ಕಳೆದು ತಿಂಗಳು ಸರ್ಕಾರವು ರೇಷನ್ ಕಾರ್ಡ್ ತಿದ್ದುಪಡಿ (Ration card correction) ಮಾಡಿಕೊಳ್ಳಲು ಅವಕಾಶ ನೀಡಿತ್ತು. ಒಂದೇ ಬಾರಿ ಎಲ್ಲರಿಂದ ಅರ್ಜಿ ಸಲ್ಲಿಕೆ ಆರಂಭವಾದ್ದರಿಂದ ಸರ್ವರ್ ಮೇಲೆ ಹೊಡೆತ ಬಿದ್ದಿತ್ತು. ಹಾಗಾಗಿ ಜಿಲ್ಲಾವಾರು ತಿದ್ದುಪಡಿ ಮಾಡಿಕೊಳ್ಳಲು ಮತ್ತೊಮ್ಮೆ 10 ದಿನಗಳ ಅವಕಾಶ ವಿಸ್ತರಿಸಿ, ಅನುಕೂಲ ಮಾಡಿಕೊಡಲಾಯಿತು.
ಆದರೆ ಆ ಸಮಯದಲ್ಲೂ ಸರ್ವರ್ ಸಮಸ್ಯೆ, ಇನ್ನಿತರ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂತು. ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಕೂಡ 53,000 ಅರ್ಜಿಗಳು ಸಲ್ಲಿಕೆ ಆಗಿವೆ. ಇದರಲ್ಲಿ 70%ರಷ್ಟು APL ಕಾರ್ಡ್ ಗಳು ತಿದ್ದುಪಡಿಗಾಗಿ ಸಲ್ಲಿಕೆ ಆಗಿವೆ, ಇದಕ್ಕೆ ಮುಖ್ಯ ಕಾರಣ ಗ್ಯಾರಂಟಿ ಯೋಜನೆಯ (Guarantee Scheme) ಎನ್ನುವ ಮಾಹಿತಿ ಕೂಡ ತಿಳಿದು ಬಂದಿದೆ.
ಯಾಕೆಂದರೆ ಗೃಹಲಕ್ಷ್ಮಿ ಯೋಜನೆಗೆ (Gruhalakshmi) ಫಲಾನುಭವಿಗಳಾಗಲು ರೇಷನ್ ಕಾರ್ಡ್ ಕಡ್ಡಾಯ. ಜೊತೆಗೆ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಆ ಕುಟುಂಬದ ಹಿರಿಯ ಮಹಿಳೆ ಹೆಸರು ಇರಬೇಕು. APL ರೇಷನ್ ಕಾರ್ಡ್ ಪಡೆದವರು ಸರ್ಕಾರದಿಂದ ಯಾವುದೇ ಅನುಕೂಲತೆ ಸಿಗದಿದ್ದ ಕಾರಣ ಯಾವುದೇ ಅಪ್ಡೇಟ್ ಮಾಡಿಸಿರಲಿಲ್ಲ, ಈಗ ಗೃಹಲಕ್ಷ್ಮಿ ಯೋಜನೆಗಾಗಿ ಕುಟುಂಬದ ಮುಖ್ಯಸ್ಥರ ಸ್ಥಾನ ಬದಲಾವಣೆ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಅದನ್ನು ಹೊರತುಪಡಿಸಿ ಈ ಹಿಂದೆ 3 ವರ್ಷಗಳಿಂದಲೂ ಕೂಡ ಸುಮಾರು 3,18,000 ಅರ್ಜಿಗಳು ಸಲ್ಲಿಕೆ ಆಗಿವೆ, ಆದರೆ ಇವುಗಳ ಪರಿಶೀಲನೆ ನಡೆದಿರಲಿಲ್ಲ. ಯಾಕೆಂದರೆ ಸಂಬಂಧ ಪಟ್ಟ ಇಲಾಖೆಯಿಂದ ಅನುಮತಿ ಬಂದಿರಲಿಲ್ಲ ಆದರೆ ಈಗ ಈ ಪ್ರಕ್ರಿಯೆ ಚುರುಕಾಗಿ ನಡೆಯುತ್ತಿದೆ ಅಂದರೆ ತಿದ್ದುಪಡಿಗೆ ಅರ್ಜಿ ಸಲ್ಲಿಸಿದವರಿಗೆ ಒಂದು ಶಾ’ಕಿಂ’ಗ್ ನ್ಯೂಸ್ ಕಾದಿದೆ.
ಒಂದೇ ಒಂದು ಸೆಂಚುರಿ 8 ರೆಕಾರ್ಡ್ ಪುಡಿಪುಡಿ, ಗಿಲ್ ಅಬ್ಬರಕ್ಕೆ ವಿಶ್ವದ ದಿಗ್ಗಜ ಕ್ರಿಕೆಟಿಗರ ದಾಖಲೆಗಳೆ ಬ್ರೇಕ್.!
ಅದೇನೆಂದರೆ 1,17,000 ಅರ್ಜಿಗಳು ಅನುಮೋದನೆಯಾಗಿದ್ದು 20,000ಕ್ಕೂ ಹೆಚ್ಚು ಅರ್ಜಿಗಳು ತಿರಸ್ಕೃತಗೊಂಡಿದೆ ಎನ್ನುವ ಮಾಹಿತಿಯನ್ನು ಆಹಾರ ಇಲಾಖೆ ತಿಳಿಸಿದೆ. ಈ ರೀತಿ ತಿದ್ದುಪಡಿಯಾಗಲು ಸಲ್ಲಿಸಿದ್ದ ಅರ್ಜಿಗಳು ರಿಜೆಕ್ಟ್ ಆಗಲು ಕಾರಣಗಳು ಏನು ಎಂದು ಹೇಳುವುದಾದರೆ, ವಿಳಾಸ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿದವರ ವಿಳಾಸಕ್ಕೆ ಫುಡ್ ಇನ್ಸ್ಪೆಕ್ಟರ್ ಅಥವಾ ಆಹಾರ ಇಲಾಖೆ ವತಿಯಿಂದ ಉನ್ನತ ಅಧಿಕಾರಿಗಳು ಪರಿಶೀಲನೆಗೆ ಭೇಟಿ ಕೊಟ್ಟಾಗ.
ಆ ವಿಳಾಸದಲ್ಲಿ ಅರ್ಜಿ ಸಲ್ಲಿಸಿದ ನಿವಾಸಿಗಳು ಇಲ್ಲದೆ ಇರುವುದು, ರೇಷನ್ ಕಾರ್ಡ್ ಗಳಲ್ಲಿ ರಕ್ತ ಸಂಬಂಧಿಕರು ಇಲ್ಲದೆ ಇರುವವರನ್ನು ಸೇರಿಸಲು ಅರ್ಜಿ ಸಲ್ಲಿಸಿರುವುದು, ಒಂದೇ ಕುಟುಂಬದಲ್ಲಿ ಇದ್ದರೂ ಕೂಡ ಒಂದೇ ಕುಟುಂಬದ ಸದಸ್ಯರು ಅದೇ ವಿಳಾಸದಲ್ಲಿ ಪ್ರತ್ಯೇಕ ಕಾರ್ಡ್ ಪಡೆಯಲು ಅಂದರೆ ಒಂದು ಕುಟುಂಬದಲ್ಲಿ ತಂದೆ ತಾಯಿ ಮಗ ಸೊಸೆ ಮೊಮ್ಮಗ ಇದ್ದಾಗ ತಂದೆ ತಾಯಿ ಬೇರೆ ಕಾರ್ಡ್ ಮಗ ಸೊಸೆ ಮೊಮ್ಮಗನಿಗಾಗಿ ಬೇರೆ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿರುವುದು.
ಈ ಸಮಯದಲ್ಲಿ ವಿಭಾಗ ಆಗಿದ್ದೇವೆ ಎಂದು ಸುಳ್ಳು ಮಾಹಿತಿ ನೀಡಿರುವುದು ತಿಳಿದು ಬಂದಿರುವುದರಿಂದ ಈ ರೀತಿಯ ಕಾರ್ಡ್ ಗಳು ರಿಜೆಕ್ಟ್ (application reject) ಆಗಿವೆ ಎಂದು ತಿಳಿದುಬಂದಿದೆ. ಆಹಾರ ಇಲಾಖೆಯ ನಕಲಿ ಫಲಾನುಭವಿಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲು ನಿರ್ಧಾರ ಮಾಡಿದೆ.
2016ರ BPL ರೇಷನ್ ಕಾರ್ಡ್ ಮಾನದಂಡ ಮೀರಿ ರಾಜ್ಯದಲ್ಲಿ ಅನೇಕ BPL ಕಾರ್ಡುಗಳು ಚಾಲ್ತಿಯಲ್ಲಿರುವುದು ತಿಳಿದು ಬಂದಿರುವುದರಿಂದ ಅವುಗಳನ್ನು ರದ್ದುಪಡಿಸಲು ತಯಾರಿ ನಡೆಸುತ್ತಿದೆ. ಇದನ್ನು ಈಗಾಗಲೇ ತಿದ್ದುಪಡಿ ಬಗ್ಗೆ ಅರ್ಜಿ ಸಲ್ಲಿಸುವವರ ಮೇಲೂ ಕೂಡ ಅಪ್ಲೈ ಮಾಡಿದೆ ಎಂದು ತಿಳಿದು ಬಂದಿದೆ.
ನಮ್ಮ ಜಲ, ನಮ್ಮ ಹಕ್ಕು CM ಗೆ ಮನವಿ ಮಾಡಿದ ಕಿಚ್ಚ ಸುದೀಪ್.! ಕಾವೇರಿ ಹೋರಾಟಕ್ಕೆ ಬೆಂಬಲ
ಅನೇಕರು ಸರ್ಕಾರಿ ಹುದ್ದೆಯಲ್ಲಿದ್ದರೂ, 2 ಹೆಕ್ಟರ್ ಗಿಂತ ಹೆಚ್ಚು ಭೂಮಿ ಹೊಂದಿದ್ದರು, BPL ಕಾರ್ಡ್ ಹೊಂದಿರುವುದು ಇತ್ಯಾದಿಗಳು ಬೆಳಕಿಗೆ ಬಂದಿರುವುದರಿಂದ ಅಂತಹವರ ಕಾರ್ಡುಗಳು ಕೂಡ ರಿಜೆಕ್ಟ್ ಆಗಿವೆ ಎಂದು ತಿಳಿದು ಬಂದಿದೆ. ರಿಜೆಕ್ಟ್ ಆಗಿರುವುದು ಸಲ್ಲಿಸಿರುವ ಅರ್ಜಿ ಮಾತ್ರ ಅಂದರೆ ಅವರು ಯಾವ ತಿದ್ದುಪಡಿಗಾಗಿ ಮನವಿ ಮಾಡಿದರೂ ಆ ತಿದ್ದುಪಡಿ ಆಗಿಲ್ಲ, ಅವರ ಹಿಂದಿನ ರೇಷನ್ ಕಾರ್ಡ್ ಹಳೇ ಮಾಹಿತಿಯೊಂದಿಗೆ ಉಳಿದುಕೊಳ್ಳಲಿದೆ.