ಕರ್ನಾಟಕದ ಕಾಮಿಡಿ ಸ್ಟಾರ್ ಚಿಕ್ಕಣ್ಣ (Chikkanna) ಮೊಟ್ಟಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕ ನಟನಾಗಿ ಉಪಾಧ್ಯಕ್ಷ (Upadyaksha) ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಜನವರಿ 26 ನೇ ತಾರೀಕು ರಿಲೀಸ್ ಆಗುತ್ತಿದ್ದು, ಈಗಾಗಲೇ ಸಿನಿಮಾದ ಪ್ರಮೋಷನ್ ಕಾರ್ಯ ಆರಂಭವಾಗಿದೆ. ಸಿನಿಮಾದ ಟ್ರೈಲರ್ ಲಾಂಚ್ (trailer launch) ಆಗಿದ್ದು ಕಾರ್ಯಕ್ರಮದಲ್ಲಿ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivarajkumar) ಅವರು ಭಾಗಿಯಾಗಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶಿವಣ್ಣ ಸಿನಿಮಾದ ಪ್ರತಿಯೊಬ್ಬ ಕಲಾವಿದರ ಬಗ್ಗೆ ಮತ್ತು ತೆರೆ ಹಿಂದೆ ಕೆಲಸ ಮಾಡುವ ತಂತ್ರಜ್ಞಾನದ ಬಗ್ಗೆಯೂ ಕೂಡ ಅವರ ಶ್ರಮದ ಬಗ್ಗೆ ಮಾತನಾಡಿ ಸ್ಟಾರ್ ಗಿರಿ ಇದೆ ಎಂದು ಮೆರೆಯುವವರಿಗೆ ಖಡಕ್ ವಾರ್ನಿಂಗ್ ಡೈರೆಕ್ಟ್ ಆಗಿ ಪಾಸ್ ಮಾಡಿದ್ದಾರೆ.
ಚಿಕ್ಕಣ್ಣನ ಅಭಿನಯವನ್ನು ಹಾಡಿ ಹೊಗಳಿದ ಶಿವಣ್ಣ ಚಿಕ್ಕಣ್ಣನ ಕಾಮಿಡಿ ಸೆನ್ಸ್ ಚೆನ್ನಾಗಿದೆ ಚಂದ್ರಬಾಬು ಎನ್ನುವ ತಮಿಳು ನಟ ನೆನಪಾಗುತ್ತಾರೆ. ಅದರಲ್ಲೂ ಅವರ ಈ ಸಿನಿಮಾದಲ್ಲಿ ಡ್ಯಾನ್ಸ್ ಮತ್ತು ಬಾಡಿ ಲ್ಯಾಂಗ್ವೇಜ್ ನೋಡಿ ಶಿವ ಕಾರ್ತಿಕೇಯನ್ (Chikkanna looks like ShivaKarthikeyan) ನೆನಪಾದರು ಅಷ್ಟು ಹೊಂದಾಣಿಕೆ ಇಬ್ಬರಲು ಕಾಣುತ್ತಿದೆ.
ಅವರಿಗೆ ಶುಭವಾಗಲಿ, ನಾವು ಒಂದೆರಡು ಸಿನಿಮಾದಲ್ಲಿ ಒಟ್ಟಿಗೆ ಆಕ್ಟ್ ಮಾಡಿದ್ದೇವೆ ಅವರಿಗೆ ಒಳ್ಳೆಯದಾಗಬೇಕು ಎಂದು ನಟಿ ಮಲೈಕಾ ಗೂ ಶುಭ ಹಾರೈಸಿದ್ದಾರೆ. ಅರ್ಜುನ್ ಜನ್ಯ ಅವರ ಮ್ಯೂಸಿಕ್ ಬಗ್ಗೆ ಕೂಡ ಮಾತನಾಡಿದ ಅವರು ಅರ್ಜುನ್ ಜನ್ಯ, ಚರಣ್ ರಾಜ್, ಅಜನೀಶ್, ರವಿ ಬಸ್ರೂರ್ ನ್ಯಾಷನಲ್ ಲೆವೆಲ್ ಗೆ ಹೆಸರು ಮಾಡುವಂತಹ ಮ್ಯೂಸಿಕ್ ಡೈರೆಕ್ಟರ್ ಗಳು ಯಾವುದೇ ಭಾಷೆಗೆ ಹೋದರು ಕೂಡ ಇವರ ಮ್ಯೂಸಿಕ್ ಬಗ್ಗೆ ಮಾತನಾಡುತ್ತಾರೆ ಎಂದು ಕನ್ನಡದ ಪ್ರತಿಭೆಗಳ ಬಗ್ಗೆ ಹಾಡಿ ಹೊಗಳಿದ್ದಾರೆ.
ಹಾಗೆ ಸ್ಟಾರ್ ಗಳು ಎನ್ನುವ ವಿಷಯ ಬಂದಾಗ ಯಾರು ಕೂಡ ಸ್ಟಾರ್ ಗಳು ಆಗುವುದಿಲ್ಲ. ಅಭಿಮಾನಿಗಳ ಆಶೀರ್ವಾದ, ನಮಗೆ ನಾವು ಈ ಕುಟುಂಬದಲ್ಲಿ ಜನಿಸಿದ್ದು ನಮ್ಮ ತಂದೆ ತಾಯಿ ಆಶೀರ್ವಾದದಿಂದ ನಮಗೆ ಇದೆಲ್ಲ ಸಿಕ್ಕಿದ್ದು. ಸಿನಿಮಾ ಅಂದ ಮೇಲೆ ಹೀರೋ ಒಬ್ಬನೇ ಸ್ಟಾರ್ ಆಗಲ್ಲ ಪೂರಕ ಎಲ್ಲಾ ಪಾತ್ರಗಳು ಮತ್ತು ಒಬ್ಬ ಲೈಟ್ ಮ್ಯಾನ್ ಕೂಡ ಮುಖ್ಯ ಆಗುತ್ತಾನೆ.
ಅವರ ಫೋಕಸ್ ಒಂಚೂರು ಮಿಸ್ ಆದರೆ ನಾವು ಹೇಗೆ ಮಿಂಚಲು ಸಾಧ್ಯವಾಗುತ್ತದೆ ಹೀಗಾಗಿ ಸಿನಿಮಾ ಒಟ್ಟಾರೆಯಾಗಿ ಒಬ್ಬರನ್ನು ಸ್ಟಾರ್ ಮಾಡಲು ಅಥವಾ ಅದರಿಂದ ಒಬ್ಬ ಸ್ಟಾರ್ ಆಗಲು ಆಗುವುದಿಲ್ಲ ಎನ್ನುವುದನ್ನು ಹೇಳಿದ ಅವರು ಸ್ಟಾರ್ ಗಳು ಆದವರಿಗೆ ಅವರ ಕುತ್ತಿಗೆ ಅವರ ಮೇಲೆ ಇರಬೇಕು ಆಗ ಮಾತ್ರ ಬ್ಯಾಲೆನ್ಸ್ ಇರುತ್ತದ, ಬೇರೆಯವರಿಗೆ ಹ್ಯಾಂಡಲ್ ಮಾಡಲು ಕೊಡಬಾರದು ಎನ್ನುವ ಮಾತನ್ನು ಸೇರಿಸಿದ್ದಾರೆ.
ಶಿವಣ್ಣ ಈ ಉದಾಹರಣೆ ಕೊಟ್ಟಿದ್ದು ರವಿಶಂಕರ್ ಅವರ ವಿಷಯಕ್ಕೆ, ರವಿಶಂಕರ್ (Ravishankar) ಅವರು ಸಿನಿಮಾ ಪ್ರಮೋಷನ್ ಗೆ ಬರುವುದಿಲ್ಲ ಎನ್ನುವ ದೂರು ಇದೆ. ಎಷ್ಟೇ ಬ್ಯುಸಿ ಇದ್ದರೂ ಬರಬೇಕು ಯಾಕೆಂದರೆ ಅದು ನಮ್ಮ ಕರ್ತವ್ಯ. ನಾವು ಕೂಡ ಯಾವುದೋ ಊರಿನ ಯಾವುದೋ ಹಳ್ಳಿಯಲ್ಲಿ ಶೂಟಿಂಗ್ ನಲ್ಲಿ ಇರುತ್ತೇವೆ ಆದರೂ ಬರುತ್ತೇವೆ.
ಯಾಕೆಂದರೆ ನಿರ್ಮಾಪಕ ನಮ್ಮನ್ನು ನಂಬಿರೋದಕ್ಕೆ ನಾವು ನಡೆದುಕೊಳ್ಳುವ ಜವಾಬ್ದಾರಿ ಸಿನಿಮಾ ಪೂರ್ತಿ ಆದಮೇಲೆ ಅದನ್ನು ತಲುಪಿಸುವ ಹೊಣೆ ಕೂಡ ನಾವು ಹೊತ್ತು ಕೊಳ್ಳಬೇಕಾಗುತ್ತದೆ ಹಾಗಾಗಿ ರವಿಶಂಕರ್ ನೀವು ದಯವಿಟ್ಟು ಸಿನಿಮಾ ಪ್ರಮೋಷನ್ ಗಳಿಗೆ ಬರಬೇಕು ಎಂದು ಡೈರೆಕ್ಟಾಗಿ ಹೇಳಿದ್ದಾರೆ ಶಿವಣ್ಣ.