ರಶ್ಮಿಕ ಮಂದಣ್ಣ ಸದ್ಯಕ್ಕೆ ನ್ಯಾಷನಲ್ ಕ್ರಶ್ ಎಂದು ಟೈಟಲ್ ಪಡೆದು ಇಡೀ ದೇಶದಾದ್ಯಂತ ಮಿಂಚುತ್ತಿರುವ ನಟಿ. ಜೊತೆಗೆ ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಚಲನಚಿತ್ರ ರಂಗದ ಬಹು ಬೇಡಿಕೆಯ ನಟಿ. ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಇಂದು ಸಿನಿಮಾ ಪ್ರಪಂಚದಲ್ಲಿ ಓಡುತ್ತಿರುವ ಕುದುರೆ ರಶ್ಮಿಕ ಮಂದಣ್ಣ. ಅವರು ಮುಟ್ಟಿದ್ದೆಲ್ಲ ಚಿನ್ನ ಆಗುತ್ತಿರುವ ಕಾಲ ಇದು, ಈಕೆ ಅಭಿನಯಿಸುತ್ತಿರುವ ಬಹುತೇಕ ಚಿತ್ರಗಳು ಪಾನ್ ಇಂಡಿಯಾ ಸಿನಿಮಾಗಳಾಗಿದ್ದ, ರಶ್ಮಿಕಾ ಮಂದಣ್ಣ ಕೂಡ ಅದರ ಕ್ರೆಡಿಟ್ ಪಡೆಯುತ್ತಿದ್ದಾರೆ.
ಆಕ್ಟಿಂಗ್ ಗಂಧ ಗಾಳಿ ಗೊತ್ತಿಲ್ಲದ ಕುಟುಂಬದಿಂದ ಬಂದ ರಶ್ಮಿಕ ಮಂದಣ್ಣ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಅವರ ಕೃಪ ಕೃತಾಕ್ಷದಿಂದ ನಾಯಕಿ ನಟಿಯಾಗಿ ಗುರುತಿಸಿಕೊಂಡರು. ಆದರೆ ಅವರು ಅದರ ಬಗ್ಗೆ ಕೃತಜ್ಞತೆ ಹೊಂದಿಲ್ಲ ಎನ್ನುವ ಕಾರಣಕ್ಕಾಗಿ ಕನ್ನಡಿಗರನ್ನು ಅವರನ್ನು ದ್ವೇಷಿಸಲು ಆರಂಭಿಸಿದರು. ಅದು ಅವರ ವೈಯಕ್ತಿಕ ವಿಷಯ ಆದರೂ ಅದಕ್ಕಿಂತ ಹೆಚ್ಚಾಗಿ ಕನ್ನಡಕರಿಗೆ ನೋವಾಗಿದ್ದು ರಶ್ಮಿಕಾ ಮಂದಣ್ಣ ಬೆಳೆಯುತ್ತಿರುವ ಕಾರಣಕ್ಕೆ ಕನ್ನಡವನ್ನು ನಿರ್ಲಕ್ಷಿಸುತ್ತಿದ್ದಾರೆ ಎನ್ನುವುದು.
ಸಾಕಷ್ಟು ಬಾರಿ ಈ ರೀತಿ ಕನ್ನಡ ಹಾಗೂ ಕರ್ನಾಟಕದ ಬಗ್ಗೆ ಎಡವಟ್ಟು ಮಾತುಗಳನ್ನು ಆಡಿ ಅಥವಾ ದಿವ್ಯ ನಿರ್ಲಕ್ಷವನ್ನು ತೋರಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ರಶ್ಮಿಕ ಮಂದಣ್ಣ ಈಗ ಸದ್ಯಕ್ಕೆ ಕನ್ನಡ ಚಲನಚಿತ್ರರಂಗದಿಂದ ದೂರ ಉಳಿದಿದ್ದಾರೆ. ಪೊಗರು ಸಿನಿಮಾ ಆದ ಬಳಿಕ ರಶ್ಮಿಕ ಮಂದಣ್ಣ ಕನ್ನಡದ ಯಾವ ಸಿನಿಮಾಗಳಲ್ಲೂ ಕೂಡ ಕಾಣಿಸಿಕೊಳ್ಳಲಿಲ್ಲ. ಆದರೆ ಆರಂಭದ ದಿನಗಳಲ್ಲಿ ಗಣೇಶ್ ದರ್ಶನ್ ಪುನೀತ್ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಮುಂಚಿದ್ದರು.
ಕನ್ನಡ ಹೊರತು ಪಡಿಸಿದರೂ ಈಕೆ ಕೈ ತುಂಬಾ ಬಹಳಷ್ಟು ಪ್ರಾಜೆಕ್ಟ್ ಗಳು ಇವೆ. ಮಧ್ಯಮ ವರ್ಗದ ಕುಟುಂಬದ ಹುಡುಗಿ ಆದ ಈಕೆ ಅತಿ ವೇಗವಾಗಿ ಚಿತ್ರರಂಗದಲ್ಲಿ ಬೆಳದರು ಎಂದೇ ಹೇಳಬಹುದು. ರಶ್ಮಿಕಾ ಮಂದಣ್ಣ ಅವರು ಕರ್ನಾಟಕದಲ್ಲಿ ಸದಾ ಟ್ರೋಲ್ ಗೆ ಒಳಗಾಗುತ್ತಲೇ ಇರುತ್ತಾರೆ. ಕನ್ನಡಿಗರು ಈಕೆಯ ಒಂದಲ್ಲ ಒಂದು ವಿಚಾರವನ್ನು ಇಟ್ಟುಕೊಂಡು ಕಾಲು ಎಳೆಯುತ್ತಲೇ ಇರುತ್ತಾರೆ.
ಒಟ್ಟಿನಲ್ಲಿ ನೆಟ್ಟಿಗರ ಫೇವರೆಟ್ ಕಂಟೆಂಟ್ ಆಗಿರುವ ರಶ್ಮಿಕ ಮಂದಣ್ಣ ಅವರ ಬಗ್ಗೆ ಕನ್ನಡಿಗರಿಗೆ ಬೇಸರ ಆಗಿರುವ ವಿಚಾರ ಅರಿತು ಇತ್ತೀಚೆಗೆ ಅದನ್ನು ಅವರು ಸರಿಪಡಿಸಿಕೊಳ್ಳುತ್ತಿರುವ ಲಕ್ಷಣಗಳು ಕೂಡ ಕಾಣುತ್ತಿವೆ. 26 ನೇ ವಯಸ್ಸಿಗೆ ಇಷ್ಟು ಸಾಧನೆ ಮಾಡಿರುವ ರಶ್ಮಿಕ ಮಂದಣ್ಣ ಅವರ ಮತ್ತೊಂದು ಸಾಧನೆ ಬಗ್ಗೆ ಕೇಳಿದರೆ ಕನ್ನಡಿಗರು ಈಕೆಯನ್ನು ದ್ವೇಷಿಸುತ್ತಿದ್ದರೂ ಈ ವಿಷಯದಲ್ಲಿ ಹೊಗಳಬಹುದು ಎನಿಸುತ್ತದ
ಯಾಕೆಂದರೆ ಆಕೆ ಎಷ್ಟೇ ತಪ್ಪುಗಳನ್ನು ಮಾಡಿದ್ದರು ಅವರು ಕನ್ನಡಿಗರು ಎನ್ನುವುದು ಅಳಿಸಲಾಗುವುದಿಲ್ಲ, ಸದ್ಯಕ್ಕೆ ಆಕೆ ದುರಹಂಕಾರದ ವರ್ತನೆಯಿಂದ ಇದನ್ನು ಮರೆತಿದ್ದರು ಮುಂದೊಂದು ದಿನ ಇಲ್ಲಿಗೆ ಮರಳೇ ಬೇಕು ಎನ್ನುವುದು ವಿಧಿ ಹಾಗಾದರೆ ರಶ್ಮಿಕ ಮಂದಣ್ಣ ಅವರ ಆ ಸಾಧನೆ ಏನು ಗೊತ್ತಾ? ರಶ್ಮಿಕಾ ಮಂದಣ್ಣ ಅವರು ಅವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಂತೆ ಮಾಧ್ಯಮ ವರ್ಗದ ಕುಟುಂಬದವರು.
ಒಂದು ಸಮಯದಲ್ಲಿ ಕುಟುಂಬದ ಆರ್ಥಿಕ ಸಂಕಷ್ಟಗಳಿಂದಾಗಿ ಮನೆ ಬಾಡಿಗೆಯನ್ನು ಸಹ ಕಟ್ಟಲಾಗದೆ ಅವರ ತಂದೆ ಪದೇಪದೇ ಮನೆ ಬದಲಾಯಿಸುತ್ತಿದ್ದರು ಎನ್ನುವುದನ್ನು ಸಹ ಅವರು ಹೇಳಿಕೊಂಡಿದ್ದಾರೆ. ಅಂತಹ ಸಾಮಾನ್ಯ ಕುಟುಂಬದಿಂದ ಬಂದ ರಶ್ಮಿಕ ಮಂದಣ್ಣ ಇಂದು ಹತ್ತಾರು ಮನೆಗಳ ಒಡತಿ ಆಗಿದ್ದಾರೆ. ರಶ್ಮಿಕ ಮಂದಣ್ಣ ಬಳಿ ಅನೇಕ ಮನೆಗಳಿವೆ. ತನ್ನ ಮೂಲ ನೆಲೆ ಆದ ಕೊಡಗಿನಲ್ಲಿ ಒಂದು ಮನೆ, ಬೆಂಗಳೂರಿನಲ್ಲಿ ಒಂದು ಮನೆ, ಮುಂಬೈಯಲ್ಲಿ ಒಂದು ಮನೆ ಮತ್ತು ಹೈದರಾಬಾದ್ ಹಾಗೂ ಚೆನ್ನೈಯಲ್ಲಿ ಶೂಟಿಂಗ್ ಇದ್ದಾಗ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಅಲ್ಲೂ ಸಹ ಮನೆಗಳನ್ನು ಹೊಂದಿದ್ದಾರೆ.
ಕಳದೆರಡು ವರ್ಷಗಳ ಹಿಂದೆ ಈಕೆ ಮನೆಯಲ್ಲಿ ಐಟಿ ರೈಡ್ ಕೂಡ ಆಗಿತ್ತು ಅಷ್ಟರ ಮಟ್ಟಿಗೆ ಬಹುಬೇಗ ಈ ರೀತಿ ಐಟಿ ರೇಟಿಗೆ ಒಳಗಾದ ಏಕೈಕ ನಟಿ ಎನ್ನುವ ಕುಖ್ಯಾತಿಗೂ ರಶ್ಮಿಕಾ ಒಳಗಾಗಿದ್ದಾರೆ. ರಶ್ಮಿಕ ಮಂದಣ್ಣ ಅವರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ ಬಹಳ ಜೋರಾಗಿದೆ. ತೆಲುಗಿನ ಪುಷ್ಪ 2 ಸಿನಿಮಾ ಜೊತೆ ತಮಿಳು ಹಾಗೂ ಹಿಂದಿಯ ಹಲವು ಸಿನಿಮಾ ಶೂಟಿಂಗ್ ಅಲ್ಲಿ ರಶ್ಮಿಕ ಮಂದಣ್ಣ ಬಿಸಿ ಆಗಿದ್ದಾರೆ. ಇದರ ನಡುವೆ ಆಗಾಗ ವಿದೇಶಿ ಪ್ರವಾಸಕ್ಕೆ ಹೋಗಿ ಅಲ್ಲಿಯ ಫೋಟೋಶೂಟ್ ವಿಡಿಯೋ ಹಾಗೂ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳುತ್ತಾ ತಮ್ಮ ಅಭಿಮಾನಿಗಳನ್ನು ಮನೋರಂಜಿಸುತ್ತಿದ್ದಾರೆ.