ಸೆಪ್ಟೆಂಬರ್ 21ರಂದು ತಮಿಳುನಾಡಿಗೆ ನೀರು ಹರಿಸಿ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡುತ್ತಿದ್ದಂತೆ, ಇದನ್ನು ವಿರೋಧಿಸಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಮೈಸೂರು, ಮಂಡ್ಯ ಹಾಗೂ ಬೆಂಗಳೂರಿನಲ್ಲಿ ಭಾಗಗಳಲ್ಲಿ ಪ್ರತಿಭಟನೆಗಳು ಜೋರಾಗಿದೆ. ಸೆಪ್ಟೆಂಬರ್ 29ಕ್ಕೆ ಕರ್ನಾಟಕ ಬಂದ್ ಗೂ ಕೂಡ ಕರೆ ನೀಡಲಾಗಿದೆ.
ಕನ್ನಡಪರ ಸಂಘಟನೆಗಳು, ರೈತ ಸಂಘಗಳು ಈ ಹೋರಾಟಕ್ಕಿಳಿದು ಕಾವೇರಿ ವಿಚಾರದಲ್ಲಿ ಬಂಗಾರಪ್ಪನವರಂತೆ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಕೆಚ್ಚೆದೆಯ ನಾಯಕ ರಾಜ್ಯದಲ್ಲಿ ಇಲ್ಲವಲ್ಲ ಎಂದು ಕೂಗಿ ಹೇಳುತ್ತಿದ್ದಾರೆ. ಹಾಗಾದರೆ, ಬಂಗಾರಪ್ಪನವರು ಮತ್ತು ಕಾವೇರಿ ನೀರಿನ ವಿವಾದಕ್ಕೆ ಏನು ಸಂಬಂಧ ಎನ್ನುವುದನ್ನು ಅರಿಯದವರಿಗೆ ಈ ಅಂಕಣದಲ್ಲಿ ಅದರ ಕುರಿತು ಮಾಹಿತಿ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ.
ಕಾವೇರಿ ವಿವಾದ, ಪ್ರಧಾನಿ ಮಧ್ಯಸ್ಥಿಕೆಗೆ ದೇವೇಗೌಡರ ಪತ್ರ, ಪತ್ರ ಸ್ವಾಗತಿಸಿದ ಸಿದ್ದರಾಮಯ್ಯ.!
ಅದೇನೆಂದರೆ, ಎಲ್ಲರಿಗೂ ತಿಳಿದಿರುವಂತೆ ಕಾವೇರಿ ನದಿ ನೀರಿನ ವಿವಾದ ಇಂದು ನೆನ್ನೆಯದಲ್ಲ. ಮಳೆಯ ಕೊರತೆ ಉಂಟಾದ ಸಮಯದಲ್ಲೆಲ್ಲ ಈ ನದಿ ನೀರಿನ ಹಂಚಿಕೆ ವಿಚಾರ ಭುಗಿಲೇಳುತ್ತದೆ. ಈ ಹಿಂದೆ ಕೂಡ ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಇಂತಹದೇ ಪರಿಸ್ಥಿತಿ ಎದುರಾಗಿತ್ತು.
ಆಗ ತೆಗೆದುಕೊಂಡ ದಿಟ್ಟ ನಿರ್ಧಾರ, ಕಾಡು ನೆಲ ಜಲದ ಬಗ್ಗೆ ಗಟ್ಟಿತನ, ರೈತಪರ ಹಾಗೂ ಜನಪರ ಕಾಳಜಿ ಇಂದು ಇಷ್ಟು ವರ್ಷಗಳಾದ ಬಳಿಕವೂ ಜನರ ಬಾಯಿಯಿಂದ ಕೊಂಡಾಡಿಸಿಕೊಳ್ಳುವಂತೆ ಮಾಡಿದೆ. ಅಂದಿನ ಆ ಪರಿಸ್ಥಿತಿಯ ವಿವರವನ್ನು ಈ ಅಂಕಣದ ಮೂಲಕ ವಿವರಿಸುತ್ತಿದ್ದೇವೆ 1991 ರಲ್ಲಿ ರಾಜ್ಯದಲ್ಲಿ ಎಸ್ ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಿದ್ದರು ಆ ವೇಳೆ ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗಿದ್ದವರು ಜಯಲಲಿತಾ.
ಖಾಲಿ ಹೊಟ್ಟೆಗೆ ಟೀ ಕಾಫಿ ಕುಡಿಯುವ ಅಭ್ಯಾಸ ಇದೆಯೇ? ಇದು ಎಷ್ಟು ಡೇಂಜರ್ ಯಾವೆಲ್ಲಾ ಕಾಯಿಲೆಗಳು ಬರುತ್ತವೆ ಗೊತ್ತಾ.?
ಆ ವರ್ಷದಲ್ಲೂ ಇದೇ ಪರಿಸ್ಥಿತಿ ಎದುರಾಗಿತ್ತು ಮಿಳುನಾಡು ಸರ್ಕಾರ, ತಮ್ಮ ರಾಜ್ಯದ ಕಾವೇರಿ ಕಣಿವೆಯ ಬೆಳೆಗಳು ಒಣಗುತ್ತಿವೆ, ಸಂಧಾನ ಸೂತ್ರದ ಪ್ರಕಾರ ಕರ್ನಾಟಕದಿಂದ ತಮಿಳುನಾಡಿಗೆ ಬರಬೇಕಾದ ಕಾವೇರಿ ನೀರನ್ನು ಹರಿಸುವಂತೆ ಸೂಚಿಸಬೇಕು ಎಂದು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮೊರೆ ಹೋಗಿತ್ತು. ಆಗ, ಪ್ರಾಧಿಕಾರವು ಎರಡೂ ರಾಜ್ಯಗಳ ವಾದವಿವಾದಗಳನ್ನು ಆಲಿಸಿ ಕರ್ನಾಟಕಕ್ಕೆ 205 TMC ನೀರು ಬಿಡುವಂತೆ ಸೂಚಿಸಿತ್ತು.
ಆದರೆ, ನಮ್ಮ ಹೆಮ್ಮೆಯ ಜನನಾಯಕ ಬಂಗಾರಪ್ಪನವರು ಅದನ್ನು ಒಪ್ಪಲಿಲ್ಲ. ಇದರ ಬಗ್ಗೆ ಸದನದಲ್ಲಿ ಚರ್ಚೆ ನಡೆಯಿತು. ಆಗ, ಸದನದಲ್ಲಿ ಭಾಷಣ ಮಾಡಿದ ಶಾಸಕ ವಾಟಾಳ್ ನಾಗರಾಜ್ ಅವರು ರಕ್ತ ಕೊಟ್ಟೇವು, ಆದರೆ, ಕಾವೇರಿ ಮಾತ್ರ ಬಿಡೆವು ಎಂದು ಘೋಷಿಸಿದರು. ಆ ನಂತರ ಮಾತನಾಡಿದ ರೈತ ಸಂಘದ ಪ್ರೊ. ನಂಜುಂಡಯ್ಯ, ಪ್ರಾಧಿಕಾರದ ಆದೇಶ ಕೇವಲ ಆದೇಶವಷ್ಟೇ, ಅದೇ ತೀರ್ಪಲ್ಲ.
ತೀರ್ಪನ್ನು ಪಾಲಿಸಬಹುದು ಆದರೆ, ಆ ಆದೇಶಕ್ಕೆ ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳಲು ರಾಜ್ಯ ಸರ್ಕಾರಗಳಿಗೂ ಅಧಿಕಾರವಿರುತ್ತದೆ ಎಂದು ಸಲಹೆ ನೀಡಿದರು ಬಳಿಕ ಬಂಗಾರಪ್ಪನವರು ತಡ ಮಾಡದೆ ಮರು ದಿನವೇ ಕ್ಯಾಬಿನೆಟ್ ಸಭೆ ನಡೆಸಿ, ಪ್ರಾಧಿಕಾರದ ಆದೇಶವನ್ನು ಪಾಲಿಸಲು ಸಾಧ್ಯವಿಲ್ಲ ಎಂಬ ಸುಗ್ರೀವಾಜ್ಞೆ ಜಾರಿಗೆ ತಂದರು ನಂತರ ನಡೆದದ್ದು ಇತಿಹಾಸವಾಯಿತು.
ಯಾರಿಂದ ಎಷ್ಟೇ ಒತ್ತಡ ಬಂದರೂ ಕಾವೇರಿಯ ಹನಿ ನೀರನ್ನು ತಮಿಳುನಾಡಿಗೆ ಹರಿಸಕೂಡದು ಎಂದು ಕಾವೇರಿ ನದಿಯ ಎಲ್ಲಾ ಅಣೆಕಟ್ಟುಗಳ ಅಧಿಕಾರಿಗಳಿಗೆ ರಾಜ್ಯ ಸರ್ಕಾರದಿಂದ ಸ್ಪಷ್ಟವಾದ ನೀಡಿದರು. ಆದರೆ, ಇದರ ವಿರುದ್ಧ ತಮಿಳುನಾಡು ಸರ್ಕಾರ, ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿತು. ಆ ಸಮಯದಲ್ಲಿದ್ದ ಕೇಂದ್ರ ಸರ್ಕಾರವೇ ಈ ವಿವಾದದಲ್ಲಿ ಮಧ್ಯ ಪ್ರವೇಶಿಸಿ, ಪ್ರಾಧಿಕಾರವು ತಮಿಳುನಾಡಿಗೆ 205TMC ನೀಡುವಂತೆ ಮಾಡಿದ್ದ ಆದೇಶವನ್ನೇ ತನ್ನ ಗೆಜೆಟ್ ನಲ್ಲಿ ಹೊರಡಿಸಿ, ಕರ್ನಾಟಕದ ಮೇಲೆ ಒತ್ತಡ ಹೇರಲು ಪ್ರಯತ್ನಿಸಿತು.
ಆದರೆ ಬಂಗಾರಪ್ಪನವರು ಅದಕ್ಕೂ ಬಗ್ಗಲಿಲ್ಲ. ಸುಪ್ರೀಂಕೋರ್ಟ್ ನಲ್ಲಿ ತಮಿಳುನಾಡು ಸಲ್ಲಿಸಿದ ಆಕ್ಷೇಪಕ್ಕೆ, ರಾಜ್ಯ ಸರ್ಕಾರದಿಂದಲೂ ಅಹವಾಲು ಸಲ್ಲಿಸಿದರು. ಜೊತೆಗೆ, 1991ರ ಡಿ. 13ರಂದು ಕಾವೇರಿ ಕೊಳ್ಳ ರೈತರು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಬಾಹ್ಯವಾಗಿಯೇ ಬೆಂಬಲ ಘೋಷಿಸಿ, ಕಾವೇರಿ ನಮ್ಮದು ನಮಗೆ ಕೊರತೆ ಇರುವಾಗ ನೀರು ಬಿಡಲು ಆಗದು ನೀವು ಧೈರ್ಯವಾಗಿರಿ ನಿಮ್ಮ ಹೋರಾಟ ಮುಂದುವರಿಸಿ ಎಂದು ಬಾಹ್ಯ ನೀಡಿದ್ದರು.