ಸ್ಲಂ ನಲ್ಲಿದ್ದ ಶ್ರೀರಾಮುಲುನ ದೊಡ್ಡ ನಾಯಕನಾಗಿ ಮಾಡಿದ್ದು ನಾನು ಬಹಿರಂಗ ಹೇಳಿಕೆ ಕೊಟ್ಟ – ಜನಾರ್ದನ ರೆಡ್ಡಿ.!
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ (Valmiki jayanthi) ಪ್ರಯುಕ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಈ ಸಮಾರಂಭಕ್ಕೆ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಗಣಿ ಉದ್ಯಮಿ ಜನಾರ್ಧನ ರೆಡ್ಡಿಯವರು (Janardana reddy) ವಾಲ್ಮೀಕಿ ಸಮುದಾಯವನ್ನು ಕುರಿತು ಭಾಷಣ ಮಾಡಿದ್ದಾರೆ. ಭಾಷಣದ ಮಧ್ಯದಲ್ಲಿ ವಾಲ್ಮೀಕಿ ಜನಾಂಗದ ಅಶೋತ್ತರಗಳ ಬಗ್ಗೆ ಸ್ಪಂದಿಸಿದ ಅವರು ವಾಲ್ಮೀಕಿ ಭವನ ನಿರ್ಮಾಣದ ಬಗ್ಗೆ, ವಾಲ್ಮಿಕಿ ನಗರ ಕಟ್ಟುವುದರ ಬಗ್ಗೆ ಮತ್ತು ವಾಲ್ಮೀಕಿ ಕಂಚಿನ ಪುತ್ಥಳಿ ನಿರ್ಮಾಣದ ಯೋಜನೆ ಬಗ್ಗೆ, ಅಂಜನಾದ್ರಿಯಲ್ಲಿ ದೇವಾಲಯ ಮತ್ತು 5000 ಆಸನಗಳ…