ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ (Valmiki jayanthi) ಪ್ರಯುಕ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಈ ಸಮಾರಂಭಕ್ಕೆ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಗಣಿ ಉದ್ಯಮಿ ಜನಾರ್ಧನ ರೆಡ್ಡಿಯವರು (Janardana reddy) ವಾಲ್ಮೀಕಿ ಸಮುದಾಯವನ್ನು ಕುರಿತು ಭಾಷಣ ಮಾಡಿದ್ದಾರೆ.
ಭಾಷಣದ ಮಧ್ಯದಲ್ಲಿ ವಾಲ್ಮೀಕಿ ಜನಾಂಗದ ಅಶೋತ್ತರಗಳ ಬಗ್ಗೆ ಸ್ಪಂದಿಸಿದ ಅವರು ವಾಲ್ಮೀಕಿ ಭವನ ನಿರ್ಮಾಣದ ಬಗ್ಗೆ, ವಾಲ್ಮಿಕಿ ನಗರ ಕಟ್ಟುವುದರ ಬಗ್ಗೆ ಮತ್ತು ವಾಲ್ಮೀಕಿ ಕಂಚಿನ ಪುತ್ಥಳಿ ನಿರ್ಮಾಣದ ಯೋಜನೆ ಬಗ್ಗೆ, ಅಂಜನಾದ್ರಿಯಲ್ಲಿ ದೇವಾಲಯ ಮತ್ತು 5000 ಆಸನಗಳ ಕನ್ವೆನ್ಷನ್ ಹಾಲ್ ನಿರ್ಮಿಸಿ ಕೊಡುವುದರ ಬಗ್ಗೆ ಭರವಸೆಯ ಮಾತುಗಳನ್ನಾಡಿ.
ಇದೇ ಸಮಯದಲ್ಲಿ ತಮಗೂ ಹಾಗೂ ವಾಲ್ಮೀಕಿ ಜನಾಂಗಕ್ಕೆ ಇರುವ ಋಣಾನುಬಂಧದ ಬಗ್ಗೆ ಮಾತನಾಡುವಾಗ ಮಾತಿನ ಬರದಲ್ಲಿ ಸ್ಲಂ ನಲ್ಲಿ ಇದ್ದ ಶ್ರೀರಾಮುಲುನ (Shree Ramulu) ಶಾಸಕ ಮಾಡಿದ್ದು ನಾನು ಎಂದು ಹೇಳಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ ಅದೇ ರೀತಿ ವಾಲ್ಮೀಕಿ ಅವರು ಬರೆದಿರುವ ವಾಲ್ಮೀಕಿ ರಾಮಾಯಣದ ಪ್ರಕಾರ ಕಿಷ್ಕಿಂಧಾದಲ್ಲಿ ಬಂದು ರಾಮ ಲಕ್ಷ್ಮಣರು ನಾಲ್ಕು ತಿಂಗಳ ಕಾಲ ಇದ್ದು ಚಾತುರ್ಮಾಸ ವ್ರತ ಆಚರಿಸಿ ಸುಗ್ರೀವನಿಗೆ ಪಟ್ಟಾಭಿಷೇಕ ಮಾಡಿ, ಹನುಮಂತನ ಸಹಕಾರದಿಂದ ಸೀತಾಮಾತೆಯನ್ನು ಬಿಡಿಸಿಕೊಂಡು ಬಂದರು.
ಹಾಗಾಗಿ ಹನುಮಂತ ಜನಿಸಿದ ಅಂಜನಾದ್ರಿ (Anjanadri) ಅಭಿವೃದ್ಧಿಗೆ ಶ್ರಮಿಸುತ್ತೇನೆ. ಈಗಾಗಲೇ ಹೊಸಪೇಟೆಯಲ್ಲಿ ಆರ್ಟಿಟೆಕ್ಟ್ ಗಳ ಜೊತೆ ಮತುಕತೆ ಆಗಿದೆ, ದೇವಾಲಯ ನಿರ್ಮಾಣದ ಜೊತೆಗೆ 5000 ಆಸನಗಳ ಸಾಮರ್ಥ್ಯವುಳ್ಳ ಕನ್ವೇಷನ್ ಹಾಲ್ ನಿರ್ಮಿಸುತ್ತೇವೆ. ಇಷ್ಟು ಬೃಹತ್ ಕನ್ವೆನ್ಷನ್ ಹಾಲ್ ಬೆಂಗಳೂರು ಮಾತ್ರವಲ್ಲ ರಾಜ್ಯದಲ್ಲೇ ಇಲ್ಲ ಎಂದು ಹೇಳಿದರು. ಮುಂದುವರೆದು ರಾಜಕೀಯ ವಿಷಯವನ್ನು ಮಾತನಾಡಿದ ಅವರು ನಾಯಕ ಸಮುದಾಯದಲ್ಲಿ ಅತ್ಯಂತ ಬಡವರು ಇದ್ದಾರೆ ಎಂದು ಹೇಳುತ್ತಾರೆ.
ಹೀಗೆ ನೋಡುವುದಾದರೆ ಬಳ್ಳಾರಿಯ ಸ್ಲಂ ನಲ್ಲಿದ್ದ ವ್ಯಕ್ತಿಯನ್ನು ಶಾಸಕನಾಗಿ ಮಾಡಿದ ಕರ್ನಾಟಕದಲ್ಲಿ ದೊಡ್ಡ ನಾಯಕನನ್ನಾಗಿ ಬೆಳೆಸಿದ ಹೆಮ್ಮೆ ನನಗಿದೆ. ಸಿರಗುಪ್ಪಾ ಕ್ಷೇತ್ರದ ಸೋಮಲಿಂಗಪ್ಪ ಅವರನ್ನು ಶಾಸಕರನ್ನಾಗಿ ಮಾಡಿದ್ದು ನಾನು, ST ಗೆ ಮೀಸಲಾತಿ ಕ್ಷೇತ್ರ ಇಲ್ಲದ ಸಂದರ್ಭದಲ್ಲೂ ನಾಯಕ ಸಮಾಜದವರನ್ನು ಶಾಸಕರನ್ನಾಗಿ ಮಾಡಿದ್ದೇನೆ, ನಾಯಕ ಸಮುದಾಯದವರನ್ನು ರಾಜಕೀಯವಾಗಿ ಎತ್ತರಕ್ಕೆ ಬೆಳೆಸಲು ನಾನು ಎಷ್ಟು ಶ್ರಮ ಪಟ್ಟಿದ್ದೇನೆ ನಿಮಗೆ ಗೊತ್ತೇ ಇದೆ ಎಂದು ಹೇಳಿದರು.
ಬಿ.ಶ್ರೀರಾಮುಲು ಹಾಗೂ ನನಗೆ ರಾಜಕೀಯವಾಗಿ ಏನೇ ಆಗಿರಬಹುದು ಕೆಲವು ರಾಜಕೀಯ ಸ್ವಾರ್ಥ ಹಾಗೂ ಇನ್ನಿತರ ಕಾರಣಗಳಿಂದಾಗಿ ಅವರು BJP ಯಲ್ಲಿ ಉಳಿದುಕೊಳ್ಳುವಂತಾಯಿತು. ಆದರೆ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ (Yedyurappa) ಗುಲ್ಬರ್ಗಾ ಕ್ಯಾಬಿನೆಟ್ ನಲ್ಲಿ ರಾಜ್ಯದಲ್ಲಿ ವಾಲ್ಮೀಕಿ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ರಾಜ್ಯಾದ್ಯಂತ ಆಚರಿಸಲು ಹಾಗೂ ಸರಕಾರಿ ರಜೆ ಘೋಷಿಸಬೇಕೆಂದು CM ಯಡಿಯೂರಪ್ಪ ಅವರಿಗೆ ಒತ್ತಾಯಿಸಿದ್ದು ನಾನು.
ಹಾಗೂ ಶ್ರೀರಾಮುಲು, ಇದನ್ನು ತಕ್ಷಣ ಅನುಮತಿಸಿದ ಯಡಿಯೂರಪ್ಪ ಅವರನ್ನು ಕೂಡ ಈ ಕ್ಷಣದಲ್ಲಿ ನಾನು ಸ್ಮರಿಸುತ್ತೇನೆ. ನಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ, ತಾಲೂಕು ಕೇಂದ್ರಗಳಲ್ಲಿ ವಾಲ್ಮೀಕಿ ಭವನ ನಿರ್ಮಾಣದ ಬಗ್ಗೆ ಪ್ರಸ್ತಾಪ ಇಟ್ಟಿದ್ದೆ ಮತ್ತು ವಿಧಾನಸೌಧಕ್ಕೆ ಮುಂದೆ ವಾಲ್ಮೀಕಿ ಅವರ ಪುತ್ತಳಿ ನಿರ್ಮಿಸುವುದಕ್ಕೆ ಮನವಿ ಮಾಡಿದ್ದೆ.
ಈಗ ಬಳ್ಳಾರಿಯಲ್ಲಿ ವಾಲ್ಮೀಕಿ ಅವರ ಕಂಚಿನ ಪ್ರತಿಮೆ ನಿರ್ಮಾಣ ಮಾಡುವುದಕ್ಕೆ ಪ್ಲಾನ್ ಮಾಡುತ್ತಿದ್ದೇನೆ, ವಾಲ್ಮೀಕಿ ನಗರ ಕೂಡ ಕಟ್ಟೋಣ ಈ ರೀತಿ ನನಗೂ ಹಾಗೂ ನಾಯಕ ಜನಾಂಗಕ್ಕೂ ಯಾವುದೇ ಒಂದು ಜನ್ಮದ ಋಣಾನುಬಂಧ ಇರಬೇಕು. ನೀವೆಲ್ಲರೂ ನನ್ನನ್ನು ಬೇರೆ ಎಂದು ಭಾವಿಸಬೇಡಿ, ನಾನು ಸಹ ನಿಮ್ಮೊಳಗೊಬ್ಬನು ನಾನು ಮತ್ತು ವಾಲ್ಮೀಕಿ ಜನಾಂಗ ಬೇರೆ ಬೇರೆ ಅಲ್ಲ ಎಂದು ತಮಗೆ ನಾಯಕ ಜನಾಂಗದ ಬಗ್ಗೆ ಇರುವ ಪ್ರೀತಿ ಅಭಿಮಾನದ ಬಗ್ಗೆ ಮಾತನಾಡಿದರು.