Thursday, September 28, 2023
Home Entertainment ಸ್ಯಾಂಡಲ್ ವುಡ್ ಗೆ ನಿಜವಾದ ಅಧಿಪತಿ ಯಾರು ಗೊತ್ತಾ.? ಗೂಗಲ್ ಕೊಟ್ಟ ನಿಖರ ಮಾಹಿತಿ ಇದು.

ಸ್ಯಾಂಡಲ್ ವುಡ್ ಗೆ ನಿಜವಾದ ಅಧಿಪತಿ ಯಾರು ಗೊತ್ತಾ.? ಗೂಗಲ್ ಕೊಟ್ಟ ನಿಖರ ಮಾಹಿತಿ ಇದು.

 

ಕನ್ನಡ ಚಿತ್ರರಂಗ ಈವರಿಗೆ ಹತ್ತಾರು ಸ್ಟಾರ್ ಹೀರೋಗಳನ್ನು ಕಂಡಿದೆ. ಚಂದನವನದಲ್ಲಿ ಕಪ್ಪು ಬೆಳಕು ಸಿನಿಮಾ ತಯಾರಾಗುತ್ತಿದ್ದ ಕಾಲದಿಂದ ಹಿಡಿದು ಈಗಿನ ಕೆಜಿಎಫ್ ವರೆಗೆ ತೆರೆ ಮೇಲೆ ನಾಯಕನಾಗಿರುವ ಮಂದಿ ಸಾಕಷ್ಟು ಜನರಿದ್ದಾರೆ. ಆದರೆ ಜನಮನ್ನಣೆ ಗಳಿಸಿದ ಅಭಿನಯದಿಂದ ಜನರನ್ನು ಮೋಡಿ ಮಾಡಿದ ಬೆರಳೆಣಿಕೆ ಅಷ್ಟು ಹೀರೋಗಳು ಮಾತ್ರ ಸ್ಟಾರ್ ಹೀರೋಗಳು ಎನ್ನುವ ಖ್ಯಾತಿಗೆ ಒಳಗಾಗಿದ್ದಾರೆ. ಅದರಲ್ಲಿ ಈಗಿನ ಸಮಯಕ್ಕೆ ಇರುವ ಸ್ಟಾರ್ ಹೀರೋಗಳ ಪಟ್ಟಿಯು ಉಳಿದ ಚಿತ್ರರಂಗಕ್ಕೆ ಹೋಲಿಸಿದರೆ ಕನ್ನಡದಲ್ಲಿ ಕಡಿಮೆ ಇದೆ ಎಂದೇ ಹೇಳಬಹುದು.

ಆದರೆ ಇರುವವರಲ್ಲಿ ಯಾರು ಸ್ಯಾಂಡಲ್ವುಡ್ ಬಾಸ್ ಎನ್ನುವುದು ಅನೇಕರ ಪ್ರಶ್ನೆ ಜೊತೆಗೆ ಇವರ ಎಲ್ಲಾ ಸಿನಿಮಾಗಳು ಕೂಡ ಕಲೆಕ್ಷನ್ ಮತ್ತು ಪ್ರಚಾರದ ವಿಷಯದಲ್ಲಿ ಒಂದೇ ಮಟ್ಟಿಗಿನ ಸಕ್ಸಸ್ ಪಡೆಯುವುದರಿಂದ ತಕ್ಕಡಿಯಲ್ಲಿ ಎಲ್ಲರೂ ಸಮವಾಗಿ ತೋರುತ್ತಿದ್ದಾರೆ. ಆದರೆ ಅಭಿಮಾನಿಗಳಿಂದ ಬರುವ ಉತ್ತರ ಬೇರೆ ರೀತಿ ಇದೆ. ಯಾಕೆಂದರೆ ಸಿನಿಮಾ ರಂಗದ ವಿಷಯವಾಗಿ ಅಭಿಮಾನಿಗಳ ನಿರ್ಧಾರವೇ ಫೈನಲ್ ಏಕೆಂದರೆ ಅಣ್ಣಾವ್ರೇ ಹೇಳಿರುವಂತರೆ ಅಭಿಮಾನಿಗಳೇ ದೇವರು ಅವರ ಮೂಲಕವೇ ಚಿತ್ರರಂಗ ಗಟ್ಟಿಯಾಗಿರಲು ಸಾಧ್ಯವಾಗಿರುವುದು.

ಹಾಗಾಗಿ ಅಭಿಮಾನಿಗಳ ಅಭಿಮತ ಏನು ಎಂದು ನೋಡುವುದಾದರೆ ಈಗಾಗಲೇ ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಹೆಸರು ಪಡೆದಿರುವ ದರ್ಶನ್ ಅವರ ಹೆಸರನ್ನು ಹೆಚ್ಚಿನ ಅಭಿಮಾನಿಗಳು ಹೇಳುತ್ತಾರೆ. ಯಾಕೆಂದರೆ ದರ್ಶನ್ ಅವರು ಇಂಡಸ್ಟ್ರಿಯಲ್ಲಿ ಬಹಳ ಕಷ್ಟಪಟ್ಟು ಹೆಸರು ಮಾಡಿದ್ದಾರೆ. ತಂದೆ ಕೂಡ ಹೆಸರಾಂತ ಕಲಾವಿದರ ಆಗಿದ್ದರೂ ಹಂತ ಹಂತಕ್ಕೂ ಸಾವಿರಾರು ಚಾಲೆಂಜ್ ಅನ್ನು ಎದುರಿಸಿಕೊಂಡು ಬಂದು ಈಗ ಚಾಲೆಂಜಿಂಗ್ ಸ್ಟಾರ್ ಟೈಟಲ್ ಜೊತೆಗೆ ಬಾಕ್ಸ್ ಆಫೀಸ್ ಸುಲ್ತಾನ ಆಗಿದ್ದಾರೆ.

ಇವರ ಸಿನಿಮಾ ರಿಲೀಸ್ ಆಗುವ ದಿನ ಕರ್ನಾಟಕಕ್ಕೆ ನಾಡ ಹಬ್ಬದ ಸಂಭ್ರಮ. ಇವರ ಹುಟ್ಟುಹಬ್ಬ ಅಂತೂ ಎಷ್ಟೋ ಮಂದಿಯ ಹೊಟ್ಟೆಪಾಡಿಗೆ ದಾರಿ. ದರ್ಶನ್ ಅವರ ಬಹುತೇಕ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳಾಗಿ ಒಳ್ಳೆ ಕಲೆಕ್ಷನ್ ಗಳಿಸುತ್ತವೆ. ಜೊತೆಗೆ ದರ್ಶನ್ ಅವರ ಬಗ್ಗೆ ಅಭಿಮಾನಿಗಳು ಬಹಳ ಕ್ರೇಜ್ ಇಟ್ಟುಕೊಂಡಿದ್ದಾರೆ. ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಎಂದರೆ ಅದು ದರ್ಶನ್ ಅವರು. ದರ್ಶನ್ ಅವರು ಸಹ ತಮ್ಮ ಅಭಿಮಾನಿಗಳನ್ನು ಅಷ್ಟೇ ಇಷ್ಟ ಪಡುತ್ತಾರೆ.

ಮೊದಲಾಗಿ ಅವರನ್ನು ಅಭಿಮಾನಿಗಳು ಎಂದು ಕರೆಯುವರು ಬದಲಾಗಿ ಪ್ರೀತಿಯಿಂದ ನನ್ನ ಸೆಲೆಬ್ರಿಟಿಸ್ ಎಂದು ಕರೆಯುತ್ತಾರೆ. ಇತ್ತೀಚೆಗೆ ಅವರು ಅವರ ಅಭಿಮಾನಿಗಳಿಗೆಲ್ಲ ಧನ್ಯತೆ ಅರ್ಪಿಸುವ ಕಾರಣಕ್ಕಾಗಿ ನನ್ನ ಸೆಲೆಬ್ರಿಟಿಸ್ ಎಂದು ಎದೆ ಮೇಲೆ ಹಚ್ಚೆ ಕೂಡ ಹಾಕಿಸಿಕೊಂಡಿದ್ದಾರೆ. ದರ್ಶನ್ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ಒಳ್ಳೆ ಹೆಸರು ಮಾಡಿದ್ದಾರೆ ಅವರ ಆಕ್ಟಿಂಗ್ ಕೂಡ ಚೆನ್ನಾಗಿದೆ ಆಯ್ದುಕೊಳ್ಳುವ ಚಿತ್ರಕಥೆ ಮತ್ತು ಮಾಡುವ ಪಾತ್ರ ಎಲ್ಲವೂ ಸರಿ. ಆದರೆ ವೈಯಕ್ತಿಕ ವಿಚಾರದಲ್ಲಿ ಮಾತ್ರ ಇವರ ಬದುಕು ಸದಾ ವಿವಾದಗಳಿಂದ ಕೂಡಿರುತ್ತದೆ.

ಅವರ ವೈಯಕ್ತಿಕ ವಿಚಾರಗಳು ಏನೇ ಇದ್ದರೂ ಕೂಡ ಅಭಿಮಾನಿಗಳು ಮಾತ್ರ ಈ ಬಗ್ಗೆ ದರ್ಶನ್ ಮೇಲೆ ಕಿಂಚಿತ್ತೂ ಮುನಿಸಿಕೊಂಡಿಲ್ಲ. ಅವರ ವೈಯಕ್ತಿಕ ವಿಚಾರ ಅವರಿಗೆ ಆದರೆ ಅಭಿಮಾನಿಗಳ ಪಾಲಿಗೆ ಅವರೆ ಬಾಸ್, ಕೊನೆವರೆಗೂ ನಾನು ಡಿ ಬಾಸ್ ಅಭಿಮಾನಿ ಆಗಿಯೇ ಇರುತ್ತೇನೆ ಎನ್ನುತ್ತಿದ್ದಾರೆ ಫ್ಯಾನ್ಸ್. ವಿವಾದ ಒಂದರ ಪರಿಣಾಮ ಕನ್ನಡ ಸುದ್ದಿ ಮಾಧ್ಯಮಗಳು ಕೂಡ ದರ್ಶನ್ ರನ್ನು ಬ್ಯಾನ್ ಮಾಡಿದೆ. ಅವರ ಸುದ್ದಿ ಹಾಗೂ ಅವರ ಸಿನಿಮಾಗೆ ಸಂಬಂಧಪಟ್ಟ ಯಾವ ಪ್ರಚಾರವನ್ನು ನ್ಯೂಸ್ ವಾಹಿನಿಗಳು ಪ್ರಸಾರ ಮಾಡದೇ ಇದ್ದರೂ ಅವರಿಗೆ ತೊಡೆತಟ್ಟಿ ನಿಂತ ಅಭಿಮಾನಿಗಳು ಕ್ರಾಂತಿ ಸಿನಿಮಾದ ವಿಷಯವನ್ನು ಕರ್ನಾಟಕ ಹಳ್ಳಿ ಹಳ್ಳಿಗೂ ಮುಟ್ಟಿಸಿ ಸಿನಿಮಾವನ್ನು ಗೆಲ್ಲಿಸಿದ್ದಾರೆ.

ಈ ರೀತಿ ಮೀಡಿಯಾವನ್ನು ಎದುರು ಹಾಕಿಕೊಂಡು ಸಿನಿಮಾ ರಿಲೀಸ್ ಮಾಡುವ ತಾಕತ್ ಇರುವುದು ಚಾಲೆಂಜಿಂಗ್ ಸ್ಟಾರ್ ಒಬ್ಬರಿಗೆ. ದರ್ಶನ್ ಅವರ ಬಗ್ಗೆ ಇನ್ನೊಂದು ವಿಷಯ ಏನೆಂದರೆ ಏನಾದರೂ ಗೂಗಲ್ ಅಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಆಫ್ ಇಂಡಿಯಾ ಸಿನಿಮಾ ಇಂಡಸ್ಟ್ರಿ ಎಂದರೆ ದರ್ಶನ್ ಅವರ ವಿಕಿಪಿಡಿಯಾ ಓಪನ್ ಆಗುತ್ತದೆ. ಭಾರತದ ಚಿತ್ರರಂಗ ಎಂದರೆ ಅಲ್ಲಿ ಕಾಲಿವುಡ್, ಮಾಲಿವುಡ್, ಬಾಲಿವುಡ್, ಸ್ಯಾಂಡಲ್ವುಡ್, ಟಾಲಿವುಡ್ ಎಲ್ಲಾ ಇಂಡಸ್ಟ್ರಿ ಗಳು ಕೂಡ ಸೇರುತ್ತವೆ ಆದರೂ ಕೂಡ ದರ್ಶನ ಅವರ ಹೆಸರನ್ನೇ ಗೂಗಲ್ ತೋರಿಸಿರುವುದು ದರ್ಶನ್ ಅಭಿಮಾನಿಗಳ ಪಾಲಿಗೆ ಬಹಳ ಸಂತೋಷದ ವಿಚಾರ ಆಗಿದೆ. ತಮ್ಮ ನೆಚ್ಚಿನ ನಾಯಕನ ಬಗ್ಗೆ ಹೆಮ್ಮೆಯಿಂದ ಈ ವಿಚಾರವನ್ನು ಹೇಳಿಕೊಂಡು ದರ್ಶನ್ ಅಭಿಮಾನಿಗಳು ಸಂಭ್ರಮಿಸುತ್ತಾರೆ.

- Advertisment -