ಮೂರು ಜನ ಮಕ್ಕಳಲ್ಲಿ ಒಬ್ಬರು ಕೂಡ ನನ್ನ ಆಸೆ ಈಡೇರಿಸಲೇ ಇಲ್ಲ ಎಂದು ಅಣ್ಣಾವ್ರು ಅಂದು ವೇದಿಕೆ ಮೇಲೆ ಕಣ್ಣೀರು ಹಾಕಿದ್ರಂತೆ, ಅಷ್ಟಕ್ಕೂ ಅಣ್ಣಾವ್ರ ಕೊನೆ ಆಸೆ ಏನಾಗಿತ್ತು ಗೊತ್ತಾ‌.?

 

ಅಣ್ಣಾವ್ರಿಗೆ(Dr Raj Kumar) ಇರುವಂತಹ ಅಭಿಮಾನಿ ಬಳಗ ಕರ್ನಾಟಕದಲ್ಲಿ ಮತ್ಯಾವ ನಟನಿಗೂ ಇಲ್ಲ ಎಂಬ ವಿಚಾರ ನಿಮಗೆ ತಿಳಿದೇ ಇದೆ. ಇಂದು ಕನ್ನಡ ಚಲನ ಚಿತ್ರರಂಗ ಇಷ್ಟು ಭವ್ಯವಾಗಿ ಬೆಳೆದು ನಿಂತಿದೆ ಅಂದರೆ ಅದಕ್ಕೆ ಮುಖ್ಯ ಕಾರಣ ಅಣ್ಣಾವ್ರು ಅಂತಾನೆ ಹೇಳಬಹುದು. ಅಣ್ಣಾವ್ರು ಒಬ್ಬರು ಇಲ್ಲ ಅಂದಿದ್ದರೆ ಕನ್ನಡ ಚಿತ್ರರಂಗ ಉನ್ನತ ಶಿಖರದಲ್ಲಿ ಇರುವುದಕ್ಕೆ ಸಾಧ್ಯವೇ ಇರುತ್ತಿರಲಿಲ್ಲ. ಅಭಿಮಾನಿಗಳನ್ನು ಮನೆದೇವರು ಎಂಬಂತೆ ಕಂಡಂತಹ ಏಕೈಕ ವ್ಯಕ್ತಿ ಒಂದು ಚೂರು ಕೂಡ ಅಹಂಕಾರವನ್ನು ಮೈಗೂಡಿಸಿಕೊಂಡಿಲ್ಲ. ಸರಳತೆ ಸಜ್ಜನಿಕೆಯನ್ನು ಬೆಳೆಸಿಕೊಂಡವರು ಅಣ್ಣಾವ್ರ ಮುಂದೆ ಯಾರೇ ಹೋದರು ಕೂಡ ಅವರಿಗೆ ಕೈ ಮುಗಿದು ನಂತರವಷ್ಟೇ ಮಾತನ್ನು ಪ್ರಾರಂಭ ಮಾಡುತ್ತಿದ್ದರು.

ಅದು ದೊಡ್ಡ ವ್ಯಕ್ತಿಯಾಗಿದ್ದರು ಸರಿಯೇ ಅಭಿಮಾನಿಯಾಗಿದ್ದರೂ ಸರಿಯೇ ಇದರಿಂದಲೇ ತಿಳಿಯುತ್ತದೆ ಅಣ್ಣಾವ್ರು ಎಂತಹ ಒಳ್ಳೆಯ ಗುಣಗಳನ್ನು ಒಳಗೊಂಡಿದ್ದರು ಅಂತ. ಇನ್ನು ವಿಚಾರಕ್ಕೆ ಬರುವುದಾದರೆ ಅಣ್ಣಾವರಿಗೆ ಐದು ಜನ ಮಕ್ಕಳಿದ್ದು ಅದರಲ್ಲಿ ಮೂರು ಜನ ಮಕ್ಕಳು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣುಮಕ್ಕಳು ಮೊದಲ ಮಗಳು ಲಕ್ಷ್ಮಿ ಅನ್ನೋ ಉದ್ಯಮಿಗೆ ಕೊಟ್ಟು ಮದುವೆ ಮಾಡುತ್ತಾರೆ. ಎರಡನೇ ಮಗಳು ಪೂರ್ಣಿಮಾಳನ್ನು ನಟ ರಾಮಕುಮಾರ್ ಅವರ ಜೊತೆ ವಿವಾಹ ಮಾಡಿಸುತ್ತಾರೆ. ಇನ್ನು ಮೂರು ಜನ ಮಕ್ಕಳ ಪೈಕಿ ಶಿವರಾಜ್ ಕುಮಾರ್(Shiva Rajkumar) ರಾಘವೇಂದ್ರ ರಾಜ್ ಕುಮಾರ್( Raghavendra Rajkumar) ಹಾಗೂ ಪುನೀತ್ ರಾಜಕುಮಾರ್(Puneeth Rajkumar) ಈ ಮೂರು ಜನ ನಿಮಗೆ ಚಿರಪರಿಚಿತರೇ ಏಕೆಂದರೆ ಚಿತ್ರರಂಗದಲ್ಲಿ ಇವರು ಕೂಡ ಸಾಕಷ್ಟು ಸಾಧನೆ ಮಾಡಿದ್ದಾರೆ.

ಅಣ್ಣಾವ್ರು ಭಾಷಣ ಒಂದರಲ್ಲಿ ಮಾತನಾಡುವಂತಹ ಸಂದರ್ಭದಲ್ಲಿ ತಮ್ಮ ಮೂರು ಜನ ಮಕ್ಕಳ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದರು. ಹೌದು ಇದು ಆಶ್ಚರ್ಯವೆನಿಸಿದರು ಕೂಡ ಸತ್ಯ ನಿಮ್ಮೆಲ್ಲರಿಗೂ ಅಣ್ಣಾವ್ರು ಏಕೆ ತಮ್ಮ ಮಕ್ಕಳ ಮೇಲೆ ಬೇಸರ ವ್ಯಕ್ತಪಡಿಸಿದರು ಇದಕ್ಕೆ ಮರಣವಾದರೂ ಏನೋ ಎಂಬುದನ್ನು ತಿಳಿದುಕೊಳ್ಳುವಂತಹ ಕುತೂಹಲ ಇದ್ದೇ ಇರುತ್ತದೆ ನಿಮ್ಮ ಎಲ್ಲಾ ಅನುಮಾನಗಳಿಗೂ ಪ್ರಶ್ನೆಗಳಿಗೂ ಉತ್ತರ ನೀಡುವಂತಹ ಪ್ರಯತ್ನವನ್ನು ನಾವಿಂದು ಮಾಡುತ್ತಿದ್ದೇವೆ. ಅಣ್ಣವರಿಗೆ ತಮ್ಮ ಮಕ್ಕಳು ಸಿನಿಮಾ ರಂಗಕ್ಕೆ ಬರುವುದಕ್ಕೆ ಸ್ವಲ್ಪವೂ ಕೂಡ ಇಷ್ಟ ಇರಲಿಲ್ಲವಂತೆ ಹೌದು ತಮ್ಮ ಮೂರು ಜನ ಮಕ್ಕಳನ್ನು ಉದ್ಯಮಿಗಳನ್ನಾಗಿ ಮಾಡಬೇಕು ಎಂಬ ಆಸೆ ಮತ್ತು ಕನಸನ್ನು ಹೊಂದಿದ್ದರಂತೆ.

ಇನ್ನು ಇವರ ಧರ್ಮಪತ್ನಿ ಶ್ರೀಮತಿ ಪಾರ್ವತಮ್ಮನವರಿಗೂ ಕೂಡ ತಮ್ಮ ಮಕ್ಕಳನ್ನು ದೊಡ್ಡ ಬಿಸಿನೆಸ್ ಮಾಡುವ ಕನಸನ್ನು ಹೊಂದಿದ್ದರು ಅಂತ ಆದರೆ ವಿಧಿ ಬರಹ ಏನು ತಿಳಿದಿಲ್ಲ ಮೂರು ಜನ ಮಕ್ಕಳು ಕೂಡ ನಟರಾಗಿದ್ದಾರೆ. ಮೊದಲನೇ ಮಗ ಶಿವರಾಜ್ ಕುಮಾರ್ ಅವರು ಮದ್ರಾಸ್ ನಲ್ಲಿ ಇಂಜಿನಿಯರಿಂಗ್ ಪದವಿ ಮಾಡುತ್ತಿರುವಾಗಲೇ ಸಿನಿಮಾದಲ್ಲಿ ಅವಕಾಶ ದೊರೆಯುತ್ತದೆ ವಿದ್ಯಾಭ್ಯಾಸ ಮುಗಿಯುತ್ತಿದ್ದ ಹಾಗೆ ಸಿನಿಮಾದಲ್ಲಿ ನಟಿಸಲು ಮುಂದಾಗುತ್ತಾರೆ. ಮೊದಲ ಮಗ ಏನೋ ಸಿನಿಮಾಗೆ ಅಚನಕ್ಕಾಗಿ ಬಂದು ಬಿಟ್ಟ ಎರಡನೇ ಮಗನಾದರು ಕೂಡ ನಮ್ಮ ಆಸೆಯನ್ನು ಪೂರೈಸುತ್ತಾನೆ ಬಿಡು ಎಂದು ಅಣ್ಣಾವ್ರು ಪಾರ್ವತಮ್ಮನವರಿಗೆ ಸಮಾಧಾನ ಮಾಡಿದ್ದರಂತೆ.

ಇನ್ನು ರಾಘವೇಂದ್ರ ರಾಜಕುಮಾರ್ ಅವರು ಕೂಡ ಎಂಬಿಬಿಎಸ್ ಓದುತ್ತಿದ್ದರಂತೆ, ಡಾಕ್ಟರ್ ಆಗಿ ಮಗ ಜನಸೇವೆ ಮಾಡುತ್ತಾನೆ ಎಂದು ಅಣ್ಣಾವ್ರು ಖುಷಿ ಪಟ್ಟಿದ್ದರು. ಆದರೆ ಇವರಿಗೂ ಕೂಡ ಸಿನಿಮಾದಲ್ಲಿ ನಟಿಸುವಂತಹ ಆಸಕ್ತಿ ಹೆಚ್ಚಾಗಿದ್ದರಿಂದ ಮೂರನೇ ವರ್ಷದ ಎಂಬಿಬಿಎಸ್ ಪದವಿ ಓದುತ್ತಿರುವಾಗಲೇ ಅದನ್ನು ಅರ್ಧಕ್ಕೆ ಬಿಟ್ಟು ಚಿತ್ರರಂಗಕ್ಕೆ ಇವರು ಕೂಡ ಕಾಲಿಡುತ್ತಾರಂತೆ. ಇದರಿಂದ ಪಾರ್ವತಮ್ಮನವರು ಮತ್ತಷ್ಟು ಬೇಸರವನ್ನು ವ್ಯಕ್ತಪಡಿಸಿದರಂತೆ ಆಗ ಅಣ್ಣಾವ್ರು ತಂದೆ ತಾಯಿ ಆಸೆಗಳಿಗಿಂತ ಮಕ್ಕಳ ಆಸೆ ಕನಸುಗಳಿಗೆ ಬೆಲೆ ಕೊಡುವುದು ಒಳ್ಳೆಯದು ಬಿಡು ಎಂದು ಪಾರ್ವತಮ್ಮನವರಿಗೆ ಮತ್ತೊಮ್ಮೆ ಸಮಾಧಾನ ಪಡಿಸಿದರಂತೆ.

ಕೊನೆಯದಾಗಿ ಮೂರನೇ ಮಗ ಆದರೂ ಕೂಡ ನಮ್ಮ ಆಸೆ ಕನಸನ್ನು ಈಡೇರಿಸುತ್ತಾನೆ ಬಿಡು ಅಂತ ಹೇಳಿದ್ದರಂತೆ ಅಂದುಕೊಂಡ ರೀತಿಯಲ್ಲೇ ಪುನೀತ್ ರಾಜಕುಮಾರ್ ಅವರು ಕೂಡ ಪ್ರಾರಂಭದಲ್ಲಿ ಗ್ರಾನೆಟ್ ಬಿಸಿನೆಸ್ ಮಾಡುತ್ತಾರಂತೆ. ಅಪ್ಪು ಗ್ರಾನೈಟ್ ಬಿಸಿನೆಸ್ ಪ್ರಾರಂಭಿಸಿದಾಗ ಅಣ್ಣಾವ್ರು ಹಾಗೂ ಪಾರ್ವತಮ್ಮನವರು ಇಬ್ಬರೂ ಕೂಡ ಸಂತೋಷವನ್ನು ವ್ಯಕ್ತಪಡಿಸಿದರಂತೆ. ಸದ್ಯಕ್ಕೆ ಅಪ್ಪು ಆದರೂ ನಮ್ಮ ಆಸೆ ಕನಸನ್ನು ಪೂರೈಸಿದನಲ್ಲ ಎಂದು ನಿಟ್ಟಿಸಿರುವ ಬಿಟ್ಟಿದ್ದರಂತೆ ಆದರೆ ಕೆಲವು ಕಾರಣಾಂತರಗಳಿಂದ ಅಪ್ಪು ಅವರು ಗ್ರಾನೈಟ್ ಬಿಸಿನೆಸ್ ಅನ್ನು ಅರ್ಧಕ್ಕೆ ಕೈ ಬಿಡುತ್ತಾರೆ. ಕೊನೆಯದಾಗಿ ಬೇರೆ ದಾರಿ ಇಲ್ಲದೆ ಅಪ್ಪು ಅವರು ಕೂಡ 2002 ರಲ್ಲಿ ಸಿನಿಮಾ ರಂಗಕ್ಕೆ ಬರುತ್ತಾರೆ.

ಈ ವಿಚಾರವನ್ನು ಅಣ್ಣಾವ್ರು ವೇದಿಕೆಯೊಂದರಲ್ಲಿ ಭಾಷಣ ಮಾಡುವಂತಹ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ ತನ್ನ 3 ಜನ ಮಕ್ಕಳು ಚಿತ್ರರಂಗಕ್ಕೆ ಬರುವುದು ಇಷ್ಟ ಇರಲಿಲ್ಲ. ಆದರೆ ಕಲಾದೇವತೆ ಎಂಬುವವಳು ನಮ್ಮ ಮಕ್ಕಳ ಕೈ ಹಿಡಿದಿದ್ದಾಳೆ, ನಾವು ಅದೆಷ್ಟೇ ಸಿನಿಮಾ ರಂಗದಿಂದ ಅವರನ್ನು ದೂರ ಇಟ್ಟರೂ ಕೂಡ ಕಲಾದೇವತೆ ನನ್ನ ಮಕ್ಕಳನ್ನು ಆವರಿಸಿಕೊಂಡು ಬಿಟ್ಟಿದ್ದಳು. ಈ ಕಾರಣಕ್ಕಾಗಿ ಮೂರು ಜನರು ಕೂಡ ಚಿತ್ರರಂಗಕ್ಕೆ ಬಂದು ಜನರನ್ನು ರಂಜಿಸುತ್ತಿದ್ದಾರೆ ಎಂದು ಅಣ್ಣಾವ್ರು ಭಾಷಣೆ ಮಾಡಿದರಂತೆ. ನಿಜಕ್ಕೂ ಇಲ್ಲಿ ಅಣ್ಣಾವ್ರ ದೊಡ್ಡ ಗುಣವನ್ನು ನಾವು ಮೆಚ್ಚಲೇಬೇಕು. ಏಕೆಂದರೆ ಒಬ್ಬ ಚಲನಚಿತ್ರ ನಟನಾದವರು ತನ್ನ ಮಗನು ಕೂಡ ನಟ ಆಗಬೇಕು ಎಂಬ ಆಸೆ ಕನಸನ್ನು ಹೊಂದಿರುತ್ತಾರೆ‌. ಆದರೆ ಅಣ್ಣಾವ್ರು ಮಾತ್ರ ತನ್ನ ಮಕ್ಕಳು ಉದ್ಯಮಿಗಳಾಗಬೇಕು ಎಂಬ ಕನಸನ್ನು ಹೊಂದಿದ್ದರಂತೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮುಖಾಂತರ ತಿಳಿಸಿ.

Leave a Comment