ರಾಜ್ಯದಲ್ಲಿ 123 ವರ್ಷಗಳಲ್ಲಿ ಅತಿ ಕಡಿಮೆ ಪ್ರಮಾಣದ ಮಳೆ ಉಂಟಾಗಿರುವುದರಿಂದ ಮುಂಗಾರು ಮಳೆಯ ಕೊರತೆಯಿಂದಾಗಿ ಬರದ ಪರಿಸ್ಥಿತಿ ಎದುರಾಗಿದೆ. ಜೊತೆಗೆ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣವೂ ಕೂಡ ಕುಸಿಯುತ್ತಿರುವುದರಿಂದ ರಾಜ್ಯದ ರೈತರಿಗೆ ಮತ್ತು ಕುಡಿಯುವ ನೀರಿಗಾಗಿ ಕಾವೇರಿಯನ್ನು ಅವಲಂಬಿಸಿರುವವರಿಗೆ ಮುಂದಿನ ತಿಂಗಳುಗಳಲ್ಲಿ ಸಮಸ್ಯೆ ಆಗಲಿದೆ ಎನ್ನುವುದನ್ನು ಅಂದಾಜಿಸಿ ತಕ್ಷಣವೇ ಸರ್ಕಾರವು ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು.
ರಾಜ್ಯದಲ್ಲಿ ಉಂಟಾಗಿರುವ ಕ್ಷಾಮದ ಪರಿಸ್ಥಿತಿಯನ್ನು ಪ್ರಾಧಿಕಾರಗಳಿಗೆ ಹಾಗೂ ಸರ್ವೋಚ್ಚ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ರಾಜ್ಯದ ಜನತೆ ಹೋರಾಟ ಮಾಡಿ ಕೇಳುತ್ತಿದ್ದಾರೆ. ಈಗಾಗಲೇ ಮಂಡ್ಯ, ಬೆಂಗಳೂರು ಈ ಭಾಗಗಳಲ್ಲಿ ಚಳುವಳಿಗಳು ಕೂಡ ನಡೆಯುತ್ತಿದ್ದು ಕನ್ನಡಪರ ಸಂಘಟನೆಗಳು, ರೈತರು, ಸಿನಿಮಾ ತಾರೆಗಳು ಮತ್ತು ವಿಪಕ್ಷಗಳು ತಮ್ಮದೇ ಆದ ರೀತಿಯಲ್ಲಿ ಪ್ರತಿಭಟನೆಗೆ ಮಾಡುತ್ತಿವೆ.
ಖಾಲಿ ಹೊಟ್ಟೆಗೆ ಟೀ ಕಾಫಿ ಕುಡಿಯುವ ಅಭ್ಯಾಸ ಇದೆಯೇ? ಇದು ಎಷ್ಟು ಡೇಂಜರ್ ಯಾವೆಲ್ಲಾ ಕಾಯಿಲೆಗಳು ಬರುತ್ತವೆ ಗೊತ್ತಾ.?
ಈ ವಿಚಾರವಾಗಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ನರೇಂದ್ರ ಮೋದಿ ಅವರಿಗೆ ಪತ್ರ ಒಂದನ್ನು ಬರೆದಿದ್ದಾರೆ ಮತ್ತು ಆ ಪತ್ರವನ್ನು ತಮ್ಮ ಎಕ್ಸ್ ಜಾಲತಾಣದ ಖಾತೆಯಲ್ಲೂ ಕೂಡ ಹಂಚಿಕೊಂಡಿದ್ದಾರೆ. ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ನೈರುತ್ಯ ಮುಂಗಾರು ರಾಜ್ಯಕ್ಕೆ ಅಪ್ಪಳಿಸಿಲ್ಲ ಹಾಗಾಗಿ ರಾಜ್ಯಕ್ಕೆ ಮಳೆಯ ಕೊರೆತೆಯೂ ಎದುರಾಗಿದೆ.
ಕೃಷಿ ಬಳಕೆ ಮಾತ್ರವಲ್ಲದೇ, ಕುಡಿಯುವ ನೀರಿಗೂ ಅಪಾಯ ಎದುರಾಗಿದೆ. ರಾಜ್ಯದಾದ್ಯಂತ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಕರ್ನಾಟಕದಲ್ಲಿ ಸುರಿದ ಮಳೆ 123 ವರ್ಷಗಳ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಮಳೆ. ಇದರ ಜತೆಗೆ ಈಗಾಗಲೇ ತಮಿಳುನಾಡು ಕೇಳಿದಷ್ಟು ನೀರನ್ನು ಈ ವರೆಗೂ ಕರ್ನಾಟಕ ಹರಿಸುತ್ತಲೇ ಬಂದಿದೆ.
ಇಂದಿನ ತಿಂಗಳುಗಳಲ್ಲಿ ತಮಿಳುನಾಡಿನಲ್ಲಿ ಮಳೆಯಾಗುವ ಸಂಭವವಿದೆ ಆದರೆ ರಾಜ್ಯಕ್ಕೆ ಅವಕಾಶ ಕೂಡ ಇಲ್ಲ ಪ್ರಸ್ತುತ ರಾಜ್ಯದ ಪ್ರಮುಖ ಜಲಾಶಯಗಳಾದ ಕೃಷ್ಣ ರಾಜ ಸಾಗರ, ಕಬಿನಿ, ಹೇಮಾವತಿ, ಹಾರಂಗಿ ಜಲಾಶಯಗಳಲ್ಲಿ ಅಳತೆಯ ಪ್ರಕಾರ 104.55 TMC ನೀರು ಇರಬೇಕಿತ್ತು. ಆದರೆ, ಪ್ರಸ್ತುತ 51.10 TMC ನೀರು ಮಾತ್ರ ಇದೆ.
ಹಾಗಾಗಿ ಕರ್ನಾಟಕದ ಸ್ಥಿತಿಗತಿಯನ್ನೂ ಸಹಾ ಅರಿತುಕೊಂಡು, ಎರಡು ರಾಜ್ಯಗಳ ನಡುವೆ ಪ್ರಧಾನಮಂತ್ರಿಗಳಾದ ನೀವೇ ಮಧ್ಯಸ್ಥಿಕೆ ವಹಿಸಿ ಈ ಸಮಸ್ಯೆಗೆ ಪರಿಹಾರ ನೀಡಬೇಕು.
40 TMC ಗಿಂತ ಹೆಚ್ಚಿನ ಹೆಚ್ಚುವರಿ ಬಿಡುಗಡೆಗೆ ತಮಿಳುನಾಡು ಒತ್ತಾಯಿಸಿದೆ, ಇದು ಕೇವಲ ಅನ್ಯಾಯದ ಧೋರಣೆ ಮಾತ್ರವಲ್ಲ. ಸಮಾನತೆ ಮತ್ತು ನೈಸರ್ಗಿಕ ತತ್ವಗಳ ವಿರುದ್ಧವಾಗಿದೆ. ಸಂವಿಧಾನದ ಪ್ರಕಾರ ಕುಡಿಯುವ ನೀರು ಒದಗಿಸುವುದು ಮೂಲಭೂತ ಹಕ್ಕು. ಹಾಗಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಎಂದು ತಮ್ಮ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
JDS ಮತ್ತು BJP ಮೈತ್ರಿ ಬೆನ್ನಲ್ಲೇ JDS ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ ಸೈಯದ್ ಶಫೀವುಲ್ಲಾ.!
ಕಾವೇರಿ ನೀರು ಹಂಚಿಕೆ ವಿಚಾರವಾಗಿ ಮಾಜಿ ಪ್ರಧಾನಿ ದೇವೇಗೌಡ ಅವರು ಬರೆದ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ Xನಲ್ಲಿಯೇ ಪ್ರತಿಕ್ರಿಯಿಸಿದ್ದಾರೆ. ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನಾಡಿಗೆ ಎದುರಾಗಿರುವ ಸಂಕಷ್ಟ ನಿವಾರಿಸಲು ಪ್ರಧಾನಿ ಮೋದಿ ಅವರು ಮಧ್ಯಸ್ಥಿಕೆ ವಹಿಸುವಂತೆ ಕೋರಿ ಮಾಜಿ ಪ್ರಧಾನಿ ದೇವೇಗೌಡ ಅವರು ಪತ್ರ ಬರೆದಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದು ಬರೆದಿದ್ದಾರೆ.
ನಾಡು, ನೆಲ, ಜಲ, ಭಾಷೆ ವಿಚಾರಕ್ಕೆ ಬಂದಾಗ ಪಕ್ಷ ಮರೆತು ಎಲ್ಲ ರಾಜಕೀಯ ಮುಖಂಡರುಗಳು ಒಂದಾಗಿರುವ ಉದಾಹರಣೆಯನ್ನು ಕರ್ನಾಟಕದಲ್ಲಿ ಕಂಡಿದ್ದೇನೆ. ಹಾಗಾಗಿ ದೇವೇಗೌಡರ ನಿಲುವಿನಿಂದ ಪ್ರೇರಣೆ ಪಡೆದು ರಾಜ್ಯದ BJP ನಾಯಕರು ಪ್ರಧಾನ ಮಂತ್ರಿಗಳು ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಪರಿಹಾರ ತರುವಂತೆ ಒತ್ತಡ ತರಬೇಕು ಎಂದು ಹೇಳಿದ್ದಾರೆ. ಸದ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ತಡೆಯಲು ಪ್ರಧಾನಿಗಳು ಮಧ್ಯಸ್ಥಿಕೆಯಿಂದ ಮಾತ್ರ ಸಾಧ್ಯ ಎಂದವರು ತಿಳಿಸಿದ್ದಾರೆ.