ಬಿಗ್ ಬಾಸ್ ಸೀಸನ್ 10ರ (Big boss S10) ಕಂಟೆಸ್ಟೆಂಟ್ ಗಳು ಕನ್ನಡಿಗರಿಗೆ ಹೆಚ್ಚು ಪರಿಚಿತರಾಗಿದ್ದಾರೆ. ಬಹುತೇಕ ಸೀರಿಯಲ್ ಕಲಾವಿದರು, ಅದರಲ್ಲೂ ಕೂಡ ಸೀರಿಯಲ್ ಗಳಲ್ಲಿ ಟಾಪ್ ನಲ್ಲಿ ಮಿಂಚಿದವರು ಹೀಗಾಗಿ ಪ್ರತಿಯೊಬ್ಬರಿಗೂ ಕೂಡ ಈ ಬಾರಿ ಬಿಗ್ ಬಾಸ್ ಸೀಸನ್ ನೋಡಲು ಯಹೆಚ್ಚು ಇಷ್ಟವಾಗುತ್ತಿದೆ.
ಈಗಾಗಲೇ ನಾಲ್ಕನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ನಲ್ಲಿ ಹರಹರ ಮಹಾದೇವ ಧಾರವಾಹಿ ವಿನಯ್ ಗೌಡ (Hara Hara Mahadevappa Serial actor Vinay Gowda ) ಕೂಡ ಇರುವುದು ಅನೇಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಯಾಕೆಂದರೆ ಈ ನಟ ಧಾರಾವಾಹಿಯಲ್ಲಿ ಮಹಾದೇವನ ಪಾತ್ರದ (Mahadevappa role) ಮೂಲಕ ಮನೆ ಮನೆ ಮಾತಾಗಿದ್ದರು ಮತ್ತು ಪ್ರೇಕ್ಷಕರು ಕೂಡ ಇವರು ಶಿವನ ಪಾತ್ರ ತೊಟ್ಟಿದ್ದನ್ನು ಕಂಡು ಬಹಳ ಗೌರವದಿಂದ ಕಾಣುತ್ತಿದ್ದರು.
ಇವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ ಅನೇಕರು ಸಂತೋಷಪಟ್ಟು ಇವರ ಆಟ ನೋಡಲು ಆಸಕ್ತಿ ತೋರಿದರಾದರು ದಿನ ಕಳೆಯುತ್ತಿದ್ದಂತೆ ಇವರು ಮಿತಿಮೀರುತ್ತಿದ್ದಾರೆ ಎಂದು ಕೋ’ಪಗೊಂಡಿದ್ದಾರೆ. ಕಳೆದ ವಾರ ವಾರಂತ್ಯದ ಎಪಿಸೋಡ್ ನಲ್ಲಿ ಸುದೀಪ್ ಅವರು ಸ್ಪಷ್ಟವಾಗಿ ನೀವೆಲ್ಲ ಸೇರಿ ಒಬ್ಬ ಫೈನಲಸ್ಟ್ ಸೃಷ್ಟಿಸುತ್ತಿದ್ದೀರಿ ನನಗೆ ವಿನಯ್ ಫೈನಲ್ ಕಂಟೆಸ್ಟೆಂಟ್ ಆಗಿ ಕ್ಲಿಯರ್ ಆಗಿ ಕಾಣುತ್ತಿದ್ದಾರೆ ಎಂದು ಕೂಡ ಹೇಳಿದರು.
ವೀಕ್ಷಕರಿಂದ ವಿನಯ್ ಗೆ ಆನೆಯ ಗಿಫ್ಟ್ ಕೂಡ ಹೋಗಿತ್ತು ಆದರೆ ಅದರ ಸಂದೇಶ ಸ್ಪಷ್ಟವಾಗಿ ತಲುಪಲಿಲ್ಲ ಎನ್ನುವುದು ಪ್ರೇಕ್ಷಕರ ಅಭಿಪ್ರಾಯ ಈಗ ಅಂತೆಯೇ ಅಕ್ಷರಶಃ ಮದವೇರಿದ ಒಂಟಿ ಸಲಗದ ರೀತಿ ಆಡುತ್ತಿರುವ ವಿನಯ್ ಗೌಡ ಸಿಕ್ಕ ಸಿಕ್ಕವರ ಮೇಲೆ ಎಗರಾಡುತ್ತಿದ್ದಾರೆ.
ಕಳೆದ ವಾರ ಇಡೀ ಮನೆಗೆ ಬುದ್ಧಿ ಹೇಳಿ, ವಿನಯ್ ಆತನ ತಪ್ಪಿನ ಬಗ್ಗೆ ಹೇಳದೆ ಇದ್ದಿದ್ದು ಕೂಡ ಅನೇಕರಿಗೆ ಬೇಸರ ತರಿಸಿದೆ ಹೀಗಾಗಿ ನೆಟ್ಟಿಗರು ಇದೇ ವಿಷಯವಾಗಿ ಸೋಶಿಯಲ್ ಮೀಡಿಯಾ ಗಳಲ್ಲಿ ಕಾಮೆಂಟ್ ಮಾಡಿ ಚಾನಲ್ ಗೂ ವಿನಯ್ ಕಂಡರೆ ಭಯವೇ ಎಂದು ಕೇಳುತ್ತಿದ್ದಾರೆ. ಟ್ರೋಲ್ ಪೇಜ್ ಗಳಂತೂ ಪ್ರತಿದಿನ ವಿನಯ್ ನನ್ನು ಟ್ರೋಲ್ (trolls) ಮಾಡುತ್ತಿದ್ದಾರೆ.
ಈ ವಾರದಲ್ಲಂತೂ ಪ್ರತಿದಿನವೂ ಪ್ರತಿಕ್ಷಣವೂ ಕೂಡ ವಿನಯ್ ಅವರ ಮೇಲೆ ಅಸಮಾಧಾನ ಮನೆ ಮಂದಿಗೆ ಮಾತ್ರವಲ್ಲ ಪ್ರೇಕ್ಷಕರಿಗೆ ಇದೆ. ಯಾಕೆಂದರೆ ಡ್ರೋನ್ ಪ್ರತಾಪ್ ಅವರನ್ನು ಪದೇಪದೇ ಟಾಂಟ್ ಮಾಡುತ್ತಿದ್ದಾರೆ, ತಮಗೆ ಸಿಕ್ಕ ನಾಮಿನೇಟ್ ಅವಕಾಶದಲ್ಲಿ ಭಾಗ್ಯಶ್ರೀ ಅವರು ಅಧಿಕಾರ ಚಲಾಯಿಸಿ ಸ್ನೇಹಿತ್ ನನ್ನು ನಾಮಿನೇಟ್ ಮಾಡಿದ್ದ ಕಾರಣವನ್ನು ಕೂಡ ಕೆಣಕಿದ ಅವರು.
ತಾವು ಅವರ ನಿರ್ಧಾರವನ್ನು ಪ್ರಶ್ನೆ ಮಾಡಬಹುದು ಅಥವಾ ಅವರ ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುವ ಅಗತ್ಯವಿಲ್ಲ ಎನ್ನುವ ರೀತಿ ಮಾತನಾಡಿದ್ದಾರೆ, ಮುಂದೆ ಮಾತಿಗೆ ಮಾತು ಬೆಳೆದು ಬೇಸರವಾಗಿ ಅವರು ಕಣ್ಣೀರು ಇಟ್ಟಾಗ ಇದು ಸೀರಿಯಲ್ ಅಲ್ಲ ಡ್ರಾಮಾ ಮಾಡಬೇಡಿ ಎಂದಿದ್ದಾರೆ.
ಸೀರಿಯಲ್ ಬಗ್ಗೆ ಹಾಗೆ ಮಾತನಾಡಬೇಡಿ ನೀವು ಕೂಡ ಅದರಿಂದಲೇ ಅನ್ನ ತಿಂದಿರುವುದು ಎಂದು ಹೇಳಿದಾಗ ಸೀರಿಯಲ್ ಒಂದೇ ಅನ್ನ ಹಾಕಿಲ್ಲ ಎಂದು ಹೇಳಿರುವುದು ನೆಟ್ಟಿಗರ ಕೋಪವನ್ನು ನೆತ್ತಿಗೇರಿಸಿದೆ. ಈತನದ್ದು ದುರಹಂಕಾರದ ಪರಮಾವಧಿ ನಮ್ಮೆಲ್ಲರಿಗೂ ಇವನು ಪರಿಚಯವಾಗಿದ್ದು ಸೀರಿಯಲ್ ಮೂಲಕ, ಅದೇ ಖ್ಯಾತಿಯಿಂದ ಬಿಗ್ ಬಾಸ್ ಮನೆಗೂ ಹೋಗಿರುವುದು ಆದರೆ ಅದರ ಬಗ್ಗೆಯೇ ಗೌರವವಿಲ್ಲ ಎಂದು ವಿನಯ್ ಮಾತುಗಳನ್ನು ಖಂಡಿಸುತ್ತಿದ್ದಾರೆ.
ಈ ವಾರ ಹಳ್ಳಿ ಮನೆ ಟಾಸ್ಕ್ ನಲ್ಲಿ ಹೆಣ್ಣು ಮಕ್ಕಳಿಗೆ ಹೋಗೇಲೇ ಬಾರಲೇ ಯಾವಳೋ ಎಂದು ಕರೆದಿರುವುದು, ಕಾರ್ತಿಕ್ ಅವರನ್ನು ಬಳೆಗಳ ರಾಜ ಎಂದಿರುವುದು ಇದೆಲ್ಲವನ್ನು ಸುದೀಪ್ (Sudeep) ಪ್ರಶ್ನಿಸಿ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ತಾಕೀತು ಮಾಡುತ್ತಿದ್ದಾರೆ.