Thursday, September 28, 2023
Home News ಆಂಜನೇಯ ಸ್ವಾಮಿಯ ಬಗ್ಗೆ ನಿಮಗೆ ಗೊತ್ತಿಲ್ಲದ 10 ನಿಜ ಸಂಗತಿಗಳು ಜೈ ಆಂಜನೇಯ.

ಆಂಜನೇಯ ಸ್ವಾಮಿಯ ಬಗ್ಗೆ ನಿಮಗೆ ಗೊತ್ತಿಲ್ಲದ 10 ನಿಜ ಸಂಗತಿಗಳು ಜೈ ಆಂಜನೇಯ.

ಶನಿವಾರದ ದಿನದಂದು ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡುವುದರಿಂದ ಅವನ ಕೃಪಾಕಟಾಕ್ಷ ನಮ್ಮ ಮೇಲೆ ಬೀಳುತ್ತದೆ ಎಂಬುದು ನಂಬಿಕೆ. ಶ್ರೀರಾಮನಿಗಾಗಿ ಹನುಮಂತನು ತೋರಿದ ಪ್ರೀತಿ, ನಿಸ್ವಾರ್ಥ ಶ್ರದ್ಧ ಮತ್ತು ಭಕ್ತಿಯಿಂದ ಕೂಡಿದೆ. ತನ್ನ ಎದೆಯನ್ನೇ ಸೀ’ಳಿದ ನಿಷ್ಠಾವಂತ ಭಕ್ತಿಯನ್ನು ಮೆರೆದ ತ್ಯಾಗವಂತ. ಹನುಮಂತನನ್ನು ಶಿವನ ಅವತಾರವೆಂದು ಶಿವ ಪುರಾಣದಲ್ಲಿ ಹೇಳಲಾಗಿದೆ ರಾವಣನನ್ನು ಸೋಲಿಸಲು ವಿಷ್ಣು ರಾಮನ ಅವತಾರವನ್ನು ತಾಳಿದಾಗ ಶಿವನು ಹನುಮಂತನ ಅವತಾರವನ್ನು ತಾಳುತ್ತಾನೆ.

ಹನುಮಂತನು ತನ್ನ ಜೀವನದ ಉದ್ದಕ್ಕೂ ರಾಮನ ಸೇವೆಯನ್ನು ಮಾಡುತ್ತಾನೆ. ಪುರಾಣಗಳಲ್ಲಿ ಹೇಳಿರುವಂತೆ ಹನುಮಂತನ ತಾಯಿ ದೇವಿ ಅಂಜನಾ ಈಕೆಯನ್ನು ಪಂಜಿ ಕಾರ್ತಲಾ ಎನ್ನುವ ಶಾ’ಪ’ಗ್ರ’ಸ್ತ ಆಕಾಶ ಕಾಲ್ಪನಿಕ ಎಂದು ಹೇಳಲಾಗುತ್ತದೆ ಏಕೆಂದರೆ ಶಾ’ಪ’ಕ್ಕೆ ಒಳಗಾಗಿ ಮಂಗಗಳ ರಾಜಕುಮಾರಿಯಾಗಿ ಜನಿಸುತ್ತಾಳೆ.

ಅವಳು ಶಾ’ಪ’ಕ್ಕೆ ಒಳಗಾಗುವ ಸಂದರ್ಭದಲ್ಲಿ ನೀನು ಯಾವುದಾದರೂ ಒಂದು ಜೀವದ ಅವತಾರಕ್ಕೆ ಜನ್ಮದಾತೆಯಾದರೆ ಮಾತ್ರ ನೀನು ಶಾಪದಿಂದ ಮು’ಕ್ತಿ ಹೊಂದುವೆ ಎಂದು ಹೇಳಲಾಗುತ್ತದೆ ನಂತರ ಅಂಜನಾ ಮಂಗಗಳ ಮುಖ್ಯಸ್ಥನಾದ ಕೇಸರಿಯನ್ನು ವಿವಾಹವಾದಳು ಹಾಗೂ ಹನುಮಂತ ಎನ್ನುವ ದೈವಿಕ ಶಕ್ತಿಯುಳ್ಳ ಮಗುವಿಗೆ ಜನ್ಮ ನೀಡುತ್ತಾಳೆ.

ಇದನ್ನು ಓದಿ:- ಮನೆಯಲ್ಲಿ ಬೀರುವನ್ನು ಯಾವ ದಿಕ್ಕಿನಲ್ಲಿ ಇಡುವುದು ಶುಭ, ಯಾವ ಬಣ್ಣದ ಬೀರುವನ್ನು ಇಟ್ಟುಕೊಂಡರೆ ಮನೆಗೆ ತೊಂದರೆ.?

ಸಂಸ್ಕೃತದಲ್ಲಿ ಹನುಮಾನ್ ಎಂದರೆ ವಿ’ರೂ’ಪಗೊಂಡ ದವಡೆ ಎಂದು ಅರ್ಥ ಹನು ಎಂದರೆ ದವಡೆ ಮಾನ್ ಎಂದರೆ ವಿರೂಪಗೊಂಡಿದೆ ಎಂದು ಹೇಳಲಾಗುತ್ತದೆ ಸೂರ್ಯ ಮತ್ತು ಇಂದ್ರನೊಂದಿಗೆ ಕಾದಾಟ ನಡೆಸುವುದರಿಂದ ಹನುಮಾನ್ ಗೆ ಈ ಹೆಸರು ಬರಲು ಕಾರಣವಾಯಿತು. ಇಂದ್ರನ ವಜ್ರಾಯುಧದ ಒಡೆತವು ಹನುಮಾನ್ ದವಡೆಗೆ ಬಿದ್ದು ಆತನ ದವಡೆಯು ವಿರೂಪ ಗೊಳ್ಳುತ್ತದೆ ಅಂದಿನಿಂದ ಆಂಜನೇಯನನ್ನು ಹನುಮಾನ್ ಎಂದು ಕರೆಯಲಾಗುತ್ತದೆ.

ಎಲ್ಲಾ ಪ್ರಮುಖ ದೇವರುಗಳು ಸಹ ಹನುಮನನ್ನು ಆಶೀರ್ವದಿಸಿದ್ದಾರೆ ಅದರಲ್ಲಿ ಒಂದು ಈ ‘ಅಮರ’ ಎನ್ನುವ ವರವಾಗಿದೆ ಅಂದರೆ ಹನುಮನ ಸಾ’ವು ಅವನ ಸ್ವ ಇಚ್ಛೆಯಿಂದ ಮಾತ್ರ ಸಂಭವಿಸಲು ಸಾಧ್ಯ. ಒಮ್ಮೆ ಶ್ರೀರಾಮನು ತನ್ನ ಅರಮನೆಯಲ್ಲಿ ಯಾವುದೋ ಕಾರ್ಯಕ್ರಮಕ್ಕೆ ವಿದ್ವಾಂಸರು ಋಷಿಮುನಿಗಳು ಉಪಸ್ಥಿತರಿದ್ದರು ಆದರೆ ಆ ಕಾರ್ಯಕ್ರಮದಲ್ಲಿ ಶ್ರೀರಾಮನ ಶಿಕ್ಷಕರಾದ ವಿಶ್ವಾಮಿತ್ರ ಮುನಿಗಳು ಮಾತ್ರ ಆಗಮಿಸಿರುವುದಿಲ್ಲ.

ಹನುಮಂತನು ನಾರದಮುನಿಗಳ ಮಾತನ್ನು ಕೇಳಿ ವಿಶ್ವಾಮಿತ್ರ ಮುನಿಗಳನ್ನು ಹೊರತುಪಡಿಸಿ ಉಳಿದವರೆಲ್ಲರನ್ನು ಆಹ್ವಾನಿಸಿರುತ್ತಾನೆ. ಇದರಿಂದ ಕೋಪಗೊಂಡ ವಿಶ್ವಾಮಿತ್ರರು ತನಗೆ ಅ’ಗೌ’ರ’ವ ಮಾಡಿರುವುದಕ್ಕೆ ಶ್ರೀರಾಮನಲ್ಲಿ ಹನುಮಂತನಿಗೆ ಮರಣದಂಡನೆ ವಿಧಿಸುವಂತೆ ಆದೇಶ ನೀಡುತ್ತಾರೆ ವಿಶ್ವಾಮಿತ್ರರು ಶ್ರೀ ರಾಮನ ಗುರುಗಳಾದ್ದರಿಂದ ಗುರುಗಳ ಮಾತನ್ನು ಪಾಲಿಸಲೇಬೇಕಿತ್ತು ಆದ್ದರಿಂದ ಶ್ರೀ ರಾಮನು ಹನುಮನ ತಲೆಯನ್ನು ಕ’ತ್ತ’ರಿ’ಸಲು ಬಾಣಗಳನ್ನು ಹೂಡುತ್ತಾನೆ.

ಇದನ್ನು ಓದಿ:- ಎರಡನೇ ಮದುವೆಯಾದ ಹೆಂಡತಿಗೆ ಮೊದಲ ಗಂಡನ ಆಸ್ತಿಯಲ್ಲಿ ಪಾಲು ಸಿಗುತ್ತದೆಯೇ.? ಎಷ್ಟು ಭಾಗ ಸಿಗುತ್ತದೆ.?

ಆದರೆ ಯಾವುದೇ ಬಾಣಗಳು ಕೂಡ ಹನುಮನಿಗೆ ಹಾ’ನಿ ಮಾಡುವುದಿಲ್ಲ ಯಾಕೆಂದರೆ ಹನುಮನು ಆ ಸಂದರ್ಭದಲ್ಲಿ ಶ್ರೀ ರಾಮ ಎನ್ನುವ ರಾಮ ನಾಮವನ್ನು ಜಪಿಸುತ್ತಿರುತ್ತಾನೆ. ಸೀತಾ ಮಾತೆಯು ಹಣೆಗೆ ಸಿಂಧೂರವನ್ನು ಇಟ್ಟುಕೊಳ್ಳುತ್ತಿರುವ ಸಂದರ್ಭದಲ್ಲಿ ಏಕೆ ನೀವು ಸಿಂಧೂರವನ್ನು ಇಟ್ಟುಕೊಳ್ಳುತ್ತೀರಾ ಎಂದು ಕೇಳುತ್ತಾನೆ ಆಗ ಸೀತೆಯು ತನ್ನ ಗಂಡನ ಆಯಸ್ಸು ಅಂದರೆ ನಿಮ್ಮ ಯಜಮಾನರ ಆಯಸ್ಸು ಹೆಚ್ಚಾಗಲೆಂದು ಪ್ರತ್ಯುತ್ತರವನ್ನು ನೀಡುತ್ತಾಳೆ.

ಇದರಿಂದ ಹನುಮಂತನು ಪ್ರಭಾವಿತನಾಗಿ ರಾಮನ ಮೇಲಿನ ಪ್ರೀತಿಯಿಂದ ಸಿಂಧೂರವನ್ನು ಇಟ್ಟರೆ ನನ್ನ ಸ್ವಾಮಿಗೆ ಸಂತೋಷ ಆಯಸ್ಸು ಹೆಚ್ಚಾಗುತ್ತದೆ ಎಂದು ತಿಳಿದು ತನ್ನ ಸಂಪೂರ್ಣ ದೇಹಕ್ಕೆ ಸಿಂಧೂರವನ್ನು ಹಚ್ಚಿಕೊಳ್ಳುತ್ತಾನೆ ಆದ್ದರಿಂದ ಇಂದಿಗೂ ಕೂಡ ಹನುಮಂತನ ವಿಗ್ರಹವನ್ನು ಸಿಂಧೂರದಿಂದ ಅಲಂಕರಿಸಲಾಗುತ್ತದೆ. ಹನುಮಂತನು ತಾನು ನಂಬಿದಂತಹ ಭಕ್ತರ ಕೈ ಬಿಟ್ಟಿಲ್ಲ. ನೀವು ಸಹ ಆಂಜನೇಯ ಸ್ವಾಮಿಯ ಭಕ್ತರಾಗಿದ್ದರೆ ಜೈ ಆಂಜನೇಯ ಎಂದು ಕಾಮೆಂಟ್ಸ್ ಮೂಲಕ ತಿಳಿಸಿ.

- Advertisment -