ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು (Kicha Sudeep) ನಟನೆ ಮಾತ್ರವಲ್ಲದೆ ನಿರ್ದೇಶನ, ನಿರ್ಮಾಣ, ಕ್ರಿಕೆಟ್, ಅಡುಗೆ, ಸಂಗೀತ ಹೀಗೆ ಹಲವು ಕ್ಷೇತ್ರಗಳಲ್ಲಿ ಪರಿಣಿತಿ ಪಡೆದಿರುವ ಸಕಲ ಕಲಾವಲ್ಲಭ. ಅದರೊಂದಿಗೆ ಇವರ ನಿರೂಪಣೆ ಶೈಲಿಯೂ ಕೂಡ ಬಹಳ ವಿಭಿನ್ನ ಹಾಗಾಗಿ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಗೆ (Bigboss) ಸುದೀಪ್ ರ ನಿರೂಪಣೆ (anchor) ಕಾರಣದಿಂದಲೇ ಫಿದಾ ಆಗಿರುವವರು ಇದ್ದಾರೆ ಎಂದೇ ಹೇಳಬಹುದು.
ಮನೆ ಒಳಗೆ ಆಡುವುದು ಕಂಟೆಸ್ಟೆಂಟ್ ಗಳೇ ಆದರೂ ಇವರಿಗೆಲ್ಲಾ ಮೇಸ್ಟ್ರಂತೆ ವೀಕೆಂಡ್ನಲ್ಲಿ ಪಂಚಾಯಿತಿ ಮಾಡಲು ಬರುವ ಕಿಚ್ಚನ ಎಪಿಸೋಡ್ಗಳು ಇನ್ನೂ ಹೆಚ್ಚಿನ TRP ಕೊಡುವ ಎಪಿಸೋಡ್ ಗಳಾಗಿವೆ ಎನ್ನುವುದರಲ್ಲಿ ಅನುಮಾನವಿಲ್ಲ. ಮನೆಯವರಿಗೆ ನೋಡುಗರ ಅಭಿಪ್ರಾಯ ಏನಿದೆ ಎನ್ನುವುದನ್ನು ತಲುಪಿಸುವ ರಾಯಭಾರಿಯಾಗಿ ಬಿಗ್ ಬಾಸ್ ಕಾರ್ಯಕ್ರಮದ ಸಾರಥ್ಯ ವಹಿಸಿದ್ದಾರೆ ಪೈಲ್ವಾನ್.
ಮನೆಯೊಳಗಿನ ಗಲಾಟೆ ಮನಸ್ತಾಪಗಳಿಗೆ ತಮ್ಮ ಖಡಕ್ ಮಾತುಗಳಿಂದ ಚುರುಕು ಮುಟ್ಟಿಸುತ್ತಿದ್ದ ಕಿಚ್ಚ ಸುದೀಪ್ ಅವರು ಇದುವರೆಗೆ ಯಾರಿಗೂ ಹೆಚ್ಚು ವಾಲದೇ ಯಾರನ್ನು ನಿರ್ಲಕ್ಷ್ಯ ಮಾಡದೆ ಎಲ್ಲವನ್ನು ಸರಿಯಾಗಿ ಸಂಭಾಳಿಸಿಕೊಂಡು ಕುಗ್ಗಿದವರಿಗೆ ಸ್ಥೈರ್ಯ, ಮೆರೆದವರಿಗೆ ಮಾತಿನ ಚಾಟಿ ಬೀಸುತ್ತಿದ್ದರು.
ಅದೇ ರೀತಿಯಾಗಿ ಈ ಬಾರಿಯ ಸೀಜನ್ 10ರ ಮೂರನೇ ವಾರದ ಪಂಚಾಯಿತಿಯಲ್ಲಿ ಸ್ಪರ್ಧಿಗಳ ಸಪ್ಪೆ ಆಟದ ಬಗ್ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡು ಪ್ರತಿಯೊಬ್ಬರೂ ಕೂಡ ಹೊರಗೆ ಹೇಗೆ ಬಿಂಬಿತವಾಗಿದ್ದಾರೆ ಎನ್ನುವುದನ್ನು ಅರ್ಥ ಮಾಡಿಸುವ ಸಲುವಾಗಿ ದಸರಾ ಗಿಫ್ಟ್ ಆಗಿ ಅಭಿಮಾನಿಗಳೇ ಅವರಿಗೆ ಕೊಟ್ಟಿದ್ದ ಗಿಫ್ಟ್ ಗಳನ್ನು ಕಳುಹಿಸಿ ವ್ಯಕ್ತಿತ್ವಗಳಿಗೆ ಕನ್ನಡಿ ಹಿಡಿದರು.
ಆದರೆ ಇವರ ಸುದೀಪ್ ಅವರ ನಡೆ ಸಮಂಜಸವಾಗಿರಲಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚನ ಮೇಲೆ ನೆಟ್ಟಿಗರು (netigens opinion about this weekend episodes) ಗರಂ ಆಗಿ ಕಮೆಂಟ್ ಮಾಡುತ್ತಿದ್ದಾರೆ. ಶನಿವಾರದ ಎಪಿಸೋಡ್ ನಲ್ಲಿ ಪ್ರತಿಯೊಬ್ಬರಿಗೂ ಕೂಡ ಬುದ್ಧಿವಾದ ಹೇಳಿ ಎಚ್ಚರಿಕೆ ನೀಡಿದ ಅವರು ವಿನಯ್ (Vinay) ವಿಚಾರದಲ್ಲಿ ಹೆಚ್ಚು ಪಾಸಿಟಿವ್ ಆಗಿ ಮಾತನಾಡಿದರು ಎನ್ನುವುದು ಅಭಿಮಾನಿಗಳ ಬೇಸರ
ಕಂಟೆಸ್ಟೆಂಟ್ಗಳ ಜೊತೆ ಮಾತನಾಡುವಾಗ ನೀವೆಲ್ಲ ಸೇರಿ ಒಬ್ಬ ಫೈನಲಿಸ್ಟ್ ನಿರ್ಧರಿಸಿದ್ದೀರಾ ಎಂದು ಹೇಳಿದ್ದು ಕೂಡ ಅನೇಕರಿಗೆ ಇಷ್ಟವಾಗಿಲ್ಲ. ಯಾಕೆಂದರೆ ಸೋಶಿಯಲ್ ಮೀಡಿಯಾದಲ್ಲಿ ವಿನಯ್ ಅವರು ಹೆಚ್ಚು ಟ್ರೋಲ್ (troll) ಆಗುತ್ತಿದ್ದಾರೆ ಹೀಗಾಗಿ ಅವರಿಗೆ ತಲುಪಬೇಕಾದ ಸಂದೇಶ ಸರಿಯಾಗಿ ತಲುಪಿಲ್ಲ, ಹಾಗೇ ಪ್ರತಾಪ್ (Prathap) ಅವರನ್ನು ಗೂಬೆ ಎಂದು ಕರೆದಿದ್ದಕ್ಕಾಗಿ ರಕ್ಷಕ್ ಬುಲೆಟ್ ಪ್ರಕಾಶ್ (Rakshak Bullet) ಅವರಿಗೆ ಬಿಸಿ ಮುಟ್ಟಿಸಿದ ಸುದೀಪ್ ಅವರು.
ಅದೇ ರೀತಿ ವಿನಯ್ ಅವರು ಪ್ರತಾಪ್ ಅವರನ್ನು ಮುಚ್ಚಿಕೊಂಡು ಕೇಳು ಎಂದು ಹೇಳಿದ ಪದ ಬಳಕೆಯ, ಹಾಗೂ ಆ ಟ್ಯೂನ್ ಬಗ್ಗೆ ಏನು ಮಾತನಾಡಿಲ್ಲ ಎನ್ನುವುದಕ್ಕಾಗಿ ಸುದೀಪ್ ಸರ್ ಒಂದು ಸೈಡ್ ಆಗಿದ್ದಾರೆ ಹಿಂದೊಮ್ಮೆ ಜೆ.ಕೆ (JK) ಕೂಡ ಇದ್ದ ಸೀಸನ್ ನಲ್ಲಿ ಜೆಕೆ ಮೇಲು ಇದೇ ರೀತಿಯ ಧೋರಣೆ ಇತ್ತು ಎನ್ನುತ್ತಿದ್ದಾರೆ.
ಹಾಗೆ ಮನೆಯವರೆಲ್ಲರಿಗೂ ಕೂಡ ವಿನಯ್ ಕಂಡರೆ ಭಯವೇ ಬೇರೆಯವರ ಜೊತೆ ಮಾತನಾಡುವಾಗ, ವಾದ ಮಾಡುವಾಗ, ಅವರ ತಪ್ಪುಗಳನ್ನು ಎತ್ತಿ ಹೇಳುವಾಗ ಗಟ್ಟಿಯಾಗಿರುವ ಧ್ವನಿ ವಿನಯ್ ಮಾತನಾಡಿದ ತಕ್ಷಣ ಕುಗ್ಗಿ ಹೋಗುತ್ತದೆ. ಯಾಕೆ ಎಲ್ಲರಿಗೂ ವಿನಯ್ ಕಂಡರೆ ಭಯವೇ ಎಂದಿದ್ದಾರೆ ಅದಕ್ಕೆ ನೆಟ್ಟಿಗರು ವಿನಯ್ ಅವರನ್ನು ಈ ಬಾರಿ ತಿದ್ದುವುದಕ್ಕೆ ಸಾಕಷ್ಟು ವಿಚಾರಗಳಿತ್ತು.
ಆದರೆ ತಪ್ಪುಗಳನ್ನು ಸರಿಯಾಗಿ ಹೇಳಲಿಲ್ಲ ಕಲರ್ಸ್ ಕನ್ನಡ ವಾಹಿನಿ (colors kannada) ಹಾಗೂ ಬಿಗ್ ಬಾಸ್ ಗೂ ಕೂಡ ವಿನಯ್ ಕಂಡರೆ ಭಯವೇ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ಇದು ಕೂಡ ಮೈಂಡ್ ಗೇಮ್ ಇರಬಹುದು ವಿನಯ್ ಅವರ ಮೇಲೆ ಉಳಿದ ಕಂಟೆಸ್ಟೆಂಟ್ ಗಳು ಸ್ಟ್ರಾಂಗ್ ಆಗಲಿ ಎನ್ನುವ ಕಾರಣಕ್ಕಾಗಿ ಈ ರೀತಿ ಬಿಗ್ ಬಾಸ್ ಪ್ಲಾನ್ ಮಾಡಿರಬಹುದು ಎನ್ನುತ್ತಿದ್ದಾರೆ ಮುಂದೆನಾಗುತ್ತದೆಯೋ ಕಾದು ನೋಡೋಣ.