ಸದಾಕಾಲ ಬಲಪಂಥೀಯ ಧೋರಣೆಗಳು ಹಾಗೂ ಸನಾತನ ಧರ್ಮದ ವಿಚಾರಗಳ ಬಗ್ಗೆ ಕಿಡಿಕಾಡುವ ಚಿಂತಕ, ವಿಚಾರವಾದಿ ಕೆ.ಎಸ್ ಭಗವಾನ್ ರವರು ರಾಜ್ಯದಾದ್ಯಂತ ನಾವು ಸನಾತನಿಗಳಲ್ಲ ಎಂಬ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ.
ಇತ್ತೀಚಿಗೆ ಸನಾತನ ಎನ್ನುವ ಪದ ಹೆಚ್ಚು ಬಳಕೆ ಆಗುತ್ತಿರುವುದರ ಬಗ್ಗೆ ತೀವ್ರ ಅಸಮಾಧಾನ ಹೊಂದಿರುವ ಅವರು, ಮೊದಲಿಂದಲೂ ಕೂಡ ಈ ವಿಚಾರಕ್ಕೆ ಸಂಬಂಧಪಟ್ಟ ವಿಷಯಗಳಿಗೆ ವಿರುದ್ಧವಾಗಿ ಮಾತನಾಡಿಕೊಂಡೆ ಬಂದಿದ್ದರು. ಇತ್ತೀಚೆಗೆ ಜನರು ಸನಾತನ ಧರ್ಮವನ್ನು ನಂಬುವುದು, ಆ ಬಗ್ಗೆ ಮಾತನಾಡುವುದು ಮತ್ತು ಈ ವಿಷಯದ ಬಗ್ಗೆ ಹೆಚ್ಚು ಆಸಕ್ತಿ ತೋರುವುದನ್ನು ಒಪ್ಪದ ಅವರು ವಿನೂತನ ಪ್ರಯೋಗ ಒಂದಕ್ಕೆ ಕೈಹಾಕಿ ಸುದ್ದಿಯಲ್ಲಿದ್ದಾರೆ.
ದಸರಾ ಹಬ್ಬಕ್ಕೆ ಹೀರೋ ಬೈಕ್ ಖರೀದಿ ಮಾಡುವವರಿಗೆ ಬಂಪರ್ ಆಫರ್.!
ಸನಾತನವೆಂಬುದು ಬ್ರಾಹ್ಮಣ ಧರ್ಮ ಎಂದೆ ಹೇಳುವ ಅವರು ಈ ಬಾರಿಯೂ ಕೂಡ ಅದೇ ರೀತಿ ತಮ್ಮ ಮಾತಿನ ವರಸೆಯಲ್ಲಿ ಸನಾತನ ಧರ್ಮದ ನ್ಯೂನತೆಗಳ ಬಗ್ಗೆ ಮಾತನಾಡಿದ್ದಾರೆ. ಇದರಿಂದ ಎಷ್ಟು ಅಸಮಾನತೆ ಉಂಟಾಗಿದೆ ಇದು ಹೇಗೆ ಸರಿ ಹೋಗಬೇಕು ಎನ್ನುವುದರ ಬಗ್ಗೆ ಮಾತನಾಡಿದ ಅವರು ಇತ್ತೀಚಿಗೆ ಇದು ಬಲವಾಗುತ್ತಿರುವುದನ್ನು ಖಂಡಿಸಿ ಬೇರು ಸಮೇತ ಕಿತ್ತು ಹಾಕುವ ಬಗ್ಗೆ ಬಹಳ ಪ್ರ’ಚೋ’ದ’ನಾಕಾರಿಯಾಗಿ ಮಾತನಾಡಿದ್ದಾರೆ.
ಇದು ಸಂವಿಧಾನಕ್ಕೆ ಪೂರ ವಿರುದ್ಧವಾಗಿದೆ, ನಮ್ಮ ಭಾರತ ಸಂವಿಧಾನವು ಯಾವುದೇ ಭೇದ ಭಾವವನ್ನು ಪ್ರತಿಪಾದಿಸುವುದಿಲ್ಲ, ಆದರೆ ಈ ಸನಾತನ ಧರ್ಮದಲ್ಲಿ ಬ್ರಾಹ್ಮಣರು ಮಾತ್ರ ಶ್ರೇಷ್ಠ ಎಂಬಂತೆ ತೋರಲಾಗಿದೆ, ಉಳಿದ ಜಾತಿಗಳನ್ನು ಕೀಳು ಎಂಬ ರೀತಿ ಬಿಂಬಿಸಿಕೊಂಡೇ ಬರಲಾಗಿದೆ, ಶೂದ್ರರು ಬ್ರಾಹ್ಮಣರ ಗುಲಾಮರು ಎನ್ನುವ ರೀತಿ ಅದರಲ್ಲಿ ಪ್ರತಿಪಾದಿಸಲಾಗಿದೆ, ಆ ಧೋರಣೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಮೊಬೈಲ್ ಕವರ್ ನಲ್ಲಿ ನೋಟನ್ನು ಇಡುವವರು ಹುಷಾರ್ ಆಗಿರಿ.! ಈ ಕಾರಣದಿಂದ ಮೊಬೈಲ್ ಸ್ಪೋ’ಟ ಆಗೋದು ಗ್ಯಾರಂಟಿ…
ಸನಾತನ ಧರ್ಮ ಸ್ವಾತಂತ್ರ್ಯವನ್ನು ಕಿತ್ತುಕೊಂಡು ಅಸಮಾನತೆಯನ್ನು ಬೆಳೆಸಿಕೊಂಡು ಬಂದಿದೆ. ಇದರಲ್ಲಿರುವ ಕೆ’ಟ್ಟ ಪದ್ಧತಿಯನ್ನು ಹೋಗಲಾಡಿಸಲು ಬುದ್ಧ, ಬಸವ, ಗಾಂಧಿ ಮತ್ತು ಅಂಬೇಡ್ಕರ್ ಆದಿಯಾಗಿ ಎಲ್ಲರೂ ಪ್ರಯತ್ನ ಪಟ್ಟಿದ್ದರು. ಆದರೆ ಈಗ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಮತ್ತೆ ಈ ಅ’ನಿ’ಷ್ಠ ಬಲವಾಗುತ್ತಿದೆ.
ನಾವೆಲ್ಲರೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಆಶಯದಂತೆ ನಡೆದುಕೊಂಡು ಈಗ ಮತ್ತೆ ಗರಿಘೆಧರುತ್ತಿರುವ ಸನಾತನ ಧರ್ಮವನ್ನು ಬುಡಸಮೇತ ಕಿತ್ತು ಹಾಕಬೇಕು ಎಂಬರ್ಥದಲ್ಲಿ ಹೇಳಿದರು. ಹಿಂದೂ ಧರ್ಮದಲ್ಲಿ ಸಮಾನತೆ ಎಂಬುದೀ ಇಲ್ಲ, ಉದಾಹರಣೆಗೆ ಹೇಳಬೇಕು ಎಂದರೆ ಎಲ್ಲಾ ಹಿಂದೂ ದೇವಾಲಯಗಳಲ್ಲೂ ಕೂಡ ಅರ್ಚಕರು ಬ್ರಾಹ್ಮಣರೇ ಆಗಿರುತ್ತಾರೆ ಆದರೆ ಬೇರೆ ಧರ್ಮದಲ್ಲಿ ಈ ರೀತಿ ಇರದೆ ಅಲ್ಲಿ ಮುಕ್ತ ಅವಕಾಶವಿರುತ್ತದೆ.
ದರ್ಶನ್ & ನನ್ನ ನಡುವೆ ಮನಸ್ತಾಪ ಇರೋದು ನಿಜ.! ನಾಟಕ ಆಡೋ ವ್ಯಕ್ತಿ ನಾನಲ್ಲ, ದರ್ಶನ್ ಗೆ 3 ಪ್ರಶ್ನೆ ಕೇಳ್ಬೇಕು.!
ಹಾಗಾಗಿ ಇನ್ನು ಮುಂದೆ ಸರ್ಕಾರದ ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ಅರ್ಚಕರನ್ನು ನೇಮಿಸುವಾಗ ಕೂಡ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಬೇಕು, ಇಂತಹ ಪದ್ಧತಿ ರೂಢಿಯಾಗಲಿ ಎಂದು ಸಲಹೆ ನೀಡಿದರು. ಶೂದ್ರ ಎನ್ನುವ ಪದವೇ ಅವಹೇಳನಕಾರಿಯಾಗಿದೆ, ಆದ್ದರಿಂದ ಶೂದ್ರ ಎನ್ನುವ ಪದವನ್ನು ಬಳಸಬಾರದು ಅದರ ಬದಲು ಅಬ್ರಾಹ್ಮಣ ಎನ್ನುವ ಪದವನ್ನು ಬಳಕೆ ಮಾಡಲಿ ಎಂದರು.
ಈ ಸುದ್ದಿಗೋಷ್ಠಿಯಲ್ಲಿ ರಾಜಕೀಯ ವಿಶ್ಲೇಷಕ ಬಾಪು ಹೆದ್ದೂರ್ ಶೆಟ್ಟಿ, ಶೂದ್ರಶಕ್ತಿ ಪತ್ರಿಕೆ ಸಂಪಾದಕ ಬಿ.ಆರ್ ರಾಮೇಗೌಡ. ಲೇಖಕಿ ಬಿ.ಟಿ ಲತಾ ನಾಯಕ್ ಮತ್ತಿತರರು ಬಾಗಿಯಾಗಿದ್ದರು. ಇವರ ಹಾಡಿರುವ ಈ ಮಾತುಗಳಿಗೆ ಅನೇಕರಿಂದ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಷಯ ಚರ್ಚೆಯಾಗುತ್ತಿದ್ದಂತೆ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.