ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರು ಮುಟ್ಟಿದ್ದೆಲ್ಲಾ ಚಿನ್ನ ಎನ್ನಬಹುದು. ಯಾಕೆಂದರೆ ಬಹುತೇಕ ಇವರು ನಟಿಸಿದ ಎಲ್ಲಾ ಚಿತ್ರಗಳು ಕೂಡ ಸೂಪರ್ ಹಿಟ್ ಆಗಿವೆ, ಇವರ ಸಹಜ ಅಭಿನಯಕ್ಕೆ ಹಲವು ಸಿನಿಮಾಗಳಲ್ಲಿ ಇವರಿಗೆ ಫಿಲಂ ಅವಾರ್ಡ್ ಕೂಡ ಬಂದಿದೆ. ರಾಧಿಕಾ ಪಂಡಿತ್ ಅವರು ಸಿನಿಮಾದಲ್ಲಿ ಇದ್ದರೆ ಆ ಸಿನಿಮಾ ಗೆಲ್ಲುತ್ತದೆ ಎಂದೇ ಕನ್ನಡ ನಿರ್ಮಾಪಕರುಗಳ ಭರವಸೆ. ಹಾಗಾಗಿ ಇವರನ್ನು ಚಂದನವನದ ಲಕ್ಕಿ ಡಾಲ್ ಕೂಡ ಕರೆಯುತ್ತಾರೆ.
ರಾಧಿಕಾ ಪಂಡಿತ್ ಅವರು 2004 ರಿಂದ ಬಣ್ಣದ ಲೋಕದಲ್ಲಿ ಇದ್ದಾರೆ. ಮೊದ ಮೊದಲು ಕಿರುತೆರೆಯ ಧಾರವಾಹಿಗಳಲ್ಲಿ ಬಣ್ಣ ಹಚ್ಚಿದ ಇವರು ನಂದಗೋಕುಲ ಧಾರಾವಾಹಿಯ ಲೀಡ್ ರೋಲ್ ಅಲ್ಲಿ ಕಾಣಿಸಿಕೊಂಡಿದ್ದರು. ಅದನ್ನು ಹೊರತುಪಡಿಸಿ ಕಾದಂಬರಿ ಮತ್ತು ಇತರ ಧಾರವಾಹಿಗಳಲ್ಲಿ ಸಹಕಲಾವಿದೆಯಾಗಿ ನಟಿಸಿದ್ದರು. ನಂತರ ಬಂದ ಮೊಗ್ಗಿನ ಮನಸ್ಸು ಎನ್ನುವ ಚಿತ್ರವು ಇವರ ಬದುಕಿನ ದಿಕ್ಕಿನ್ನೇ ಬದಲಾಯಿಸಿತು.
ಮೊದಲ ಬಾರಿಗೆ ನಾಯಕಿಯಾಗಿ ತೆರೆಮೇಲೆ ಕಾಣಿಸಿಕೊಂಡ ಇವರಿಗೆ ಅದೇ ಸಿನಿಮಾದಲ್ಲಿ ಯಶ್ ಅವರು ಜೋಡಿಯಾಗಿ ಕಾಣಿಸಿಕೊಂಡರು. 2008 ರಲ್ಲಿ ಕಂಡ ಮೊಗ್ಗಿನ ಮನಸ್ಸು ಸಿನಿಮಾ ಆ ತಂಡಕ್ಕೆ ದೊಡ್ಡ ಮಟ್ಟದ ಯಶಸ್ಸು ಕೊಟ್ಟಿತ್ತು. ಆ ಸಿನಿಮಾ ಮೂಲಕ ರಾಕಿಂಗ್ ಸ್ಟಾರ್ ಯಶ್ ರಂತಹ ಪ್ರತಿಭೆ ಕನ್ನಡ ಚಲನಚಿತ್ರಕ್ಕೆ ದೊರೆಯಿತು. ಮತ್ತು ರಾಧಿಕಾ ಪಂಡಿತ್, ನಿರ್ದೇಶಕ ಶಶಾಂಕ್ ಇವರೆಲ್ಲರಿಗೂ ಬಿಗ್ ಬ್ರೇಕ್ ನೀಡಿತ್ತು.
ಆನಂತರ ಅವರು ಒಲವೇ ಜೀವನ ಲೆಕ್ಕಾಚಾರ, ಲವ್ ಗುರು, ಕೃಷ್ಣನ್ ಲವ್ ಸ್ಟೋರಿ, ಹುಡುಗರು, ಕಡ್ಡಿಪುಡಿ, ಡ್ರಾಮಾ, ಅದ್ದೂರಿ, ಬಹದ್ದೂರ್ ಇನ್ನೂ ಮುಂತಾದ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಸ್ಯಾಂಡಲ್ವುಡ್ ಸ್ಟಾರ್ಗಳಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಆಕ್ಷನ್ ಧ್ರುವ ಸರ್ಜಾ, ರಾಕಿಂಗ್ ಸ್ಟಾರ್ ಯಶ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೊತೆ ನಾಯಕ ನಟಿಯಾಗಿ ಕಾಣಿಸಿಕೊಂಡಿರುವ ಇವರು ಹೊಸ ಹೀರೋಗಳ ಜೊತೆಗೂ ಕೂಡ ಅಭಿನಯಿಸಿದ್ದಾರೆ.
ಆದರೆ ಇವರು ದರ್ಶನ್ ಮತ್ತು ಸುದೀಪ್ ಅವರ ಜೊತೆ ನಾಯಕಿಯಾಗಿ ಸಿನಿಮಾ ಮಾಡಿಲ್ಲ. ಇದರ ಬಗ್ಗೆ ಹಲವು ಬಾರಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿದೆ. ಮೊದ ಮೊದಲು ಇದಕ್ಕೆಲ್ಲಾ ಯಶ್ ಅವರೇ ಕಾರಣ ಎಂದು ಎಲ್ಲರೂ ಮಾತನಾಡಿ ಕೊಳ್ಳುತ್ತಿದ್ದರು. ಯಾಕೆಂದರೆ ಡ್ರಾಮಾ ಸಿನಿಮಾ ಸಂದರ್ಭದಲ್ಲಿ ಪರಸ್ಪರ ಪ್ರೀತಿ ನಿವೇದನೆ ಮಾಡಿಕೊಂಡು ಗುಟ್ಟಾಗಿ ಇವರಿಬ್ಬರು ಪ್ರೀತಿಸುತ್ತಿರುತ್ತಾರೆ.
ಹೀಗಾಗಿ ಅವರಿಂದಲೇ ಇವರು ಬೇರೆ ನಟರ ಜೊತೆ ನಾಯಕಿಯಾಗಿ ನಟಿಸುತ್ತಿಲ್ಲ ಎನ್ನುವ ಆಪಾದನೆ ಯಶ್ ಮೇಲೆ ಬರುತ್ತಿತ್ತು. ಆದರೆ ಅದಕ್ಕೆಲ್ಲಾ ಈಗ ರಾಧಿಕಾ ಪಂಡಿತ್ ಅವರು ಸ್ಪಷ್ಟವಾಗಿ ಉತ್ತರ ನೀಡಿ ಎಲ್ಲರ ಅನುಮಾನಗಳಿಗೂ ತೆರೆ ಎಳೆದಿದ್ದಾರೆ. ಹೀಗೆ ಒಂದು ಸಂದರ್ಶನದಲ್ಲಿ ಇದೇ ಪ್ರಶ್ನೆ ಅವರಿಗೆ ಎದುರಾಗುತ್ತದೆ ನೀವು ಮಾಡಿದ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಆಗುತ್ತದೆ.
ಆದರೆ ನೀವು ದರ್ಶನ್ ಮತ್ತು ಸುದೀಪ್ ಜೊತೆ ಮಾತ್ರ ಇನ್ನು ನಾಯಕಿ ನಟಿಯಾಗಿ ಕಾಣಿಸಿಕೊಂಡಿಲ್ಲ ಯಾಕೆ ಅಲ್ಲದೆ ಅವರ ಸಿನಿಮಾದಲ್ಲಿ ಸಣ್ಣ ಪಾತ್ರವನ್ನು ಸಹ ಇನ್ನೂ ಮಾಡಿಲ್ಲ ಯಾಕೆ ಎಂದು ಪ್ರಶ್ನೆ ಮಾಡುತ್ತಾರೆ. ಅದಕ್ಕೆ ರಾಧಿಕಾ ಪಂಡಿತ್ ಅವರು ಕೊಟ್ಟ ಉತ್ತರ ಈ ರೀತಿ ಇತ್ತು. ನಾನು ಯಾವುದೇ ಸಿನಿಮಾ ಒಪ್ಪಿಕೊಂಡರು ಸಿನಿಮಾ ಕಥೆಯನ್ನು ಕೇಳಿ ಅದು ಇಷ್ಟವಾದರೆ ಮಾತ್ರ ಒಪ್ಪಿಕೊಳ್ಳುತ್ತೇನೆ.
ಮತ್ತು ಕಥೆಯ ನನ್ನ ಪಾತ್ರ ಕೂಡ ನನಗೆ ಹೊಂದಿಕೆ ಆಗಬೇಕು. ಸಿನಿಮಾ ಹೀರೋ ಯಾರು ಎನ್ನುವ ವಿಷಯದ ಮೇಲೆ ನನ್ನ ನಿರ್ಧಾರ ಆಗುವುದಿಲ್ಲ. ನಾನು ಹಿರಿಯರೇ ಆಗಲಿ ಕಿರಿಯರೆ ಆಗಲಿ ಸ್ಟಾರ್ ಆಗಲಿ ಹೊಸಬರೇ ಆಗಲಿ ಭೇದ ಮಾಡದೆ ಕಥೆ ಕೇಳಿ ಒಪ್ಪಿಕೊಳ್ಳುತ್ತೇನೆ. ಇದುವರೆಗೂ ಅಂತಹ ಒಂದು ಪಾತ್ರ ನನಗೆ ಸಿಕ್ಕಿಲ್ಲ ಮುಂದೆ ನೋಡೋಣ ಎಂದು ಇದಕ್ಕೆ ಉತ್ತರಿಸಿದ್ದಾರೆ.
ಸದ್ಯಕ್ಕೆ ರಾಧಿಕಾ ಪಂಡಿತ್ ಯಶ್ ಅವರ ಜೊತೆಯಲ್ಲಿ ಮದುವೆ ಆದ ಬಳಿಕ ಕೌಟುಂಬಿಕ ಜೀವನದ ಕಡೆಗೆ ಹೆಚ್ಚು ಗಮನ ಕೊಟ್ಟಿದ್ದು ಮಕ್ಕಳಾದ ಐರಾ ಮತ್ತು ಅಥರ್ವ ಅವರ ಲಾಲನೆ ಪಾಲನೆ ಅಲ್ಲಿ ಬ್ಯುಸಿ ಆಗಿದ್ದಾರೆ. ಈಗಲೂ ಸಹ ಇವರಿಗೆ ಕನ್ನಡ ಚಿತ್ರರಂಗದಲ್ಲಿ ಬಹಳ ಬೇಡಿಕೆ ಇದ್ದು ಮತ್ತೆ ಯಾವಾಗ ಕಮ್ ಬ್ಯಾಕ್ ಮಾಡುತ್ತಾರೆ ಎಂದು ಹಲವರು ಕಾಯುತ್ತಿದ್ದಾರೆ. ಶೀಘ್ರವೇ ಅವರ ಕಡೆಯಿಂದ ಕನ್ನಡ ಚಿತ್ರರಂಗಕ್ಕೆ ಹಾಗೂ ಅಭಿಮಾನಿಗಳಿಗೆ ಸಿನಿಮಾ ವಿಷಯವಾಗಿ ಸಿಹಿ ಸುದ್ದಿ ಬರಲಿ ಎಂದು ಕೇಳಿಕೊಳ್ಳೋಣ.