ದೊಡ್ಮನೆ ಕುಟುಂಬ ಕಾಲದಿಂದಲೂ ಅಭಿಮಾನಿಗಳನ್ನು ದೇವರಂತೆ ಕಂಡು ಇತರ ಕಲಾವಿದರನ್ನು ಬಹಳ ಗೌರವಿಸುತ್ತಿದ್ದರು. ಈ ಕಾರಣಕ್ಕಾಗಿ ಇದುವರೆಗೆ ರಾಜ್ ಕುಟುಂಬದ ಮೇಲೆ ಯಾವ ಒಬ್ಬ ಕಲಾವಿದನು ಕೂಡ ದೂರ ಹೇಳುತ್ತಿರಲಿಲ್ಲ. ರಾಜಣ್ಣ (Dr.Raj Kumar) ಅವರು ಕಾಲವಾದ ಬಳಿಕ ಅಣ್ಣಾವ್ರ ಮಕ್ಕಳು ಕೂಡ ಇದೇ ಗುಣವನ್ನು ಬೆಳೆಸಿಕೊಂಡು ಬಂದಿದ್ದರು. ಅದರಲ್ಲೂ ಅಪ್ಪು (Appu) ಅವರು ಕನ್ನಡ ಇಂಡಸ್ಟ್ರಿ ಮಾತ್ರವಲ್ಲದೇ ಪಕ್ಕದ ರಾಜ್ಯಗಳ ಕಲಾವಿದರ ಸ್ನೇಹವನ್ನು ಕೂಡ ಗಳಿಸಿದ್ದರು.
ಆದರೆ ಅಪ್ಪು ಅವರು ನಿಧನರಾದ ಬಳಿಕ ಕರ್ನಾಟಕದಲ್ಲಿ ಅವರ ಹೆಸರು ಹೇಳಿಕೊಂಡು ಅವರ ಅಭಿಮಾನಿಗಳು ಸ್ಟಾರ್ ವಾರ್ (star war) ಗೆ ಇಳಿದಿದ್ದಾರೆ. ಇದುವರೆಗೂ ಎಂದು ಕೂಡ ಒಂದು ವಿವಾದ ಇಲ್ಲದ ಅಪ್ಪು ಬಾಳಿನಲ್ಲಿ ಅಭಿಮಾನಿಗಳು ಎಂದು ಹೇಳಿಕೊಂಡಿರುವ ಕ್ರೀಡೆಗೇಡಿಗಳು ಮಾಡುತ್ತಿರುವ ಕೆಲಸದಿಂದ ದರ್ಶನ್ (!Darshan) ಹಾಗೂ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ವಾರ್ ನಡೆಯುತ್ತಿದೆ.
ಆದರೆ ವಾಸ್ತವವಾಗಿ ರಾಜ್ ಕುಟುಂಬ ಹಾಗೂ ದರ್ಶನ್ ಅವರು ಆತ್ಮೀಯವಾಗಿ ಇದ್ದಾರೆ. ಹೊರಗಡೆ ಈ ನಟರು ಎಷ್ಟು ಅನ್ಯೋನ್ಯವಾಗಿ ಇದ್ದರು ಅದನ್ನು ಅರ್ಥಮಾಡಿಕೊಳ್ಳದ ಅಭಿಮಾನಿಗಳು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಈ ಎರಡು ಸಿನಿಮಾಗಳ ವಿಚಾರವನ್ನು ಕಂಪೇರ್ ಮಾಡಿ ಕಲೆಕ್ಷನ್ ವಿಚಾರ ಮತ್ತು ರೆಕಾರ್ಡ್ ಬ್ರೇಕಿಂಗ್ ವಿಷಯ ಇಂತಹ ವಿಚಾರಗಳಿಗೆ ಕಿತ್ತಾಡಿಕೊಳ್ಳುತ್ತಾ ಪರಸ್ಪರ ಕೆಸರೆರಚಾಟ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಕೆಲವೊಂದು ಬರಹಗಳು ಹೇಳುವುದಕ್ಕೂ ಅಸಹ್ಯವಾಗಿರುವಷ್ಟು ಕೆಳ ಮಟ್ಟದಾಗಿದ್ದು ನಟರನ್ನು ಮಾತ್ರವಲ್ಲದೇ ಕುಟುಂಬದ ಇತರ ಸದಸ್ಯರು ಹಾಗೂ ಹೆಣ್ಣು ಮಕ್ಕಳ ಹೆಸರನ್ನು ಬಳಸಿ ಟ್ರೋಲ್ ಮಾಡುತ್ತಿರುವುದು ತೀರ ಅಸಹನೀಯವಾಗಿದೆ.
ಈ ರೀತಿ ಮಾಡುತ್ತಿರುವ ಕಿಡಿಗೇಡಿಗಳು ಅಪ್ಪು ಮತ್ತು ದಚ್ಚು ಅಭಿಮಾನಿಗಳು ಎಂದು ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ನಿಜವಾಗಿಯೂ ಅಭಿಮಾನಿಗಳ ನಡುವೆ ಈ ರೀತಿಯ ಒಂದು ಕಲಹ ಇರುವುದು ನಿಜವಾಗಿದ್ದರೆ ಅವರಿಗೆ ರಾಘಣ್ಣನ (Raghanna) ಕಡೆಯಿಂದ ಒಂದು ಸಲಹೆ ಸಿಕ್ಕಿದೆ. ನೆನ್ನೆ ಫೆಬ್ರವರಿ 14ರಂದು ವ್ಯಾಲೆಂಟೈನ್ಸ್ ಡೇ ಇತ್ತು, ಪ್ರೇಮಿಗಳು ಮಾತ್ರವಲ್ಲದೆ ಪರಸ್ಪರ ಪ್ರೀತಿಸುವ ಎಲ್ಲರಿಗೂ ಸಹ ಎಲ್ಲರೂ ವಿಶ್ ಮಾಡಿದರು. ಇಂತಹ ಸಂದರ್ಭದಲ್ಲಿ ರಾಘಣ್ಣ ಸೋಶಿಯಲ್ ಮೀಡಿಯಾದಲ್ಲಿ ಅಪ್ಪು ಬಗ್ಗೆ ಬರೆದುಕೊಂಡು ಅಪ್ಪು ಫೋಟೋ ಹಂಚಿಕೊಂಡಿದ್ದಾರೆ.
ಅಪ್ಪು ಫೋಟೋ ಜೊತೆಯಲ್ಲಿ ದ್ವೇಷ ಅಸೂಯೆ ಬಿಟ್ಟು ಎಲ್ಲರನ್ನೂ ಪ್ರೀತಿಸಿ ಪುನೀತರಾಗೋಣ ಎನ್ನುವ ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಈ ಮೂಲಕ ಇನ್ನು ಮುಂದೆ ಆದರೂ ಸ್ಟಾರ್ ವಾರ್ ಅನ್ನು ಬಿಟ್ಟು ಒಗಟ್ಟಾಗಿರಬೇಕು ಎನ್ನುವ ಸಂದೇಶವನ್ನು ಕೊಡುತ್ತಿದ್ದಾರೆ ಎಂದು ಹೇಳಬಹುದು. ನಂತರ ಅನೇಕರ ಡಿಪಿ ಹಾಗೂ ಸ್ಟೇಟಸ್ ಗಳಲ್ಲೂ ಕೂಡ ಇದೇ ಫೋಟೋ ಮಿಂಚುತ್ತಿತ್ತು. ದರ್ಶನ್ ಹಾಗೂ ರಾಜ್ ಕುಟುಂಬದವರು ಎಷ್ಟು ಅನ್ಯೋನ್ಯವಾಗಿದ್ದಾರೆ ಎನ್ನುವುದಕ್ಕೆ ದರ್ಶನ್ ಅವರ ಮೇಲೆ ಹೊಸಪೇಟೆಯಲ್ಲಿ ಆದ ಹ.ಲ್ಲೆ.ಗೆ ಮೊದಲ ಪ್ರತಿಕ್ರಿಯೆ ಕೊಟ್ಟು.
ಈ ಘಟನೆಯನ್ನು ಖಂಡಿಸಿದವರಲ್ಲಿ ಮೊದಲಿಗರು ಶಿವಣ್ಣ ಆಗಿದ್ದರು ಎನ್ನುವುದು ಜೊತೆಗೆ ಮೊನ್ನೆ ಅಷ್ಟೇ ಬೆಂಗಳೂರಿನ ರಸ್ತೆ ಒಂದಕ್ಕೆ ಪುನೀತ್ ರಾಜಕುಮಾರ್ ಅವರ ಹೆಸರಿಟ್ಟ ಕಾರ್ಯಕ್ರಮದಲ್ಲಿ ದರ್ಶನ್ ಅವರು ಬಾಗಿ ಆಗಿದ್ದರು ಸಾಕ್ಷಿಯಾಗಿದೆ. ಇಷ್ಟಾದ ಮೇಲೆ ದರ್ಶನ್ ಅವರಿಗೆ ಅಪ್ಪು ಅಭಿಮಾನಿಗಳ ಮೇಲೆ ಕೋಪ ಇಲ್ಲ ಎನ್ನುವುದು ಸಾಬೀತಾಗಿದೆ. ಇನ್ನಾದರೂ ಅಭಿಮಾನಿಗಳು ಇದನ್ನು ಅರ್ಥ ಮಾಡಿಕೊಳ್ಳಲಿ ಎನ್ನುವುದೇ ಇಡೀ ಕರುನಾಡ ಆಶಯ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮುಖಾಂತರ ಉತ್ತರಿಸಿ.