ಈಗ ಸಿನಿಮಾ ಮಾಧ್ಯಮದಷ್ಟೇ ಕಿರುತೆರೆ ಲೋಕವು ಬಹಳ ಪ್ರಭಾವ ಬೀರುತ್ತಿದೆ. ಸಿನಿಮಾಗಳನ್ನು ಹೇಗೆ ಜನ ಮುಗಿ ಬಿದ್ದು ಥಿಯೇಟರ್ ಗೆ ಹೋಗಿ ನೋಡುತ್ತಿದ್ದರೂ ಅದೇ ರೀತಿ ಕಿರುತೆರೆಯ ರಿಯಾಲಿಟಿ ಶೋ ಗಳನ್ನು ಕೂಡ ಕಣ್ಣು ಮಿಟುಗಿಸದೇ, ಒಂದು ದಿನವೂ ಮಿಸ್ ಮಾಡದೆ ನೋಡುವ ಬಳಗವು ಇದೆ. ಸದ್ಯಕ್ಕೆ ಹಿರಿತೆರೆಗಿಂತ ಜನರಿಗೆ ಕಿರುತೆರೆಯೇ ಹೆಚ್ಚು ಹತ್ತಿರವಾಗಿದೆ ಎಂದರೆ ಆ ಮಾತು ಕೂಡ ಸುಳ್ಳಲ್ಲ
ಯಾಕೆಂದರೆ ಪ್ರತಿನಿತ್ಯ ಜನ ಸಂಜೆ ಹೊತ್ತು ಕುಟುಂಬ ಸಮೇತ ಕೂತು ಕಿರುತೆರೆಯ ಧಾರಾವಾಹಿಗಳು ಹಾಗೂ ಇತರೆ ಪ್ರೋಗ್ರಾಮ್ ಗಳನ್ನು ನೋಡುವುದರಿಂದ ಒಂದಕ್ಕಿಂತ ಒಂದು ಚಾನೆಲ್ ಗಳು ಜನರಿಗೆ ಭರಪೂರ ಮನರಂಜನೆ ಕೊಟ್ಟು ತಮ್ಮತ್ತ ಸೆಳೆದುಕೊಳ್ಳಲು ಸ್ಪರ್ಧೆ ನಡೆಸುತ್ತಿವೆ ಇಂತಹ ಸ್ಪರ್ಧೆಗಳಲ್ಲಿ ರಿಯಾಲಿಟಿ ಶೋಗಳು ಹೆಚ್ಚು ಸದ್ದು ಮಾಡುತ್ತಿವೆ.
ಈಗಾಗಲೇ ಕಿರುತೆರೆಯಲ್ಲಿ ಡ್ಯಾನ್ಸಿಂಗ್ ,ಕುಕ್ಕಿಂಗ್, ಸಿಂಗಿಂಗ್, ಕಾಮಿಡಿ ಸೇರಿದಂತೆ ಹಲವು ವಿಭಾಗದಲ್ಲಿ ರಿಯಾಲಿಟಿ ಶೋಗಳು ಇದ್ದು ಅದರಲ್ಲಿ ಸಿಂಗಿಂಗ್ ರಿಯಾಲಿಟಿ ಶೋ ಆದ ಸರಿಗಮಪ ಮತ್ತು ಕಾಮಿಡಿ ಕಿಲಾಡಿಗಳು ಎನ್ನುವ ರಿಯಾಲಿಟಿ ಶೋ ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಎನ್ನುವ ಡ್ಯಾನ್ಸಿಂಗ್ ಶೋ ಜೀ ಕನ್ನಡ ಟಿ ಆರ್ ಪಿ ಯಲ್ಲಿ ನಂಬರ್ ಒನ್ ಸ್ಥಾನದಲ್ಲಿರಲು ಕಾರಣಕರ್ತವಾಗಿವೆ.
ಈ ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ಗಳ ಪರ್ಫಾರ್ಮೆನ್ಸ್ ಗಳು ಎಷ್ಟು ಕಣ್ಣಿಗೆ ಹಬ್ಬ ನೀಡುತ್ತವೋ ಅದರಲ್ಲಿ ಬರುವ ಜಡ್ಜಸ್ ಗಳು ಕೊಡುವ ತೀರ್ಪು ಕೂಡ ಅಷ್ಟೇ ಅರ್ಥಪೂರ್ಣವಾಗಿ ಇರುತ್ತವೆ. ಜೊತೆಗೆ ಕಾರ್ಯಕ್ರಮವನ್ನು ನಡೆಸಿಕೊಡುವ ಆಂಕರ್ಗಳ ಚಾಕಚಕ್ಯತೆ ಬಗ್ಗೆ ಮಾತನಾಡುವ ರೀತಿಯೇ ಇಲ್ಲ. ಅದರಲ್ಲೂ ಜೀ ಕನ್ನಡ ವಾಹಿನಿಗೆ ಪರ್ಮನೆಂಟ್ ಮೆಂಬರ್ ರೀತಿ ಆಗಿರುವ ಅನುಶ್ರೀ ಅವರು ಜೀ ಕನ್ನಡದ ವಾಹಿನಿಯ ಬಹುತೇಕ ರಿಯಾಲಿಟಿ ಶೋಗಳನ್ನು ನಡೆಸಿ ಕೊಡುತ್ತಾರೆ.
ಈಗ ಕನ್ನಡದಲ್ಲಿ ನಂಬರ್ ಒನ್ ನಿರೂಪಕಿ ಎನ್ನುವ ಹೆಸರು ಪಡೆದಿರುವ ಅವರ ಕನ್ನಡ ಭಾಷಾ ಜ್ಞಾನ, ಅವರ ತರಲೆ ತಮಾಷೆಗಳು, ಪಟ ಪಟ ಎಂದು ಹರಳು ಉರಿದ ಹಾಗೆ ಮಾತನಾಡುವ ಪರಿ, ಎದುರಿಗಿರುವ ಇತರರನ್ನು ಗೋಳು ಹೊಯ್ದುಕೊಳ್ಳುವ ರೀತಿಯೇ ಜನರಿಗೆ ಇಷ್ಟ ಆಗಿದ್ದು ಈಕೆಯ ನಿರೂಪಣಾ ಶೈಲಿಯನ್ನು ಮೆಚ್ಚಿಕೊಂಡಿದ್ದಾರೆ.
ಆದರೆ ಈ ಸ್ಥಾನಕ್ಕೆ ಬರುವ ಮುಂಚೆ ಅನುಶ್ರೀ ಅವರು ಬಹಳ ಕಷ್ಟ ಪಟ್ಟಿದ್ದಾರೆ. ಬಹಳ ಚಿಕ್ಕ ವಯಸ್ಸಿಗೆ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಕೊಂಡವರು ಸಣ್ಣ ಅವಕಾಶಕ್ಕಾಗಿ ಬೆಂಗಳೂರಿನ ಪ್ರಯಾಣ ಬಳಸುತ್ತಾರೆ. ಮೊದಲಿಗೆ ಕಸ್ತೂರಿ ವಾಹಿನಿಯ ಸಣ್ಣದೊಂದು ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ಇವರು ಇಂದು ಅನೇಕ ರಾಜಕೀಯ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮತ್ತು ಕನ್ನಡದ ಸ್ಟಾರ್ ಹೀರೋಗಳ ಆಡಿಯೋ ಲಾಂಚ್ ಕಾರ್ಯಕ್ರಮಗಳನ್ನು, ಟ್ರೈಲರ್ ರಿಲೀಸ್ ಇವೆಂಟ್ಗಳನ್ನು ನಡೆಸಿಕೊಡುವಷ್ಟು ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ.
ಅನುಶ್ರೀ ಅವರು ನಿರೂಪಕಿ ಆಗಿರುವುದರ ಜೊತೆಗೆ ಸಿನಿಮಾದಲ್ಲೂ ಸಹ ನಾಯಕನಟಿ ಆಗಿ ಅದೃಷ್ಟ ಪರೀಕ್ಷಿಸಿ ಕೊಂಡಿದ್ದಾರೆ. ರಿಂಗ್ ಮಾಸ್ಟರ್, ಬೆಂಕಿ ಪಟ್ಟಣ, ಮಾದ ಮತ್ತು ಮಾನಸಿ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಇವರು ನಾಯಕಿಯಾಗಿ ನಟಿಸಿದ ಯಾವ ಸಿನಿಮಾವು ಅಷ್ಟು ಹೆಸರು ಮಾಡಲಿಲ್ಲ. ಆದರೆ ಕಿರುತೆರೆ ಮಾತ್ರ ಇವರನ್ನು ಚೆನ್ನಾಗಿ ಕೈ ಹಿಡಿದಿದೆ.
ಈಗ ಅವರೇ ಖಾಸಗಿ ಯೌಟ್ಯೂಬ್ ಚಾನೆಲ್ ಒಂದನ್ನು ಅನುಶ್ರೀ ಅಂಕರ್ ಎನ್ನುವ ಹೆಸರಿನಲ್ಲಿ ನಡೆಸುತ್ತಿದ್ದಾರೆ. ಅಲ್ಲಿ ಕನ್ನಡದ ಸ್ಟಾರ್ಗಳನ್ನು ಇಂಟರ್ವ್ಯೂ ಮಾಡಿ ಅಪ್ಲೋಡ್ ಮಾಡುತ್ತಾರೆ. ಮೊದಮೊದಲು ಸಾಮಾನ್ಯ ಕೆಲಸಗಾರರಂತೆ ದಿನಗೂಲಿಗೆ ಹೊಟ್ಟೆಪಾಡಿಗಾಗಿ ನಿರೂಪಣೆ, ಇವೆಂಟ್ ಹೋಸ್ಟಿಂಗ್ ಕೆಲಸಗಳನ್ನು ಮಾಡುತ್ತಿದ್ದ ಅನುಶ್ರೀ ಅವರು ಇಂದು ಬಹಳ ದೊಡ್ಡ ಮಟ್ಟದ ಸಂಭಾವನೆಯನ್ನು ರಿಯಾಲಿಟಿ ಶೋಗಳ ನಿರೂಪಣೆಗಾಗಿ ಪಡೆಯುತ್ತಿದ್ದಾರೆ.
ಈಗ ಎಲ್ಲರೂ ಸಹ ಅವರ ಸಂಭಾವನೆ ಎಷ್ಟಿರಬಹುದು ಎನ್ನುವುದನ್ನು ತಿಳಿದುಕೊಳ್ಳಲು ಕುತೂಹಲರಾಗಿದ್ದಾರೆ. ಬಲವಾದ ಮೂಲಗಳ ಪ್ರಕಾರ ಅನುಶ್ರೀ ಅವರು ಸರಿಗಮಪ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮುಂತಾದ ರಿಯಾಲಿಟಿ ಶೋಗಳ ನಿರೂಪಣೆಗೆ ಒಂದು ದಿನಕ್ಕೆ 1 ರಿಂದ 2 ಲಕ್ಷ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಿದ್ದಾರಂತೆ.
ಇಷ್ಟು ದೊಡ್ಡ ಮಟ್ಟದ ಸಂಭಾವನೆಯನ್ನು ಇದುವರೆಗೆ ಯಾವ ಕಿರುತೆರೆ ನಟಿ ಕೂಡ ಪಡೆದಿಲ್ಲ. ಆ ನಿಟ್ಟಿನಲ್ಲಿ ಅನುಶ್ರೀ ಅವರದ್ದು ಸಾಧನೆ ಎಂದೇ ಹೇಳಬಹುದು. ಹೀಗೆ ಸದಾ ಕಾಲ ಕನ್ನಡದ ಕಾರ್ಯಕ್ರಮಗಳನ್ನು ಅಚ್ಚ ಕನ್ನಡದಲ್ಲಿ ನಡೆಸಿಕೊಡುತ್ತ ಅನುಶ್ರೀ ಅವರು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಿ. ಜೊತೆಗೆ ಅವರ ಮುಂದಿನ ಎಲ್ಲಾ ಪ್ರಾಜೆಕ್ಟ್ಗಳಿಗೂ ಶುಭವಾಗಲಿ ಎಂದು ಹರಸೋಣ.