ಕನ್ನಡದ ಹಿರಿಯ ನಟಿ ಲೀಲಾವತಿ ಅವರು ನಮ್ಮ ಚಿತ್ರರಂಗ ಕಂಡ ಶ್ರೇಷ್ಠ ನಟಿ ಕಪ್ಪು ಬೆಳಕು ಬಣ್ಣದಲ್ಲಿ ಸಿನಿಮಾ ತಯಾರಾಗುತ್ತಿದ್ದ ಕಾಲದಿಂದ ಹಿಡಿದು ಹಲಶು ದಶಕಗಳ ವರೆಗೆ ಬಣ್ಣ ಪ್ರಪಂಚದಲ್ಲಿ ನಾನ ಪಾತ್ರ ತೊಟ್ಟು ರಂಜಿಸಿದವರು. ಸಿನಿಮಾ ನಾಯಕಿಯಾಗಿ, ಪೌರಾಣಿಕ ಸಿನಿಮಾದಲ್ಲಿ ದೇವತೆಯಾಗಿ, ಐತಿಹಾಸಿಕ ಸಿನಿಮಾಗಳ ಮಹಾರಾಣಿಯಾಗಿ, ಕೌಟುಂಬಿಕ ಚಲನಚಿತ್ರದ ಘಾಟಿ ಅತ್ತೆಯಾಗಿ ತನ್ನ ಅದ್ಭುತವಾದ ಪ್ರತಿಭೆಯಿಂದ ಕನ್ನಡ ಚಿತ್ರರಂಗದ ಹೆಸರನ್ನು ಬೆಳಗಿಸಿದ ಮಿನುಗುತಾರೆ ಇವರು ಆದರೆ ಒಂದು ಹಂತದ ನಂತರ ಇವರು ಚಿತ್ರರಂಗದಿಂದ ದೂರವಾದರು
ಇವರು ಮಾತ್ರ ಅಲ್ಲದೆ ಇವರ ಮಗ ಕೂಡ ಕನ್ನಡದ ಸ್ಟಾರ್ ಹೀರೋ ಆಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದವರು, ಡ್ಯಾನ್ಸ್ ರಾಜ ಡ್ಯಾನ್ಸ್ ಚಿತ್ರದ ಮೂಲಕ ಡ್ಯಾನ್ಸ್ ಕಿಂಗ್ ಆಗಿ ಲಾಂಚ್ ಆಗಿದ್ಧ ವಿನೋದ್ ರಾಜ್ ಅವರು ಸಹ ಅವಕಾಶಗಳಿಂದ ವಂಚಿತರಾದರು ಎಂದು ಹೇಳಬಹುದು. ಕನ್ನಡ ಚಲನಚಿತ್ರ ರಂಗ ಇಂತಹ ಒಂದು ಅದ್ಭುತ ಪ್ರತಿಭೆಯನ್ನು ಬೆಳೆಸುವುದರಲ್ಲಿ ಸೋತು ಹೋಯಿತು.
ವಿನೋದ್ ರಾಜ್ ಅವರು ತೊಂಬತ್ತರ ದಶಕದ ಅನೇಕ ಸಿನಿಮಾಗಳನ್ನು ನಾಯಕ ನಟ ಆಗಿದ್ದರು. ನಂತರ ಅವಕಾಶಗಳ ಕೊರತೆಯಿಂದಾಗಿ ಚಿತ್ರರಂಗದಿಂದ ಬ್ರೇಕ್ ಪಡೆದುಕೊಂಡರು. ಮತ್ತೆ ಚಿತ್ರರಂಗದಲ್ಲಿ ನಿಲ್ಲಬೇಕು ಎನ್ನುವ ಆಸೆಯಿಂದ ಕನ್ನಡದ ಕಂದ ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಂಡರು. ಆ ಸಮಯದಲ್ಲಿ ಲೀಲಾವತಿಯವರು ಮತ್ತು ವಿನೋದ್ ರಾಜಕುಮಾರ್ ಅವರು ಆ ಸಿನಿಮಾವನ್ನು ಒಳ್ಳೆಯ ರೀತಿಯಲ್ಲಿ ತೆರೆಗೆ ತರುವುದಕ್ಕಾಗಿ ಬಹಳ ಶ್ರಮ ಪಟ್ಟಿದ್ದರು. ಮತ್ತು ಪ್ರಚಾರ ಇನ್ನಿತರ ವಿಷಯಗಳಿಗಾಗಿ ಚಿತ್ರರಂಗದ ಬಹುತೇಕರ ಕೈಕಾಲು ಸಹಾಯ ಕೇಳಿದ್ದರು.
ಆದರೂ ಯಾರು ಅವರ ಸಹಾಯಕ್ಕೆ ಬರಲಿಲ್ಲ. ಅಂತಹ ಸಮಯದಲ್ಲಿ ಕರುಣಾಮಯಿ ಹೃದಯವಂತ ಎನಿಸಿಕೊಂಡ ಸಾಹಸಸಿಂಹ ವಿಷ್ಣುವರ್ಧನ್ ಅವರು ಆ ತಾಯಿ-ಮಗನಿಗೆ ಸಹಾಯ ಮಾಡಿದರು. ಲೀಲಾವತಿ ಮತ್ತು ವಿನೋದ್ ರಾಜ್ ಅವರಿಗೆ ಅಭಯ ಹಸ್ತ ನೀಡಿ ಈ ಸಿನಿಮಾ ಕುರಿತಾಗಿ ಏನೇ ಸಹಾಯ ಬೇಕಿದ್ದರೂ ನನ್ನನ್ನು ಕೇಳಿ ನಾನು ಮಾಡಿಸಿಕೊಡುತ್ತೇನೆ ಎನ್ನುವ ಭರವಸೆ ಕೊಟ್ಟಿದ್ದರು. ಜೊತೆಗೆ ಸಿನಿಮಾ ತೆರೆಮೇಲೆ ಬರುವ ತನಕ ಆ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು.
ಇಂದು ಕನ್ನಡದ ಕಂದ ಸಿನಿಮಾ ಕುರಿತಾಗಿ ಅಥವಾ ಚಿತ್ರರಂಗದ ಕುರಿತಾಗಿ ಯಾವುದೇ ವೇದಿಕೆಯಲ್ಲಿ ಲೀಲಾವತಿ ಹಾಗೂ ವಿನೋದ್ ರಾಜ್ ಮಾತನಾಡಿದರು ವಿಷ್ಣುವರ್ಧನ್ಅವರ ಹೆಸರು ಹೇಳದೆ ಅವರ ಮಾತು ಮುಗಿಯುವುದೇ ಇಲ್ಲ. ಇದು ವಿಷ್ಣುವರ್ಧನ್ ಅವರಿಗಿದ್ದ ಶುದ್ಧ ಹೃದಯ. ವಿಷ್ಣುವರ್ಧನ್ ಅವರು ತಾವು ಗಳಿಸುತ್ತಿದ್ದ ಆದಾಯದ ಬಹುಪಾಲನ್ನು ಸಮಾಜಕ್ಕಾಗಿ ಖರ್ಚು ಮಾಡುತ್ತಿದ್ದರು ಮತ್ತು ಚಿತ್ರರಂಗದ ಇತರ ಕಲಾವಿದರುಗಳ ಕಷ್ಟಕ್ಕೆ ನೀಡುತ್ತಿದ್ದರು.
ಆದರೆ ಎಂದೂ ಸಹ ಆ ವಿಷಯದ ಬಗ್ಗೆ ಪ್ರಚಾರ ಪಡೆದುಕೊಳ್ಳಲು ಬಯಸಿದವರಲ್ಲ. ಒಮ್ಮೆ ಸಿಹಿಕಹಿ ಚಂದ್ರು ಅವರ ಆರೋಗ್ಯ ತೀರ ಹದಗೆಟ್ಟಿದ್ದಾಗ ವೈದ್ಯರೊಬ್ಬರು ಚೆಕ್ ಮಾಡಿ ನಿಮಗೆ ಮಾರಣಾಂತಿಕ ಕಾಯಿಲೆ ಇದೆ ಎಂದಿದ್ದರಂತೆ, ಅದರಿಂದ ಇನ್ನೂ ಕುಗ್ಗಿ ಹೋಗಿದ್ದ ಸಿಹಿಕಹಿ ಚಂದ್ರು ಅವರು ಬದುಕುವ ಆಸೆಯನ್ನು ಕಳೆದುಕೊಂಡಿದ್ದರು. ಆ ಸಮಯದಲ್ಲಿ ಎಲ್ಲರೂ ಅವರನ್ನು ಭೇಟಿ ಮಾಡಿ ಬರುತ್ತಿದ್ದರು.
ವಿಷ್ಣುವರ್ಧನ್ ಅವರು ಸಹ ಅವರ ಮನೆಗೆ ಹೋಗಿ ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸಿ ನಾನು ಸಹ ಒಬ್ಬ ವೈದ್ಯರ ವಿಳಾಸ ಕೊಡುತ್ತೇನೆ ದಯವಿಟ್ಟು ಅಲ್ಲಿಗೂ ಹೋಗಿ ಚೆಕ್ ಮಾಡಿಸಿ ಅವರು ಮುಂದೆ ಏನಾಗಬೇಕು ಸಲಹೆ ನೀಡುತ್ತಾರೆ, ಆ ರೀತಿ ಮಾಡೋಣ ಎಂದು ಧೈರ್ಯ ತುಂಬಿ ಕಳುಹಿಸಿದರಂತೆ. ಆ ವೈದ್ಯರು ಇವರಿಗೆ ಸರಿಯಾಗಿ ಪರೀಕ್ಷಿಸಿ ಅಂತಹ ಗಂಭೀರ ಸಮಸ್ಯೆ ಏನು ಇಲ್ಲ ಚಿಕ್ಕದೊಂದು ರೋಗ ಇದೆ ಅಷ್ಟೇ ಎಂದು ಹೇಳಿ ಅದಕ್ಕೆ ಚಿಕಿತ್ಸೆ ಕೊಟ್ಟಿದ್ದರಂತೆ. ದಾನ ಶೂರ ಕರ್ಣನಾದ ವಿಷ್ಣುವರ್ಧನ್ ಅವರು ಸಿಹಿಕಹಿ ಚಂದ್ರು ಅವರನ್ನು ತಾವೇ ವೈದ್ಯರ ಬಳಿ ಕಳುಹಿಸಿದ ಕಾರಣಕ್ಕಾಗಿ ಆ ಸಂಪೂರ್ಣ ವೆಚ್ಚವನ್ನು ಅವರೇ ವಹಿಸಿಕೊಂಡಿದ್ದರು. ಇದನ್ನು ಸ್ವತಃ ಸಿಹಿಕಹಿ ಚಂದ್ರು ಅವರೇ ಹೇಳಿಕೊಂಡಿದ್ದಾರೆ.