ಬೆಳಗ್ಗೆ ಎದ್ದ ಕೂಡಲೇ ಕಾಫಿ ಟೀ ಕುಡಿಯುವ ಅಭ್ಯಾಸ ಹಲವರಿಗೆ ಇದೆ. ಇನ್ನು ಕೆಲವರು ಬೆಡ್ ಕಾಫಿ ಇಲ್ಲದೆ ಏಳುವುದೇ ಇಲ್ಲ, ಕೆಲವರಿಗೆ ದಿನಕ್ಕೆ ಐದಾರು ಬಾರಿ ಟೀ ಕಾಫಿ ಕುಡಿಯುವ ಅಭ್ಯಾಸವು ಇದೆ, ಇದಕ್ಕೆ ಅವರು ಎಷ್ಟು ದಾಸರಾಗಿರುತ್ತಾರೆ ಎಂದರೆ ಆ ಸಮಯಕ್ಕೆ ಅವರಿಗೆ ಟೀ, ಕಾಫಿ ಕುಡಿಯಲಿಲ್ಲ ಎಂದರೆ ತಲೆ ಓಡವುದಿಲ್, ತಲೆನೋವು ಬರುತ್ತಿದೆ, ನನಗೆ ಎನರ್ಜಿ ಇಲ್ಲ ಎಂದು ಹೇಳುತ್ತಿರುತ್ತಾರೆ.
ಆದರೆ ನಿಜಕ್ಕೂ ಟೀ ಕಾಫಿಗೆ ಇಷ್ಟು ಶಕ್ತಿ ಇದೆಯಾ ಎಂದರೆ ಖಂಡಿತವಾಗಿಯೂ ಇಲ್ಲ ಬದಲಾಗಿ ಟೀ ಕಾಫಿ ಕುಡಿಯುವುದರಿಂದ ದೇಹಕ್ಕೆ ಎಷ್ಟು ನಷ್ಟ ಇದೆ ಗೊತ್ತಾ? ಇದನ್ನು ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳಬೇಕು ಅದಕ್ಕಾಗಿ ಅಂಕಣವನ್ನು ಪೂರ್ತಿಯಾಗಿ ಓದಿ. ಮೊದಲನೇದಾಗಿ ಟೀ, ಕಾಫಿ ಕುಡಿಯುವ ಅಭ್ಯಾಸ ನಮ್ಮ ದೇಶದ್ದು ಅಲ್ಲವೇ ಅಲ್ಲ. ಐರೋಪ್ಯರು ಈ ಪರಿಪಾಟವನ್ನು ರೂಢಿಸಿರುವುದು.
ಇಂದು ಭಾರತದ ಹಳ್ಳಿಗಳಲ್ಲಿ ಮನೆ ಮನೆಗಳಲ್ಲೂ ಟೀ ಮತ್ತು ಕಾಫಿ ಪುಡಿಗಳನ್ನು ಬಳಸುತ್ತಾರೆ. ನಮ್ಮ ದೇಶವು ಟೀ ಬೆಳೆಯುವುದರಲ್ಲಿ ಮೊದಲ ಸ್ಥಾನದಲ್ಲಿದೆ, ಕರ್ನಾಟಕವು ಕಾಫಿ ಬೆಳೆ ಬೆಳೆಯುವುದರಲ್ಲಿ ದೇಶಕ್ಕೆ ಮೊದಲನೇ ಸ್ಥಾನದಲ್ಲಿ ಇದೆ. ಹಾಗೆಯೇ ಟೀ ಕಾಫಿ ಬಳಕೆಯಲ್ಲೂ ಕೂಡ ನಮ್ಮ ದೇಶವೇ ಮೊದಲ ಸ್ಥಾನದಲ್ಲಿ ಇದೆ.
ಟೀ ಕಾಫಿ ಟೀ ಅಭ್ಯಾಸ ಯಾವಾಗ ಶುರು ಆಯ್ತು ಎಂದು ನೋಡುವುದಾದರೆ ಚೀನಿ ರಾಜನೊಬ್ಬನಿಗೆ ಬಿಸಿನೀರು ಕುಡಿಯುವ ಅಭ್ಯಾಸ ಇತ್ತು. ಒಂದು ದಿನ ಆತ ಕುಡಿಯುವ ಬಿಸಿ ನೀರಿಗೆ ಟೀ ಎಲೆಗಳು ಬಿದ್ದ ಕಾರಣ ಆತನಿಗೆ ಹೊಸ ರುಚಿ ಸಿಗುತ್ತದೆ, ಅದನ್ನು ಪ್ರತಿನಿತ್ಯ ಅಭ್ಯಾಸ ಮಾಡಿಕೊಂಡ ಮೇಲೆ ಆತನ ಕಾಯಿಲೆಗಳು ಗುಣವಾಗಲು ಶುರುವಾಗುತ್ತದೆ.
JDS ಮತ್ತು BJP ಮೈತ್ರಿ ಬೆನ್ನಲ್ಲೇ JDS ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ ಸೈಯದ್ ಶಫೀವುಲ್ಲಾ.!
ಅಂದಿನಿಂದ ಟೀ ಎಲೆಗಳನ್ನು ಕುದಿಸಿ ಕುಡಿಯುವ ಅಭ್ಯಾಸ ಶುರುವಾಯಿತು ಎಂದು ಹೇಳಲಾಗುತ್ತದೆ. ನಮ್ಮ ದೇಶದಲ್ಲಿ ಕೂಡ ಹಿಂದೆ ಆಯಾ ಸೀಸನ್ ಗೆ ತಕ್ಕ ಹಾಗೆ ಕಷಾಯಗಳನ್ನು ಸೇವಿತ್ತಿದ್ದರು. ಶುಂಠಿ, ಮೆಣಸು ಹಾಗೂ ಏಲಕ್ಕಿ ಮತ್ತು ತುಳಸಿ, ಅಶ್ವಗಂಧ ಇವುಗಳನ್ನು ಹಾಕಿ ಕುದಿಸಿ ಮಾಡುತ್ತಿದ್ದ ಕಷಾಯ ಇದಕ್ಕಿಂತ ದೇಹಕ್ಕೆ ಆರೋಗ್ಯ ಉಂಟು ಮಾಡುತ್ತಿತ್ತು
ಆದರೆ ನಾವು ಈಗ ಟೀ ಕಾಫಿ ಮಾಡಲು ಟೀ ಪುಡಿ, ಕಾಫಿ ಪುಡಿ ಜೊತೆಗೆ ಸಕ್ಕರೆ ಹಾಲು ಎಲ್ಲವನ್ನು ಮಿಕ್ಸ್ ಮಾಡುತ್ತಿದ್ದೇವೆ. ಹಾಗಾಗಿ ಇದೊಂದು ತಪ್ಪಾದ ಕಾಂಬಿನೇಷನ್ ಆಗಿದೆ. ಜೊತೆಗೆ ಈಗ ಬರುತ್ತಿರುವ ಟೀ ಕಾಫಿ ಪುಡಿಗಳಲ್ಲಿ ಕಲಬೆರಕೆ ಹೆಚ್ಚಾಗುತ್ತಿದೆ. ಲೆದರ್ ಡಸ್ಟ್, ಮರದ ಡಸ್ಟ್, ಹುಣಸೆ ಬೀಜದ ಪುಡಿ ಮತ್ತು ಎಷ್ಟೋ ಸಲ ಇದಕ್ಕೆ ಬಣ್ಣ ಹೆಚ್ಚಿಸುವುದಕ್ಕಾಗಿ ಕೆಮಿಕಲ್ ಗಳು ಮತ್ತು ಕೆಲವೊಂದು ಡಾಕ್ಯುಮೆಂಟರಿಗಳು ಹೇಳುವ ಪ್ರಕಾರ ಪ್ರಾಣಿಗಳ ರಕ್ತವನ್ನು ಕೂಡ ಬಳಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಹಾಗಾಗಿ ಇವುಗಳ ಅಭ್ಯಾಸ ಬಿಟ್ಟುಬಿಡುವುದೇ ಆರೋಗ್ಯಕ್ಕೆ ಒಳ್ಳೆಯದು. ಕಾಫಿ ಟೀ ನಮ್ಮ ಪದ್ಧತಿ ಅಲ್ಲದ ಕಾರಣ, ನಾವು ಅದನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ದೇಹಕ್ಕೆ ಹೊಂದಿಕೊಳ್ಳುವುದಿಲ್ಲ. ಮೊದಲಿಗೆ ಸಾಧ್ಯವಾದಷ್ಟು ಕಡಿಮೆ ಮಾಡಿಕೊಂಡು ನಂತರ ಸಂಪೂರ್ಣವಾಗಿ ಬಿಡಲು ಪ್ರಯತ್ನಿಸಿ ನೀವು ಕುಡಿಯುವ ಕಾಫಿ ಪ್ರಮಾಣ ಕಡಿಮೆ ಮಾಡಿ, ಖಾಲಿ ಹೊಟ್ಟೆಗೆ ಕುಡಿಯುವ ಅಭ್ಯಾಸ ತಪ್ಪಿಸಿ ಊಟ ಆದಮೇಲೆ ಕುಡಿಯುವ ಅಭ್ಯಾಸ ಮಾಡಿ, ದಿನದಲ್ಲಿ ಒಂದು ಅಥವಾ ಎರಡು ಬಾರಿ ಸೇವಿಸುತ್ತಾ ನಿಧಾನವಾಗಿ ಈ ಅಡಿಕ್ಷನ್ ಇಂದ ಹೊರಬನ್ನಿ.