ಈ ಬಾರಿಯ ಬಿಗ್ ಬಾಸ್ ಸೀಸನ್ (Big boss S10) ಬಹಳ ಇಂಟರೆಸ್ಟಿಂಗ್ ಆಗಿದೆ. ದಿನದಿಂದ ದಿನಕ್ಕೆ ಶೋ ಖ್ಯಾತಿ ಹೆಚ್ಚಾಗುತ್ತಿದ್ದು ಪ್ರತಿದಿನವೂ ತಪ್ಪದೇ ನೋಡುವಂತಹ ವೀಕ್ಷಕರ ಸಂಖ್ಯೆ ಎತ್ತರಕ್ಕೆ ಬೆಳೆಯುತ್ತಿದೆ. ಶೋ ಶುರುವಾಗಿ ಇನ್ನು ಅದರ ಕಾಲು ಭಾಗದ ಜರ್ನಿ ಕೂಡ ಮುಗಿದಿಲ್ಲ ಆಗಲೇ ಜನರರಿಗೆ ಯಾರು ಫೈನಲ್ ಗೆ ಇರುತ್ತಾರೆ,
ಯಾರ ಆಟ ಸರಿ, ಯಾರ ಆಟ ತಪ್ಪು, ಯಾರು ಏನು ಎನ್ನುವ ಲೆಕ್ಕಾಚಾರ ಗೊತ್ತಾಗಿದೆ. ಈ ಬಾರಿಯ ಬಿಗ್ ಬಾಸ್ ನಲ್ಲಿ ಕಂಟೆಸ್ಟೆಂಟ್ ಗಳು ಮನೆ ಒಳಗೆ ಹೋದಾಗ ಇದ್ದ ಎಕ್ಸ್ಪೆಕ್ಟೇಶನ್ ಮತ್ತು ಇಂಪ್ರೆಶನ್ ಒಳಗಿನ ಆಟ ನೋಡಿ ಸಂಪೂರ್ಣ ಬದಲಾಗಿದೆ. ಒಟ್ಟಿನಲ್ಲಿ ಒಬ್ಬರಿಗಿಂತ ಒಬ್ಬರು ಬಲದಲ್ಲಿ, ಬುದ್ದಿಯಲ್ಲಿ ಶಕ್ತಿವಂತರಾಗಿದ್ದು ಈ ಜಿದ್ದಾಜಿದ್ದಿ ನೋಡುವುದಕ್ಕೆ ಮಜವಾಗಿದೆ.
https://youtu.be/Ci1zP7RHeNE?si=7jue4dYHfAccoM1q
ಮನೆಯಲ್ಲಿ ಈಗಾಗಲೇ ಸಾಕಷ್ಟು ಜನರ ಮಧ್ಯೆ ಮನಸ್ತಾಪ, ಮುನಿಸು ಏರ್ಪಟ್ಟಿದ್ದೆ. ಒಬ್ಬರಿಗೊಬ್ಬರು ಕಿತ್ತಾಡಿಕೊಂಡಿದ್ದಾರೆ ಆದರೆ ಎಲ್ಲರಕ್ಕಿಂತ ಹೈಲೆಟ್ ಆಗುತ್ತಿರುವುದು ವಿನಯ್ ಗೌಡ V/S ಸಂಗೀತ ಶೃಂಗೇರಿ (Vinay Gowda V/S Sangeetha Shrungeri). ಆಶ್ಚರ್ಯ ಏನೆಂದರೆ ಇವರಿಬ್ಬರು ಸುವರ್ಣ ವಾಹಿನಿಯ ಜನಪ್ರಿಯ ಹರಹರ ಮಹಾದೇವ ಧಾರವಾಹಿಯಲ್ಲಿ (Hara Hara Mahadev)ಸತಿ ಹಾಗೂ ಪರಶಿವನಾಗಿ ಕಾಣಿಸಿಕೊಂಡಿದ್ದರು.
ಆದರೆ ಬಿಗ್ ಬಾಸ್ ಮನೆಯಲ್ಲಿ ಯಾಕೋ ಬದ್ಧ ವೈರಿಗಳಂತೆ ಕಿತ್ತಾಡುತ್ತಿದ್ದಾರೆ. ಮೊದಲ ವಾರದಲ್ಲಿ ವಿನಯ್ ಅವರು ಸಂಗೀತ ಅವರನ್ನು ರೂಲ್ಸ್ ಬ್ರೇಕ್ ಮಾಡಿರುವ ಕಾರಣ ಕೊಟ್ಟು ನಾಮಿನೇಟ್ ಮಾಡಿದರು. ಅಂದಿನಿಂದ ಶುರುವಾದ ಇವರಿಬ್ಬರ ನಡುವಿನ ಮನಸ್ತಾಪ ಇಂದು ಜಗಳ ಮಾತ್ರವಲ್ಲದೆ ಅದನ್ನು ಮೀರಿ ಮುಂದಿನ ಹಂತಕ್ಕೆ ಹೋಗಿದೆ.
ಟಾಸ್ಕ್ ಗಳಲ್ಲಿ ಒಬ್ಬರ ಎದುರು ಇನ್ನೊಬ್ಬರು ಗೆಲ್ಲಲೇ ಬೇಕು ಎಂದು ಯಾವ ಹಂತಕ್ಕಾದರೂ ಹೋಗುತ್ತಾರೆ, ಮಾತಿನಲ್ಲೂ ಕೂಡ ಒಬ್ಬರಿಗೊಬ್ಬರು ಪ್ರಾವೋಕ್ ಆಗುವ ರೀತಿ ಟಾಂಗ್ ಕೊಡುತ್ತಾರೆ. ಇದರ ನಡುವೆ ಪ್ರೇಕ್ಷಕರಿಂದ ಸ್ಪರ್ಧಿಗಳಿಗೆ ಗಿಫ್ಟ್ ಕೂಡ ಹೋಗಿತ್ತು. ಅದರಲ್ಲಿ ವಿನಯ್ ಗೌಡ ಅವರಿಗೆ ಆನೆ ಬಂದಿದ್ದೇ ತಡ ಅವರು ನಡೆದದ್ದೇ ದಾರಿ ಎನ್ನುವ ರೀತಿ ಮನೆಯಲ್ಲಿ ವರ್ತಿಸುತ್ತಿದ್ದಾರೆ.
ಆ ಅವಾರ್ಡ್ ನ್ನು ತೀರ ತಲೆಗೆ ತೆಗೆದುಕೊಂಡಿರುವ ವಿನಯ್ ಗೌಡ ಅವರು ಮಾತು ಮಾತಿಗೂ ತಾವು ಆನೆ ಎನ್ನುವುದನ್ನು ಅರ್ಥೈಸುವಂತೆ ಹೇಳುತ್ತಿರುತ್ತಾರೆ. ನಾಲ್ಕನೇ ವಾರದ ಹಳ್ಳಿ ಮನೆ ಟಾಸ್ಕ್ ನಲ್ಲೂ ಕೂಡ ಎರಡು ವಿರೋಧಿ ಮನೆಗಳ ಮುಖ್ಯಸ್ಥರಾಗಿ ವಿನಯ್ ಮತ್ತು ಸಂಗೀತ ಕಾಣಿಸಿಕೊಂಡಿದ್ದರು. ತಮ್ಮ ಮನೆತನವನ್ನು ಗೆಲ್ಲಿಸಬೇಕು ಎಂದು ಸಾಕಷ್ಟು ಶ್ರಮ ಪಟ್ಟ ಇವರು ನಡುವೆ ಉಂಟಾದ ಪರಿಸ್ಥಿತಿಯಿಂದ ಕೆಲ ಟಾಸ್ಕ್ ಗಳು ರದ್ದಾದವು.
ಇವರ ಇಗೋ ಇಂದ ಇತರ ಕಂಟೆಸ್ಟೆಂಟ್ಗಳ ಶ್ರಮ ಕೂಡ ವ್ಯರ್ಥವಾಗಿ ಉಳಿದ ಕಂಟೆಸ್ಟೆಂಟ್ ಗಳ ಬೇಸರಕ್ಕೆ ಕಾರಣರಾದರು. ಅಂತಿಮವಾಗಿ ನಾಲ್ಕನೇ ವಾರದ ಆಟ ಕೊನೆ ಹಂತಕ್ಕೆ ಬಂದು ಕ್ಯಾಪ್ಟನ್ ಟಾಸ್ಕ್ ಕೂಡ ನಡೆಯಿತು. ಈ ಕ್ಯಾಪ್ಟನ್ ಟಾಸ್ಕ್ ನಲ್ಲಿ ವಿನಯ್ ಗೆದ್ದು ಕ್ಯಾಪ್ಟನ್ ಕೂಡ ಆಗಿ ಮತ್ತೆ ಸಂಗೀತ ಹಾಗೂ ಅವರ ಟೀಮ್ ಗುರಿ ಮಾಡಿ ಆನೆ ಬಂತೊಂದಾನೆ ಡೈಲಾಗ್ ಹೇಳಿದ್ದಾರೆ.
ಇದನ್ನು ಕೇಳಿ ಸಂಗೀತ ಸುಮ್ಮನಾಗುವ ಮಾತೇ ಇಲ್ಲ. ಯಾರು ಕ್ಯಾಪ್ಟನ್ ಆದರೂ ತನಗೆ ಭಯವಿಲ್ಲ ಯಾವುದೇ ನಾಯಿ ನರಿ ಆನೆಗೂ ಕೂಡ ಸಂಗೀತ ಹೆದರುವುದಿಲ್ಲ ಎಂದು ಡೈಲಾಗ್ ಹೊಡೆದಿದ್ದಾರೆ. ಇವತ್ತಿನ ಪ್ರೊಮೋ ದಲ್ಲಿ ಇದೆ ಹೈಲೈಟ್ ಆಗಿದ್ದು ಇವರಿಬ್ಬರ ಜುಗಲ್ ಬಂದಿ ಎಪಿಸೋಡ್ ನೋಡುವುದಕ್ಕೆ ಕುತೂಹಲ ಹೆಚ್ಚು ಮಾಡುತ್ತಿದೆ.
ವಿನಯ್ ಗೆ ಟಫ್ ಕಾಂಪಿಟೇಟರ್ ಆಗಿ ಸಂಗೀತ ಸರಿಯಾಗಿ ಟಕ್ಕರ್ ಕೊಡುತ್ತಿದ್ದಾರೆ ಸಂಗೀತ ಸಿಂಹಣಿ ಎಂದು ನೆಟ್ಟಿಗರು ಕೂಡ ಅಭಿಪ್ರಾಯ ಪಡುತ್ತಿದ್ದಾರೆ. ಮುಂದಿನ ದಿನಗಳಲ್ಲಾದರೂ ಇವರಿಬ್ಬರು ಒಂದಾಗುತ್ತಾರಾ ನೋಡೋಣ.
https://youtu.be/Ci1zP7RHeNE?si=7jue4dYHfAccoM1q