ದರ್ಶನ್ ಮತ್ತು ಧ್ರುವ ಸರ್ಜಾ (Darshan and Druva Contreversy) ಅವರ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದು ಮೊನ್ನೆ ನಡೆದ ಕರ್ನಾಟಕ ಬಂದ್ ದಿನ (Karnataka band day) ಸ್ಪಷ್ಟವಾಗಿದೆ. ಕಾವೇರಿ ಹೋರಾಟಕ್ಕೆ ಚಿತ್ರರಂಗ ಕೂಡ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದ ವೇದಿಕೆಯಲ್ಲಿ ದರ್ಶನ್, ಧ್ರುವ ಒಟ್ಟಿಗೆ ಕಾಣಿಸಿಕೊಂಡರೂ ಹಾಯ್ ಹಲೋ ಕೂಡ ಹೇಳಲಿಲ್ಲ.
ದರ್ಶನ್ ಅವರು ಕೂಡ ವೇದಿಕೆ ಮೇಲೆ ಕೈ ಕುಲುಕಿ ಎಲ್ಲರನ್ನೂ ಮಾತಾಡಿಸಿದ್ದರು ಆದರೂ ಧ್ರುವ ಅವರ ಕಡೆ ಕೇರ್ ಕೂಡ ಮಾಡಲಿಲ್ಲ ಜೊತೆಗೆ ಅವರು ಮಾತನಾಡಿ ಬರುತ್ತಿದ್ದಂತೆ ವೇದಿಕೆಯಿಂದ ಕೆಳಗಿಳಿದು ಹೊರಟು ಹೋದರು. ಅಲ್ಲಿದ್ದ ಕ್ಯಾಮೆರಾ ಗಳು ಅದೆಲ್ಲವನ್ನು ಸೆರೆಹಿಡಿದು ನಡುವೆ ಮ’ನ’ಸ್ತಾ’ಪವಿದೆ ಎನ್ನುವುದನ್ನು ಪುಷ್ಟೀಕರಿಸಿತ್ತು, ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಅದು ಹರಿದಾಡಿ ಪರವಿರೋಧ ಚರ್ಚೆಗೂ ಕಾರಣವಾಗಿತ್ತು.
ಇಂದು ಅಕ್ಟೋಬರ್ 06, ಧ್ರುವ ಸರ್ಜಾ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಬಾರಿ ಅವರಿಗೆ ಬರ್ತಡೆ ಸ್ಪೆಷಲ್ (Birth day special) ಆಗಿ ಹಲವು ವಿಷಯಗಳು ಇದೆ. ಅಣ್ಣ ಚಿರು (Brother Chiranjeevi Sarja) ಅ’ಗ’ಲಿ’ಕೆ ಕಾರಣ ಬಹಳ ಡಿಪ್ರೆಶನ್ ಗೆ ಹೋಗಿದ್ದ ಧ್ರುವ ಸರ್ಜಾ ಈ ವರ್ಷವಷ್ಟೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ತಡರಾತ್ರಿ ಮನೆ ಮುಂದೆ ನೆರೆದಿದ್ದ ಅಭಿಮಾನಿಗಳು ಯಾವ ಸ್ಟಾರ್ ಗೂ ಕಡಿಮೆ ಇಲ್ಲದಂತೆ ಗ್ರಾಂಡ್ ಆಗಿ ಬರ್ತಡೇ ಸೆಲೆಬ್ರೇಟ್ ಮಾಡಿ ಸರ್ಪ್ರೈಸ್ ಕೊಟ್ಟಿದ್ದಾರೆ.
ಈ ನಡುವೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಲ್ಲರಿಗೂ ಧನ್ಯವಾದಗಳು ತಿಳಿಸಿ ಇಂದು ಅವರ ಅಣ್ಣನ ರಾಜಾಮಾರ್ತಂಡ ಸಿನಿಮಾ (Raja Marthanda movie) ರಿಲೀಸ್ ಆಗುತ್ತಿದೆ ದಯವಿಟ್ಟು ಸಿನಿಮಾ ನೋಡಿ ಎಂದು ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ. ಈ ವೇಳೆ ಮಾಧ್ಯಮದವರಿಂದ ಅವರಿಗೆ ದರ್ಶನ್ ಅವರ ಜೊತೆಗಿನ ಮುನಿಸಿನ ಕುರಿತು ಪ್ರಶ್ನೆ ಎದುರಾಗಿದೆ.
ಇದಕ್ಕೆ ಬಹಳ ನೇರಾನೇರವಾಗಿ ಉತ್ತರಿಸಿದ ಧ್ರುವ ಸರ್ಜಾ ಅವರು ದರ್ಶನ್ ಅವರು ನಮ್ಮ ಇಂಡಸ್ಟ್ರಿಯ ಸೀನಿಯರ್ ಆಕ್ಟರ್ ಅವರ ಮೇಲೆ ನಮಗೆ ಬಹಳ ಗೌರವ ಇದೆ. ನಮ್ಮ ಅಣ್ಣನ ರಾಜಾಮಾರ್ತಂಡ ಸಿನಿಮಾಗೆ ಕೂಡ ಅವರು ಡಬ್ ಮಾಡಿಕೊಟ್ಟಿದ್ದಾರೆ ಹಾಗೆ ಅನೇಕ ವಿಚಾರಗಳಲ್ಲಿ ಜೊತೆಯಾಗಿದ್ದರು ಅದಕ್ಕೆಲ್ಲ ನಾನು ಎಂದು ಚಿರಋಣಿಯಾಗಿರುತ್ತೇನೆ
ಆದರೆ ನಮಗೆ ಅವರ ಮೇಲಿರುವ ಗೌರವ ಅವರ ಎದುರಿಗೂ ಇರುತ್ತದೆ, ಅವರ ಅನುಪಸ್ಥಿತಿಯಲ್ಲೂ ಕೂಡ ಇರುತ್ತದೆ. ಅಂದು ಆ ರೀತಿ ಯಾಕೆ ಆಯಿತು ಎಂದರೆ ನನಗೆ ದರ್ಶನ್ ಸರ್ ಹತ್ತಿರ ಕೇಳಲು ಕೆಲ ಪ್ರಶ್ನೆಗಳು ಇವೆ. ಆ ಪ್ರಶ್ನೆಗಳಿಗೆ ಉತ್ತರ ಬೇಕು ಯಾಕೆಂದರೆ ಅದು ನನ್ನ ಮನಸ್ಸಿನಲ್ಲಿ ಸಾಕಷ್ಟು ಗೊಂದಲಗಳನ್ನು ಉಂಟು ಮಾಡಿದೆ. ನಾನು ಕನ್ಫ್ಯೂಷನ್ ಮನಸ್ಸಿನಲ್ಲಿ ಇಟ್ಟುಕೊಂಡು ಎದುರುಗಡೆ ನಗುತ್ತಾ ನಾಟಕ ಆಡಲು ಆಗುವುದಿಲ್ಲ ಅದು ನಾನಲ್ಲ ಅನಿಸಿತು.
ಅಷ್ಟು ಆರ್ಟಿಫಿಶಿಯಲ್ ಆಗಿ ಫೇಕ್ ಆಗಿ ನಾವು ಯಾಕೆ ಇರಬೇಕು, ಹೀಗಾಗಿ ಆ ರೀತಿ ಆಯ್ತು ಅಂದಿನ ಆ ಇನ್ಸಿಡೆಂಟ್ ಗೆ ಕ್ಲಿಯರ್ ಕಟ್ ಆನ್ಸರ್ ನೀಡಿದ್ದಾರೆ. ಜೊತೆಗೆ ಇದು ಸರಿ ಹೋಗುತ್ತದೆಯಾ ಎಂದು ಕೇಳಿದ್ದಕ್ಕೆ ಅದು ಸರಿ ಆಗುತ್ತದೆಯಾ, ಇಲ್ಲವೋ ಅದು ಗೊತ್ತಿಲ್ಲ ನಾನು ನನ್ನ ಪ್ರಶ್ನೆಗಳಿಗೆ ಉತ್ತರ ಬಯಸುತ್ತೇನೆ ಅವರು ಕೊಟ್ಟರೆ ಸರಿ ಹೋಗಬಹುದು, ಇಲ್ಲದೆಯೂ ಇರಬಹುದು ಅದು ನಮ್ಮ ವೈಯುಕ್ತಿಕ ಎಂದಿದ್ದಾರೆ.
ಹಾಗೆ ಈ ಚಾನ್ಸ್ ಉಪಯೋಗಿಸಿಕೊಂಡು ಹಲವರು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಇದನ್ನು ಇನ್ನು ಹೆಚ್ಚಿಸುವ ಪ್ರಯತ್ನ ಮಾಡುತ್ತಿದ್ದಾರೆ ಹಾಗೆ ಮಾಡಬೇಡಿ ನಾವು ನಿಮ್ಮಂತೆ ಅಲ್ಲವೇ ನಮಗೆ ಸಮಯ ಕೊಡಿ ಎಂದು ಕೇಳಿದ್ದಾರೆ. ಜೊತೆಗೆ ಮೀಡಿಯಾದವರು ಆ ಪ್ರಶ್ನೆಯನ್ನು ಬಹಿರಂಗವಾಗಿ ಕೇಳುತ್ತೀರಾ ಅಂದರೆ ಇಲ್ಲ ಅದು ನಮ್ಮ ನಮ್ಮದು ನಮ್ಮಲ್ಲೇ ಬಗೆಹರಿಸಿಕೊಳ್ಳುತ್ತೇವೆ ಎಂದಿದ್ದಾರೆ.