Saturday, September 30, 2023
Home Entertainment ಯಾವುದಾದ್ರೂ ಸಿನಿಮಾ ಸೋತರೆ ವಿಷ್ಣು ಏನ್ ಮಾಡತ್ತಿದ್ರು ಗೊತ್ತಾ.? ಈ ವಿಚಾರ ಗೊತ್ತದ್ರೆ ನಿಜಕ್ಕೂ ಅಚ್ಚರಿ...

ಯಾವುದಾದ್ರೂ ಸಿನಿಮಾ ಸೋತರೆ ವಿಷ್ಣು ಏನ್ ಮಾಡತ್ತಿದ್ರು ಗೊತ್ತಾ.? ಈ ವಿಚಾರ ಗೊತ್ತದ್ರೆ ನಿಜಕ್ಕೂ ಅಚ್ಚರಿ ಪಡ್ತಿರಾ.

 

ಡಾಕ್ಟರ್ ವಿಷ್ಣುವರ್ಧನ್ ಈ ನಾಡು ಕಂಡ ಶ್ರೇಷ್ಠ ನಾಯಕನಟ. ಸಿನಿಮಾದ ಪರದೆ ಮೇಲೆ ನಟನೆ ಮಾಡಿ ಅಭಿನಯ ಚಾತುರ್ಯದಿಂದ ಅಪಾರ ಮಟ್ಟದ ಅಭಿಮಾನಿಗಳನ್ನು ಗಳಿಸಿದ್ದರೆ, ತನ್ನ ಉದಾತ್ತ ಗುಣಗಳಿಂದ ಹಾಗೂ ಪ್ರಾಮಾಣಿಕತೆಯಿಂದ ತೆರೆ ಹಿಂದೆಯೂ ಕೂಡ ಅದೇ ಹೆಸರನ್ನು ಉಳಿಸಿಕೊಂಡಿದ್ದವರು. ಬಲಗೈಯಲ್ಲಿ ಕೊಟ್ಟ ದಾನ ಎಡಗೈಗೂ ತಿಳಿಯಬಾರದು ಎನ್ನುವ ರೀತಿ ಬದುಕನ್ನು ಕಳೆದು ಹೋದ ಈ ನಾಯಕ ಇನ್ನು ಎಷ್ಟೇ ಶತಮಾನ ಕಳೆದರೂ ಕೂಡ ಕರ್ನಾಟಕದ ಇತಿಹಾಸ ಪುಟದಲ್ಲಿ ಅಚ್ಚಳಿಯದೆ ಉಳಿಯದಿರುತ್ತದೆ.

ವಿಷ್ಣುವರ್ಧನ್ ಅವರು ಬಹಳ ಸಹೃದಯವಂತರು ಅವರ ಸಿನಿಮಾ ಟೈಟಲ್ ಗಳನ್ನು ಗಮನಿಸಿದರೆ ಇವರ ವ್ಯಕ್ತಿತ್ವವನ್ನು ನೋಡಿ ಹೆಸರು ಕೊಡುತ್ತಿದ್ದರಾ ಎನ್ನುವ ಅನುಮಾನಗಳು ಹುಟ್ಟುತ್ತದೆ. ಆ ರೀತಿ ಹೃದಯವಂತ, ಕರುಣಾಮಯಿ, ಸಿರಿವಂತ, ಕೋಟಿಗೊಬ್ಬ, ಯಜಮಾನ ಯಾಕೆಂದರೆ ಈ ಎಲ್ಲಾ ಹೆಸರುಗಳು ಕೂಡ ಅವರನ್ನೇ ಅವರ ಗುಣವನ್ನೇ ಹೋಲುತ್ತದೆ.

ನಟ ವಿಷ್ಣುವರ್ಧನ್ ಅವರು ತೆರೆ ಮೇಲೆ ಸಾಹಸ ಸಿಂಹ ಅವರ ಡೈಲಾಗ್ ಡೆಲಿವರಿ ಅವರ ಮುಖದ ಛಾಯೆ ತೆರೆ ಮೇಲೆ ಅವರಿದ್ದರೆ ಒಂದು ರಾಜ ಗಾಂಭೀರ್ಯ ತರುತ್ತಿತ್ತು. ಇಂತಹ ಪಾತ್ರಗಳಿಂದ ಅವರು ಮಹಾರಾಜರನಿಸಿಕೊಂಡರೆ ಕೋಟಿಗೊಬ್ಬ ಮುಂತಾದ ಪಾತ್ರಗಳು ಅವರನ್ನು ದಾದಾ ಎಂದು ಕರೆಯುವಂತೆ ಮಾಡಿತ್ತು. ಕೊನೆಯದಾಗಿ ಅವರು ತಮ್ಮನ್ನು ತಾವು ಆಧ್ಯಾತ್ಮದತ್ತ ಬದಲಾಯಿಸಿಕೊಂಡ ಪರಿಗೆ ಸಾಹುಕಾರ ಸಿನಿಮಾದ ಪಾತ್ರವೇ ಸಾಕ್ಷಿ. ನಿಜ ಜೀವನದಲ್ಲಿ ಸಹ ಅವರು ಅದೇ ರೀತಿ ಒಂದು ಆಳವಾದ ಆಧ್ಯಾತ್ಮದ ಸೆಲೆಯನ್ನು ಹುಡುಕಿ ಹೊರಟು ಬಿಟ್ಟಿದ್ದರು.

ಈ ರೀತಿ ಆಧ್ಯಾತ್ಮ ಸಾಧನೆ ಬಣ್ಣದ ಪ್ರಪಂಚದಲ್ಲಿ ಇರುವವರಿಗೆ ಅಷ್ಟು ಸುಲಭವಾಗಿ ಒಲಿಯುವುದಿಲ್ಲ. ಅದಕ್ಕೆ ತಪಸ್ಸಿನ ರೀತಿ ಆಚರಣೆ ಬೇಕು. ಆ ಬಗ್ಗೆ ಕಿಂಚಿತ್ತೂ ದೋಷವಿಲ್ಲದಂತೆ ಬದುಕಿದರು ವಿಷ್ಣು ದಾದ. ವಿಷ್ಣುವರ್ಧನ್ ಅವರು ರಾಮಾಚಾರಿ ಆಗಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಆಂಗ್ರಿ ಯಂಗ್ ಮ್ಯಾನ್ ಲುಕ್ ಅಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಇವರು ಕಡೆತನಕ ಕೂಡ ತಮ್ಮ ಪಾತ್ರದಲ್ಲಿ ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತಲೇ ಬಂದರು. ಹೊರ ಜಗತ್ತಿನ ಸಿನಿ ಪರದೆ ಮೇಲೆ ಅವರು ಪಳಗುತ್ತಿದ್ದ ರೀತಿಯಂತೆ ಅವರ ಒಳಗೂ ಕೂಡ ಎಂಥದ್ದೋ ಒಂದು ಅರಿವು ಹರಿಯುತ್ತಿತ್ತು.

ಕರ್ನಾಟಕದಲ್ಲಿ ಅತಿ ಹೆಚ್ಚು ಮಹಿಳಾ ಅಭಿಮಾನಿಗಳನ್ನು ಹೊಂದಿರುವ ನಟ ಎನ್ನುವ ಖ್ಯಾತಿಗೂ ಒಳಗಾಗಿದ್ದ ವಿಷ್ಣುವರ್ಧನ್ ಅವರು ಇಡೀ ಕರ್ನಾಟಕದ ಆಸ್ತಿಯಂತೆ ಇದ್ದವರು. ಇದರ ಜೊತೆಗೆ ಅವರಿಗೆ ಮತ್ತೊಂದು ಬಿರುದು ದಕ್ಕಿತ್ತು. ಅದೇನೆಂದರೆ ನಿರ್ಮಾಪಕರ ನಟ ಎಂದು ಯಾಕೆಂದರೆ ವಿಷ್ಣುವರ್ಧನ್ ಅವರ ಜೊತೆ ಸಿನಿಮೂಆ ಮಾಡುವುದಕ್ಕೆ ಯಾವ ನಿರ್ಮಾಪಕರು ಕೂಡ ಹಿಂದೇಟು ಹಾಕುತ್ತಿರಲಿಲ್ಲ. ಯಾಕೆಂದರೆ ವಿಷ್ಣುವರ್ಧನ್ ಮುಟ್ಟುತ್ತಿದ್ದದೆಲ್ಲಾ ಚಿನ್ನ ಆಗಿರುತ್ತಿತ್ತು, ಆದರೆ ಕೆಲ ಸಿನಿಮಾಗಳು ಮತ್ಯಾವುದೋ ಕಾರಣದಿಂದ ಸೋಲುತ್ತಿದ್ದವು.

ಆ ಸಮಯದಲ್ಲಿ ವಿಷ್ಣುವರ್ಧನ್ ಅವರು ನಡೆದುಕೊಳ್ಳುತ್ತಿದ್ದ ರೀತಿಯಿಂದ ನಿರ್ಮಾಪಕರುಗಳ ಮನ ಗೆದ್ದು ನಿರ್ಮಾಪಕರ ನೆಚ್ಚಿನ ನಟ ಎಂದು ಎನಿಸಿಕೊಂಡಿದ್ದರು. ಯಾಕೆಂದರೆ ತನ್ನ ಸಿನಿಮಾದಲ್ಲಿ ಅದ್ಭುತ ನಟನೆಯನ್ನು ಮಾಡುವುದರ ಜೊತೆಗೆ ಆ ಸಿನಿಮಾವನ್ನು ಜನರಿಗೆ ತಲುಪಿಸುವ ತನಕ ಹೊರೆಯನ್ನು ಕೂಡ ವಿಷ್ಣುವರ್ಧನ್ ಅವರು ಒಪ್ಪಿಕೊಳ್ಳುತ್ತಿದ್ದರು. ಒಂದು ವೇಳೆ ಅಂದುಕೊಂಡ ಮಟ್ಟಕ್ಕೆ ಸಿನಿಮಾ ರೀಚ್ ಆಗಿಲ್ಲ ಇದರಿಂದ ನಿರ್ಮಾಪಕರಿಗೆ ತೊಂದರೆ ಆಗಿದೆ ಎನ್ನುವುದು ಅವರಿಗೆ ಗೊತ್ತಾಗಿದ್ದರೆ.

ಆ ಸಿನಿಮಾಗೆ ಅವರು ಸಂಭಾವನೆ ತೆಗೆದುಕೊಳ್ಳುತ್ತಿರಲಿಲ್ಲ. ಒಂದೊಂದು ಸಮಯ ತಮ್ಮ ಹಣ ತೆಗೆದು ಕೂಡ ನಿರ್ಮಾಪಕರುಗಳಿಗೆ ಸಹಾಯ ಮಾಡಿದ ಉದಾಹರಣೆಗಳು ಇವೆ. ಆದರೆ ಅದು ಯಾವುದಕ್ಕೂ ಬ ಅವರು ಪ್ರಚಾರ ಪಡೆಯಲೇ ಇಲ್ಲ. ಈಗ ಅವರ ಆಪ್ತರು ಹಾಗೂ ಅವರಿಂದ ಸಹಾಯ ಪಡೆದುಕೊಂಡವರು ಅವರಾಗಿಯೇ ಹೇಳುತ್ತಿರುವುದರಿಂದ ಈ ವಿಷಯ ಎಲ್ಲಾ ಹೊರ ಬರುತ್ತಿದೆ. ನಿಜಕ್ಕೂ ಇಂತಹ ದೇವಮಾನವನನ್ನು ಪಡೆದ ಸಿನಿಮಾ ಇಂಡಸ್ಟ್ರಿಯ ಧನ್ಯ ಎಂದು ಹೇಳಬಹುದು. ಇತ್ತೀಚಿನ ದಿನಮಾನಗಳಲ್ಲಿ ಸ್ಟಾರ್ಗಿರಿ ತಲೆಗತ್ತಿಸಿಕೊಂಡು ಮೆರೆಯುತ್ತಿರುವವರ ನಡುವೆ ಅಭಿಮಾನದ ಉತ್ತುಂಗದಲ್ಲಿ ಇದ್ದರೂ ತಮ್ಮ ಪರಿದಿಯನ್ನು ಎಂದೂ ಮೀರಿದೆ ಡೌನ್ ಟು ಅರ್ಥ್ ಪರ್ಸನ್ ಆಗಿದ್ದವರು ವಿಷ್ಣುವರ್ಧನ್ ಅವರು.

- Advertisment -