ಪತಿ ಪತ್ನಿ ಸಂಬಂಧ ಎನ್ನುವುದು ಬಹಳ ವಿಶೇಷವಾದ ಸಂಬಂಧ. ಏಕೆಂದರೆ ಅಲ್ಲಿಯವರೆಗೂ ಕೂಡ ಪರಸ್ಪರ ಬೇರೆ ಬೇರೆ ವ್ಯಕ್ತಿತ್ವ ಹಾಗೂ ಬೇರೆ ಬೇರೆ ವಾತಾವರಣದಲ್ಲಿ ಬೆಳೆದಿದ್ದ ಇಬ್ಬರೂ ಇನ್ನು ಮುಂದೆ ಎರಡು ದೇಹ ಒಂದು ಆತ್ಮವಾಗಿ ಬದುಕುವ ಒಪ್ಪಂದ ವಿವಾಹ. ಮದುವೆ ಆದ ಮೇಲೆ ಸಂಸಾರದಲ್ಲಿ ನಾನಾ ಕಾರಣಕ್ಕಾಗಿ ಅಪಸ್ವರಗಳು ಮೂಡುತ್ತದೆ.
ಪರಸ್ಪರ ಹೊಂದಾಣಿಕೆ ಮೂಡಿ ಇಬ್ಬರ ನಡುವೆ ಬಾಂಧವ್ಯ ಗಟ್ಟಿಯಾಗುವವರೆಗೂ ಕೂಡ ಸರಸ, ವಿರಸ, ಕೋಪ, ಮನಸ್ತಾಪ, ನಗು, ಅಳು, ವಾದ, ಪ್ರತಿವಾದ, ಆರೋಪ ಎಲ್ಲವೂ ಇದ್ದೇ ಇರುತ್ತದೆ. ಆದರೆ ಇದರ ಅಂತ್ಯ ಸುಖಾಂತ್ಯವಾಗಿರಬೇಕು ಎನ್ನುವುದಷ್ಟೇ ಕುಟುಂಬದವರ ಹಾಗೂ ಸ್ನೇಹಿತರ ಆಶಯ.
ಮದುವೆ ಆಗುವ ಸಂದರ್ಭದಲ್ಲಿ ಪ್ರತಿಯೊಬ್ಬರು ಕೂಡ ತಾವು ಜೀವನ ಪೂರ್ತಿ ಅವರ ಜೊತೆ ಕಳೆಯಬೇಕು ಎನ್ನುವ ಉದ್ದೇಶದಿಂದ, ಆ ನಿರ್ಧಾರದಿಂದಲೇ ಒಪ್ಪಿಕೊಂಡು ವಿವಾಹವಾಗಿರುತ್ತಾರೆ. ಆದರೆ ಜೊತೆಗಿದ್ದಾಗ ಬರುವ ಸಣ್ಣ ಪಟ್ಟ ಕೋಪಗಳು ಇಗೋ ಕಾರಣದಿಂದಾಗಿ ಅತಿರೇಕಕ್ಕೆ ಏರಿ ಬೇರೆಯಾಗುವಂತೆ ಮಾಡುತ್ತದೆ.
ಕೆಲವೊಮ್ಮೆ ಹೆಂಡತಿ ಮುನಿಸಿಕೊಂಡು ತವರು ಮನೆಗೆ ಹೋದರೆ, ಕೆಲವೊಂದು ಬಾರಿ ಪತಿ ಮೇಲೆ ಕಂಪ್ಲೇಂಟ್ ಕೊಡಲು ಪೊಲೀಸ್ ಸ್ಟೇಷನ್ ಗೆ ಹೋಗುತ್ತಾರೆ, ಕೆಲವರು ಇನ್ನು ಮುಂದೆ ಇವರ ಜೊತೆ ಬದುಕಲು ಸಾಧ್ಯವೇ ಇಲ್ಲ ಎಂದು ವಿಚ್ಛೇದನ ಬಯಸಿ ಕೋರ್ಟ್ ಮೆಟ್ಟಿಲು ಏರುತ್ತಾರೆ ಆದರೆ ತೀರ್ಮಾನ ಆಗುವ ಮುನ್ನ ಇಬ್ಬರಿಗೂ ಕೂಡ ಸಾಕಷ್ಟು ಸಮಯಾವಕಾಶ ಇರುತ್ತದೆ.
ಕ್ಷಣ ಕಾಲದ ಕೋಪಕ್ಕೆ ಅಷ್ಟು ದಿನಗಳ ಸಿಹಿ ಅನುಭವಗಳನ್ನು ಉಳಿಸಿಕೊಳ್ಳುವ ಅಥವಾ ನಾಶ ಮಾಡುವ ಆಯ್ಕೆ ಅವರದ್ದೇ ಆಗಿರುತ್ತದೆ. ಇಬ್ಬರಲ್ಲಿ ಒಬ್ಬರು ತಮ್ಮ ಇಗೋ ಬಿಟ್ಟು ಸ್ವಲ್ಪ ಕರಗಿದರು ಕೂಡ ಮತ್ತೊಬ್ಬರ ಅವರಿಗಿಂತ ಕೆಳಗಿಳಿದು ಒಪ್ಪಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಅಂತಹದೇ ಒಂದು ಘಟನೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಗಂಡನ ಮೇಲೆ ಕೋಪಗೊಂಡು ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದ ಪತ್ನಿಯು ಪತಿ ಹಾಡಿದ ಹಾಡಿಗೆ ಕರಗಿ ಮನಸ್ತಾಪ ಮರೆತು ಅಪ್ಪಿ ಕಣ್ಣೀರಿಟ್ಟಿದ್ದಾರೆ. ಅಪರೂಪದಲ್ಲಿ ಬಹಳ ಅಪರೂಪ ಆಗಿರುವ ಈ ಘಟನೆಯ ವಿಶೇಷ ಕ್ಷಣಗಳನ್ನು ಪೊಲೀಸ್ ಠಾಣೆಯ ಪೊಲೀಸರು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಹೆಂಡತಿ ಕೊಟ್ಟ ಕಂಪ್ಲೇಂಟ್ ಮೇರಿಗೆ ಪೊಲೀಸ್ ಠಾಣೆಗೆ ಗಂಡನನ್ನು ಕರೆಸಿದ ಪೊಲೀಸರು ವಿಚಾರಣೆ ಮಾಡಬೇಕು ಎನ್ನುವ ಸಮಯದಲ್ಲಿ ಗಂಡ ಒಂದು ಅವಕಾಶ ಕೇಳಿ ಆತ ಏನು ಮಾಡದೆ ಬಾಲಿವುಡ್ ನ ಬದ್ಲಾಪುರ ಸಿನಿಮಾದ ಜೀನಾ-ಜೀನಾ ಹಾಡು ಹಾಡಿದ್ದಾನೆ. ಈ ಹಾಡು ಬಹಳ ಅರ್ಥಪೂರ್ಣವಾಗಿದ್ದು ಅದು ಅವರಿಬ್ಬರ ನಡುವೆ ಇದ್ದ ಒಂದು ಕನೆಕ್ಷನ್ ಆಗಿದೆ ಪತ್ನಿ ಘಳಿಗೆಯಲ್ಲಿ ಕರಗಿ ಪತಿಯನ್ನು ಅಪ್ಪಿಕೊಂಡಿದ್ದಾರೆ.
https://x.com/CctvPicks/status/1712595349133525315?s=20
ಅವರಿಬ್ಬರ ನಡುವೆ ಇದ್ದ ಎಮೋಷನಲ್ ಕನೆಕ್ಷನ್ ಆ ಹಾಡಾಗಿತ್ತು, ಹೀಗೆ ಪ್ರತಿಯೊಬ್ಬ ಪ್ರೇಮಿ ಹಾಗೂ ದಂಪತಿಗಳ ನಡುವೆ ಅವರದ್ದೇ ಆದ ಒಂದು ವಿಶೇಷವಾದ ಸೈನ್ ಕನೆಕ್ಷನ್ ಇದ್ದೇ ಇರುತ್ತದೆ. ಅದು ಎಂತಹದ್ದೇ ಮನಸ್ತಾಪವಿದ್ದರೂ ಕೋಪವಿದ್ದರು ಗಲಾಟೆಗೆ ಇದ್ದರೂ ಆ ವಿಷ ಸಮಯ ಕಳೆದಾಗ ಅವರನ್ನು ಕರಗಿಸಲು ತಾವು ಅದರ ಪ್ರಯೋಗ ಮಾಡಿದರೆ ಸಾಕು, ಪರಿಸ್ಥಿತಿ ಬದಲಾಗುತ್ತದೆ. ಈ ವಿಡಿಯೋ ಹಂಚಿಕೊಂಡಿರುವ ಪೊಲೀಸರ ಉದ್ದೇಶ ಕೂಡ ಇದೆ ಆಗಿದೆ. ಈ ವೀಡಿಯೋ ಇನ್ನು ಹಲವರಿಗೆ ಸ್ಪೂರ್ತಿಯಾಗಿ ಇಗೋ ಪಕ್ಕಕ್ಕಿಟ್ಟು ದಾಂಪತ್ಯವನ್ನು ಸರಿಪಡಿಸಿಕೊಳ್ಳಲಿ ಎನ್ನುವುದಷ್ಟೇ ನಮ್ಮ ಆಶಯವಾಗಿದೆ.