Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ ನಟ ದರ್ಶನ್.!

Posted on January 21, 2024 By Admin No Comments on ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ ನಟ ದರ್ಶನ್.!

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು (Challenging Star Darshan)ಚಂದನದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಂ.1 ನಟ. ಅವರ ಅಭಿನಯ ಮಾತ್ರವಲ್ಲದೆ ಅವರ ಗುಣ ನೋಡಿ ಕೂಡ ಫ್ಯಾನ್ ಆದವರು ಇದ್ದಾರೆ. ಇಂತಹ ಅಭಿಮಾನಿಗಳಿಗೆ ದರ್ಶನ್ ಹೊಸ ಚಿತ್ರ ಬಿಡುಗಡೆ, ಹುಟ್ಟು ಹಬ್ಬ ಎಲ್ಲವೂ ಸಂಭ್ರಮವೇ.

ಕರುನಾಡಿನಲ್ಲಿ ನಟ ದರ್ಶನ್ ಅವರ ಹುಟ್ಟು ಹಬ್ಬವು (Birthday) ಯಾವುದೇ ಜಾತ್ರೆಗೂ ಕಡಿಮೆ ಇಲ್ಲ. ಸಾವಿರಾರು ಡಿ.ಬಾಸ್ ಅಭಿಮಾನಿಗಳು ದರ್ಶನ್ ಅವರ ಮನೆ ಮುಂದೆ ಬಂದು ರಾತ್ರಿಯೆಲ್ಲ ಕಾದಿದ್ದು ಹುಟ್ಟು ಹಬ್ಬದ ಶುಭಾಶಯ ಕೋರಿ ಹೋದರೆ, ತಾವು ಇರುವ ಸ್ಥಳದಿಂದಲೇ ಕರ್ನಾಟಕದ ಕೋಟ್ಯಾಂತರ ಅಭಿಮಾನಿಗಳು ತಮ್ಮ ಇಚ್ಛೆಯನುಸಾರ ಆಚರಿಸಿ ಶುಭಾಶಯ ಮಹಾಪೂರ ಹರಿಸುತ್ತಾರೆ.

ಚಾಲೆಂಜಿಂಗ್ ಸ್ಟಾರ್ ನ ಈ ಹುಟ್ಟು ಹಬ್ಬದ ವಿಚಾರವೂ ರಾಜ್ಯದಲ್ಲಿ ಅಲ್ಲದೆ ಪರರಾಜ್ಯದ ಮಾಧ್ಯಮಗಳನ್ನು ಕೂಡ ಚರ್ಚೆ ವಿಷಯವಾಗಿದ್ದು ಗೊತ್ತೇ ಇದೆ. ಈ ಮಟ್ಟದ ನಿಷ್ಕಲ್ಮಶ ಪ್ರೀತಿ ತೋರುತ್ತಿರುವುದರಿಂದ ದರ್ಶನ್ ರವರು ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿಸ್ (Celebraties) ಎಂದು ಗೌರವಿಸುತ್ತಾರೆ.

ಇನ್ನು ಕೆಲವೇ ದಿನಗಳಲ್ಲಿ ದಾಸನ ಹುಟ್ಟುಹಬ್ಬ ಹತ್ತಿರವಾಗುತ್ತಿದೆ ಇದಕ್ಕೆ ಸಂಬಂಧಪಟ್ಟ ಹಾಗೆ ಈಗಲೇ ಈ ವರ್ಷ ಕೂಡ ದರ್ಶನ್ ಪ್ರತಿವರ್ಷದಂತೆ ಅಭಿಮಾನಿಗಳಿಗೆ ಸೂಚನೆಯನ್ನು ಕೊಟ್ಟಿದ್ದಾರೆ ದರ್ಶನ್, ಈ ಮನವಿ ಪತ್ರವು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಇದರಲ್ಲಿರುವುದೇನಂದರೆ, ಪ್ರತಿ ವರ್ಷದಂತೆ ಈ ವರ್ಷವೂ ಹುಟ್ಟುಹಬ್ಬದ ಸಂದರ್ಭದಲ್ಲಿ  ಅಭಿಮಾನಿಗಳು ಯಾರು ಸಹ ಬ್ಯಾನರ್, ಕೇಕ್ ಹಾಗೂ ಹಾರಗಳನ್ನು ದಯಮಾಡಿ ತರಬೇಡಿ. ಅದೇ ಹಣದಲ್ಲಿ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರೆ ದವಸ-ಧಾನ್ಯಗಳನ್ನು ದಾನ ನೀಡಿ, ಅದನ್ನು ಒಗ್ಗೂಡಿಸಿ ಸೇರಿಸಬೇಕಾದ ಅನಾಥಾಶ್ರಮ ವೃದ್ಧಾಶ್ರಮಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು.

ಈ ಸಂಭ್ರಮಾಚರಣೆಯ ಸಮಯದಲ್ಲಿ ನನ್ನ ಮನೆಯ ಅಕ್ಕ ಪಕ್ಕ ನಿವಾಸಿಗಳಿಗೆ ನಿಮ್ಮಿಂದ ತೊಂದರೆಯಾಗುವುದು, ಪಟಾಕಿ ಹೊಡೆಯುವುದು, ಕಾಂಪೌಂಡ್ ಹತ್ತುವುದು, ಹೂಕುಂದ ಬಿಡಿಸುವುದು ಮತ್ತು ಅವರ ಸ್ವತ್ತುಗಳಿಗೆ ಹಾನಿ ಮಾಡುವುದು ಇಂತಹ ಅನುಚಿತ ವರ್ತನೆ ನಡಿಯಬಾರದು.

ನನ್ನ ಮೇಲೆ ಇಷ್ಟೊಂದು ಪ್ರೀತಿ ಅಭಿಮಾನ ಇಟ್ಟಿರುವ ನೀವೆಲ್ಲ ಈ ನನ್ನ ಕೋರಿಕೆಯನ್ನು ನಡೆಸಿ ಕೊಡುವಿರಿ ಎಂದು ನಂಬುತ್ತೇನೆ ಹಾಗೂ ಸಂಘದ ಕಾರ್ಯಕರ್ತರು ಹಾಗೂ ಪೊಲೀಸ್ ಸಿಬ್ಬಂದಿಗೆ ಸಹಕರಿಸಬೇಕೆಂದು ವಿನಂತಿಸಿ ಕೊಂಡಿದ್ದಾರೆ. ಈ ಬಾರಿ ಹುಟ್ಟು ಹಬ್ಬದಲ್ಲಿ ಮತ್ತೊಂದು ವಿಶೇಷತೆ ಇದೆ.

ಅದೇನೆಂದರೆ, ದರ್ಶನ್ ನಟನೆಯ ಕಾಟೇರ ಸಿನಿಮಾಗೆ (Katera Cinema) ಭಾರೀ ಯಶಸ್ಸು ಸಿಕ್ಕಿದೆ, ಜೊತೆಗೆ ಸಿನಿಮಾ ಜನರನ್ನು ತಲುಪುವ ವಿಚಾರದಲ್ಲಿ ಹಾಗೂ ಕಲೆಕ್ಷನ್ ವಿಚಾರದಲ್ಲಿ ಮತ್ತೊಂದು ದಾಖಲೆ ಬರೆದಿದೆ. ಇವತ್ತಿನ ದಿನದವರೆಗೂ ಒಂದು ಕೋಟಿಗೂ ಅಧಿಕ ಟಿಕೆಟ್ ಮಾರಾಟವಾಗುವ ಮೂಲಕ 206 ಕೋಟಿ ರೂಪಾಯಿಯನ್ನು ಬಾಕ್ಸ್ ಆಫೀಸಿನಿಂದ (Box Office) ಬಾಚಿದೆ.

ಅಭಿಮಾನಿಗಳೀಗ 200 ಕೋಟಿ ರೂಪಾಯಿ ಕ್ಲಬ್ ಸೇರಿದ ಪೋಸ್ಟರ್ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ನಟ ದರ್ಶನವರಿಗೆ ಹೆಚ್ಚು ಶುಭವಾಗಲಿ ಇದೇ ರೀತಿ ಕನ್ನಡದಲ್ಲಿ ಅವರ ಇನ್ನೂ ನೂರಾರು ಸಿನಿಮಾಗಳನ್ನು ನೋಡುವ ಭಾಗ್ಯ ಸಿಗಲಿ ಎಂದು ನಾವು ಕೂಡ ಅವರ ಅಭಿಮಾನಿಗಳಾಗಿ ಹರಸೋಣ. ನೀವು ಸಹ ದರ್ಶನ್ ಅಭಿಮಾನಿ ಆಗಿದ್ದರೆ ಅವರನ್ನು ನಟನೆಯ ಯಾವ ಚಿತ್ರ ನಿಮಗೆ ಬಹಳ ಇಷ್ಟ ಎನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ಹಂಚಿಕೊಳ್ಳಿ.

cinema news

Post navigation

Previous Post: ಕನ್ನಡದಿಂದ ಟಾಲಿವುಡ್ ಗೆ ಜಿಗಿದ ಕಾಂತಾರ ನಟಿ, ಅಧಿಕೃತವಾಗಿ ತೆಲುಗು ಚಿತ್ರೋದ್ಯಮಕ್ಕೆ ಎಂಟ್ರಿ ಕೊಟ್ಟ ಸಪ್ತಮಿ.!
Next Post: ಹೇಮಮಾಲಿನಿ ಅವರಿಂದ ಅಂತರ ಕಾಯ್ದುಕೊಂಡಿದ್ದೇಕ್ಕೆ ಗೊತ್ತಾ.? ವಿಷ್ಣು ದಾದಾ…

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme