ಇಂದು ಕನ್ನಡ ಸಿನಿಮಾ ಇಂಡಸ್ಟ್ರಿಯ ಬ್ಯಾಕ್ ಕೋಬ್ರ ಎಂದು ಕರೆಸಿಕೊಂಡಿರುವ ದುನಿಯಾ ವಿಜಯ್ (Duniya Vijay Birthday) ಅವರಿಗೆ ಹುಟ್ಟು ಹಬ್ಬದ ಸಂಭ್ರಮ. ಬಹಳ ವಿಭಿನ್ನ ರೀತಿಯಲ್ಲಿ ತಮ್ಮ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳಲು ಇಚ್ಚಿಸಿದ್ದ ದುನಿಯಾ ವಿಜಯ್ ಅವರು ಈ ಬಾರಿ ತಮ್ಮ ಹುಟ್ಟೂರಾದ ಕುಂಬಾರಹಳ್ಳಿಯಲ್ಲಿ ಜನ್ಮದಿನ ಆಚರಿಸಿಕೊಂಡಿದ್ದಾರೆ.
ದುನಿಯಾ ವಿಜಿ ಅಭಿಮಾನಿಗಳು ಭಾಗಿಯಾಗಿ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆಗೈದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ದುನಿಯಾ ವಿಜಯ್ ಅವರ ಹುಟ್ಟುಹಬ್ಬಕ್ಕೆ ವಿಶೇಷ ಅಭಿಮಾನಿಯೊಬ್ಬರಿಗೆ ತಾವೇ ಹುಟ್ಟು ಹಬ್ಬದ ಗಿಫ್ಟ್ ಕೊಟ್ಟಿರುವ ವಿಡಿಯೋ ಒಂದು ಹರಿದಾಡುತ್ತಿದೆ.
ತಮ್ಮನ್ನು ನೋಡಲು ಬಂದ ವಿಕಲಚೇತನ ಹೆಣ್ಣು ಮಗುವಿಗೆ ಕೊರಳಿನ ಸರ ತೊಡಿಸಿ ಕೈಗೆ ಹಣ ಕೊಟ್ಟು ದೊಡ್ಡತನ ಮೆರೆದಿದ್ದಾರೆ ಭೀಮ. ದುನಿಯಾ ವಿಜಯ್ ಅವರನ್ನು ನೋಡಿ ಹುಟ್ಟು ಹಬ್ಬದ ಶುಭಾಶಯ ಕೋರಲು ಮಹಿಳಾ ಅಭಿಮಾನಿಯೊಬ್ಬರು ತಮ್ಮ ವಿಕಲಚೇತನ ಮಗುವನ್ನು ಎತ್ತಿಕೊಂಡು ಬಂದಿದ್ದರು.
ಸ್ಟಾರ್ ಎನ್ನುವ ಅಹಂಕಾರ ಯಾರಿಗೂ ಬರಬಾರದು, ಡೈರೆಕ್ಟಾಗಿ ಶಿವಣ್ಣ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ ಗೊತ್ತಾ.?
ಬಹುಶಃ ಆ ಮಗು ಕೂಡ ದುನಿಯಾ ವಿಜಯ್ ಅವರ ಅಭಿಮಾನಿಯಾಗಿದ್ದಿಬಹುದು. ಮಗುವಿನ ಸ್ಥಿತಿ ನೋಡಿ ಮರುಗಿದ ನಟ ವಿಜಯ್ ಅವರು ಮಗುವಿಗೆ ಆಶೀರ್ವದಿಸಿ ತಮ್ಮ ಕೊರಳಿನಲ್ಲಿದ್ದ ಸರವನ್ನು ಬಿಚ್ಚಿ ಮಗುವಿಗೆ ಹಾಕಿದ್ದಾರೆ ಮತ್ತು ಮಗುವಿನ ತಾಯಿಗೆ ಇದು ಯಾವಾಗಲೂ ಮಗುವಿನ ಕೊರಳಿನಲ್ಲಿಯೇ ಇರಬೇಕು ಎಂದು ಹೇಳಿದ್ದಾರೆ.
ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಈ ನಡವಳಿಕೆ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಷ್ಟು ಮಾತ್ರವಲ್ಲದೆ ಕಳೆದೆರಡು ದಿನಗಳ ಹಿಂದೆ ಇದೇ ರೀತಿಯ ಮತ್ತೊಂದು ಜನ ಸೇವೆ ಮಾಡಿದ್ದರು. ಹುಟ್ಟು ಹಬ್ಬದ ಪ್ರಯುಕ್ತವಾಗಿ ತಮ್ಮ ಗ್ರಾಮದಿಂದ ಯಾವುದೋ ತಪ್ಪಿನ ಕಾರಣಗಳಿಂದಾಗಿ ಜೈಲು ಸೇರಿ ದಂಡ ಕಟ್ಟಲಾಗದೆ ಹೆಚ್ಚಿನ ಶಿಕ್ಷೆ ಅನುಭವಿಸುತ್ತಿದ್ದ ಆರು ಜನ ಕೈದಿಗಳಿಗೆ ದಂಡ ಕಟ್ಟಿ ಕಾರಾಗೃಹದಿಂದ ಬಿಡಿಸಿ ಬಿಡುಗಡೆಯ ಭಾಗ್ಯ ಒದಗಿಸಿದ್ದರು.
ಇದರಲ್ಲಿ ಮಹಿಳಾ ಕೈದಿಗಳು ಕೂಡ ಸೇರಿದ್ದರು, ಬಿಡುಗಡೆಗೊಂಡವರು ಬಹಳ ಧನ್ಯತಾ ಭಾವದಿಂದ ಧನ್ಯವಾದ ಅರ್ಪಿಸುತ್ತಿದ್ದ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ರೀತಿಯ ಒಂದು ವಿಶೇಷ ಚಿಂತನೆ ಮಾಡುವ ಮೂಲಕ ಆ ಕೈದಿಗಳಿಗೆ ಹೊಸ ಜೀವನ ಆರಂಭಿಸುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದೇ ಹೇಳಬಹುದು.
ಇಂಡಸ್ಟ್ರಿಗೆ ನನ್ನ ಮಗಳು ಕೂಡ ಎಂಟ್ರಿ ಕೊಡುತ್ತಿದ್ದಾಳೆ, ಬರ್ತ್ ಡೇ ದಿನ ಅಫಿಷಿಯಲ್ ಆಗಿ ಅನೌನ್ಸ್ ಮಾಡಿದ ದುನಿಯಾ ವಿಜಯ್.!
ಇದು ಹೊಸದಲ್ಲಾ ಈ ಹಿಂದೆಯೂ ಕೂಡ ಮೈಸೂರಿನಲ್ಲಿ ಹಲವಾರು ಕೈದಿಗಳಿಗೆ ದಂಡ ಕಟ್ಟಿ ಬಿಡುಗಡೆ ಮಾಡಿಸಿದ್ದರು. ಸಿನಿಮಾದ ಜೊತೆ ಸಮಾಜದ ಬಡವರ, ನೊಂ’ದ ವರ್ಗದ ಮೇಲೆ ಅಪಾರ ವಾತ್ಸಲ್ಯ ಹೊಂದಿರುವ ದುನಿಯಾ ವಿಜಯ್ ಅವರು ಈ ರೀತಿ ಸಾಮಾನ್ಯರಲ್ಲಿ ಸಾಮಾನ್ಯವಾಗಿ ಬದುಕುತ್ತಾ ಸಾಧ್ಯವಾದಷ್ಟು ಸಮಾಜ ಸೇವೆ ಮಾಡಲು ಬಯಸುತ್ತಾರೆ.
ದುನಿಯಾ ವಿಜಯ್ ಅವರ ಹುಟ್ಟುಹಬ್ಬದ ಅವರ ಬಹು ನಿರೀಕ್ಷಿತ ಚಿತ್ರ ಭೀಮ ಸಿನಿಮಾದ ಟೀಸರ್ ರಿಲೀಸ್ (Bhima teaser Release) ಆಗಿದೆ. ಕಳೆದ ವರ್ಷ ಕೂಡ ತಮ್ಮ ಹುಟ್ಟು ಹಬ್ಬದ ದಿನದಂದು ಫಸ್ಟ್ ಲುಕ್ ಬಿಡುಗಡೆ ಮಾಡಿ ಹುಚ್ಚೆಬ್ಬಿಸಿದ್ದ ಇವರು ಈ ಒಂದು ವರ್ಷದಲ್ಲಿ ಎರಡು ಹಾಡುಗಳನ್ನು ಕೂಡ ಬಿಡುಗಡೆ ಮಾಡಿದ್ದರು.
ಬಹುತೇಕ ಸಿನಿಮಾ ಕಾರ್ಯ ಪೂರ್ತಿಯಾಗಿದ್ದು ಶೀಘ್ರದಲ್ಲೇ ತೆರೆ ಮೆರೆಯುತ್ತಿರುವ ಭರವಸೆಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ. ದು ನಿಯ ವಿಜಯ್ ಅವರಿಗೆ ನಮ್ಮ ಕಡೆಯಿಂದಲೂ ಹುಟ್ಟುಹಬ್ಬದ ಶುಭಾಶಯ ಇನ್ನಷ್ಟು ಕನ್ನಡ ಚಿತ್ರಗಳಲ್ಲಿ ಅವರನ್ನು ನೋಡುವಂತಾಗಲಿ ಎಂದು ಕೇಳಿಕೊಳ್ಳೋಣ ಮತ್ತು ನಿಮಗೆ ದುನಿಯಾ ವಿಜಯ್ ಅವರ ಯಾವ ಸಿನಿಮಾ ಇಷ್ಟ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.