ಶಿವಣ್ಣನ ಹೊರಗಿಟ್ಟು ಅಪ್ಪು & ರಾಘಣ್ಣ ಹೊಸ ಮನೆ ಕಟ್ಟಲು ಕಾರಣವೇನು ಗೊತ್ತಾ.? ಮಾಧ್ಯಮದ ಮುಂದೆ ಸತ್ಯಾಂಶ ಬಿಚ್ಚಿಟ್ಟ ಶಿವಣ್ಣ

ಡಾಕ್ಟರ್ ರಾಜಕುಮಾರ್(Dr Rajkumar) ಅವರು ಮೂಲತಃ ಚಾಮರಾಜನಗರ ಜಿಲ್ಲೆಯವರು. ನಾಟಕದಲ್ಲಿ ಬಣ್ಣ ಹಚ್ಚುತ್ತ ಕಾಣುತ್ತಾ ರಂಗಭೂಮಿಯಲ್ಲಿ ಬದುಕು ಕಂಡುಕೊಳ್ಳಲು ಬಂದವರಿಗೆ ಕನ್ನಡ ಸಿನಿಮಾರಂಗ ಕೈಬೀಸಿ ಕರೆದಿತ್ತು. ಆದರೆ ಅಂದು ಡಾಕ್ಟರ್ ರಾಜಕುಮಾರ್ ಅವರು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ ಶುರು ಮಾಡಿದ ಸಂದರ್ಭದಲ್ಲಿ ಕನ್ನಡ ಚಿತ್ರರಂಗ ಆಗಿನ್ನು ಅಂಬೇಗಾಲು ಇಡುತ್ತಿತ್ತು. ಇಂದು ಇಷ್ಟು ಸದೃಢವಾಗಿರುವ ಈ ಸ್ಯಾಂಡಲ್ವುಡ್ ಕಟ್ಟಲು ರಾಜಕುಮಾರ್ ಅವರ ಸಮಕಾಲಿನ ಅನೇಕ ಕಲಾವಿದರಗಳು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಬಹಳ ಬೆವರು ಸುರಿಸಿದ್ದಾರೆ.

ಯಾಕೆಂದರೆ ಆಗ ನಮ್ಮ ಕರ್ನಾಟಕದಲ್ಲಿ ಒಂದು ಸಹ ಸ್ಟುಡಿಯೋ ಇರಲಿಲ್ಲ ಹೀಗಾಗಿ ಚೆನ್ನೈ ಅಲ್ಲಿಯೇ ಕನ್ನಡ ಸಿನಿಮಾಗಳ ತಯಾರಿಕೆ ಕಾರ್ಯ ನಡೆಯುತ್ತಿತ್ತು. ಹೀಗಾಗಿ ಕಲಾವಿದರೆಲ್ಲಾ ಬಹುತೇಕ ಚೆನ್ನೈ ಅಲ್ಲಿಯೇ ನೆಲೆಸುತ್ತಿದ್ದರು. ಡಾಕ್ಟರ್ ರಾಜಕುಮಾರ್ ಅವರು ಕೊನೆ ಕಾಲದವರೆಗೂ ಕೂಡ ಬಹಳ ಬೇಡಿಕೆಯಲ್ಲಿ ಇದ್ದವರು. ಮತ್ತು ಕನ್ನಡ ಚಲನಚಿತ್ರ ರಂಗ ಬೆಳೆಯುವ ಹಾದಿಯಲ್ಲಿ ಅವರದ್ದೇ ಮೇಲುಗೈ ಹೀಗಾಗಿ ಸತತ ಸಿನಿಮಾ ಕಾರ್ಯಗಳಲ್ಲಿ ಬಿಝಿ ಇರುತ್ತಿದ್ದ ಅವರ ಕುಟುಂಬ ಚೆನ್ನೆ ಅಲ್ಲಿಗೆ ಇರಬೇಕಾಗಿ ಬಂತು. ಆದರೆ ಬೆಂಗಳೂರಿನಲ್ಲೂ ಸಹ ಸ್ಟುಡಿಯೋ ಶುರು ಆದ ಮೇಲೆ ತಕ್ಷಣ ತನ್ನ ತವರು ನೆಲಕ್ಕೆ ಡಾಕ್ಟರ್ ರಾಜಕುಮಾರ್ ಅವರು ವಾಪಸ್ಸು ಬಂದರು.

ಆಗ ಬೆಂಗಳೂರಿನ ಸದಾಶಿವ ನಗರದಲ್ಲಿದ್ದ ಅವರ ಸ್ನೇಹಿತನ ಮನೆಯನ್ನೇ ಇಷ್ಟ ಪಟ್ಟು ಆಗಿನ ಕಾಲದ ಹಣದಲ್ಲಿ 17 ಲಕ್ಷ ಕೊಟ್ಟು ಖರೀದಿಸಿದರು. ಡಾಕ್ಟರ್ ರಾಜಕುಮಾರ್ ಅವರು ಕಡೆಯ ದಿನದವರೆಗೂ ಸಹ ತಾವು ಇಷ್ಟ ಪಟ್ಟು ಖರೀದಿಸಿದ ಅದೇ ಮನೆಯಲ್ಲಿ ಕಾಲ ಕಳೆಯುತ್ತಿದ್ದರು, ಕೊನೆಗೆ ಅಲ್ಲೇ ಕೊನೆ ಉಸಿರೆಳೆದರು. ಆ ಮನೆ ಮಕ್ಕಳು ಬೆಳೆಯುತ್ತಿದ್ದಂತೆ ಚಿಕ್ಕದೆನಿಸತೊಡಗಿತು. ಯಾಕೆಂದರೆ ಮನೆಗೆ ಬರುವ ಅತಿಥಿಗಳ ಸಂಖ್ಯೆ ಹೆಚ್ಚಾಯಿತು. ಮೂರು ಜನ ಮಕ್ಕಳು ಹೀರೋಗಳಾದರು ಅದರಲ್ಲಿ ಶಿವಣ್ಣ ಮತ್ತು ಪುನೀತ್ ಅವರನ್ನು ಕಾಣಲು ಪ್ರತಿನಿತ್ಯ ಡೈರೆಕ್ಟರ್ ಪ್ರೊಡ್ಯೂಸರ್ ಅಭಿಮಾನಿಗಳು ಹೀಗೆ ಸಾಕಷ್ಟು ಜನ ಬರುತ್ತಿದ್ದರು.

ಆಗ ಪುನೀತ್ ಮತ್ತು ಶಿವಣ್ಣ ಅವರು ಅಮ್ಮನ ಬಳಿ ಹೋಗಿ ಒಂದು ಸಲಹೆ ಕೊಡುತ್ತಾರೆ. ಸದಾಶಿವನಗರದ ಮನೆ ಚಿಕ್ಕದೆನಿಸುತ್ತಿದೆ. ನಾವು ಅದನ್ನು ಹೊಡೆದು ಹೊಸ ಮನೆ ಕಟ್ಟೋಣ ಎಂದು. ಆಗ ಪಾರ್ವತಮ್ಮನವರು ಸಹ ಅದಕ್ಕೆ ಅನುಮತಿ ಕೊಡುತ್ತಾರೆ. ಅವರ ಹಳೆ ಮನೆ ಇದ್ದ ಜಾಗದಲ್ಲಿ ಅದನ್ನು ಕೆಡವಿ ಎರಡು ನಾಲ್ಕು ಅಂತಸ್ತಿನ ಬೃಹತ್ ಬಂಗಳನ್ನೇ ಅನ್ನು ಅಪ್ಪು ಅವರು ಸ್ವಂತ ಹಣವನ್ನು ಖರ್ಚು ಮಾಡಿ ಕಟ್ಟಿಸುತ್ತಾರೆ.

ಇದರಲ್ಲಿ ವಿಶೇಷ ಏನು ಎಂದರೆ ಪುನೀತ್ ರಾಜಕುಮಾರ್ ಅವರು ಎರಡು ಬಂಗಳೆಯನ್ನು ಕಟ್ಟಿಸಿದ್ದಾರೆ, ಅದರಲ್ಲಿ ಒಂದನ್ನು ರಾಘವೇಂದ್ರ ರಾಜಕುಮಾರ್ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಈ ಎರಡು ಮನೆಗಳು ಅವಳಿ ಜವಳಿ ಮನೆಗಂತೆ ಇದ್ದು ಎಲ್ಲೂ ಕೂಡ ವ್ಯತ್ಯಾಸವನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಆದರೆ ಶಿವಣ್ಣ ಮಾತ ಯಾಕೆ ಅಲ್ಲಿ ಉಳಿಯಲಿಲ್ಲ ಎನ್ನುವುದೇ ಎಲ್ಲರ ಪ್ರಶ್ನೆ. ಶಿವಣ್ಣ ಅವರು ಸಹ ಬೆಳೆಯುತ್ತಾ ಸ್ಟಾರ್ ಹೀರೋ ಆದರು. ಅವರಿಗಾಗಿಯೇ ನಿತ್ಯ ಮನೆಗೆ ಬರುವ ಸಂಖ್ಯೆ ಬೆಳೆಯತೊಡಗಿತು.

ಅದೇ ಸಮಯದಲ್ಲಿ ಅವರ ಪತ್ನಿಯಾದ ಗೀತಾ ಅವರಿಗೆ ಅವರ ತಂದೆ ಬಂಗಾರಪ್ಪ ಅವರ ಕಡೆಯಿಂದ ಮಾನ್ಯತಾ ಟೆಕ್ ಪಾರ್ಕ್ ಅಲ್ಲಿ ಮನೆ ಉಡುಗೊರೆಯಾಗಿ ಬಂದಿತ್ತು.ಅದು ಬರಿ ಮನೆಯಲ್ಲ ಅರಮನೆಯಂತಹ ಭವ್ಯ ಭಂಗಳೆ. ಅಲ್ಲಿಗೆ ಹೋಗಲು ನಿರಾಕರಿಸಲಾಗದ ಶಿವಣ್ಣ ಅವರು ತಾಯಿಯ ಬಳಿ ಬಂದು ಮನವಿ ಮಾಡಿಕೊಂಡು ಅವರ ಅನುಮತಿ ಪಡೆದು ನಂತರ ಮಕ್ಕಳು ಹಾಗೂ ಮಡದಿಯೊಂದಿಗೆ ಮಾವ ಕೊಟ್ಟ ಮನೆಯಲ್ಲಿ ನೆಲೆಸುತ್ತಾರೆ. ಆದರೂ ಸಹ ಈ ಮೂರು ಜನ ಅಣ್ಣ ತಮ್ಮಂದಿರಗಳು ಇಂದಿಗೂ ಸ್ವಲ್ಪವೂ ಭಿನ್ನಾಭಿಪ್ರಾಯ ವಾಗದಂತೆ ಎಲ್ಲೂ ಕೂಡ ಒಂದು ವಿವಾದ ಮಾಡಿಕೊಳ್ಳದಂತೆ ಅನ್ಯೋನ್ಯತೆಯಿಂದ ಬದುಕಿ ಬಾಳಿದ್ದಾರೆ.

ಪುನೀತ್ ರಾಜಕುಮಾರ್ ಅವರು ಕಡೆಯ ಮನೆ ಮಗ ಆಗಿರುವ ಕಾರಣ ಮನೆಯ ಎಲ್ಲಾ ಸದಸ್ಯರು ಕೂಡ ಅವರನ್ನು ಕಣ್ಮಣಿಯಂತೆ ನೋಡಿಕೊಂಡಿದ್ದಾರೆ. ಅಣ್ಣಂದಿರಾದ ರಾಘಣ್ಣ ಹಾಗೂ ಶಿವಣ್ಣ ಸ್ವಂತ ಮಗನಂತೆ ಅವರನ್ನು ಕಂಡಿದ್ದಾರೆ. ಪಾರ್ವತಿ ಪರಮೇಶ್ವರರಂತೆ ಇದ್ದ ಡಾಕ್ಟರ್ ರಾಜಕುಮಾರ್ ಮತ್ತು ಪಾರ್ವತಮ್ಮ ರವರನ್ನು ಕಳೆದುಕೊಂಡಾಗಲೇ ಮನೆಯ ಕಳೆಯು ಹೊರಟುಹೋಗಿತ್ತು, ಈಗ ಅಪ್ಪು ಇಲ್ಲವಾದ ಮೇಲೆ ರಾಜಕುಮಾರನನ್ನು ಕಳೆದುಕೊಂಡು ಅರಮನೆ ಸ್ಮಶಾನ ಮೌನದಲ್ಲಿದೆ.

Leave a Comment