Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಕನ್ನಡದಿಂದ ಟಾಲಿವುಡ್ ಗೆ ಜಿಗಿದ ಕಾಂತಾರ ನಟಿ, ಅಧಿಕೃತವಾಗಿ ತೆಲುಗು ಚಿತ್ರೋದ್ಯಮಕ್ಕೆ ಎಂಟ್ರಿ ಕೊಟ್ಟ ಸಪ್ತಮಿ.!

Posted on January 21, 2024 By Admin No Comments on ಕನ್ನಡದಿಂದ ಟಾಲಿವುಡ್ ಗೆ ಜಿಗಿದ ಕಾಂತಾರ ನಟಿ, ಅಧಿಕೃತವಾಗಿ ತೆಲುಗು ಚಿತ್ರೋದ್ಯಮಕ್ಕೆ ಎಂಟ್ರಿ ಕೊಟ್ಟ ಸಪ್ತಮಿ.!

ಕಾಂತಾರ ಸಿನಿಮಾದ (Kantara Movie) ಹಳ್ಳಿ ಹುಡುಗಿ ಲೀಲಾ ಪಾತ್ರದ ಮೂಲಕ ನಟಿ ಸಪ್ತಮಿ ಗೌಡ ಅವರಿಗೆ (Sapthami Gowda) ಅತಿ ಶೀಘ್ರವಾಗಿ ಪ್ಯಾನ್ ಇಂಡಿಯ ನಟಿಯಾಗುವ ಅವಕಾಶ ಸಿಕ್ಕಿತು. ಸೂರಿ ಅವರ ನಿರ್ದೇಶನದ ಡಾಲಿ ಧನಂಜಯ (Dolly Dananjay).

ನಟ ಭಯಂಕರನಾಗಿ ಆರ್ಭಟಿಸಿದ್ದ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದ (debut through Popcorn Monkey Tiger) ನಾಲ್ಕು ನಾಯಕಿಯರಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದ ನಟಿ ಸಪ್ತಮಿ ಗೌಡ ಅವರಿಗೆ ಅವರು ಅಭಿನಯಿಸಿದ ಮೊದಲ ಸಿನಿಮಾವೇ ಇಂಡಸ್ಟ್ರಿಯಲ್ಲಿ ಎಲ್ಲರೂ ಅವರ ಬಗ್ಗೆ ಮಾತನಾಡುವ ರೀತಿ ಮಾಡಿತು.

ಆ ಸಿನಿಮಾದಲ್ಲಿ ಸಿಕ್ಕ ಚಿಕ್ಕ ಗಿರಿಜಾ ಪಾತ್ರದ ನೈಜ ಅಭಿನಯಕ್ಕೆ ಸಂದ ಬಹುಮಾನವೆನ್ನುವಂತೆ ಕಾಂತರಾ ಸಿನಿಮಾಗೆ ಆಯ್ಕೆಯಾದರು ಮತ್ತು ಅಷ್ಟೇ ಅಚ್ಚುಕಟ್ಟಾಗಿ ಲೀಲಾ ಪಾತ್ರ ನಿಭಾಯಿಸಿ ಈಗ ಕನ್ನಡ ಮಾತ್ರವಲ್ಲದೆ ಪರಭಾಷೆಗಳನ್ನು ಕೂಡ ಅವಕಾಶಗಳನ್ನು ಪಡೆಯುತ್ತಿದ್ದಾರೆ.

ಪೂರ್ಣ ಪ್ರಮಾಣ ನಾಯಕಿಯಾಗಿ ಅಭಿನಯಿಸಿದ ಮೊದಲ ಸಿನಿಮಾ ಕಾಂತಾರ ಎಂದೇ ಹೇಳಬಹುದು. ಈ ಸಿನಿಮಾದ ಸಕ್ಸಸ್ ನಟಿಯನ್ನು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಾಡಿದೆ. ಕಾಂತರಾ ಸಿನಿಮಾ ಬಳಿಕ ಸಾಲು ಸಾಲು ಅವಕಾಶಗಳು ಸಪ್ತಮಿ ಗೌಡ ಅವರನ್ನು ಹುಡುಕಿ ಬರುತ್ತಿದ್ದು ಈ ಬಾರಿ ಬಹಳ ಚೂಸಿಯಾಗಿ ಅವರು ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಈಗಾಗಲೇ ಹಿಂದಿ ಬಾಷೆಯಲ್ಲಿ ಕಾಣಿಸಿಕೊಳ್ಳುವ ಅವಕಾಶ ಬಂದಿತ್ತು, ದಿ ವ್ಯಾಕ್ಸಿನ್ ವಾರ್ (The vaccine war) ಚಿತ್ರದ ಮೂಲಕ ಪರಭಾಷೆಗೆ ಜಾರಿದ ನಟಿ ಈಗ ತೆಲುಗು ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರಂತೆ. ಈ ಬಗ್ಗೆ ಅಧಿಕೃತವಾದ ಮಾಹಿತಿ ಸಿಕ್ಕಿದ್ದು ತೆಲುಗಿನ ತಮ್ಮುಡು ಸಿನಿಮಾದ (Thelugu Thammudu Movie) ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಒಟ್ಟಾರೆಯಾಗಿ ಕಾಂತರಾ ಸಿನಿಮಾ ರಿಲೀಸ್ ಆಗಿ ವರ್ಷ ತುಂಬುವುದರ ಒಳಗೆ ಕನ್ನಡ ತೆಲುಗು ಹಾಗು ಹಿಂದಿ ಭಾಷೆಯಲ್ಲಿ ನಟಿ ಗುರುತಿಸಿಕೊಂಡಿದ್ದಾರೆ. ಕಾಲಿವುಡ್ ವಲಯದಿಂದ ಕೂಡ ಅವಕಾಶಗಳು ಹರಿದು ಬರುತ್ತಿದ್ದು ಮುಂದಿನ ದಿನಗಳಲ್ಲಿ ತಮಿಳು ಸಿನಿಮಾಗಳನ್ನು ಕೂಡ ನಟಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಇದರ ಮಧ್ಯೆ ಕನ್ನಡಕ್ಕೆ ಮೊದಲ ಆದ್ಯತೆ ಕೊಟ್ಟಿರುವ ಸಪ್ತಮಿ ಗೌಡ ಅವರು ಕನ್ನಡದ ಮೂರು ಸಿನಿಮಾಗಳಿಗೆ ಒಪ್ಪಿಕೊಂಡಿದ್ದಾರೆ. ದೊಡ್ಮನೆ ಕುಡಿ ಯುವ ರಾಜ್ ಕುಮಾರ್ ಅವರು ಲಾಂಚ್ ಆಗುತ್ತಿರುವ ಯುವ (YUVA) ಸಿನಿಮಾದಲ್ಲಿ ನಟಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಇದು ಕೂಡ ಡಿ ಗ್ಲಾಮರ್ ಪಾತ್ರ ಎಂದು ತಿಳಿದುಬಂದಿದೆ.

ಸ್ಕ್ರೀನ್ ಮೇಲೆ ಧನಂಜಯ ಮತ್ತು ಸಪ್ತಮಿ ಗೌಡ ಕೆಮಿಸ್ಟ್ರಿ ವರ್ಕ್ ಆಗಿರುವುದರಿಂದ ಈ ಕಾಂಬಿನೇಷನ್ ಮತ್ತೊಂದು ಸಿನಿಮಾ ತಯಾರಾಗುತ್ತಿದೆಯಂತೆ, ಧನಂಜಯ್ ನಿರೀಕ್ಷಿತ ಚಿತ್ರ ಉತ್ತರಕಾಂಡ ಸಿನಿಮಾದಲ್ಲಿ (Dananjay Uttarakanda Movie) ನಟಿ ಸಪ್ತಮಿ ಗೌಡ ಕೂಡ ಇರಲಿದ್ದಾರಂತೆ.

ಕಾಂತಾರ ಸಿನಿಮಾ ತಕ್ಷಣವೇ ಅಭಿಷೇಕ್ ಅಂಬರೀಶ್ (Abhishek Ambarish) ಅವರ ಜೊತೆ ನಾಯಕ ನಟಿಯಾಗಿ ಅಭಿನಯಿಸುವುದಕ್ಕೆ ಒಪ್ಪಿದ ಸಪ್ತಮಿ ಗೌಡ ಅವರು ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡಿದ್ದರು ಒಟ್ಟಾರೆಯಾಗಿ ಈ ವರ್ಷ ಸಪ್ತಮಿ ಗೌಡರ ಹಲವು ಸಿನಿಮಾಗಳ ವಿಲೇಜ್ ಆಗುತ್ತವೆ ಎಂದು ನಿರೀಕ್ಷಿಸಬಹುದಾಗಿದೆ.

ಈಗಾಗಲೇ ಕನ್ನಡದಲ್ಲಿ ಕಾಣಿಸಿಕೊಂಡು ನಂತರ ಪರಭಾಷೆಯಲ್ಲೂ ದೊಡ್ಡ ಹೆಸರು ಮಾಡಿದ ನಾಯಕಿಯರ ಪಟ್ಟಿಗೆ ಸಪ್ತಮಿ ಗೌಡ ಹೆಸರು ಕೂಡ ಸೇರಲಿ ಅವರ ಸಿನಿಮಾಗಳಿಗೆ ಶುಭವಾಗಲಿ ಎಂದು ಹರಸೋಣ.

cinema news

Post navigation

Previous Post: ವಿಕಲ ಚೇತನ ಮಗು ಕೊರಳಿಗೆ ಸರ ಹಾಕಿ, ಕೈಗೆ ಹಣ ನೀಡಿದ ದುನಿಯಾ ವಿಜಯ್.!
Next Post: ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ ನಟ ದರ್ಶನ್.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme