ಕರ್ನಾಟಕದಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಮುಖ್ಯಮಂತ್ರಿಗಳ ಮಂತ್ರಿಮಂಡಲದಲ್ಲಿ ಕಂದಾಯ ಸಚಿವರಾಗಿ ಸ್ಥಾನ ಗಿಟ್ಟಿಸಿಕೊಂಡಿರುವ ಕೃಷ್ಣಭೈರೇಗೌಡ ಅವರು ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೇ ಕಂದಾಯ ನಿಯಮಗಳಿಗೆ ಸಂಬಂಧಿಸಿದ ಹಾಗೆ ಅನೇಕ ಆದೇಶಗಳನ್ನು ಹೊರಡಿಸಿದ್ದಾರೆ.
PTCL ಕಾಯ್ದೆ ಮತ್ತು ಬೇರೆಯವರ ಜಮೀನು ಅಥವಾ ಆಸ್ತಿಯನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದಾಗ ಅವುಗಳು ತಿಳಿದು ಬಂದ ಕೂಡಲೇ ಆ ರಿಜಿಸ್ಟರ್ ಅನ್ನು ತಕ್ಷಣವೇ ರದ್ದುಪಡಿಸುವುದು ಮತ್ತು ಪ್ರದೇಶವಾರು ಬಹಳ ವ್ಯತ್ಯಾಸದಲ್ಲಿರುವ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಪರಿಷ್ಕರಣಿಗೊಳಿಸುವುದು ಸೇರಿದಂತೆ ಅನೇಕ ಕ್ರಮ ಕೈಗೊಂಡಿರುವ ಅವರು ಅಕ್ರಮ ಸಕ್ರಮದ ಕುರಿತು ಕೂಡ ಬಹಳ ಮುಖ್ಯವಾದ ಆದೇಶವೊಂದನ್ನು ಹೊರಡಿಸಿದ್ದಾರೆ.
JDS ಮತ್ತು BJP ಮೈತ್ರಿ ಬೆನ್ನಲ್ಲೇ JDS ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ ಸೈಯದ್ ಶಫೀವುಲ್ಲಾ.!
ಅದೇನೆಂದರೆ, ರಾಜ್ಯದಲ್ಲಿ ಸರ್ಕಾರಿ ಜಮೀನುಗಳಲ್ಲಿ ಕೃಷಿ ಮಾಡುತ್ತಾ ಇರುವ ರೈತರು, ಸತತವಾಗಿ ಅದೇ ಕೃಷಿ ಭೂಮಿಯಲ್ಲಿ ಹತ್ತಾರು ವರ್ಷಗಳಿಂದ ಕೃಷಿ ಮಾಡುತ್ತಾ ಇದ್ದರೂ ತಮ್ಮ ಹೆಸರುಗಳಲ್ಲಿ ದಾಖಲೆ ಹೊಂದಿಲ್ಲದ ರೈತರು, ತಂದೆ ಅಥವಾ ತಾತ ಮೃತಪಟ್ಟುಶಹಲವು ವರ್ಷಗಳಾಗಿದ್ದರೂ ಕೂಡ ದಾಖಲೆಗಳನ್ನು ಬದಲಾಯಿಸದೇ ಇನ್ನೂ ಸಹ ಹಿರಿಯರ ಹೆಸರಿನಲ್ಲಿಯೇ ಹೊಂದಿರುವ ರೈತರು, ಸತತ 12 ವರ್ಷಗಳಿಂದ ಒಂದೇ ಜಮೀನಿನಲ್ಲಿ ತಾವೇ ಕೃಷಿ ಮಾಡಿಕೊಂಡು ಸ್ವಾಧೀನಪಡಿಸಿಕೊಂಡಿರುವ ರೈತರು.
ಸರ್ಕಾರಿ ಜಮೀನುಗಳಲ್ಲಿ ಮನೆ ನಿರ್ಮಾಣ ಮಾಡಿ ಕೊಂಡಿರುವ ವಸತಿ ರಹಿತರು, ನಿರಾಶ್ರಿತರು ಆರ್ಥಿಕವಾಗಿ ಹಿಂದುಳಿದವರು ಇನ್ನೂ ಮುಂತಾದ ಎಲ್ಲರಿಗೂ ಕೂಡ ಅವರ ಹೆಸರಿಗೆ ಈಗ ದಾಖಲೆಗಳನ್ನು ಮಾಡಿಕೊಳ್ಳುವುದಕ್ಕೆ ಸರ್ಕಾರ ಭರ್ಜರಿ ಆಫರ್ ನೀಡಿದೆ. ಸರ್ಕಾರದ ವತಿಯಿಂದ ಈ ಕುರಿತಾಗಿ ಒಂದು ಪ್ರಮುಖ ಆದೇಶವು ಹೊರ ಬಿದ್ದಿದ್ದು, ಇದಕ್ಕೆ ಬೇಕಾದ ಪೂರಕ ದಾಖಲೆಗಳನ್ನು ಅರ್ಜಿದಾರರು ಸಿದ್ಧಪಡಿಸಿಕೊಂಡಿದ್ದೇ.
ಆದರೆ ಸರ್ಕಾರ ಸೂಚಿಸುವ ಮಾರ್ಗಸೂಚಿ ಪ್ರಕಾರವಾಗಿ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಸಾಬೀತು ಪಡಿಸುವ ಮೂಲಕ ಈಗ ಅವರು ವಾಸಿಸುತ್ತಿರುವ ಮನೆ ಅಥವಾ ಕೃಷಿ ಮಾಡುತ್ತಿರುವ ಜಮೀನನ್ನು ತಮ್ಮ ಹೆಸರಿಗೆ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಈ ರೀತಿ ಸರ್ಕಾರವು ಅಕ್ರಮವಾಗಿ ತನ್ನ ಜಮೀನನ್ನು ಒತ್ತುವರೆ ಮಾಡಿಕೊಂಡಿರುವವರಿಗೆ ಸಕ್ರಮ ಮಾಡಿ ಕೊಡುವ ಮನಸ್ಸು ಮಾಡಿದೆ.
ಹಾಗಾಗಿ ಕಂದಾಯ ನಿಯಮಗಳನ್ನು ಅಧಿಕೃತ ಸರಣೀಕರಣಗೊಳಿಸುವ ಮೂಲಕ ಎಲ್ಲಾ ರೈತರಿಗೂ ಹಕ್ಕು ಪತ್ರ ನೀಡುವುದಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಮುಂದಿನ ತಿಂಗಳಿನಿಂದಲೇ ಎಲ್ಲಾ ರೈತರೂ ಹಾಗೂ ಜನಸಾಮಾನ್ಯರಿಗೆ ಹಕ್ಕುಪತ್ರ ಹಂಚುವ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಮಾನ್ಯ ಕಂದಾಯ ಸಚಿವರು ತಿಳಿಸಿದ್ದಾರೆ.
BPL, APL ಕಾರ್ಡ್ ದಾರರಿಗೆ ಬಿಗ್ ಶಾ-ಕ್, ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿದ 1 ಲಕ್ಷ ಅರ್ಜಿಗಳು ತಿರಸ್ಕೃತ.!
ಹಾಗಾಗಿ ನೀವು ಸಹ ಈ ಮೇಲೆ ತಿಳಿಸಿದ ಉದಾಹರಣೆಯಂತೆ ನಿಮ್ಮ ಮನೆ, ನಿವೇಶನ, ಸೈಟು ಅಥವಾ ಜಮೀನುಗಳನ್ನು ನಿಮ್ಮ ಹೆಸರಿಗೆ ಬದಲಾಯಿಸಿಕೊಳ್ಳಲು ಕಾಯುತ್ತಿದ್ದರೆ ಅಥವಾ ಅದರ ಹಕ್ಕು ಪತ್ರವನ್ನು ಇನ್ನೂ ಸಹ ನೀವು ಸರ್ಕಾರದಿಂದ ಪಡೆಯಲಾಗದೆ ಸಮಸ್ಯೆಯಲ್ಲಿದ್ದರೆ ತಪ್ಪದೆ ಈ ಅವಕಾಶವನ್ನು ಬಯಸಿಕೊಳ್ಳಿ ಮತ್ತು ಈ ಕುರಿತಾದ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಸರ್ಕಾರ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಟ್ಟು ಮಾಹಿತಿ ತಿಳಿದುಕೊಳ್ಳಿ.
ಅಥವಾ ಕಂದಾಯ ಇಲಾಖೆಯ ಕಚೇರಿಗಳಿಗೆ ಭೇಟಿ ಕೊಡುವ ಮೂಲಕ ಅಧಿಕಾರಿಗಳು ಅಥವಾ ಸಿಬ್ಬಂದಿಗಳಿಂದ ಹೆಚ್ಚಿನ ಮಾಹಿತಿಯನ್ನು ಪಡೆದು ಆ ಪ್ರಕಾರವಾಗಿ ಸಮಸ್ಯೆ ಪರಿಹರಿಸಿಕೊಳ್ಳಿ. ಹಾಗೂ ಈ ಪ್ರಮುಖ ಮಾಹಿತಿಯನ್ನು ಎಲ್ಲಾ ರೈತರಿಗೂ ತಿಳಿಯುವಂತೆ ಶೇರ್ ಮಾಡಿ.
ಒಂದೇ ಒಂದು ಸೆಂಚುರಿ 8 ರೆಕಾರ್ಡ್ ಪುಡಿಪುಡಿ, ಗಿಲ್ ಅಬ್ಬರಕ್ಕೆ ವಿಶ್ವದ ದಿಗ್ಗಜ ಕ್ರಿಕೆಟಿಗರ ದಾಖಲೆಗಳೆ ಬ್ರೇಕ್.!