ಹತ್ತು ವರ್ಷ ಪ್ರೀತಿಸಿ ಮದುವೆಯಾದರು ಅರ್ಧಕ್ಕೆ ಕೈ ಕೊಟ್ಟಿದ್ದೀಯಾಕೆ.? ಉತ್ತಮ ನಟಿ, ಆ್ಯಂಕರ್ ಆಗಿರುವ ಸುಷ್ಮಾ ಕೆ ರಾವ್ ಅವರ ಬದುಕಿನ ಘೋರ ದು.ರಂ.ತ.! ಕಿರುತೆರೆಯ ಜನಪ್ರಿಯ ಧಾರಾವಾಹಿ ಆಗಿದ್ದಂತಹ ಗುಪ್ತಗಾಮಿನಿ ಧಾರಾವಾಹಿಯಲ್ಲಿ ಭಾವನ ಪಾತ್ರದ ಮೂಲಕ ಪ್ರೇಕ್ಷಕರ ಮನದಲ್ಲಿ ಸ್ಥಾನ ಪಡೆದಿದ್ದಂತಹ ನಟಿ ಸುಷ್ಮಾ ಕೆ ರಾವ್ ಅವರು. ಇವರು ಒಬ್ಬ ಭರತನಾಟ್ಯ ಮತ್ತು ಕುಚೂಪುಡಿ ನೃತ್ಯಗಾರ್ತಿಯೂ ಆಗಿದ್ದಾರೆ. ಕಿರುತೆರೆಯ ಉತ್ತಮ ನಟೆ ಅಲ್ಲದೆ ಉತ್ತಮ ನಿರೂಪಕಿಯೂ ಹೌದು. ಇವರು ಸುಮಾರು ಹತ್ತು ವರ್ಷಗಳ ಬಳಿಕ ಪ್ರಸ್ತುತ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನೂತನ ಧಾರವಾಹಿ ಆಗಿರುವ ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಭಾಗ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರ ಮನ ಗೆಲ್ಲುವಂತಹ ಅಭಿನಯ ಮಾಡುತ್ತಿದ್ದಾರೆ.
ಇಂತಹ ಒಬ್ಬ ನಟಿಯ ಜೀವನದ ಕಷ್ಟದ ದಿನಗಳು, ಆಕೆಯನ್ನು ಪ್ರೀತಿಸಿ ಮದುವೆ ಆಗಿದ್ದವರು ಯಾರು? ಅವರ ಪತಿಯು ಕೈ ಕೊಟ್ಟಿರುವುದು ಏಕೆ? ಆಕೆಯ ಒಂಟಿ ಜೀವನ ಹೇಗೆ ಇದೆ ಎಂಬುದರ ಬಗ್ಗೆ ತಿಳಿಯೋಣ. ಸುಷ್ಮಾ ಕೆ ರಾವ್ ಅವರು ಮೂಲತಃ ಚಿಕ್ಕಮಗಳೂರಿನ ಮಲೆನಾಡಿನ ಕೊಪ್ಪದವರು. ಇವರು ಒಂದು ಸಾಂಪ್ರದಾಯಿಕ ಮನೆತನಕ್ಕೆ ಸೇರಿರುತ್ತಾರೆ. ಇವರ ತಂದೆ ನಿವೃತ್ತ ಮಿಲ್ಟ್ರಿ ಮ್ಯಾನ್ ಆಗಿದ್ದರು. ಅವರ ತಂದೆ ಅವರೆ ಸುಷ್ಮಾ ಅವರಿಗೆ ರೋಲ್ ಮಾಡೆಲ್ ಆಗಿದ್ದರು. ಇತ್ತೀಚಿನ ದಿನಗಳಲ್ಲಿ ಅನಾರೋಗ್ಯದಿಂದ ಅವರು ನಿ.ಧ.ನ.ರಾಗಿದ್ದಾರೆ ಎಂದು ಸುಷ್ಮಾ ಅವರು ಅವರ ತಂದೆಯ ಬಗ್ಗೆ ತಿಳಿಸಿದ್ದಾರೆ.
ಸುಷ್ಮಾ ಅವರು ಹಾಗೂ ಸೂಪರ್ ಹಿಟ್ ಚಲನಚಿತ್ರ ಮುಂಗಾರಮಳೆ ಸಿನಿಮಾದ ಕತೆಯನ್ನು ಬರೆದಿರುವಂತಹ ನಿರ್ದೇಶಕರು ಆಗಿರುವ ಪ್ರೀತಮ್ ಗುಬ್ಬಿ ಅವರು ಪರಸ್ಪರ 7 ವರ್ಷಗಳ ಕಾಲ ಪ್ರೀತಿಸಿದ್ದರು. ನಂತರ ಇವರ ಪ್ರೀತಿಗೆ ಮನೆಯವರ ವಿರೋಧವಿದ್ದರು ಕೊನೆಗೆ ಮನೆಯವರನ್ನು ಒಪ್ಪಿಸಿ ಅಗ್ನಿಸಾಕ್ಷಿಯಾಗಿ, ಸಪ್ತಪದಿ ತುಳಿದು ಮದುವೆ ಆಗುತ್ತಾರೆ. ಆ ಸಂದರ್ಭದಲ್ಲಿ ಕಿರುತೆರೆಯಲ್ಲಿ ಉತ್ತಂಗದಲ್ಲಿ ಇದ್ದ ಸುಷ್ಮಾ ಅವರು ವೈವಾಹಿಕ ಜೀವನದ ಜೊತೆಗೆ ಸುಮಾರು 6 -7 ವರ್ಷಗಳ ಕಾಲ ಕಿರುತೆರೆಯ ಧಾರಾವಾಹಿಯಲ್ಲಿ ನಟನೆ, ನಿರೂಪಣೆ ಹಾಗೂ ನೃತ್ಯ ಎಲ್ಲವನ್ನು ನಿಭಾಯಿಸಿಕೊಂಡು ಬರುತ್ತಾರೆ.
ಆದರೆ ನಂತರದ ದಿನಗಳಲ್ಲಿ ಇವರಿಬ್ಬರ ನಡುವೆ ವೈಮನಸ್ಸು ಉಂಟಾಗಿ ಸಂಸಾರದಲ್ಲಿ ಬಿರುಕುಗಳು ಮೂಡಲು ಪ್ರಾರಂಭವಾಗುತ್ತದೆ. ಇಬ್ಬರೂ ಕೂಡ ತಮ್ಮ ತಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಹೊಂದುತ್ತಾ ಹೋದಂತೆ ಸಂಸಾರದಲ್ಲಿ ಸಣ್ಣ ಪುಟ್ಟ ಜಗಳಗಳು ಪ್ರಾರಂಭವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡುತ್ತವೆ. ಪ್ರೀತಿಸಿ ಮದುವೆ ಆದ ಕೆಲವೇ ವರ್ಷಗಳು ಆದ್ದರಿಂದ ಒಬ್ಬರಿಗೊಬ್ಬರು ಬಿಟ್ಟು ಕೊಡಬಾರದು ಎಂದು ಸಾಕಷ್ಟು ನೋವುಗಳನ್ನು ಅನುಭವಿಸಿ ಜೀವನ ನಡೆಸಿದ್ದರು.
ಆದರೆ ಕೊನೆಗೆ ಸಹಿಸಿಕೊಳ್ಳಲಾಗದೆ ಸಂಸಾರ ಮುರಿದು ಬೀಳುತ್ತದೆ. ಇಬ್ಬರು ಬೇರೆ ಬೇರೆ ಬದುಕಲು ಪ್ರಾರಂಭಿಸುತ್ತಾರೆ. ಆದರೆ ಆಶ್ಚರ್ಯ ಏನೆಂದರೆ ಇವರಿಬ್ಬರು ವಿವಾಹ ವಿ.ಚ್ಛೇ.ದ.ನ ಪಡೆಯಲು ಕೋರ್ಟ್ ಮೇಟ್ಟಿಲು ಏರಿರುವುದಿಲ್ಲ. ಮುಂದೆ ಅವರಿಬ್ಬರೂ ಮತ್ತೆ ಒಂದಾಗಿ ಬಾಳಬಹುದು ಎಂದು ಅನಿಸುತ್ತದೆ. ಪ್ರಸ್ತುತ ಅವರು ಮುರಿದು ಬಿದ್ದಿರುವ ವೈವಾಹಿಕ ಜೀವನವನ್ನು ಗಂಭೀರವಾಗಿ ಪರಿಗಣಿಸದೆ ಜೀವನದಲ್ಲಿ ಸಾಕಷ್ಟು ನೋವುಗಳನ್ನು ಕಷ್ಟಗಳನ್ನು ಎದುರಿಸಿ ತಮ್ಮ ಅಭಿನಯ ಹಾಗೂ ನಿರೂಪಣೆಯ ಜೀವನದ ಕಡೆ ಆಸಕ್ತಿ ವಹಿಸಿ ಬದುಕು ನಡೆಸುತ್ತಾ ಇದ್ದಾರೆ.
ಜೀವನವನ್ನು ಒಂದು ಸವಾಲಾಗಿ ಪರಿಗಣಿಸಿ ನಟನೆ ಹಾಗೂ ನಿರೂಪಕಿಯಾಗಿ ಹೆಚ್ಚಿನ ಜನಪ್ರಿಯತೆ ಗಳಿಸಿದ್ದಾರೆ. ಪ್ರಸ್ತುತ ಸುಷ್ಮಾ ಅವರು ಹತ್ತು ವರ್ಷಗಳ ಬಳಿಕ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಭಾಗ್ಯ ಪಾತ್ರ ನಿರ್ವಹಿಸುವ ಮೂಲಕ ಕಿರುತೆರೆಗೆ ರೀ ಎಂಟ್ರಿ ಕೊಟ್ಟಿದ್ದು ಅವರ ಅಭಿಮಾನಿಗಳಿಗೆ ಸಂತಸದ ವಿಚಾರ ಆಗಿದೆ. ಕಿರುತೆರೆಯಲ್ಲಿ ಉತ್ತಮ ನಿರೂಪಕಿ ಆಗಿ ಕೆಲಸ ನಿರ್ವಹಿಸುತ್ತಿರುವ ಅನುಶ್ರೀ ಅವರ ನಂತರ ಸುಷ್ಮಾ ಕೆ ರಾವ್ ಅವರು ನಿರೂಪಣೆಯಲ್ಲಿ ಉತ್ತಮ ನಿರೂಪಕಿಯಾಗಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.