ಚಿತ್ರರಂಗದ ಮತ್ತೊಂದು ಹೊಸ ಪರ್ವ ಶುರುವಾಗಿದೆ ನಮ್ಮ ಕಣ್ಮುಂದೆ ನಾಯಕ ನಟರಾಗಿ ನಟಿಯರಾಗಿ ಮಿಂಚಿದ್ದ ಕಲಾವಿದರ ಮಕ್ಕಳುಗಳು ಕೂಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅನೇಕ ನಾಯಕ ನಟರ ಮಕ್ಕಳು ಈಗಾಗಲೇ ತಾವು ಕೂಡ ಹೀರೋಗಳಾಗಿ ಲಾಂಚ್ ಆಗಿದ್ದರೆ, ಕೆಲವರು ತಂದೆಗೆ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿ ಭಾಗವಾಗಿದ್ದಾರೆ.
ಇದೀಗ ಪ್ರೇಮ್ ಪುತ್ರಿ ಅಮೃತ, ಮಾಲಾಶ್ರೀ ಪುತ್ರಿ ಆರಾಧನಾ ಕೂಡ ಚಂದನವನ ಸೇರಿಕೊಂಡಿದ್ದಾರೆ. ಅವರಂತೆ ಈ ವರ್ಷ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ (Duniya Vijay) ಅವರ ಮಗಳನ್ನು ಕೂಡ ನಾವು ತೆರೆ ಮೇಲೆ ನೋಡಬಹುದಾಗಿದೆ. ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ನಡೆದ ಸಂದರ್ಶನ ಒಂದರಲ್ಲಿ ಮಾಧ್ಯಮ ಮಿತ್ರರೊಂದಿಗೆ ಅಫೀಷಿಯಲ್ ಆಗಿ ದುನಿಯಾ ವಿಜಯ್ ಅವರೇ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಈಗಾಗಲೇ ಸಲಗ ಸಿನಿಮಾದಲ್ಲಿ (Salaga Movie) ದುನಿಯಾ ವಿಜಯ್ ಮಗ ಬಣ್ಣ ಹಚ್ಚಿದ್ದಾರೆ, ಬಾಲ ಕಲಾವಿದನಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಸಾಕಷ್ಟು ಜನರ ಮೆಚ್ಚುಗೆಯನ್ನು ಗಳಿಸಿ ಭವಿಷ್ಯದ ಭರವಸೆಯ ನಾಯಕ ಎನಿಸಿಕೊಂಡಿದ್ದಾರೆ. ಈಗ ಮೊದಲ ಪುತ್ರಿ ಮೋನಿಕ (Duniya Vijay Daughter Monika) ಕೂಡ ಸಿನಿಮಾ ಇಂಡಸ್ಟ್ರಿಯನ್ನು ಆರಿಸಿಕೊಂಡಿದ್ದು ಇದಕ್ಕೆ ಅಪ್ಪನ ಸಂಪೂರ್ಣ ಬೆಂಬಲ ಇದೆಯಂತೆ.
ಮಾಧ್ಯಮ ಮಿತ್ರರೊಬ್ಬರು ಕೇಳಿದ ಪ್ರಶ್ನೆಗೆ ದುನಿಯಾ ವಿಜಯ್ ಈ ರೀತಿ ಉತ್ತರ ಹೇಳಿದ್ದಾರೆ. ನನ್ನ ಮಗಳು ಕೂಡ ಸಿನಿಮಾ ಇಂಡಸ್ಟ್ರಿಗೆ ಬರುತ್ತಿದ್ದಾಳೆ. ನನಗೆ ಅವಳು ಪೂರ್ತಿ ತಯಾರಾಗಿ ಬರಬೇಕು ಎನ್ನುವ ಆಸೆ, ಅದಕ್ಕಾಗಿ ಮುಂಬೈನಲ್ಲಿ ಅನುಪಮ್ ಖೇರ್ ಅವರ ಅಕಾಡೆಮಿಯಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದಾಳೆ.
ಇಲ್ಲಿಯೂ ಕೂಡ ಅನೇಕರ ಬಳಿ ಕ್ಲಾಸ್ ಗೆ ಹೋಗುತ್ತಿದ್ದಾಳೆ, ನಿನಾಸಂ ನಲ್ಲಿ ಗೊತ್ತಿರುವ ಗೆಳೆಯರ ಬಳಗದೊಂದಿಗೆ ರಂಗಭೂಮಿಯನ್ನು ಕೆಲವು ನಾಟಕಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಪಳಗುತ್ತಿದ್ದಾರೆ. ಭೀಮಾ ಸಿನಿಮಾದಲ್ಲೂ (Bhima) ಕೂಡ ನನಗೆ ಮಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಅಪ್ಪ ಮಗಳಾಗಿ ಪಾತ್ರ ಮಾಡಿದ್ದೇವೆ ಅವಳ ಹೆಸರು ಬದಲಾಯಿಸುವುದು ಇದೆ ಅದನ್ನು ಕೂಡ ಮುಂದಗ ಅನೌನ್ಸ್ ಮಾಡುತ್ತೇನೆ, ಚಿತ್ರ ಈಗ ಚಿತ್ರೀಕರಣ ಮುಗಿದಿದ್ದು ಇನ್ನೂ ಅನೇಕ ಕೆಲಸ ಬಾಕಿ ಇದೆ ಶೀಘ್ರದಲ್ಲಿ ಅದರ ಬಗ್ಗೆಯೂ ಕೂಡ ಅನೌನ್ಸ್ ಮಾಡುತ್ತೇನೆ ಎಂದು ಹೇಳಿದ್ದಾರೆ.
ದುನಿಯಾ ವಿಜಯ್ ಅವರ ಬಹು ನಿರೀಕ್ಷಿತ ಚಿತ್ರ ಭೀಮ ಆಗಿದ್ದು ಭೀಮ ಸಿನಿಮಾ ಬಳಿಕ ಕಾಟೇರ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿ ಚಿತ್ರಕಥೆ ಬರೆದಿದ್ದ ಜಡೇಜಾ ಅವರ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾ ಸಹಿ ಮಾಡಿದ್ದಾರಂತೆ, ಅದರ ಬಗ್ಗೆ ಕೂಡ ಮುಂದಿನ ದಿನಗಳು ಹೇಳಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.
ದುನಿಯಾ ವಿಜಯ್ ಅವರು ಈ ಬಾರಿ ಹುಟ್ಟೂರಿನಲ್ಲಿ ತಮ್ಮ ಹುಟ್ಟು ಹಬ್ಬದ ಆಚರಣೆ (Birthday) ಮಾಡಿಕೊಡುತ್ತಿದ್ದಾರೆ. ಬರುವ ಎಲ್ಲಾ ಅಭಿಮಾನಿಗಳು ಕೂಡ ಊಟ ಮಾಡಿಕೊಂಡು ಹೋಗಬೇಕು ಎಂದು ವಿನಂತಿಸಿಕೊಂಡಿದ್ದಾರೆ ಮತ್ತು ಯಾವುದೇ ಕಾರಣಕ್ಕೂ ಯಾರು ಕಟ್ ಔಟ್ ಕಟ್ಟಬಾರದು ಮತ್ತು ಹಾಲಿನ ಅಭಿಷೇಕ ಮಾಡಬಾರದು ಎಂದು ತಾಕೀತು ಕೂಡ ಮಾಡಿದ್ದಾರೆ.
ನಿಮ್ಮೆಲ್ಲರ ಪ್ರೀತಿ ಹಾರೈಕೆ ಇದ್ದರೆ ಸಾಕು ಎಂದು ಕೇಳಿಕೊಂಡಿದ್ದಾರೆ. ಪ್ರತಿ ವರ್ಷ ಕೂಡ ವಯಸ್ಸಾಗುತ್ತಿದ್ದಂತೆ ರಿವರ್ಸ್ ಏಜಿಂಗ್ ಗೆ ದುನಿಯಾ ವಿಜಯ್ ಹೋಗುತ್ತಿತ್ತು ಇನ್ನಷ್ಟು ಯಂಗ್ ಹಾಗೂ ಎನರ್ಜಿಯಾಗಿ ತೆರೆ ಮೇಲೆ ಮಿಂಚುತ್ತಿದ್ದಾರೆ. ಅವರ ಎಲ್ಲ ಪ್ರಾಜೆಕ್ಟ್ ಗಳಿಗೂ ಶುಭವಾಗಲಿ ಎಂದು ನಾವು ಸಹ ಹರಸೋಣ