ಕಳೆದ ಶನಿವಾರದ ಬಿಗ್ ಬಾಸ್ ಎಪಿಸೋಡ್ (Weekend Bigboss episodes) ಇಷ್ಟು ವರ್ಷಗಳ ಬಿಗ್ ಬಾಸ್ ಇತಿಹಾಸದಲ್ಲಿಯೇ ಬಹಳ ಮಹತ್ವದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಯಾಕೆಂದರೆ ಕಳೆದ ವಾರ ಮನೆಯಲ್ಲಿ ಆನೆಯಂತೆ ಸ್ಟ್ರಾಂಗ್ ಎನಿಸಿಕೊಂಡಿದ್ದ ಕಂಟೆಸ್ಟೆಂಟ್ ವಿನಯ್ (Vinay), ವಾರಪೂರ್ತಿ ಮದವೇರಿದ ಗಜದಂತೆ ಹೆಣ್ಣು ಮಕ್ಕಳೊಂದಿಗೆ ವರ್ತಿಸಿ ಬಳೆ (Bangles) ಬಗ್ಗೆ ಕೂಡ ಬಹಳ ತಾತ್ಸರವಾಗಿ ಮಾತನಾಡಿದರು.
ಹಳ್ಳಿಮನೆ ಟಾಸ್ಕ್ ನಲ್ಲಿ ನಾವು ಕೈಗೆ ಬಾಳೆ ಹಾಕಿಕೊಂಡಿಲ್ಲಾ, ಬಳೆನಾ ಅವನಿಗೆ ತೊಡಿಸು ಎಂದೆಲ್ಲ ಸಂಗೀತಾಗೆ ಅವಾಜ್ ಹಾಕಿದ್ದರು. ರೊಚ್ಚಿಗೆದ್ದ ಸಂಗೀತ (Sangeetha) ಅವರು ಕೂಡ ಕೈಗೆ ಬಳೆ ಹಾಕಿಕೊಂಡೆ ನಿನ್ನನ್ನು ಗೆಲ್ಲುತ್ತೇನೆ ಎಂದು ಚಾಲೆಂಜ್ ಹಾಕಿ ಶ್ರಮ ಹಾಕಿದ್ದರು.
ಆ ಸಮಯದಲ್ಲಿ ವಿನಯ್ ಅವರು ಆಡಿದ ಮಾತುಗಳು ತಪ್ಪು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿತ್ತು ಮತ್ತು ಸುದೀಪ್ ಅವರು ಈ ಬಗ್ಗೆ ಮಾತನಾಡಲೇಬೇಕು ಎಂದು ಪ್ರೇಕ್ಷಕರು ಕೂಡ ಮನವಿ ಮಾಡಿದ್ದರು ಸೆಲೆಬ್ರೆಟಿಗಳು ಸೇರಿದಂತೆ ಅನೇಕರು ವಿನಯ್ ಗೆ ಪ್ರಶ್ನೆ ಮಾಡಿ ಎಂದು ಕೇಳಿದ್ದರು.
ಮನೆಯೊಳಗೂ ಕೂಡ ವಾರಪೂರ್ತಿ ಬಳೆ ವಿಚಾರ ಸದ್ದು ಮಾಡಿದ್ದರಿಂದ ವಿನಯ್ ಅವರಿಗೆ ಮಾತ್ರವಲ್ಲದೆ ಮನೆಯಲ್ಲಿದ್ದ ಎಲ್ಲರಿಗೂ ಹಾಗೂ ಹೊರಗಡೆ ಕೂಡ ಬಳೆ ಬಗ್ಗೆ ಬಹಳ ಹಗುರವಾಗಿ ತೆಗೆದುಕೊಂಡಿದ್ದವರಿಗೆಲ್ಲ ಬಳೆ ಎನ್ನುವುದು ಸಂಸ್ಕೃತಿ, ಅಲಂಕಾರ, ಪ್ರಸಾದ ಮತ್ತು ಶಕ್ತಿ ಎಂದ ಕಿಚ್ಚ ಎಲ್ಲಾ ಗಂಡು ಮಕ್ಕಳಿಗೂ ಕೂಡ ಚಿಕ್ಕ ವಯಸ್ಸಿನಲ್ಲಿ ಬಳೆ ತೊಡಿಸಿ ಅಲಂಕಾರ ಮಾಡಿಸಿ ನೋಡಿರುತ್ತಾರೆ.
ಬಳೆ ಬಲಹೀನತೆಯಲ್ಲ ಎನ್ನುವುದನ್ನು ಮನವರಿಕೆ ಮಾಡಿಸಿ ಈ ವಾರದ ಕಿಚ್ಚನ ಚಪ್ಪಾಳೆ, ಬಳೆಗೆ ಎಂದು ಕೂಡ ಹೇಳಿದ್ದರು. ಇಷ್ಟಾಗುತ್ತಿದ್ದಂತೆ ಬಳೆ ವಿಚಾರ ಟ್ರೆಂಡಿಂಗ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಬಳೆಯದ್ದೇ ಹವಾ ಆಯ್ತು. ಈ ಎಪಿಸೋಡ್ ನೋಡಲು ಕಾಯುತ್ತಿದ್ದ ಅದೆಷ್ಟೋ ಹೆಣ್ಣು ಮಕ್ಕಳು ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಭಾವುಕರಾಗಿದ್ದರು.
ಈಗ ಕಿಚ್ಚನ (Kicha Sudeep) ಬಳೆ ವಿಷಯದ ಕುರಿತ ಮತ್ತೊಂದು ಹಳೆ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಎಲ್ಲರಿಗೂ ತಿಳಿದಿರುವಂತೆ ಪೈಲ್ವಾನ್ ಸಿನಿಮಾ (Pilwan) ರಿಲೀಸ್ ಆದ ಸಮಯದಲ್ಲಿ ಅದು ಪೈರಸಿ (Pyracy) ಆಗಿ ನಿರ್ಮಾಪಕರಿಗೆ ದೊಡ್ಡ ನಷ್ಟವಾಯಿತು.
ಆ ಸಮಯದಲ್ಲಿ ಅನೇಕರ ಮೇಲೆ ಅನುಮಾನ ಪಟ್ಟು ಇವರೇ ಮಾಡಿಸಿದ್ದು ಎಂದು ಗಾಳಿ ಸುದ್ದಿ ಹಬ್ಬಿತ್ತಾದರೂ ಯಾರು ಎನ್ನುವುದು ಸ್ಪಷ್ಟವಾಗಲಿಲ್ಲ. ಆದರೆ ಅವರನ್ನೇ ಉದ್ದೇಶಿಸಿ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚನ ಅಭಿಮಾನಿಗಳು ಹಿಡಿ ಶಾಪ ಹಾಕಿದ್ದರು. ನಿರ್ಮಾಪಕಿ ಸ್ವಪ್ನ ಕೃಷ್ಣ ಕೂಡ ಆ ಸಮಯದಲ್ಲಿ ನೊಂದುಕೊಂಡು ಕ’ಣ್ಣೀ’ರಿ’ಟ್ಟ ವಿಡಿಯೋಗಳು ವೈರಲ್ ಆಗಿದ್ದವು.
ತಮ್ಮ ಸಿನಿಮಾ ಈ ರೀತಿ ಆದ ವಿಚಾರದಿಂದ ಬೇಸರಪಟ್ಟಿಕೊಂಡ ಕಿಚ್ಚ ಸುದೀಪ್ ಅವರು ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ (Kicha tweet About Pilwan Pyracy ) ಈ ರೀತಿ ಬರೆದಿದ್ದರು. ನಾನು ಹಾಗೂ ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆನು ಗೊತಿಲ್ಲ. ನನ್ನ ಮೌನ, ನನ್ನ ತಾಳ್ಮೆ, ಎರಡನ್ನು ಪರೀಕ್ಷಿಸಿದ್ದಾರೆ.
ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳುಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ, ಇನ್ನು ಕೆಲವು ದಿನಗಳು ಮಾತ್ರ ಎಂದು ಟ್ವೀಟ್ ಮಾಡಿದ್ದರು. ಸುದೀಪ್ ಅವರು ಅಂದು ಯಾವ ಅರ್ಥದಲ್ಲಿ ಅದನ್ನು ಹೇಳಿದ್ದರು. ಅಂದು ಅವರೇಳಿದ್ದು ಸರಿ ಆದರೆ ಇವತ್ತು ವಿನಯ್ ಹೇಳಿದ್ದು ಸರಿಯೇ ಅಲ್ಲವೇ.
ನಾನು ಹಾಗೂ ನನ್ನ ಸ್ನೇಹಿತರು, ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ.
ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆನುಗೊತಿಲ್ಲ. ನನ್ನ ಮೌನ, ನನ್ನ ತಾಳ್ಮೆ, ಎರಡನ್ನು ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳುಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ,ಇನ್ನು ಕೆಲವು ದಿನಗಳು ಮಾತ್ರ.— Kichcha Sudeepa (@KicchaSudeep) September 20, 2019
ಅದು ಗಾದೆ ಮಾತು ಇವುಗಳನ್ನು ಹುಟ್ಟಿದಾಗನಿಂದ ಬಳಸಿರುತ್ತಾರೆ ಹಾಗೆ ಬಾಯಿ ತಪ್ಪಿ ಬರಬಾರದು ಎಂದರೆ ಮೂಲದಿಂದಲೇ ತೆಗೆಯಿರಿ. ಇಲ್ಲವಾದಲ್ಲಿ ಹೇಳುವುದು ಆಚಾರ ಮಾಡುವುದು ಮತ್ತೊಂದು ಎನ್ನುವ ರೀತಿ ಆಗುವುದು ಬೇಡ ಎಂದು ವಿನಯ್ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಾರೆ.