ಸದ್ಯಕ್ಕೆ ಕರ್ನಾಟಕದಲ್ಲಿ ಹೆಚ್ಚು ಟ್ರೆಂಡಿಂಗ್ ನಲ್ಲಿರುವ ವಿಚಾರ ಎಂದರೆ ಅದು ಬಿಗ್ ಬಾಸ್ ಮನೆ ಆಟ ಎಂದೇ ಹೇಳಬಹುದು. ಬಿಗ್ ಬಾಸ್ ಸೀಸನ್ 10 (Bigboss S10) ಸಾಕಷ್ಟು ಇಂಟರೆಸ್ಟಿಂಗ್ ವಿಷಯಗಳನ್ನು ಹೊಂದಿದ್ದು ಸೋಶಿಯಲ್ ಮೀಡಿಯಾದಲ್ಲಿ ದಿನ ಬೆಳಗಾದರೆ ಬಿಗ್ ಬಾಸ್ ಮನೆಯ ವಿಚಾರವೇ ಚರ್ಚೆಯಾಗುತ್ತಿದೆ.
ಬಿಗ್ ಬಾಸ್ ಶುರುವಾಗಿರುವುದು ಟ್ರೋಲ್ ಪೇಜ್ ಗಳಿಗೆ ಹಬ್ಬದಂತಾಗಿ ಕಂಟೆಸ್ಟೆಂಟ್ ಗಳನ್ನು ಹಿಗ್ಗಾ ಮುಗ್ಗಾ ಟ್ರೋಲ್ (trolls) ಮಾಡುತ್ತಿದ್ದಾರೆ. ಅದರಲ್ಲೂ ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ಸಿಕ್ಕಾಪಟ್ಟೆ ರೋಸ್ಟ್ ಆಗಿ ಟ್ರೋಲ್ ಆಗುತ್ತಿದ್ದ ಡೋನ್ ಪ್ರತಾಪ್ (Drone Prathap) ಈಗ ಪಾಸಿಟಿವ್ ಆಗಿ ಪೋಟ್ರೆ ಆಗುತ್ತಿದ್ದಾರೆ, ಮತ್ತು ಬಹಳ ನೆಗೆಟಿವ್ ಆಗುತ್ತಿರುವುದು ಸುದೀಪ್ ಅವರಿಂದ ಫೈನಲ್ ಲಿಸ್ಟ್ ಎಂದು ಕರೆಸಿಕೊಂಡಿರುವ ವಿನಯ್ ಗೌಡ (Vinay Gowda).
ಸುವರ್ಣ ವಾಹಿನಿಯ ಪೌರಾಣಿಕ ಧಾರಾವಾಹಿ ಹರಹರ ಮಹಾದೇವದಲ್ಲಿ (HaraHara Mahadev) ಮಹದೇವನಾಗಿ ಕಾಣಿಸಿಕೊಂಡಿದ್ದ ವಿನಯ್ ಗೌಡ ಅವರ ವ್ಯಕ್ತಿತ್ವ ಈ ರೀತಿ ಇರುತ್ತದೆ ಎಂದು ಜನ ಅಂದುಕೊಂಡಿರಲಿಲ್ಲ. ಅದೇ ಸಮಯಕ್ಕೆ ಇಡೀ ಕರ್ನಾಟಕಕ್ಕೆ ಡ್ರೋನ್ ಹೆಸರೇಳಿ ಕಾಗೆ ಹಾರಿಸಿದ ಡ್ರೋನ್ ಪ್ರತಾಪ್ ಇಷ್ಟು ಬೇಗ ಕರ್ನಾಟಕದ ಜನರ ಮನಸ್ಸು ಮುಟ್ಟುತ್ತಾರೆ ಎಂದು ಯಾರು ಊಹಿಸಲಾಗಿರಲಿಲ್ಲ.
ಒಟ್ಟಿನಲ್ಲಿ ಸೀಸನ್ 10 ರಲ್ಲಿ ಎಲ್ಲವೂ ಉಲ್ಟಾಪಲ್ಟವಾಗಿದೆ ಮೊದಲ ವಾರದಿಂದಲೂ ಕೂಡ ವಿನಯ್ ಅವರ ಆಟಿಟ್ಯೂಡ್ ಜನರಿಗೆ ಇಷ್ಟ ಆಗುತ್ತಿಲ್ಲ ಅದರಲ್ಲೂ ಅವರ ಬಾಯಿಂದ ಬರುತ್ತಿರುವ ಪ್ರತಿ ಮಾತುಗಳು ಕೂಡ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿ ಹೋಗಿದೆ. ನಾಲ್ಕನೇ ವಾರದಲ್ಲಲೂ ಇದು ಮುಂದುವರೆದಿದ್ದು ಈ ಬಾರಿ ವಿಶೇಷವಾಗಿ ನಡೆದ ನಾಮಿನೇಷನ್ ಟಾಸ್ಕ್ ನಲ್ಲಿ ತಮ್ಮ ಬುದ್ದಿವಂತಿಕೆಯಿಂದ ಪ್ರತಾಪ್ ಅವರು ನಾಲ್ಕು ನಾಮಿನೇಷನ್ ಪಾಸ್ ಗಳನ್ನು ಗೆದ್ದಿದ್ದು ವಿನಯ್ ಅವರನ್ನು ಕೆರಳಿಸಿದೆ.
ಇದೇ ಸಮಯಕ್ಕೆ ನಾಮಿನೇಟ್ ಮಾಡುವ ಅವಕಾಶ ಸಿಕ್ಕಾಗ ಪ್ರತಾಪ್ ಅವರು ನೇರವಾಗಿ ನನ್ನನ್ನು ಕಾಂಪಿಟೇಟರ್ ಅಲ್ಲ ಎಂದು ನೀವು ಹೇಳುತ್ತಿದ್ದೀರಾ, ನಾನು ಲೆಕ್ಕಕ್ಕೆ ಇಲ್ಲ ಇನ್ನುವ ರೀತಿ ಮಾತನಾಡುತ್ತಿದ್ದೀರಾ, ಅದು ನನಗೆ ಇಷ್ಟ ಇಲ್ಲ, ನಾನು ಕೂಡ ಹೊರಗಡೆ ಸ್ಟಾರ್ಟ್ ಅಪ್ ಕಂಪನಿ ಶುರು ಮಾಡಿದ್ದೇನೆ ನನ್ನಿಂದ ಆದಷ್ಟು ಜನರಿಗೆ ಕೆಲಸ ಕೊಟ್ಟಿದ್ದೇನೆ.
ಹಾಗಾಗಿ ನಾನು ಕೂಡ ಇನ್ನೊಬ್ಬರಿಗೆ ಸ್ಪರ್ಧೆ ಕೊಡಬಲ್ಲೆ, ನೀವು ಈ ರೀತಿ ಮಾತನಾಡುವುದು ಇಷ್ಟವಾದ ಕಾರಣ ನಿಮ್ಮನ್ನು ನಾಮಿನೇಟ್ ಮಾಡುತ್ತಿದ್ದೇನೆ ಎಂದು ವಿನಯ್ ಗೆ ಹೇಳಿದರು. ಆ ಮಾತು ಮುಗಿಯುವ ಮೊದಲೇ ಮಾತಿನ ಮಧ್ಯದಲ್ಲಿ ಇಲ್ಲಿಯ ವಿಚಾರ ಮಾತನಾಡು ಹೊರಗೆ ನನಗೂ 35 ಕಂಪನಿಗಳಿವೆ ಎಂದಿದ್ದಾರೆ ವಿನಯ್.
ಅವರು 35 ಕಂಪನಿಗಳಿವೆ ಎಂದು ಮಧ್ಯ ಮಾತನಾಡಿದ್ದು ಅನೇಕರಿಗೆ ಇಷ್ಟ ಆಗಿಲ್ಲ ಟ್ರೋಲ್ ಪೇಜ್ ಗಳು ಮಾತ್ರವಲ್ಲದೆ ನೆಟ್ಟಿಗರು ಕೂಡ ತರಹೇವಾರಿ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ವಿನಯ್ ಹೇಳಿರುವ 35 ಕಂಪನಿಗಳು ಇವೆ ಎಂದು ತಮ್ಮ ಕಣ್ಣಿಗೆ ಬಿದ್ದ ಸಿಕ್ಕ ಸಿಕ್ಕ ಶಾಪ್ ಗಳ ಫೋಟೋ ತೆಗೆದು ಎಡಿಟ್ ಮಾಡಿ ಕಳುಹಿಸುತ್ತಿದ್ದಾರೆ.
ವಿನಯ್ ಲ್ಯಾಂಡ್ರಿ, ಗೋಬಿ ಮಂಚೂರಿ ಶಾಪ್, ವಿನಯ್ ಟೈಲರ್ಸ್ ಇವೆನಾ ವಿನಯ್ ಕಂಪನಿಗಳು ಎಂದು ಪ್ರಶ್ನೆ ಕೇಳುತ್ತಿದ್ದಾರೆ. ಇತ್ತ ಪತಿ ಇಷ್ಟು ಟ್ರೋಲ್ ಆಗುತ್ತಿರುವುದಕ್ಕೆ ವಿನಯ್ ಪತ್ನಿ ಅಕ್ಷತಾ ಕೂಡ ಕ’ಣ್ಣೀ’ರು ಸುರಿಸುತ್ತಾ ಚಾನೆಲ್ ಅವರು ಲೈವ್ ನಲ್ಲಿ ವಿನಯ್ ಬಗ್ಗೆ ಒಳ್ಳೆಯದನ್ನು ತೋರಿಸುತ್ತಿದ್ದಾರೆ ಆದರೆ ಕಟ್ ಮಾಡುತ್ತಿರುವ ಪ್ರೋಮೋ ಗಳಲ್ಲಿ ವಿನಯ್ ಅವರನ್ನು ತುಂಬಾ ನೆಗೆಟಿವ್ ಆಗಿ ತೋರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.