ಸಾಹಸಸಿಂಹ ವಿಷ್ಣುವರ್ಧನ್ (Vishnuvardhan) ಅವರು ಕರುನಾಡಿನ ಮಾಣಿಕ್ಯ. ಕನ್ನಡ ಚಲನಚಿತ್ರದಲ್ಲಿ ನಂಬರ್ ಒನ್ ಸ್ಟಾರ್ ಹೀರೋ ಆಗಿ ಮಿಂಚಿ 200 ಕನ್ನಡ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಇದರಲ್ಲಿ ಬಹುತೇಕ ಎಲ್ಲವೂ ಕೂಡ ಸೂಪರ್ ಹಿಟ್ ಚಿತ್ರಗಳೇ. ಇವರ ಬಗ್ಗೆ ತಿಳಿಸಲೇಬೇಕಾದ ಮತ್ತೊಂದು ವಿಶೇಷತೆ ಏನೆಂದರೆ ಇವರು ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ.
ನಮ್ಮ ನೆಚ್ಚಿನ ನಟ ವಿಷ್ಣುವರ್ಧನ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಅಂಬರೀಶ್ ಹೇಗೆ ಆತ್ಮೀಯ ಸ್ನೇಹಿತರಾಗಿದ್ದರು ಅದೇ ರೀತಿ ದೇಶದ ವಿವಿಧ ಚಿತ್ರರಂಗಗಳಲ್ಲೂ ಕೂಡ ಇಷ್ಟೇ ಆತ್ಮೀಯವಾದ ಸ್ನೇಹ ಬಳಗವಿತ್ತು. ಅದರಲ್ಲಿ ಬಾಲಿವುಡ್ ಬಳಗದ ದಂತಕಥೆ ಧರ್ಮೇಂದ್ರ (Bollywood Hero Dharmendra) ಅವರ ಸ್ನೇಹದ ಬಗ್ಗೆ ಈ ಅಂಕಣದಲ್ಲಿ ವಿಶೇಷ ಸುದ್ದಿ ಒಂದನ್ನು ತಿಳಿಸುತ್ತಿದ್ದೇವೆ.
ಮೂಲಗಳ ಮಾಹಿತಿ ಪ್ರಕಾರ ಧರ್ಮೇಂದ್ರ ಮತ್ತು ವಿಷ್ಣುವರ್ಧನ್ ಅವರ ನಡುವೆ ಅಪಾರವಾದ ಸ್ನೇಹ ಹಾಗೂ ನಂಬಿಕೆ ಇತ್ತು. ಎಷ್ಟರಮಟ್ಟಿಗೆ ಎಂದರೆ ಅಪಾರವಾದ ಬೆನ್ನು ನೋವಿನಿಂದ ನರಳುತ್ತಿದ್ದ ಧರ್ಮೇಂದ್ರ ಅವರಿಗೆ ವಿಷ್ಣುವರ್ಧನ್ ಅವರೊಂದು ಸಾರಿ ಇಲ್ಲಿನ ಕೆಂಪು ಮಣ್ಣನ್ನು ಕಳುಹಿಸಿ ಕೊಟ್ಟಿದ್ದರು.
ಅದರ ಪಟ್ಟು ಹಾಕುವುದರಿಂದ ನೋವು ಕಡಿಮೆ ಆಗುತ್ತದೆ ಎಂದು ತಿಳಿಸಿದವರು ಹೇಳಿದ್ದಾರೆ ಎಂದು ಹೇಳಿದಾಗ ಧರ್ಮೇಂದ್ರ ಅವರು ಅದನ್ನು ಅನುಸರಿಸಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದರು ಮತ್ತು ಯಾವಾಗಲೂ ಈ ರೀತಿ ಸಮಸ್ಯೆ ಆದಾಗ ಡಾಕ್ಟರ್ ಬಳಿ ಹೋಗುವುದಕ್ಕಿಂತ ಮೊದಲು ವಿಷ್ಣುವರ್ಧನ್ ಅವರ ಬಳಿ ಮಣ್ಣು ಕಳುಹಿಸಿ ಕೊಡುವಂತೆ ಕೇಳುತ್ತಿದ್ದರಂತೆ.
ವಿಷ್ಣುವರ್ಧನ್ ಅವರಿಗೆ ಕೆಲ ಸಂದರ್ಭದಲ್ಲಿ ಬಹಳ ಸಮಸ್ಯೆಯಾಗಿತ್ತು, ಆಗ ಧರ್ಮೇಂದ್ರ ಅವರು ನಿನಗೆ ಕನ್ನಡ ಚಿತ್ರರಂಗದಲ್ಲಿ ಭವಿಷ್ಯವಿಲ್ಲ ಬಹಳ ಸಮಸ್ಯೆ ಆಗುತ್ತಿದೆ ಎಂದರೆ ನೀನು ಅಲ್ಲಿರಬೇಡ ಮುಂಬೈಗೆ ಬಾ ನಮ್ಮ ಚಿತ್ರರಂಗ ನಿನಗೆ ಎಂದೂ ತೆರೆದಿರುತ್ತದೆ ಎಂದು ಬುದ್ಧಿ ಹೇಳಿದ್ದರಂತೆ.
ಹಾಗೆಯೇ ನೀನು ಯಾವುದೇ ನಿರ್ಧಾರಕ್ಕೂ ಬಂದರೂ ನಮ್ಮ ಬಳಿ ಚರ್ಚಿಸಿ ಬರಬೇಕು ನೀನು ಒಬ್ಬನೇ ಏನನ್ನು ನಿರ್ಧಾರ ಮಾಡುವಂತಿಲ್ಲ ನಾವೆಲ್ಲ ನಿನ್ನ ಜೊತೆಗಿದ್ದೇವೆ ಎಂದು ತಾಕೀತು ಮಾಡಿದ್ದರಂತೆ. ವಿಷ್ಣುವರ್ಧನ್ ಅವರ ಪ್ರತಿ ಮಾತನ್ನು ಧರ್ಮೇಂದ್ರ ಅವರು ಗೌರವಿಸುತ್ತಿದ್ದರು, ನಂಬುತ್ತಿದ್ದರು ಮತ್ತು ವಿಷ್ಣುವರ್ಧನ್ ಅವರನ್ನು ತಮ್ಮ ಸಹೋದರ ಎಂದು ಎಲ್ಲರಿಗೂ ಪರಿಚಯಿಸುತ್ತಿದ್ದರು.
ಎಷ್ಟರ ಮಟ್ಟಿಗೆ ಅವರ ಕುಟುಂಬದ ಸದಸ್ಯರಂತೆ ಧರ್ಮೆಂದ್ರ ಅವರು ವಿಷ್ಣು ಸರ್ ನ್ನು ಕಾಣುತ್ತಿದ್ದರು. ಧರ್ಮೇಂದ್ರ ಅವರ ಕುಟುಂಬವೂ ಕೂಡ ಚಿತ್ರರಂಗದಲ್ಲಿ ಸಕ್ರಿಯವಾಗಿದೆ ಮಗ ಸನ್ನಿ ಡಿಯೋಲ್, ಬೇಬಿ ಡಿಯೋಲ್ ಹಾಗೂ ಪತ್ನಿ ಹೇಮಮಾಲಿನಿ ಕೂಡ ಕಲಾವಿದರಾಗಿದ್ದಾರೆ. ಹಿಂದಿಯಲ್ಲಿ ಏಕ್ ನಯಾ ಇತಿಹಾಸ್ (EK Naya Ithihas) ಚಿತ್ರದಲ್ಲಿ ಹೇಮಾ ಮಾಲಿನಿ ಹಾಗೂ ವಿಷ್ಣುವರ್ಧನ್ ಇಬ್ಬರು ಕಾಣಿಸಿಕೊಂಡಿದ್ದಾರೆ.
ಸಿನಿಮಾ ಒಪ್ಪಿಕೊಂಡ ವಿಷ್ಣುವರ್ಧನ್ ಅವರು ಹೇಮಾ ಮಾಲಿನಿ ಅವರ ಜೊತೆ ಬಹಳ ಆತ್ಮೀಯವಾಗಿರುವಂತಹ ಸನ್ನಿವೇಶಗಳಿದ್ದರೆ ನಾನು ಅವರ ಜೊತೆ ಆಕ್ಟ್ ಮಾಡುವುದಿಲ್ಲ ನಾನು ಅವರನ್ನು ಮುಟ್ಟಲು ಸಾಧ್ಯವಿಲ್ಲ ಈ ರೀತಿ ಇರುವ ಚಿತ್ರಗಳಿಗಷ್ಟೇ ಆಕ್ಟ್ ಮಾಡುತ್ತೇನೆ ಎಂದು ಹೇಳಿದರಂತೆ, ಅದನ್ನು ಕೇಳಿ ಧರ್ಮೇಂದ್ರ ದಂಪತಿಗಳು ನಕ್ಕಿದ್ದರಂತೆ.
ಹಾಗೆಯೇ ಸಿನಿಮಾದಲ್ಲಿ ಕೆಲ ಮಾರ್ಪಾಡು ಮಾಡಿಕೊಂಡು ಆ ಸಿನಿಮಾ ಮಾಡಲಾಗಿತ್ತಂತೆ ಇಂತಹ ಒಂದು ವಿಶೇಷವಾದ ಅನುಬಂಧವನ್ನು ಧರ್ಮೇಂದ್ರ ಕುಟುಂಬದ ಜೊತೆ ವಿಷ್ಣು ದಾದಾ ಹೊಂದಿದ್ದರು ಎನ್ನುವುದನ್ನು ಅವರ ಆಪ್ತ ಮೂಲಗಳು ಹೇಳುತ್ತಿವೆ.