ಪ್ರೀತಿ ಎನ್ನುವುದು ಯಾವಾಗ ಹೇಗೆ ಯಾರ ಮೇಲೆ ಆಗುತ್ತದೆ ಎನ್ನುವುದನ್ನು ಲೆಕ್ಕಾಚಾರ ಹಾಕಲು ಆಗುವುದಿಲ್ಲ ಎಂದು ಹೇಳಲಾಗುತ್ತಿತ್ತು. ಯಾಕೆಂದರೆ ಎಲ್ಲಾ ಭೇದ ಭಾವ ಗಡಿಯನ್ನು ಮೀರಿದ ಪರಿಶುದ್ಧವಾದ ಭಾಂದವ್ಯ ಅದಾಗಿತ್ತು. ಆದರೆ ಲವ್ ಜಿಹಾದ್ (Love Zihad) ಎನ್ನುವ ಶಬ್ದ ಪ್ರೀತಿ ಮೇಲಿದ್ದ ನಂಬಿಕೆಯನ್ನು ಪರೀಕ್ಷಿಸುವಂತೆ, ಅನುಮಾನಿಸುವಂತೆ ಮಾಡುತ್ತಿದೆ.
ಒಂದು ಧರ್ಮದ ಯುವಕರು ಬೇರೆ ಧರ್ಮದ ಹೆಣ್ಣು ಮಕ್ಕಳನ್ನು ಪ್ರೀತಿಸಿ ಮದುವೆಯಾಗುವ ಮುನ್ನ ತಮ್ಮ ಧರ್ಮಕ್ಕೆ ಮತಾಂತರ ಮಾಡುತ್ತಾರೆ. ಹೀಗಾಗಿ ಪ್ರೀತಿಯ ಅಜೆಂಡ ಇದೆ ಇರಬಹುದೇ ಎಂದು ಸಂದೇಹ ಪಡುವಂತಾಗಿದೆ. ಅದರಲ್ಲೂ ಹಿಂದೂ-ಮುಸ್ಲಿಂ (Hindu-Muslim) ವಿಚಾರವಾಗಿ ಇದು ಹೆಚ್ಚು ಚರ್ಚೆಯಲ್ಲಿರುತ್ತದೆ.
ಮುಸ್ಲಿಂ ಯುವಕರು ಮಾತ್ರವಲ್ಲದೇ ಖ್ಯಾತ ನಾಯಕ ನಟರಗಳು ಕೂಡ ಲವ್ ಜಿಹಾದ್ ಮಾಡುತ್ತಾರೆ ಎನ್ನುವ ಸುದ್ದಿಯನ್ನು ಬಾಲಿವುಡ್ ನಲ್ಲಿ (Bollywood actors love jihad) ಘಂಟಾಘೋಶವಾಗಿ ಹೇಳಲಾಗುತ್ತಿದೆ. ಯಾಕೆಂದರೆ ಶಾರುಖ್ ಖಾನ್, ಅಮೀರ್ ಖಾನ್ ಮುಂತಾದ ಎಲ್ಲಾ ಮುಸ್ಲಿಂ ಧರ್ಮದ ನಾಯಕ ನಟರುಗಳು ಕೂಡ ಮದುವೆ ಆಗಿರುವುದು ಹಿಂದೂಗಳನ್ನೇ ಆದರೆ ಇನ್ನೊಂದು ಬಹಳ ಇಂಟರೆಸ್ಟಿಂಗ್ ವಿಚಾರ ಏನೆಂದರೆ ಇವರು ಹಿಂದುಗಳನ್ನು ಮದುವೆಯಾಗಿರುವುದರಿಂದ ಲವ್ ಜಿಹಾದ್ ಅಪವಾದ ಹೊತ್ತಿದ್ದರು.
ಇವರ ಮನೆ ಹೆಣ್ಣು ಮಕ್ಕಳನ್ನು ಹಿಂದೂಗಳ ಮನೆಗೆ ಮದುವೆ ಮಾಡಿಕೊಟ್ಟಿದ್ದಾರೆ. ಲವ್ ಜಿಹಾದ್ ಇವರ ಉದ್ದೇಶವಾಗಿದ್ದರೆ ಈ ರೀತಿ ಯಾಕೆ ಮಾಡಿದರು ಎನ್ನುವ ಅನುಮಾನ ಹುಟ್ಟದೇ ಇರದು ಆದರೂ ಇದರ ಕುರಿತು ಕೆಲವು ಉದಾಹರಣೆಗಳನ್ನು ಅಂಕಣದಲ್ಲಿ ನೀಡಲು ಇಚ್ಚಿಸುತ್ತಿದ್ದೇವೆ. ಯಾವೆಲ್ಲಾ ನಾಯಕನಟರ ಸಹೋದರಿಯರು ಹಾಗೂ ಹೆಣ್ಣು ಮಕ್ಕಳು ಹಿಂದೂ ವರರ ಕೈಹಿಡಿದಿದ್ದಾರೆ ಎನ್ನುವ ವಿವರ ಹೀಗಿದೆ ನೋಡಿ.
● ಸೋಹಾ ಅಲಿ ಖಾನ್ ಬಾಲಿವುಡ್ನ ಖ್ಯಾತ ನಟ ಸೈಫ್ ಅಲಿ ಖಾನ್ ರ ಸಹೋದರಿ. ಈಕೆ ಕೂಡ ಬಾಲಿವುಡ್ ನಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದರು. 2015ರಲ್ಲಿ ಹಿಂದೂ ನಟನಾದ ಕೃಣಾಲ್ ಖೇಮು ಜೊತೆ ಮದುವೆಯಾದ ಸೋಹಾ ಅಲಿ ಖಾನ್ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇನಾಯಾ ಖೇಮು ಎನ್ನುವ ಹೆಣ್ಣು ಮಗಳನ್ನು ಪಡೆದಿದ್ದಾರೆ.
● ಅಲವೀರಾ ಖಾನ್ ಸಲ್ಮಾನ್ ಖಾನ್ ಹಾಗು ಸೋಹೈಲ್ ಖಾನ್ ರ ಸಹೋದರಿಯಾಗಿದ್ದಾರೆ. ಮುಸ್ಲಿಂ ಕುಟುಂಬಕ್ಕೆ ಸೇರಿರುವ ಆಲವೀರಾ ಖಾನ್ ಕೂಡ 1995 ರಲ್ಲಿ ಬಾಲಿವುಡ್ ನಲ್ಲಿ ಫೇಮಸ್ ಹೀರೋ ಆಗಿದ್ದ ಅತುಲ್ ಜೊತೆ ವಿವಾಹವಾಗಿ ನಂತರ ಹಿಂದೂವಾಗಿ ಬದಲಾಗಿದ್ದಾರೆ.
● ಅರ್ಪಿತಾ ಖಾನ್ ಕೂಡ ಸಲ್ಮಾನ್ ಖಾನ್ನ ತಂಗಿಯಾಗಿದ್ದಾಳೆ. ಅರ್ಪಿತಾ ಖಾನ್ ಸಲ್ಮಾನ್ ಖಾನ್ ರ ಹೊಣೆಗಾರಿಕೆಯಲ್ಲಿ ಬೆಳೆದಿರುವ ಮೂಲತಃ ಹಿಂದು ಕುಟುಂಬಕ್ಕೆ ಸೇರಿದ ಸಾಕು ತಂಗಿಯಾಗಿದ್ದಾರೆ. ನಟ ಆಯುಷ್ ಶರ್ಮಾ ಜೊತೆ 2014ರಲ್ಲಿ ವಿವಾಹವಾಗಿ ಮತ್ತೆ ಹಿಂದು ಕುಟುಂಬವನ್ನೇ ಸೇರಿದ್ದಾರೆ. ಇವರಿಬ್ಬರಿಗೂ ಹೆಣ್ಣು ಮಗುವಿದ್ದು ಅಹಿಲ್ ಶರ್ಮ ಎಂದು ಹೆಸರಿಡಲಾಗಿದೆ.
● ಬಾಲಿವುಡ್ನ ಖ್ಯಾತ ನಟ ಅಮೀರ್ ಖಾನ್ ಲವ್ ಜಿಹಾದ್ನ ಬ್ರ್ಯಾಂಡ್ ಅಂಬಾಸಿಡರ್ ಎನಿಸಿದ್ದಾರೆ. ಹಿಂದೂ ನಟಿಯರನ್ನು ಮದುವೆಯಾಗಿ ಡಿ’ವೋ’ರ್ಸ್ ಕೊಡುವುದು ಇವರ ಚಾಳಿ ಎಂದು ಅನೇಕರ ಕೋ’ಪಕ್ಕೆ ತುತ್ತಾಗಿದ್ದಾರೆ. ಆದರೆ ತನ್ನ ತಂಗಿಯನ್ನ ನಿಕಹತ್ ಖಾನ್ ರನ್ನು ಸಂತೋಷ್ ಎಂಬ ಹಿಂದೂ ವ್ಯಕ್ತಿಯ ಜೊತೆ ಮದುವೆ ಮಾಡಿಸಿದ್ದಾರೆ.
● ರಿತಿಕ್ ರೋಷನ್ ಹಿಂದೂ ನಟ ಆದರೆ ಇವರು ಬಗ್ಗೆ ಮದುವೆಯಾಗಿದ್ದ ಸುಜೈನ್ ಖಾನ್ ಬಾಲಿವುಡ್ ನಟ ಸಂಜಯ್ ಖಾನ್ ರ ಮಗಳಾಗಿದ್ದಾರೆ. ಆದರೆ ಈಗ ಇವರಿಬ್ಬರ ನಡುವೆ ವಿ’ಚ್ಛೇ’ದ’ನವಾಗಿದೆ.