ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾವನ್ನೇ ಉಸಿರಾಗಿಸಿಕೊಂಡ ಒಬ್ಬ ಸಿನಿ ಪ್ರೇಮಿ. ಸಿನಿಮಾದಲ್ಲಿ ರವಿಚಂದ್ರನ್ ಅವರು ಅಭಿನಯಕ್ಕಿಂತ ಡೈರೆಕ್ಷನ್ ಇಂದಾನೆ ಹೆಚ್ಚು ಹೆಸರುವಾಸಿ ಎಂದು ಹೇಳಬಹುದು. ಯಾಕೆಂದರೆ ರವಿಚಂದ್ರನ್ ಅವರ ಡೈರೆಕ್ಷನ್ ನಲ್ಲಿ ಸಿನಿಮಾಗಳು ವಿವಿಧ ರೀತಿಯಲ್ಲಿ ಇರುತ್ತವೆ. ಸಿನಿಮಾದ ತುಂಬಾ ರಿಚ್ನೆಸ್ ತುಂಬುಕೊಂಡಿದ್ದು ಅಲ್ಲಿ ಪ್ರಾಪರ್ಟಿ ಗಳು ಹಾಗೂ ಹಾಡುಗಳು ಮತ್ತು ಮ್ಯೂಸಿಕ್ ಗೆ ವಿಶೇಷವಾದ ಸ್ಥಾನಮಾನ ಇರುತ್ತದೆ. ರವಿಚಂದ್ರನ್ ಅವರ ಸಿನಿಮಾ ಎಂದರೆ ನಿಜಕ್ಕೂ ಕಣ್ಣಿಗೆ ಒಂದು ಹಬ್ಬ. ಸಿನಿಮಾ ಬಗ್ಗೆ ಇಷ್ಟೊಂದು ಕನಸು ಇಟ್ಟುಕೊಂಡ ರವಿಚಂದ್ರನ್ ಕನಸುಗಾರ ಎಂದು ಕೂಡ ಕರೆಸಿಕೊಂಡಿದ್ದಾರೆ.
ರವಿಚಂದ್ರನ್ ಅವರ ಸಿನಿಮಾದಲ್ಲಿ ಮತ್ತೊಂದು ವಿಷಯದ ಗಮನ ಸೆಳೆಯುತ್ತದೆ ಅದೇನೆಂದರೆ ಪ್ರತಿ ಸಿನಿಮಾದಲ್ಲೂ ಕೂಡ ಇವರ ಪ್ರೀತಿ ಪ್ರೇಮ ಪ್ರಣಯದ ಕಥೆ. ಇದರ ಬಗ್ಗೆ ಇತ್ತೀಚೆಗೆ ಸಂದರ್ಶನ ಒಂದರಲ್ಲಿ ನಟಿ ಪ್ರಿಯಾಂಕ ಉಪೇಂದ್ರ ಅವರು ಹೇಳಿಕೊಂಡಿದ್ದಾರೆ. ಪ್ರಿಯಾಂಕ ಉಪೇಂದ್ರ ಅವರು ರವಿಚಂದ್ರನ್ ಅವರ ಜೊತೆ ಮಲ್ಲ ಸಿನಿಮಾದಲ್ಲಿ ನಟಿಸಿದ್ದಾರೆ. ಮಲ್ಲ ಸಿನಿಮಾದಲ್ಲಿ ಎರಡು ಶೇಡ್ ಗಳಲ್ಲಿ ಪ್ರಿಯಾಂಕ ಉಪೇಂದ್ರ ಅವರು ಕಾಣಿಸಿಕೊಂಡಿದ್ದು ಬಹಳ ಬೋಲ್ಡ್ ಆದ ಮತ್ತು ಗ್ಲಾಮರ್ ಆದ ಲುಕ್ ಅಲ್ಲಿ ಕಂಗೊಳಿಸಿದ್ದಾರೆ. ಆಗಿನ್ನೂ ಪ್ರಿಯಾಂಕ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದರು.
ಅದಾಗಲೇ ಬಂಗಾಳಿ, ಒರಿಯ, ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಮಿಂಚಿದ್ದರೂ ಕನ್ನಡ ಚಿತ್ರರಂಗ ಅವರಿಗೆ ಹೊಸದಾಗಿತ್ತು. ಎಚ್‌ಟುಓ ಸಿನಿಮಾ ಮೂಲಕ ಮೊದಲ ಬಾರಿಗೆ ಇಂಡಸ್ಟ್ರಿ ಗೆ ಎಂಟ್ರಿ ಕೊಟ್ಟ ಅವರಿಗೆ ಬಹಳ ಬೇಗನೆ ರವಿಚಂದ್ರನ್, ವಿಷ್ಣುವರ್ಧನ್ ರಂತಹ ನಟರೊಂದಿಗೆ ಅಭಿನಯಿಸುವ ಅವಕಾಶ ಸಿಕ್ಕಿ ಬಿಡುತ್ತದೆ. ರವಿಚಂದ್ರನ್ ಅವರು ಸಿನಿಮಾಗಳಲ್ಲಿ ನಟಿಯರಿಗೆ ಹೇಗೆ ಮಣೆ ಆಗುತ್ತಾರೆ ಎಂದು ಎಲ್ಲರಿಗೂ ಗೊತ್ತಿದೆ. ನಟಿಯರ ಸೌಂದರ್ಯವನ್ನು ಇನ್ನು ಅದ್ಭುತವಾಗಿ ತೆರೆ ಮೇಲೆ ತೋರಿಸುವ ಚಾಣಕ್ಷತನದಲ್ಲಿ ರವಿಚಂದ್ರನ್ ಅವರಿಗೆ ಅವರೇ ಸಾಟಿ. ಇಂತಹ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಎಂದು ಎಲ್ಲರೂ ಬಯಸುತ್ತಾರೆ.
ಹಾಗೆಯೇ ಪ್ರಿಯಾಂಕ ಉಪೇಂದ್ರ ಅವರು ಕೂಡ ಮಲ್ಲ ಸಿನಿಮಾ ಆಡಿಶನ್ ಗೆ ಹೋಗಿರುತ್ತಾರೆ. ಮೊದಮೊದಲು ಹೈಟ್ ಕಡಿಮೆಯಿದ್ದೇನೆ, ಕನ್ನಡ ಬರುವುದಿಲ್ಲ ಎನ್ನುವ ಗೊಂದಲದಲ್ಲಿ ಹೋಗಿದ್ದ ಇವರು ಒಂದೇ ಒಂದು ಸೀನ್ ಅನ್ನು ಮಾಡಿ ತೋರಿಸುತ್ತಾರೆ. ಮೊದಲ ಬಾರಿಗೆ ರವಿಚಂದ್ರನ್ ಇವರನ್ನು ಓಕೆ ಮಾಡಿಬಿಡುತ್ತಾರೆ. ನಂತರ ನಡೆದಿದ್ದೆಲ್ಲಾ ಇತಿಹಾಸ. ಮಲ್ಲ ಸಿನಿಮಾದ ಹಾಡುಗಳಲ್ಲಿ ಮತ್ತು ಕೆಲ ಪಾತ್ರಗಳಲ್ಲಿ ಇವರು ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಮಾಧ್ಯಮಗಳಲ್ಲಿ ವಿವಾದ ಕೂಡ ಆಗುತ್ತದೆ. ಆದರೆ ಇದೆಲ್ಲ ಸಿನಿಮಾ ಇಂದ ಆಚೆಗಿನ ಮಂದಿ ಆಡುವ ಮಾತು.
ಇಂದಿಗೂ ಸಹ ಪ್ರಿಯಾಂಕ ಉಪೇಂದ್ರ ಅವರು ಮಲ್ಲ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದಕ್ಕಾಗಿ ಬಹಳ ಖುಷಿಪಡುತ್ತಾರೆ. ಅಲ್ಲದೆ ರವಿಚಂದ್ರನ್ ಅವರ ಡೈರೆಕ್ಷನ್ ಅನ್ನು ಹಾಡಿ ಹೊಗಳುತ್ತಾರೆ. ಇದೇ ಮಾತುಗಳನ್ನು ಕೂಡ ಅವರು ಸಂದರ್ಶನದಲ್ಲಿ ಹೇಳಿದ್ದಾರೆ. ರವಿಚಂದ್ರನ್ ಅವರು ಸಿನಿಮಾದಲ್ಲಿ ನಟಿಯರನ್ನು ಎಷ್ಟು ಚೆನ್ನಾಗಿ ತೋರಿಸುತ್ತಾರೆ ಅವರಷ್ಟು ಗ್ಲಾಮರ್ ಆಗಿ ನಟಿಯರನ್ನು ತೋರಿಸಲು ಬೇರೆಯವರಿಂದ ಸಾಧ್ಯವಿಲ್ಲ. ಅವರ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದೇ ಒಂದು ಅದೃಷ್ಟ, ಅದು ಎಲ್ಲರಿಗೂ ಸಿಗುವುದಿಲ್ಲ ಎಂದು ಸಹ ಹೇಳಬಹುದು. ರವಿಚಂದ್ರನ್ ಅವರು ಮಾತ್ರ ಸಿನಿಮಾಗಳಲ್ಲಿ ಅವರಷ್ಟೇ ನಟಿಯರಿಗೂ ಕೂಡ ಪ್ರಾಮುಖ್ಯತೆ ಕೊಟ್ಟು ಕೊನೆವರೆಗೂ ಜೊತೆಯಾಗಿ ಇಟ್ಟುಕೊಳ್ಳುವುದು.
ಹಾಗಾಗಿ ಅವರ ಮತ್ತಷ್ಟು ಸಿನಿಮಾಗಳಲ್ಲಿ ನಟಿಸುವ ಆಸೆ ನನಗೆ ಈಗಲೂ ಇದೆ ಎಂದು ಹೇಳಿಕೊಂಡಿದ್ದಾರೆ. ಪ್ರಿಯಾಂಕಾ ಉಪೇಂದ್ರ ಅವರು ಇಂಡಸ್ಟ್ರಿಗೆ ಬಂದು ನೋಡ ನೋಡುತ್ತಿದ್ದಂತೆ ಎರಡು ದಶಕಗಳು ಆಗಿ ಹೋಯಿತು. ಮದುವೆ ಆದ ಬಳಿಕ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದ ಇವರು ಈಗ ಸೆಕೆಂಡ್ ವಿನ್ನಿಂಗ್ ಆರಂಭಿಸಿದ್ದಾರೆ. ಜೊತೆಗೆ ಈಗಾಗಲೇ ಅವರ 50 ಸಿನಿಮಾಗಳು ಪೂರ್ತಿ ಆಗಿದೆ. ರವಿಚಂದ್ರನ್ ಅವರ ಜೊತೆ ಮತ್ತೊಮ್ಮೆ ಕ್ರೇಜಿಸ್ಟಾರ್ ಚಿತ್ರದಲ್ಲೂ ಕೂಡ ಪ್ರಿಯಾಂಕ ಉಪೇಂದ್ರ ಅವರು ಕಾಣಿಸಿಕೊಂಡಿದ್ದರು.
ಈಗ ರವಿಚಂದ್ರನ್ ಅವರು ಪೋಷಕ ಪಾತ್ರಧಾರಿ ಆಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಿರುತೆರೆಯ ರಿತಾಲಿಟಿ ಶೋಗಳಿಗೆ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆಗೆಲ್ಲಾ ಅತಿಥಿಯಾಗಿ ಪ್ರಿಯಾಂಕ ಉಪೇಂದ್ರ ಅವರು ಬಂದಾಗ ತಪ್ಪದೆ ವೇದಿಕೆ ಮೇಲೆ ಅವರ ಜೊತೆ ನೃತ್ಯ ಕೂಡ ಮಾಡುತ್ತಾರೆ. ಪ್ರಿಯಾಂಕ ಉಪೇಂದ್ರ ಅವರ ಜೊತೆ ರವಿ ಸರ್ ಡ್ರಾಮಾ ಜೂನಿಯರ್ಸ್ ವೇದಿಕೆ ಮೇಲೆ ಡ್ಯಾನ್ಸ್ ಮಾಡಿರುವ ವಿಡಿಯೋಗಳು ವೈರಲ್ ಆಗುತ್ತಿವೆ. ಇದನ್ನು ಕಂಡು ಎಲ್ಲರೂ ಇಬ್ಬರ ಕಾಂಬಿನೇಷನ್ ಮತ್ತೊಂದು ಸಿನಿಮಾ ಮಾಡಿ ನಾವೆಲ್ಲರೂ ನೋಡಲು ಕಾತುರರಾಗಿದ್ದೇವೆ ಎಂದು ಕೇಳುತ್ತಿದ್ದಾರೆ.
https://youtu.be/Jw5bmoADImU