ರಾಜ್ಯದಲ್ಲಿ ನಡೆಯುತ್ತಿರುವ ಕಾವೇರಿ ವಿವಾದವು (Cauvery contreversy) ದೇಶದಾದ್ಯಂತ ಎಲ್ಲರ ಗಮನವನ್ನು ಸೆಳೆಯುತ್ತಿದೆ, ಅತಿ ಕಡಿಮೆ ಮಳೆ ಬಿದ್ದ ವರ್ಷಗಳಲ್ಲಿ ಇದು ಸರ್ವೇ ಸಾಮಾನ್ಯವಾಗಿ ಹೋಗಿದೆ. ಈ ಬಾರಿಯೂ ಕೂಡ ಇಂತಹದೊಂದು ದುಸ್ಥಿತಿ ರಾಜ್ಯಕ್ಕೆ ಎದುರಾಗಿದ್ದು 123 ವರ್ಷಗಳಲ್ಲಿ ಅತಿ ಕಡಿಮೆ ಮಳೆ ಬಿದ್ದಿರುವುದರಿಂದ ರಾಜ್ಯಕ್ಕೆ ಕ್ಷಾ’ಮ (drought) ಎದುರಾಗಿದೆ.
ಮುಂಗಾರು ಮಳೆ ಕೊರತೆಯಿಂದ ರಾಜ್ಯದ ಜಲಾಶಯಗಳಲ್ಲಿ ನೀರು ಕಡಿಮೆ ಆಗುತ್ತಿದ್ದು ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು ಎಂದು ಈ ಹೋ’ರಾ’ಟ (strike) ನಡೆಯುತ್ತಿದೆ. ಹೋರಾಟದ ತೀವ್ರತೆಯನ್ನು ಹೆಚ್ಚಿಸುವ ಸಲುವಾಗಿ ಬಂ’ದ್ (bandh) ಕೂಡ ನಡೆಸಲಾಗುತ್ತಿದ್ದು ಮಂಡ್ಯ ಬಂದ್ ಯಶಸ್ವಿ ಆಗುತ್ತಿದ್ದಂತೆ ಬೆಂಗಳೂರು ಬಂದ್ ಮಾಡಲಾಗಿದೆ.
BPL, APL ಕಾರ್ಡ್ ದಾರರಿಗೆ ಬಿಗ್ ಶಾ-ಕ್, ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿದ 1 ಲಕ್ಷ ಅರ್ಜಿಗಳು ತಿರಸ್ಕೃತ.!
ಸ್ವಯಂ ಪ್ರೇರಿತವಾಗಿ ಬೆಂಗಳೂರಿನಲ್ಲಿ ಜನರು ಬಂದ್ ಆಚರಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ ಮತ್ತು ಶುಕ್ರವಾರ ಕರ್ನಾಟಕ ಬಂದ್ ಮಾಡುವ ತಯಾರಿಯಲ್ಲಿ ಇದ್ದಾರೆ. ಒಮ್ಮೊಮ್ಮೆ ನಮ್ಮ ನಿಲುವನ್ನು ಗಟ್ಟಿಯಾಗಿ ಸರ್ಕಾರಕ್ಕೆ ಮುಟ್ಟಿಸಲು ಬಂದ್ ಆಚರಿಸಲೇಬೇಕಾದ ಪರಿಸ್ಥಿತಿ ಅನಿವಾರ್ಯ ಆಗಿರುತ್ತದೆ.
ಕನ್ನಡಪರ ಸಂಘಟನೆಗಳು, ರೈತ ಸಂಘ, ವಿಪಕ್ಷಗಳು, ಸಿನಿಮಾ ಸ್ಟಾರ್ ಗಳು ಸೇರಿದಂತೆ ಎಲ್ಲರೂ ಈ ಹೋರಾಟಕ್ಕೆ ನೈತಿಕ ಬೆಂಬಲವನ್ನು ವ್ಯಕ್ತಪಡಿಸುತ್ತಾ ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರಕ್ಕೆ (government) ಸುಪ್ರೀಂ ಕೋರ್ಟ್ ಆಜ್ಞೆ ಪಾಲಿಸದೆ ವಿಧಿ ಇಲ್ಲ.
ಆದರೆ ಸಮಸ್ಯೆ ಪರಿಹಾರವಾಗಬೇಕು, ನ್ಯಾಯ ಸಿಗಬೇಕು ಎಂದರೆ ಕಾವೇರಿ ಜಲವಿವಾದ ನ್ಯಾಯಾಧಿಕರಣ ಮತ್ತು ಸುಪ್ರೀಂ ಕೋರ್ಟ್ ಮುಂದೆ ರಾಜ್ಯದ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಸಬೇಕು. ಸರ್ಕಾರದ ಇದಕ್ಕೆಂದೇ ಕೋಟಿ ಕೋಟಿ ಹಣ ತೆತ್ತು ವಕೀಲರನ್ನು (advocates) ಕೂಡ ನೇಮಿಸಿದೆ.
ಆದರೆ, ಪದೇಪದೇ ಕಾವೇರಿ ನದಿ ನೀರಿನ ವಿಚಾರವಾಗಿ ಪ್ರಾಧಿಕಾರಗಳಲ್ಲಿ ಮತ್ತು ನ್ಯಾಯಾಲಯದಲ್ಲಿ ಹಿನ್ನಡೆ ಉಂಟಾಗುತ್ತಿರುವುದರಿಂದ ಎಲ್ಲರೂ ಈಗ ವಕೀಲರತ್ತ ಬೆರಳು ಮಾಡಿ ತೋರಿಸುವಂತಾಗಿದೆ. ಯಾಕೆಂದರೆ ನೈಸರ್ಗಿಕವಾಗಿ ಒಂದು ಪ್ರದೇಶದಲ್ಲಿ ದೊರಕುವ ಯಾವುದೇ ಸಂಪತ್ತಿನ ಮೊದಲ ಅಧಿಕಾರ ಪ್ರದೇಶದಲ್ಲಿ ವಾಸಿಸುವ ಸಮುದಾಯಕ್ಕೆ ಆಗಿರುತ್ತದೆ.
ಒಂದೇ ಒಂದು ಸೆಂಚುರಿ 8 ರೆಕಾರ್ಡ್ ಪುಡಿಪುಡಿ, ಗಿಲ್ ಅಬ್ಬರಕ್ಕೆ ವಿಶ್ವದ ದಿಗ್ಗಜ ಕ್ರಿಕೆಟಿಗರ ದಾಖಲೆಗಳೆ ಬ್ರೇಕ್.!
ಹಾಗಾಗಿ ಕಾವೇರಿ ನೀರಿನ ವಿಚಾರದಲ್ಲಿ ಹೆಚ್ಚಿನ ಹಕ್ಕು ಕರ್ನಾಟಕದ್ದೆ ಎನ್ನುವುದು ಸಾಮಾನ್ಯರಿಗೂ ಕೂಡ ಅರ್ಥವಾಗುವ ವಿಷಯವಾಗಿದೆ. ಜೊತೆಗೆ ನೀರಿನ ಅಭಾವವಿರದೆ ಮಳೆ ಚೆನ್ನಾಗಿದ್ದ ವರ್ಷ ಯಾವುದೇ ತಕರಾರಿಲ್ಲದೆ ನೀರನ್ನು ಬಿಡುಗಡೆ ಮಾಡಿದೆ. ಈಗ ತಮಿಳುನಾಡು ನೀರು ಕೇಳುತ್ತಿರುವುದು ಕೃಷಿ ಉದ್ದೇಶಕ್ಕಾಗಿ ಆದರೆ ನಮ್ಮಲ್ಲಿ ಕುಡಿಯುವ ನೀರಿಗೂ ಹಾ’ಹಾ’ಕಾ’ರ ಎದುರಾಗಿದೆ.
ಹಾಗಾಗಿ ಈ ಸಮಯದಲ್ಲೂ ಕೂಡ ನೀರಿಗಾಗಿ ಪಟ್ಟು ಹಿಡಿಯುವುದು ಅ’ನ್ಯಾ’ಯ ಮತ್ತು ರಾಜ್ಯದಲ್ಲಿರುವ ಜಲಾಶಯಗಳ ನೀರಿನ ಮಟ್ಟವು ಸೇರಿದಂತೆ ಮುಂಬರುವ ಸಮಸ್ಯೆಗಳ ಬಗ್ಗೆ ಸ್ಪಷ್ಟವಾಗಿ ಸುಪ್ರೀಂ ಕೋರ್ಟ್ ಮತ್ತು ಪ್ರಾಧಿಕಾರಗಳ ಮುಂದೆ ವಿಷಯ ಮಂಡನೆ ಮಾಡಿದಾಗ ನಮ್ಮ ಪರವಾಗಿ ನ್ಯಾಯ ಸಿಗುತ್ತದೆ ಆದರೆ ರಾಜ್ಯ ಈ ರೀತಿ ಜಲ ವಿವಾದಗಳಿಗೆ ನೇಮಕ ಮಾಡಿರುವ ವಕೀಲರೆಲ್ಲರೂ ತಮಿಳುನಾಡು, ಪುದುಚೇರಿ, ಕೇರಳ ಮುಂತಾದ ರಾಜ್ಯದವರೇ ಆಗಿರುವುದರಿಂದ ಕರ್ನಾಟಕ ರಾಜ್ಯದ ಹಿತಕ್ಕಿಂತ ಅವರಿಗೆ ಸ್ವಹಿತವೇ ದೊಡ್ಡದಾಗಿ ಅದಕ್ಕಾಗಿ ದುಡಿಯುತ್ತಿದ್ದಾರೆ ಎನ್ನುವ ಆರೋಪವನ್ನು ಎದುರಿಸುವಂತಾಗಿದೆ.
ರಾಜ್ಯ ಸರ್ಕಾರವು ಈ ವರೆಗೆ ನಮ್ಮ ತೆರಿಗೆ ಹಣದಿಂದ ನೀರಿನ ವಾದಕ್ಕಾಗಿಯೇ ವಕೀಲರಿಗೆ ಖರ್ಚು ಮಾಡಿರುವ ಹಣವೇ 122 ಕೋಟಿ ಆಗಿದೆ. ಕಾವೇರಿ, ಕೃಷ್ಣ, ಮಹದಾಯಿ ಈ ನದಿ ನೀರಿಗಳ ಪರವಾಗಿ ವಾದ ಮಾಡಲು 41 ಹಿರಿಯ ವಕೀಲರಿಗೆ ಪಾವತಿಸಿರುವ ಶುಲ್ಕ ಇಷ್ಟಾಗಿದೆ ಎನ್ನುವ ಮಾಹಿತಿಯು ಮಾಹಿತಿ ಹಕ್ಕಿನಡಿ ಭೀಮಪ್ಪ ಗಡದ್ ಅವರಿಗೆ ಜನ ಸಂಪನ್ಮೂಲ ಇಲಾಖೆಯಿಂದ ದೊರಕಿದೆ.
ಪ್ರತ್ಯೇಕವಾಗಿ ಇದರ ವಿವರ ಹೇಳುವುದಾದರೆ 90ರಲ್ಲಿ ರಚನೆಯಾದ ಕಾವೇರಿ ಜಲವಿವಾದ ನ್ಯಾಯಾಧಿಕರಣಕ್ಕೆ 54,13,24,282 ರೂ., 2004ರಲ್ಲಿ ರಚನೆಯಾದ ಕೃಷ್ಣ ಜಲ ವಿವಾದ ನ್ಯಾಯಾಧಿಕರಣಕ್ಕೆ 43,24,39,000 ರೂ., ಮತ್ತು ಮಹದಾಯಿ ಜಲವಿವಾದ ನ್ಯಾಯಧಿಕರಣಕ್ಕೆ5,38,35,600 ಹಣವನ್ನು ಶುಲ್ಕವಾಗಿ ಪಾವತಿಸಿದೆ.
ನಮ್ಮ ಜಲ, ನಮ್ಮ ಹಕ್ಕು CM ಗೆ ಮನವಿ ಮಾಡಿದ ಕಿಚ್ಚ ಸುದೀಪ್.! ಕಾವೇರಿ ಹೋರಾಟಕ್ಕೆ ಬೆಂಬಲ
ಆದರೆ ಇದರಿಂದ ಸಿಕ್ಕಿರುವ ಪ್ರಯೋಜನ ಎಷ್ಟು ಎಂದು ಜನರ ಕಣ್ಣೆದುರಿಗೆ ಸಾಕ್ಷಿ ಇದೆ, ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ನಾಡಿನ ಜೀವನದಿ ಆಗಿರುವ ಕಾವೇರಿಯನ್ನು ಕ’ಷ್ಟ’ದ ಸಮಯದಲ್ಲಾದರೂ ಉಳಿಸಿಕೊಳ್ಳುವಂತಾಗಲಿ ಈ ವಿವಾದ ಆದಷ್ಟು ಬೇಗ ಇತ್ಯರ್ಥವಾಗಲಿ ಎಂದು ನಾವು ಬಯಸೋಣ.
ಹೆಚ್ಚಿನ ಶುಲ್ಕ ಪಡೆದಿರುವ 5 ವಕೀಲರ ಪಟ್ಟಿ
● ಅನಿಲ್ ದಿವಾನ 29.78 ಕೋಟಿ
● ಎಫ್ ಎಸ್ ನಾರಿಮನ್ 27.45 ಕೋಟಿ
● ಮೋಹನ ಕಾತರಕಿ 13.39 ಕೋಟಿ
● ಎಸ್ ಎಸ್ ಜವಳಿ 12.61 ಕೋಟಿ
● ಬ್ರಿಜೇಶ್ ಕಾಳಪ್ಪ 6.51 ಕೋಟಿ
● ಶ್ಯಾಮ್ ದಿವಾನ 4.53 ಕೋಟಿ.
ಈ ವಿಚಾರವಾಗಿ ಇನ್ನಷ್ಟು ವಿವರವಾಗಿ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ನೋಡಿ.