ಸರ್ಪ್ರೈಸ್ ಮಾಡಿದ್ದಾರೆ.

ಆದರೆ ಅವರು ಈ ಬಾರಿ ಹೇಳಿರುವುದು ಅವರು ನಟಿಸಿರುವ ಸಿನಿಮಾದಲ್ಲಿನ ಅವರ ಪಾತ್ರದ ಬಗ್ಗೆ. ಕಳೆದ ವರ್ಷ ಡಾಲಿ ಧನಂಜಯ್, ನವರಸನಾಯಕ ಜಗ್ಗೇಶ್, ಎವರ್ಗೀನ್ ಗ್ರೀನ್ ಸುಮನ್ ರಂಗನಾಥ್, ಅತಿಥಿ ಪ್ರಭುದೇವ್, ದತ್ತಣ್ಣ, ವೀಣಾ ಸುಂದರ್, ಅಧಿತಿ ಪ್ರಭುದೇವ್ ಮುಂತಾದ ಬಹುತಾರಗಣವಿದ್ದ ತೋತಾಪುರಿ ಸಿನಿಮಾ ರಿಲೀಸ್ ಆಗಿತ್ತು.

ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಸರ್ಕಾರದ ವಿಭಿನ್ನ ಪ್ಲಾನ್, ಸರ್ಕಾರಿ ಕಚೇರಿಗಳಿಗೆ ಶಾ-ಕ್, 15 ದಿನಗಳಲ್ಲಿ 760 ಕೋಟಿ ಬಾಕಿ ವಸೂಲಿ.!

ಆ ಗೆಲುವಿನ ಬೆನ್ನಲ್ಲೇ ತೋತಾಪುರಿ 2 (Thothapuri 2 Movie) ಸಿನಿಮಾ ಕೂಡ ತಯಾರಾಗಿ ಇದೀಗ ಬಿಡುಗಡೆಗೆ ರೆಡಿಯಾಗಿದೆ. ಟ್ರೈಲರ್ ಕೂಡ ರಿಲೀಸ್ ಆಗಿದ್ದು ಪ್ರೇಕ್ಷಕ ವರ್ಗದಿಂದ ಅಭೂತಪೂರ್ವ ರೆಸ್ಪಾನ್ಸ್ ವ್ಯಕ್ತವಾಗಿದೆ. ಚಿತ್ರದಲ್ಲಿ ಲವರ್ ಬಾಯ್ ಇಮೇಜ್ ನಲ್ಲಿ ಕಾಣಿಸಿಕೊಂಡಿರುವ ಧನಂಜಯ್ ಸಿನಿಮಾ ಹಾಗೂ ಸಿನಿಮಾದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡಿದ್ದಾರೆ.

ನಾನು ಮೊದಲ ಬಾರಿಗೆ ಕತೆ ಕೇಳಿದಾಗಲೇ ತೋತಾಪುರಿ ಸಿನಿಮಾ ಒಪ್ಪಿಕೊಂಡಿದ್ದೆ. ಯಾಕೆಂದರೆ ತೋತಾಪುರಿ ಸಿನಿಮಾ ಕತೆಯಲ್ಲಿ ತಮಾಷೆ ಇತ್ತು, ವಿಷಾದ ಇತ್ತು, ಭಾವುಕತೆ ಇತ್ತು, ಪ್ರೇಕ್ಷಕರ ಮನಮುಟ್ಟಲು ಬೇಕಾದ ಎಲ್ಲಾ ಎಮೋಷನ್ ಕೂಡ ಇದ್ದವು. ಅಲ್ಲದೇ, ನಾನು ಈ ಚಿತ್ರದಲ್ಲಿ ಒಬ್ಬ ಪ್ರಾಮಾಣಿಕ ಪ್ರೇಮಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ.

ರಾತ್ರೋ ರಾತ್ರಿ ನೀರು ಬಿಟ್ಟು ಈಗ ಮೋದಿನಾ ಕರೆದ್ರೆ ಹೇಗೇ.? – ಚಕ್ರವರ್ತಿ ಸೂಲಿಬೆಲೆ.!

ಜಾತಿ, ಧರ್ಮ ಮೀರಿ ಒಬ್ಬ ಹುಡುಗಿಯನ್ನು ಪ್ರೀತಿಸುವ ಪ್ರೇಮಾರಾಧಕನ ಪಾತ್ರ ನನ್ನದು’ ಎಂದಿದ್ದಾರೆ ಡಾಲಿ ಮುಂದುವರೆದು ಇದು ಮಾಸ್‌, ಕ್ಲಾಸ್‌ಗಳ ಹಂಗಿಲ್ಲದ ಸಿನಿಮಾ, ಮನುಷ್ಯತ್ವವನ್ನು ಸಂಭ್ರಮಿಸುವ ಸಿನಿಮಾ, ಪ್ರೀತಿಯೇ ಎಲ್ಲಾ ಎಂದು ಸಾರುವ ಸಿನಿಮಾ, ಯಾವುದೇ ನಿರೀಕ್ಷೆಯ ಭಾರವಿಲ್ಲದೆ ನೋಡಿದರೆ ಮಾತ್ರ ಇಷ್ಟವಾಗುವ ರೀತಿಯ ಸಿನಿಮಾ.

ವಿಜಯಪ್ರಸಾದ್‌ ಸೊಗಸಾಗಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ, ಕೆ.ಎ. ಸುರೇಶ್ ರವರು ಅಪಾರ ಶ್ರಮದಿಂದ ಸಿನಿಮಾವನ್ನು ತೆರೆಗೆ ತರುತ್ತಿದ್ದಾರೆ, ಸಿನಿಮಾದಲ್ಲಿ ಜಗ್ಗಣ್ಣ, ಸುಮನ್ ರಂಗನಾಥನ್, ದತ್ತಣ್ಣ ಹೀಗೆ ಪ್ರತಿಯೊಬ್ಬ ಕಲಾವಿದರು ಕೂಡ ಅದ್ಭುತವಾಗಿ ತಮ್ಮ ಪಾತ್ರಗಳನ್ನು ನಟಿಸಿದ್ದಾರೆ. ಅವರ ಅಭಿನಯ ಥಿಯೇಟರ್ ಇಂದ ಆಚೆ ಬಂದ ಮೇಲೆ ಕೂಡ ಜನರ ಮನಸ್ಸಿನಲ್ಲಿ ಉಳಿಯುವಂತೆ ಇದೆ.

ಹೌದು, ಕಾವೇರಿ ನಮ್ದೇ ಆದ್ರೆ ಪ್ರಶ್ನೆ ಮಾಡ್ಬೇಕಾಗಿರೋದು ನಟರನ್ನಲ್ಲಾ ನಾಲಾಯಕ್ ರಾಜಕಾರಣಿಗಳನ್ನ.! ಎಂದು ಕಿಡಿ ಕಾರಿದ ಬಹುಭಾಷಾನಟ ಪ್ರಕಾಶ್ ರಾಜ್

ಇಷ್ಟೆಲ್ಲಾ ಕಾರಣದಿಂದಾಗಿ ತೋತಾಪುರಿ2. ಸಿನಿಮಾ ಬಹಳ ವಿಶೇಷವಾಗಿದೆ ತಪ್ಪದೆ ಸಿನಿಮಾ ನೋಡಿ ಬೆಂಬಲಿಸಿ ಎಂದಿದ್ದಾರೆ. ಈ ಹಿಂದೆ ರಿಲೀಸ್ ಆದ ತೋತಾಪುರಿ 1 ಕೂಡ ಪ್ರೇಕ್ಷಕರನ್ನು ನಕ್ಕು ನಗಿಸುವಂತೆ ಹಾಸ್ಯ ಹೊಂದಿತ್ತು, ಹಾಸ್ಯ ದಿಗ್ಗಜ ಜಗ್ಗೇಶ್ ಅವರು ಇರುವ ಸಿನಿಮಾಗಳ ವಿಶೇಷತೆಯೇ ಅದು ಆದರೆ ಜೊತೆಗೆ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಸಂದೇಶದ ಸಾರದಂತೆ‌

ಜಾತಿ ಧರ್ಮಗಳ ಬೇಧವೇ ಇಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಸಾಮರಸ್ಯದಿಂದ ಬದುಕುವ ರೀತಿಯಲ್ಲಿ ಕೂಡ ಸಿನಿಮಾದಲ್ಲಿ ತೋರಿಸಲಾಗಿತ್ತು. ಅಧಿತಿ ಪ್ರಭುದೇವ್ ಅವರು ಮುಸ್ಲಿಂ ಯುವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಸುಮನ್ ರಂಗನಾಥ್ ಅವರು ಸಿಸ್ಟರ್ ಪಾತ್ರ ನಿರ್ವಹಿಸಿದ್ದರು. ಹಾಗಾಗಿ ಸೀಕ್ವೆಲ್ ನಲ್ಲಿ ಕೂಡ ಕಥೆ ಅದೇ ರೀತಿ ಮುಂದುವರೆದಿದೆ ಎನ್ನುವುದನ್ನು ಧನಂಜಯ್ ಅವರ ಸ್ಟೇಟ್ಮೆಂಟ್ ನಿಂದ ಊಹಿಸಬಹುದಾಗಿದೆ.

ಸನಾತನ ಧರ್ಮದಿಂದಲೇ ಸಂವಿಧಾನದ ಉಳಿವು – ಬಸನಗೌಡ ಪಟೀಲ್ ಯತ್ನಲ್

 

ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಸರ್ಕಾರದ ವಿಭಿನ್ನ ಪ್ಲಾನ್, ಸರ್ಕಾರಿ ಕಚೇರಿಗಳಿಗೆ ಶಾ-ಕ್, 15 ದಿನಗಳಲ್ಲಿ 760 ಕೋಟಿ ಬಾಕಿ ವಸೂಲಿ.!

0

 

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ (Gyarantee Scheme) ಬಜೆಟ್ ಮತ್ತು ಬಹಳ ದೊಡ್ಡ ಮೊತ್ತದ್ದು. ಸರ್ಕಾರವು ತನ್ನ ಪ್ರಣಾಳಿಕೆಯ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದಕ್ಕಾಗಿ ಈವರೆಗೆ ಜಾರಿಯಲಲ್ಲಿದ್ದ ಅನೇಕ ಕಲ್ಯಾಣ ಯೋಜನೆಗಳನ್ನು ಕೈ ಬಿಟ್ಟಿದೆ ಎಂದು ಬಜೆಟ್ ಮಂಡನೆ ಆದಾಗನಿಂದಲೂ ಪ್ರತಿಪಕ್ಷಗಳಿಂದ ಆರೋಪ ಇತ್ತು.

ಬೇರೆ ಯೋಜನೆಗಳಿಗೆ ಕತ್ತರಿ ಹಾಕಿ ತನ್ನ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುತ್ತಿದೆ ಎನ್ನುವುದರ ಜೊತೆಗೆ, ಇತ್ತೀಚೆಗೆ ನೋಂದಣಿ ಹಾಗೂ ಮುದ್ರಣ ಶುಲ್ಕ ಹೆಚ್ಚಿಸಿ ಅಕ್ಟೋಬರ್ 1 ರಿಂದಲೇ ಪರಿಶುದ್ಧ ದರ ಜಾರಿ ಮಾಡಿರುವ ಕಾರಣ ಈ ರೀತಿ ಸರ್ಕಾರ ತನ್ನ ರಾಜಸ್ವ ಸಂಗ್ರಹಕ್ಕೆ ಆದಾಯದ ಮೂಲ ಹುಡುಕುತ್ತಿದೆ ಎಂದು ಮಾತನಾಡಿಕೊಳ್ಳಲಾಗುತ್ತಿತ್ತು.

ರಾತ್ರೋ ರಾತ್ರಿ ನೀರು ಬಿಟ್ಟು ಈಗ ಮೋದಿನಾ ಕರೆದ್ರೆ ಹೇಗೇ.? – ಚಕ್ರವರ್ತಿ ಸೂಲಿಬೆಲೆ.!

ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈವರೆಗೆ ಉಳಿಸಿಕೊಂಡಿದ್ದ ಸರ್ಕಾರಕ್ಕೆ ಸಲ್ಲಬೇಕಾದ ಎಲ್ಲಾ ಭಾಗ್ಯಗಳನ್ನು ಕೂಡ ವಸೂಲಿ ಮಾಡಿ ಕೊಡುವ ಕಾರ್ಯಕ್ಕೆ ಕೈ ಹಾಕಿದೆ. ತುಮಕೂರು ಜಿಲ್ಲೆಯಲ್ಲಿಯೇ (Thumakur) ಕೇವಲ 15 ದಿನಗಳಲ್ಲಿ 760 ಕೋಟಿ ಬಾಕಿ ವಸೂಲಿ ಮಾಡಲು ಮುಂದಾಗಿರುವ ಮೂಲಕ ಸರ್ಕಾರವು ಮತ್ತೊಮ್ಮೆ ಸುದ್ದಿಯಲ್ಲಿ ಇದೆ.

ತುಮಕೂರು ಜಿಲ್ಲೆಯಲ್ಲಿರುವ ಒಳಡಾಳಿತ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್, ಕಂದಾಯ, ಶಿಕ್ಷಣ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗಳು, ನಗರಾಭಿವೃದ್ಧಿ, ಲೋಕೋಪಯೋಗಿ, ಸಣ್ಣ ನೀರಾವರಿ, ಕಾನೂನು ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ, ಪಶು ಸಂಗೋಪನೆ ಸೇರಿದಂತೆ ಬಹುತೇಕ ಎಲ್ಲ ಸರ್ಕಾರಿ ಇಲಾಖೆ ಕಚೇರಿಗಳಿಂದ ಸುಮಾರು 760 ಕೋಟಿ ವಿದ್ಯುತ್ ಬಿಲ್ ಬಾಕಿ ಇದೆ ಎನ್ನುವುದು ತಿಳಿದು ಬಂದಿದ್ದು.

ಹೌದು, ಕಾವೇರಿ ನಮ್ದೇ ಆದ್ರೆ ಪ್ರಶ್ನೆ ಮಾಡ್ಬೇಕಾಗಿರೋದು ನಟರನ್ನಲ್ಲಾ ನಾಲಾಯಕ್ ರಾಜಕಾರಣಿಗಳನ್ನ.! ಎಂದು ಕಿಡಿ ಕಾರಿದ ಬಹುಭಾಷಾನಟ ಪ್ರಕಾಶ್ ರಾಜ್

ಈ ಹಣವನ್ನು ಕಚೇರಿಗಳಿಂದ ವಸೂಲಿ ಮಾಡಿಕೊಡಲು ಸರ್ಕಾರ ಬೆಸ್ಕಾಂ ಗೆ ತಾಕೀತು ಮಾಡಿದೆ. ಸರ್ಕಾರ ನೀಡಿರುವ ಟಾರ್ಗೆಟ್ ಆದೇಶವನ್ನು ಚಾಚೂ ತಪ್ಪದೇ ಪಾಲಿಸ ಬೇಕಿರುವ ಬೆಸ್ಕಾಂ ಅಧಿಕಾರಿಗಳು (BESCOM) ಕೂಡಲೇ ಬಾಕಿ ಬಿಲ್ ಮೊತ್ತವನ್ನ ಪಾವತಿ ಮಾಡುವಂತೆ ಇಲಾಖೆಯ ಅಧಿಕಾರಿಗಳಿಗೆ ಇದೀಗ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಸರ್ಕಾರದ ನಾನಾ ಇಲಾಖೆಗಳ ಕಚೇರಿಗಳಿಂದಲೇ ದೊಡ್ಡ ಮೊತ್ತದ ವಿದ್ಯುತ್ ಬಿಲ್ ಬಾಕಿ ಇದೆ. ಬರೋಬ್ಬರಿ 760 ಕೋಟಿ ರೂಪಾಯಿ ವಿದ್ಯುತ್ ಬಿಲ್ ಬಾಕಿ ಇದೆ. ಇದು ಕಳೆದ 15, 20 ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್ ಆಗಿದೆ. ಹಲವು ಬಾರಿ ಈ ಕಚೇರಿಗಳಿಗೆ ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್ ಕಟ್ಟುವಂತೆ ನೋಟಿಸ್ ಕಳುಹಿಸಿ ಹಣ ಕಟ್ಟುವಂತೆ ಸಂಬಂಧ ಪಟ್ಟ ಇಲಾಖೆಗಳಿಗೆ ಹೋಗಿ ಆಯಾ ಇಲಾಖೆ ಅಧಿಕಾರಿಗಳಿಗೆ ಬೆಸ್ಕಾಂ ಸಿಬ್ಬಂದಿ ಮನವಿ ಮಾಡಿಕೊಂಡಿದ್ದರು ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ.

ಸನಾತನ ಧರ್ಮದಿಂದಲೇ ಸಂವಿಧಾನದ ಉಳಿವು – ಬಸನಗೌಡ ಪಟೀಲ್ ಯತ್ನಲ್

ಈಗ ಸರ್ಕಾರದ ಆದೇಶ ಇರುವುದರಿಂದ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಎಲ್ಲಾ ಕಚೇರಿಗಳಿಗೂ ಖಡಕ್ ಎಚ್ಚರಿಕೆ ನೀಡಿದ್ದಾರೆ ಈ ಬಾರಿ ಈಗ ನೀಡಿರುವ ಗಡುವಿನೊಳಗೆ ಅದರೆ ಇನ್ನು 15 ದಿನಗಳಲ್ಲಿ ವಿದ್ಯುತ್ ಶುಲ್ಕವನ್ನು ಪಾವತಿ ಮಾಡಲೇಬೇಕು ಎಂದು ನೋಟಿಸ್ ಕೊಟ್ಟಿದ್ದಾರೆ. ತುಮಕೂರಿನ ಸರ್ಕಾರಿ ಕಚೇರಿಗಳಲ್ಲಿಯೇ ಇಷ್ಟು ವಿದ್ಯುತ್ ಬಿಲ್ ಪಾವತಿ ಬಾಕಿ ಇದೆ ಎಂದರೆ ರಾಜ್ಯದಾದ್ಯಂತ ಸರ್ಕಾರ ಹಳೆ ಬಾಕಿ ವಸೂಲಿ ಕೇಳಿದ್ದಾರೆ ರಾಜ್ಯದ ಖಜನೆಗೆ ಎಷ್ಟು ಆದಾಯ ತುಂಬಬಹುದು ಎಂದು ಜನಸಾಮಾನ್ಯರು ಲೆಕ್ಕ ಹಾಕುತ್ತಿದ್ದಾರೆ.

ರಾತ್ರೋ ರಾತ್ರಿ ನೀರು ಬಿಟ್ಟು ಈಗ ಮೋದಿನಾ ಕರೆದ್ರೆ ಹೇಗೇ.? – ಚಕ್ರವರ್ತಿ ಸೂಲಿಬೆಲೆ.!

0

ಮಂಡ್ಯದ ಸರ್.ಎಂ ವಿಶ್ವೇಶ್ವರಯ್ಯ (SMV Circle ) ಪ್ರತಿಮೆ ಬಳಿ ಜಿಲ್ಲೆಯ ರೈತ ಹಿತ ರಕ್ಷಣಾ ಸಮಿತಿಯು ಕಳೆದ ವಾರದಿಂದ ಕಾವೇರಿ ನದಿ ನೀರಿಗಾಗಿ (Cauvery protest) ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಶುಕ್ರವಾರ ಕರ್ನಾಟಕ ಬಂದ್ (Karnataka bandh) ಪ್ರಯುಕ್ತ ಭಾಗಿಯಾದ ಚಿಂತಕ ಮತ್ತು ನಮೋಬ್ರಿಗೇಡ್ (Namo brigade) ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆಯವರು (Chakravarthi Sulibele) ರಾಜ್ಯ ಸರ್ಕಾರ ವಿನಾಕಾರಣ ಪ್ರಧಾನಿ ಮೋದಿ ಅವರ ಹೆಸರು ಹೇಳುತ್ತಿದೆ.

ಇದೆಲ್ಲ ರಾಜಕೀಯ ನಾಟಕ, ಕಾಂಗ್ರೆಸ್ ಸರ್ಕಾರವು ತನ್ನ ರಾಜಕೀಯ ಹಿತಕ್ಕಾಗಿ ತಮಿಳುನಾಡಿಗೆ (Thamilunadu) ನೀರು ಹರಿಸಿ ಈಗ ರಾಜ್ಯದಾದ್ಯಂತ ರಾಜ್ಯ ಸರ್ಕಾರದ ನಡೆ ವಿರೋಧಿಸಿ ಹೋರಾಟ ಶುರುವಾದ ಮೇಲೆ ಕೇಂದ್ರದತ್ತ ಬೊಟ್ಟು ಮಾಡಿ ತೋರಿಸುತ್ತಿದೆ ಎಂದು ದೂರಿದ್ದಾರೆ. ನೀವು ನೀವು ಒಪ್ಪಂದ ಮಾಡಿಕೊಂಡು ಸೆಟಲ್ ಆದ ಮೇಲೆ ಪ್ರಧಾನಿ (PM Modi) ಅವರನ್ನು ಮಧ್ಯಸ್ಥಿತಿಗೆ ಕರೆಯುವುದಾದರೂ ಏಕೆ? ಅವರು ಬಂದು ಮಾಡುವುದಾದರೂ ಏನು ಎಂದಿದ್ದಾರೆ.

ಹೌದು, ಕಾವೇರಿ ನಮ್ದೇ ಆದ್ರೆ ಪ್ರಶ್ನೆ ಮಾಡ್ಬೇಕಾಗಿರೋದು ನಟರನ್ನಲ್ಲಾ ನಾಲಾಯಕ್ ರಾಜಕಾರಣಿಗಳನ್ನ.! ಎಂದು ಕಿಡಿ ಕಾರಿದ ಬಹುಭಾಷಾನಟ ಪ್ರಕಾಶ್ ರಾಜ್

ಕಾವೇರಿ ನದಿಯನ್ನು ನಿರಂತರವಾಗಿ ಸ್ವಚ್ಛ ಮಾಡುವವರು ನಾವು ಹೋರಾಟದ ದಿನದಂದು ಮಾತ್ರ ಬರುವವರು ಅಲ್ಲ, ಕಾವೇರಿ ಬಗ್ಗೆ ನಮಗೆ ಬಹಳಷ್ಟು ಕಾಳಜಿ ಇದೆ. ಇದು ಎರಡು ರಾಜ್ಯಕ್ಕೆ ಸೇರಿದ್ದು ಆದರೆ ಇಂತಹ ಬರಗಾಲದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ (State government) ನಮ್ಮ ರೈತರಿಗೆ (farmers) ಅನುಕೂಲವಾಗುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಆದರೆ DMK ಸರ್ಕಾರದ ಜೊತೆಗೆ ಸ್ನೇಹ ಬೆಳೆಸಿಕೊಂಡಿರುವ ರಾಜ್ಯ ಸರ್ಕಾರ ತನ್ನ ರಾಜಕೀಯ ಲಾಭಕ್ಕಾಗಿ ನಾಡಿನ ರೈತರನ್ನು ಬಲಿ ಕೊಡುತ್ತಿದೆ.

ಇನ್ನಾದರೂ ನಾಡಿನ ನೆಲಜಲದ ಬಗ್ಗೆ ಕಾಳಜಿ ಮಾಡಿ, ರಾಜ್ಯದ ಜನರ ಹಿತವನ್ನು ಕಾಯುವ ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಆಗ್ರಹಿಸಿದ್ದಾರೆ. ಕಾವೇರಿ ಪ್ರಾಧಿಕಾರ ನೀರು ಬಿಡುವಂತೆ ಆದೇಶಿಸಿತ್ತು. ಆದರೆ, ಕಡಿಮೆ ನೀರು ಬಿಡುವಂತೆ ಆದೇಶ ನೀಡಿದೆ ಎಂಬ ಕಾರಣಕ್ಕೆ ತಮಿಳುನಾಡು ಸರಕಾರ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಆದರೆ ನ್ಯಾಯಾಲಯ ಆದೇಶ ನೀಡುವ ಮುನ್ನವೇ ರಾಜ್ಯ ಸರಕಾರ ನೀರು ಬಿಟ್ಟಿತು.

ಸನಾತನ ಧರ್ಮದಿಂದಲೇ ಸಂವಿಧಾನದ ಉಳಿವು – ಬಸನಗೌಡ ಪಟೀಲ್ ಯತ್ನಲ್

ನೀರು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರೆ ತಮಿಳುನಾಡು-ಕರ್ನಾಟಕದ ನಡುವೆ ಘರ್ಷಣೆ ತಲೆದೋರುತ್ತಿತ್ತು. ಆಗ ಪ್ರಧಾನಿ ಅಥವಾ ಕೇಂದ್ರ ಸರಕಾರ ವಿವಾದ ಬಗೆಹರಿಸಲು ಮಧ್ಯ ಪ್ರವೇಶ ಮಾಡಬೇಕಿತ್ತು. ಆದರೆ ಇಲ್ಲಿ ಅವರು ನೀರು ಕೇಳಿದರು, ನೀವು ಕೊಟ್ಟಿರಿ, ಈಗ ಇದರಲ್ಲಿ ಪ್ರಧಾನಿ ಪಾತ್ರವೇನು? ರಾಜಕೀಯ ಹಿತಕ್ಕಾಗಿ ರಾಜ್ಯದ ಪರಿಸ್ಥಿತಿ ಹೀಗಿದ್ದರೂ ಕಾವೇರಿ ಬಿಡುಗಡೆ ಮಾಡಿದವರು ಈಗ ಪ್ರಧಾನಿಯನ್ನು ಮಧ್ಯಸ್ಥಿಕೆಗಾಗಿ ಆಹ್ವಾನಿಸುವುದು ಎಷ್ಟು ಸರಿ ? ನೀರು ಬಿಡುವ ಮುನ್ನವೇ ಇಂತಹ ಚಿಂತನೆ ಮಾಡಬೇಕಿತ್ತು.

ನೀರು ಬಿಟ್ಟು ಈಗ ಕೇಂದ್ರದ ಕಡೆಗೆ ಬೊಟ್ಟು ಮಾಡುವುದು ಸರಿಯಲ್ಲ. ರಾಜ್ಯದ ಸಂಸದರೂ ಸಹ ಈ ಬಗ್ಗೆ ಮುತುವರ್ಜಿ ವಹಿಸಬೇಕು. ಆದರೆ, ಪ್ರಧಾನಿ ಬಳಿ ಹೋಗಿ ಏನೆಂದು ಕೇಳಲು ಸಾಧ್ಯ? ಕರ್ನಾಟಕದ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರು ತಮಿಳುನಾಡಿಗೆ ಕೇಳದೆಯೇ ನೀರು ಹರಿಸಿದ್ದಾರೆ. ಹೀಗಿರುವಾಗ ನಾನು ಹೇಗೆ ಮಧ್ಯ ಪ್ರವೇಶಿಸಲಿ ಎಂದು ಪ್ರಧಾನಿ ಪ್ರಶ್ನಿಸುತ್ತಾರೆ.

ಕರ್ನಾಟಕದಲ್ಲಿಯೂ JCB ಬರುತ್ತದೆ, ಒಂದಲ್ಲ ಒಂದು ದಿನ ಆ ಸ್ಥಾನಕ್ಕೆ ನಾನು ಬರುತ್ತೇನೆ ಎಂದ ಶಾಸಕ.!

ಇಂತಹ ಸಂದಿಗ್ಧ ಸಂದರ್ಭದಲ್ಲಿ ಸಂಸದರಾದರೂ ಏನು ಮಾಡಲು ಸಾಧ್ಯ ಎಂದು ಮರು ಪ್ರಶ್ನೆ ಮಾಡಿದರು. ರಾಜ್ಯ ಸರಕಾರ ನಡೆಯನ್ನು ಖಂಡಿಸಿ ಇಂದು ರಾಜ್ಯಾದ್ಯಂತ ಬಂದ್ ಯಶಸ್ವಿಯಾಗಿ ನಡೆಯುತ್ತಿದೆ. ಹಳೇಮೈಸೂರು ಅಥವಾ ಬೆಂಗಳೂರು ಭಾಗಕ್ಕೆ ಕಾವೇರಿ ಮಾತ್ರ ಸೀಮಿತವಲ್ಲ. ಇಡೀ ರಾಜ್ಯಕ್ಕೇ ಸೇರಿದ್ದು ಎಂಬ ಸಂದೇಶವನ್ನು ಸಾರಿದರು. ರಾಜ್ಯಾದ್ಯಂತ ಬಂದ್ ಮಾಡುವ ಮೂಲಕ ಈಗ ಸರಕಾರಗಳಿಗೆ ಚಾಟಿ ಬೀಸಲಾಗುತ್ತಿದೆ. ಇನ್ನಾದರೂ ಸರಕಾರಗಳು ಎಚ್ಚೆತ್ತುಕೊಳ್ಳಬೇಕು ಎಂದರು.