ಸದ್ಯಕ್ಕೆ ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರವಾಹಿ (Sathya Serial) ಮೂಲಕ ಮನೆ ಮನೆ ಮಾತಾಗಿರುವ ಕಾರ್ತಿಕ್ ಅಲಿಯಾಸ್ ಅಮುಲ್ ಬೇಬಿ ಅವರ ನಿಜ ನಾಮಧೇಯ ಸಾಗರ್ ಬಿಳಿ ಗೌಡ (Sagar BiliGowda) ಆದರೆ ಕರ್ನಾಟಕದ ಬಹುತೇಕರು ಈ ಹೆಸರನ್ನೇ ಮರೆತು ಬಿಟ್ಟಿದ್ದಾರೆ.
ಕಾರ್ತಿಕ್ ಪಾತ್ರಕ್ಕೆ ಅಷ್ಟು ಅಚ್ಚುಕಟ್ಟಾಗಿ ಹೊಂದಿಕೊಂಡಿರುವ ಇವರು ಈ ಹಿಂದೆ ಕಿನ್ನರಿ ಸೇರಿದಂತೆ ಹಲವಾರು ಧಾರವಾಹಿಗಳಿಗೆ ಬಣ್ಣ ಹಚ್ಚಿದ್ದರೂ ಸತ್ಯ ದಾರಾವಾಹಿ ಹೆಚ್ಚು ಖ್ಯಾತಿ ತಂದು ಕೊಟ್ಟಿದೆ. ಕಳೆದ ಮೂರು ನಾಲ್ಕು ವರ್ಷಗಳಿಂದ ನಿರಂತರವಾಗಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯು ಮನೆ ಮನೆ ಮಾತಾಗಿದೆ.
ಎಲ್ಲರೂ ರೌಡಿ ಬೇಬಿ ಹಾಗೂ ಅಮೂಲ್ ಬೇಬಿಯನ್ನು ತಮ್ಮ ಮನೆ ಸದಸ್ಯರೇ ಅಂದುಕೊಂಡುಬಿಟ್ಟಿದ್ದಾರೆ. ಈಗ ಅಮುಲ್ ಬೇಬಿ ಕಡೆಯಿಂದ ತನ್ನ ಕುಟುಂಬಸ್ಥರಂತಿರುವ ಎಲ್ಲಾ ಅಭಿಮಾನಿಗಳಿಗೂ ಸಿಹಿ ಸುದ್ದಿ ಇದೆ. ಸ್ವತಃ ಸಾಗರ್ ಬಿಳಿ ಗೌಡ ಅಲಿಯಾಸ್ ಕಾರ್ತಿಕ್ ತಮ್ಮ instagram ಪೇಜ್ ನಲ್ಲಿ ಇದನ್ನು ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ.
ವಿಷವೇನೆಂದರೆ ಸಾಗರ್ ಬಿಳಿ ಗೌಡ ಅವರು ಕಳೆದ ವರ್ಷ ಜನವರಿ 26ರಂದು ತಮ್ಮ ಬಹುಕಾಲದ ಗೆಳತಿ ಸಿರಿ ರಾಜು ಅಲಿಯಾಸ್ ಸುಪ್ರೀತ ಅವರನ್ನು ಕೈ ಹಿಡಿದಿದ್ದರು. ಸಿನಿಮಾ ರಂಗದವರು ಸೇರಿದಂತೆ ಧಾರಾವಾಹಿಗಳ ಅನೇಕ ಕಲಾವಿದರುಗಳು ಬಂದು ಜೋಡಿಗೆ ಶುಭ ಹಾರೈಸಿ ಆಶೀರ್ವದಿಸಿದ್ದರು.
ಈಗ ವರ್ಷ ತುಂಬುವುದರ ಒಳಗೆ ಅವರ ಕಡೆಯಿಂದ ಸಿಹಿ ವಿಷಯ ಕೇಳಿ ಬಂದಿದೆ ಸಾಗರ್ ಹಾಗೂ ಸಿರಿ ಅವರು ತಂದೆ-ತಾಯಿ ಆಗುತ್ತಿದ್ದು, ಬೇಬಿ ಬಂಪ್ ಫೋಟೋಶೂಟ್ ಮಾಡಿಸಿ ಹಂಚಿಕೊಳ್ಳುವ ಮೂಲಕ ಇದನ್ನು ರಿವೀಲ್ ಮಾಡಿದ್ದಾರೆ ನೆನ್ನೆಯಷ್ಟೇ ಸಾಗರ್ ಬಿಳಿಗೌಡ ಮತ್ತು ಸಿರಿ ರಾಜ್ ಅವರ ಇನ್ಸ್ಟಾ ಖಾತೆಯಲ್ಲಿ ಬೇಬಿ ಬಂಪ್ ಫೋಟೋ ಶೂಟ್ ಫೋಟೋಗಳು ಪೋಸ್ಟ್ ಆಗಿದೆ.
ಸಾಗರ್ ಗೌಡ ಅವರು ನಿನ್ನನ್ನು ಭೇಟಿ ಆಗಲು ಕಾಯುತ್ತಿದ್ದೇವೆ ಎಂದು ಕ್ಯಾಪ್ಶನ್ ಬರೆದು ಮಮ್ ಅಂಡ್ ಡ್ಯಾಡ್ ಟು ಬಿ ಎನ್ನುವ ಹ್ಯಾಷ್ ಟ್ಯಾಗ್ ನೊಂದಿಗೆ ಶೇರ್ ಮಾಡಿಕೊಂಡಿದ್ದಾರೆ. ಕುಟುಂಬಸ್ಥರು ಸೇರಿ ಶಾಸ್ತ್ರೋಕ್ತವಾಗಿ ತುಂಬು ಗರ್ಭಿಣಿಗೆ ಸೀಮಂತ ಕಾರ್ಯವನ್ನು ಕೂಡ ಮಾಡಿದ್ದಾರೆ, ಆ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಜನವರಿ 26 ಕ್ಕೆ ಮದುವೆಯ ಮೊದಲ ವಾರ್ಷಿಕೋತ್ಸವದ ಸಮಯಕ್ಕೆ ದಂಪತಿಗೆ ಕೈಯಲ್ಲಿ ಮುದ್ದು ಮಗುವಿರುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ. ಈ ವಿಷಯ ಅವರ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತೆ ಮಾಡಿದೆ ಎಲ್ಲರೂ ಕೂಡ ತಮ್ಮ ನೆಚ್ಚಿನ ನಟ ನಟಿಯ ಕುಟುಂಬಕ್ಕೆ ಶುಭವಾಗಲಿ ಒಳ್ಳೆಯದಾಗಲಿ ಎಂದು ಕಮೆಂಟ್ ಗಳಲ್ಲಿ ಹಾರೈಸುತಿದ್ದಾರೆ.
ಕಳೆದ ಐದು ವರ್ಷಗಳಿಂದ ಸ್ನೇಹಿತರಾಗಿದ್ದ ಇವರು ಪ್ರೇಮಿಗಳಾಗಿ ಪ್ರೀತಿಯ ಬಂಧನಕ್ಕೆ ಸಿಲುಕಿದ್ದರು. ಇಬ್ಬರು ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯ ರಾಗಿದ್ದು ಈಗಾಗಲೇ ಸಿರಿ ರಾಜು ಅವರು ಕೆಲಸ ಸಿನಿಮಾಗಳಲ್ಲಿ ಹಾಗೂ ಧಾರವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಸಾಗರ್ ಬಳಿ ಗೌಡ ಅವರು ಕೂಡ ಧಾರಾವಾಹಿಗಳ ಜೊತೆ ಈಗ ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದು ಜಾಜಿ ಚಿತ್ರದ ಮೂಲಕ (Jaji Cinema) ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾದ ಆಲ್ಬಮ್ ಸಾಂಗ್ ಗಳು ರಿಲೀಸ್ ಆಗಿದ್ದು ಸಿನಿಮಾ ಬಗ್ಗೆ ಭರವಸೆ ಹುಟ್ಟಿಸುತ್ತಿದೆ. ನಟನ ಕೆರಿಯರ್ ಹಾಗೂ ಕುಟುಂಬ ಜೀವನ ಇನ್ನೂ ಸಂತೋಷದಿಂದ ಕೂಡಿರಲಿ ಎಂದು ನಾವು ಸಹ ಹರಸೋಣ.