ಇಂದೋರ್ ನ ಹೋಳ್ಕರ್ ಕ್ರೀಡಾಂಗಣದಲ್ಲಿ (Holkar stadium) ಭಾನುವಾರ ನಡೆದ ಭಾರತ ಮತ್ತು ಆಸ್ಟ್ರೇಲಿಯಾ (IND/AUS ODI) ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಮತ್ತು ಶುಭಮನ್ ಗಿಲ್ (Sheyas and Gill combination) ಜೊತೆಗೂಡಿ ಆಸಿಸ್ ಬೌಲರ್ಗಳ ಬೆವರಿಸಿದ್ದಾರೆ. ಈ ಪಂದ್ಯದಲ್ಲಿ ಗಿಲ್ ಬಾರಿಸಿದ ಸೆಂಚುರಿ ಹಿಂದಿನ ಹಲವು ದಾಖಲೆಗಳನ್ನು ಮುರಿದು (record break performance by Gill) ಹಾಕಿದೆ.
2023ರ ಕ್ರಿಕೆಟ್ ಇತಿಹಾಸದ ಅನೇಕ ದಾಖಲೆಗಳಿಗೆ ಸಾಕ್ಷಿಯಾಗಿದೆ. ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಗಳಿಸಿದ ಅತಿ ಹೆಚ್ಚು ಸೆಂಚುರಿ ಬಾರಿಸಿದ ಸಾಧಕರ ಲಿಸ್ಟ್ ನಲ್ಲಿ ಶುಭ್ಮಾನ್ ಗಿಲ್ (Shubman Gill) ಈಗ ಅಗ್ರ ಸ್ಥಾನದಲ್ಲಿದ್ದಾರೆ. ಈ ವರ್ಷದಲ್ಲಿ 7 ಶತಕಗಳನ್ನು ಬಾರಿಸುವ ಮೂಲಕ ನಂಬರ್ ಒನ್ ಆಗಿದ್ದಾರೆ ಈ ವರ್ಷದ ಎಲ್ಲಾ ಪಂದ್ಯಗಳಲ್ಲೂ ಗಿಲ್ ಅದ್ಭುತವಾಗಿ ಭಾಗವಹಿಸಿದ್ದಾರೆ.
24 ವರ್ಷದ ಈ ಬ್ಯಾಟ್ಸ್ಮನ್ ಈ ವರ್ಷ ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕವನ್ನೂ ಗಳಿಸಿ ಭಾನುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 97 ಎಸೆತಗಳಲ್ಲಿ 104 ರನ್ಗಳ ಕಲೆಹಾಕಿ ಭಾರತದ ಗೆಲುವಿಗೆ ಕಾರಣವಾಗಿದ್ದಾರೆ. 2023 ರಲ್ಲಿ ನಡೆದಿರುವ ಟೆಸ್ಟ್ ಪಂದ್ಯಗಳು, ODI ಮತ್ತು T20 ಗಳಲ್ಲಿ ಶುಭಮನ್ ಗಿಲ್ಗಿಂತ ಹೆಚ್ಚಿನ ರನ್ ಗಳಿಸಲು ವಿಶ್ವದ ಯಾವುದೇ ಟೀಮ್ ನ ಆಟಗಾರರಿಗೂ ಸಾಧ್ಯವಾಗಿಲ್ಲ.
ಗಿಲ್ ಈ ವರ್ಷ ಆಡಿದ ಒಟ್ಟು 36 ಪಂದ್ಯಗಳ 39 ಇನ್ನಿಂಗ್ಸ್ಗಳಲ್ಲಿ 52ರ ಸರಾಸರಿಯಲ್ಲಿ 1764 ರನ್ ಗಳಿಸಿದ್ದಾರೆ. 7 ಶತಕ, 6 ಅರ್ಧ ಶತಕ, 208 ರನ್, 186 ಬೌಂಡರಿ ಮತ್ತು 46 ಸಿಕ್ಸರ್ಗಳನ್ನು ಬಾರಿಸಿ ಸಾಧಕರೆನಿಸಿದ್ದಾರೆ. ಈ ವರ್ಷ ಶುಭಮನ್ ಗಿಲ್ ತಮ್ಮ ಹೆಸರಿನಲ್ಲಿ 5 ದೊಡ್ಡ ದಾಖಲೆಗಳನ್ ಬರೆದು, ಈ ಹಿಂದೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಗಳನ್ನು ಮುರಿದಿದ್ದಾರೆ. ಅವುಗಳ ಪಟ್ಟಿ ಹೀಗಿದೆ ನೋಡಿ.
ನಮ್ಮ ಜಲ, ನಮ್ಮ ಹಕ್ಕು CM ಗೆ ಮನವಿ ಮಾಡಿದ ಕಿಚ್ಚ ಸುದೀಪ್.! ಕಾವೇರಿ ಹೋರಾಟಕ್ಕೆ ಬೆಂಬಲ
● 2023ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸೆಂಚುರಿ ಹೊಡೆದು ಶುಭ್ಮಾನ್ ಗಿಲ್ ಮೋದಲನೇ ಸ್ಥಾನದಲ್ಲಿದ್ದಾರೆ, ಈ ವರ್ಷ ಬರೋಬ್ಬರಿ 7 ಶತಕಗಳನ್ನು ಬಾರಿಸಿದ್ದಾರೆ. ವಿರಾಟ್ ಕೊಹ್ಲಿ 5 ಶತಕಗಳ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.
● ಗಿಲ್ ಗರಿಷ್ಠ 46 ಸಿಕ್ಸರ್ಗಳನ್ನು ಬಾರಿಸಿ, ಈ ಹಿಂದೆ ರೋಹಿತ್ ಶರ್ಮ ಹೆಸರಿನಲ್ಲಿದ್ದ ದಾಖಲೆ ಬ್ರೇಕ್ ಮುರಿದಿದ್ದಾರೆ. ರೋಹಿತ್ ಶರ್ಮಾ 43 ಸಿಕ್ಸರ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
● ಬೌಂಡರಿಗಳ ವಿಷಯದಲ್ಲಿ ಗಿಲ್ ಈಗ ಮೊದಲಿಗನಾಗಿ 2023ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 1700ಕ್ಕೂ ಹೆಚ್ಚು ರನ್ ಗಳಿಸಿದ್ದ ಖ್ಯಾತಿ ಪಡೆದಿದ್ದಾರೆ, ಈವರೆಗೆ 1400 ರನ್ಗಳ ಸ್ಕೋರ್ ದಾಟಲು ವಿಶ್ವದ ಎಲ್ಲಾ ಆಟಗಾರರು ಪ್ರಯತ್ನಿಸುತ್ತಿದ್ದಾರೆ.
ಆರೋಗ್ಯ ಲೆಕ್ಕಿಸದೆ ಈ ವಯಸ್ಸಿನಲ್ಲೂ ಕಾವೇರಿ ಹೋರಾಟ ಮಾಡಲು ಮಂಡ್ಯಕ್ಕೆ ಹೊರಟ ನಟಿ ಲೀಲಾವತಿ.!
● ಈ ವರ್ಷ ODIಗಳಲ್ಲಿ ಅವರಿಗಿಂತ ದೊಡ್ಡ ಇನ್ನಿಂಗ್ಸ್ ಆಡಲು ಮತ್ತೊಬ್ಬ ಆಟಗಾರನಿಗೆ ಸಾಧ್ಯವಾಗಲಿಲ್ಲ. ಜನವರಿ 18 ರಂದು ಹೈದರಾಬಾದ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಗಿಲ್ 208 ರನ್ ಗಳಿಸಿದ್ದರು. ಈ ವಿಚಾರದಲ್ಲಿ ಇಂಗ್ಲೆಂಡ್ನ ಬೆನ್ ಸ್ಟೋಕ್ಸ್ 182 ರನ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇತ್ತೀಚೆಗಷ್ಟೇ 2023ರ ಏಷ್ಯಾಕಪ್ನಲ್ಲಿಯೂ ಗಿಲ್ ಬಾಂಗ್ಲಾದೇಶ ವಿರುದ್ಧ ಶತಕ ಸಿಡಿಸಿದ್ದರು.
● ಅತೀ ವೇಗವಾಗಿ ಭಾರತದ ತಂಡದ ಪರ 6 ಸಿಕ್ಸರ್ ಹೊಡೆದಿದ್ದಾರೆ ಶುಭ್ಮನ್ ಗಿಲ್, ಈ ಸಾಧನೆ ಮೂಲಕ ಧವನ್ ಹಿಂದಿಕ್ಕಿದ್ದಾರೆ.
● ಶುಭ್ಮನ್ ಗಿಲ್ಗೆ 25 ವರ್ಷ ವಯಸ್ಸಿಗೂ ಮುನ್ನ ಭಾರತದ ಪರ ಅತ್ಯಧಿಕ ಶತಕ ಬಾರಿಸಿದ ಆರಂಭಿಕರರ ಪಟ್ಟಿ ಸೇರಿ ಅದರಲ್ಲೂ ಮೊದಲ ಹೆಸರು ಬರೆದುಕೊಂಡಿದ್ದಾರೆ.
● ಒಂದು ಕ್ಯಾಲೆಂಡರ್ ವರ್ಷದಲ್ಲಿ ಭಾರತದಲ್ಲಿ ಅತ್ಯಧಿಕ ಸೆಂಚುರಿ ಭಾರಿಸಿದ ಆಟಗಾರ ಶುಭಮನ್ ಗಿಲ್ ಆಗಿದ್ದಾರೆ, ನಾಲ್ಕು ಸೆಂಚುರಿಗಳನ್ನು ಈ ವರ್ಷದಲ್ಲಿ ಭಾರತದ ನೆಲದಲ್ಲಿ ಹೊಡೆದಿದ್ದಾರೆ. ಈ ಮೊದಲು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ 1996 ರಲ್ಲಿ ಟೀಂ ಇಂಡಿಯಾ ಪರ ಆಡುವಾಗ ಒಂದು ವರ್ಷದಲ್ಲಿ ಬಾರತದಲ್ಲೇ 3 ಶತಕ ಸಿಡಿಸಿದ್ದರು.