ನವರಸ ನಾಯಕ ಜಗ್ಗೇಶ್ (Jaggesh) ಈಗ ಲೋಕಸಭಾ ಸದಸ್ಯರು ಹೌದು. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಇವರು ಪ್ರಚಲಿತ ವಿದ್ಯಾಮಾನದ ಕುರಿತು ಹಾಗೂ ತಮ್ಮ ವೈಯಕ್ತಿಕ ಅನಿಸಿಕೆಗಳ ಕುರಿತು ತಮ್ಮ ಖಾತೆಯಿಂದ ವಿಷಯ ಹಂಚಿಕೊಳ್ಳುತ್ತಾರೆ. ಈಗ ಹುಲಿ ಉಗುರು ಪೆಂಡೆಂಟ್ ವಿಚಾರವಾಗಿ (Pendent contrevercy ) ಸೋಶಿಯಲ್ ಮೀಡಿಯಾದಲ್ಲಿ ಜಗ್ಗೇಶ್ ಅವರ ಹೆಸರನ್ನು ಅನೇಕರು ಹೈಲೈಟ್ ಮಾಡಿದ್ದು ಅವರ ಕೋ’ಪಕ್ಕೆ ಕಾರಣವಾಗಿದೆ.
ನಿಮ್ಮನ್ನು ಇಷ್ಟು ವರ್ಷ ಮನೋರಂಜಿಸಿದ್ದಕ್ಕಾಗಿ ಇದೇನಾ ನೀವು ಕೊಡುತ್ತಿರುವ ಗೌರವ ಎಂದು ಪೋಸ್ಟ್ ಹಾಕಿದ್ದರು, ಈಗ ಸದ್ಯಕ್ಕೆ ಕೋರ್ಟ್ ನಿಂದ ಮಧ್ಯಂತರ ನೋಟಿಸ್ ತಂದಿರುವ ನಟ ಮತ್ತೊಮ್ಮೆ ಇದೇ ವಿಚಾರವಾಗಿ ಬೇಸರದಿಂದ ಪೋಸ್ಟ್ ಹಾಕಿದ್ದಾರೆ. ಈ ವಿವಾದವನ್ನು ಆರಂಭದಿಂದ ಗಮನಿಸುವುದಾದರೆ ಇದು ಶುರು ಆಗಿದ್ದು ಬಿಗ್ ಬಾಸ್ ಕಾರ್ಯಕ್ರಮದಿಂದ (Big boss program) ಎಂದೇ ಹೇಳಬಹುದು.
ಬಿಗ್ ಬಾಸ್ ಕಂಟೆಸ್ಟೆಂಟ್ ವರ್ತೂರ್ ಸಂತೋಷ್ (Varthur Santhosh arrest) ಅವರು ಬಿಗ್ ಬಾಸ್ ಗೆ ಹೋಗುವ ಮುನ್ನವೂ ಕೂಡ ಅನೇಕ ಅಭಿಮಾನಿಗಳನ್ನು ಕಳಿಸಿದ್ದರು. ಅದರಲ್ಲೂ ಬಿಗ್ ಬಾಸ್ ಗೆ ಹೋದಮೇಲೆ ಅವರ ಸಿಂಪ್ಲಿಸಿಟಿ ಮತ್ತು ಆಟವನ್ನು ನೋಡಿದ ಇನ್ನಷ್ಟು ಜನರು ಅವರಿಗೆ ಫಿದಾ ಆದರು.
ಆದರೆ ಇನ್ನೇನು ಅಸಲಿ ಆಟ ಶುರುವಾಗಬೇಕು ಎನ್ನುವಾಗ ದಿಢೀರ್ ಎಂದು ಅರಣ್ಯ ಅಧಿಕಾರಿಗಳು ಹುಲಿ ಉಗುರು ಪೆಂಡೆಂಟ್ ಧರಿಸಿರುವ ಆರೋಪದ ಮೇಲೆ ಬಿಗ್ ಬಾಸ್ ಮನೆಯಿಂದಲೇ ಅವರನ್ನು ಅರೆಸ್ಟ್ ಮಾಡಿಕೊಂಡು ಹೋಗಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಯಿತು. ಇದರ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ದೊಡ್ಡ ಸ್ಟಾರ್ ಗಳು, ರಾಜಕೀಯ ವ್ಯಕ್ತಿಗಳು ಕೂಡ ಹುಲಿ ಉಗುರು ಪೆಂಡೆಂಟ್ ಧರಿಸಿರುವ ಫೋಟೋಗಳನ್ನು ಮತ್ತು ಅದರ ಬಗ್ಗೆ ಅವರು ಮಾತನಾಡಿರುವ ವಿಡಿಯೋಗಳನ್ನು ಹಂಚಿಕೊಂಡು ಇವರನ್ನು ಕೂಡ ಹೀಗೆ ಅರೆಸ್ಟ್ ಮಾಡಿ ಎಂದು ತಾಕೀತು ಮಾಡಿದರು.
ಅನೇಕರು ನಟ ಜಗ್ಗೇಶ್ ಅವರು ಈ ಹಿಂದೆ ಸಂದರ್ಶನ ಒಂದರಲ್ಲಿ ಮಾತನಾಡುವಾಗ ತಾವೇ ತಮ್ಮ ತಾಯಿ ನಿಜವಾದ ಹುಲಿ ಉಗುರು ತಂದು ಹಾಕಿದ್ದನ್ನು ಎಂದು ಹೇಳಿಕೊಂಡಿದ್ದ ವಿಡಿಯೋವನ್ನು ಸಾಕ್ಷಿಗೆಂದು ಶೇರ್ ಮಾಡಿದ್ದರು. ಈ ಸಮಯದಲ್ಲಿ ಕೂಡ ಕೋಪಗೊಂಡು ಪೋಸ್ಟ್ ಹಾಕಿದ್ದ ನಟ ಬಳಿಕ ಅಧಿಕಾರಿಗಳು ಏಕಾಏಕಿ ಮನೆಗೆ ನುಗ್ಗಿ ಮನೆಯನು ಅರಸ್ತವ್ಯಸ್ತ ಮಾಡಿದ್ದಾರೆ ಎಂದು ಅದರ ಫೋಟೋ ಸಮೇತ ಹಂಚಿಕೊಂಡಿದ್ದರು.
ಕೊನೆಗೆ ತಮಗೆ ನೋಟಿಸ್ ನೀಡಿದ್ದರು ಉತ್ತರ ಕೊಡುವ ಮುನ್ನವೇ ಮನೆ ಮೇಲೆ ದಾಳಿ ಮಾಡಿದ್ದನ್ನು ಖಂಡಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಅಂತಿಮವಾಗಿ ನ್ಯಾಯಾಲಯದ ಅಂಗಳದಲ್ಲಿ ಜಗ್ಗೇಶ್ ಅವರ ನಿಲುವಿಗೆ ಗೆಲುವಾಗಿದೆ, ವನ್ಯ ಪ್ರಾಣಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 50ರ ಅಡಿ ನೋಟಿಸ್ ಕೊಡದೆ ದಾಳಿ ಮಾಡಬಹುದಾಗಿತ್ತು ಆದರೆ ನೋಟಿಸ್ ನೀಡಿ ಉತ್ತರಿಸುವ ಮುನ್ನವೇ ದಾಳಿ ನಡೆಸಿದ್ದ ನಡೆ ಖಂಡಿಸಿ ನ್ಯಾಯಾಲಯವು ಅರಣ್ಯ ಸಂಚಾರಿ ದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಗ್ಗೇಶ್ ಅವರಿಗೆ ನೀಡಿರುವ ನೋಟಿಸ್ ಮತ್ತು ಶೋಧನಾ ವಾರೆಂಟ್ನಿಂದ ಉದ್ಭವಿಸುವ ಮುಂದಿನ ಪ್ರಕ್ರಿಯೆಗೆ ಮಧ್ಯಂತರ ತಡೆಯಾಜ್ಞೆ ವಿಧಿಸಿ ಆದೇಶ ಹೊರಡಿಸಿದೆ.
ನಾನಾಯಿತು ನನ್ನ ಬದುಕಾಯಿತು ಎಂದು ಶ್ರದ್ಧೆಯಿಂದ ಬಾಳುತ್ತಿರುವ ನನ್ನನ್ನು ಪ್ರಚಾರ ವಸ್ತುವಿನಂತೆ ಬಳಕೆ ಮಾಡಲಾಯಿತು!
ಪ್ರೀತಿ ನಂಬಿಕೆ ಸಂಬಂಧ ಎಂದು ಸಾಮಾಜಿಕವಾಗಿ ಮಾತಾನಾಡುತ್ತಿದ್ದ ನನ್ನನ್ನು ಮೂಕನಾಗಿಸಿ ಇನ್ನುಮುಂದೆ ಯಾವ ವಿಷಯವು ಮಾತನಾಡದಂತೆ ಧಿಗ್ಭಂಧ ಹಾಕಿಕೊಂಡಿತು ಮನಸ್ಸು ಇಂದಿನ ದುರ್ಧೈವ ಪ್ರಚಾರ ಕಂಡು!ಸಂಬಂಧ ಅರಿವಿಲ್ಲದ ಸಮುಧಾಯ.!— ನವರಸನಾಯಕ ಜಗ್ಗೇಶ್(modi ka parivar) (@Jaggesh2) October 30, 2023
ಈಗಲೂ ನಡೆದದ್ದರ ಬಗ್ಗೆ ಬೇಸರ ಪಡುವ ನಟ ಮತ್ತೊಂದು ಪೋಸ್ಟ್ ಹಾಕಿದ್ದಾರೆ. ನಾನಾಯಿತು ನನ್ನ ಬದುಕಾಯಿತು ಎಂದು ಶ್ರದ್ಧೆಯಿಂದ ಬಾಳುತ್ತಿರುವ ನನ್ನನ್ನು ಪ್ರಚಾರ ವಸ್ತುವಿನಂತೆ ಬಳಕೆ ಮಾಡಲಾಯಿತು, ಪ್ರೀತಿ ನಂಬಿಕೆ ಸಂಬಂಧ ಎಂದು ಸಾಮಾಜಿಕವಾಗಿ ಮಾತನಾಡುತ್ತಿದ್ದ ನನ್ನನ್ನು ಮೂಕನಾಗಿಸಿ ಇನ್ನು ಮುಂದೆ ಯಾವ ವಿಷಯವು ಮಾತನಾಡದಂತೆ ದಿಗ್ಭಂಧನ ಹಾಕಿಕೊಂಡಿತು ಮನಸ್ಸು. ಇಂದಿನ ದುರ್ದೈವ, ಪ್ರಚಾರ ಕಂಡು ಸಂಬಂಧ ಅರಿವಿಲ್ಲದ ಸಮುದಾಯ ಎಂದು ಪೋಸ್ಟ್ ಹಾಕಿದ್ದಾರೆ.