ಕರಾಟೆ ಕಿಂಗ್ ಶಂಕರ್ ನಾಗ್ (Karate king Shankar nag) ಅವರು ಪಾದರಸದಂತಹ ವ್ಯಕ್ತಿತ್ವ ಹೊಂದಿದ್ದವರು, ಆಟೋ ರಾಜ (Auto raja title) ಎಂತಲೂ ಪ್ರೀತಿಯಿಂದ ಕನ್ನಡಿಗರಿಂದ ಕರೆಸಿಕೊಡುತ್ತಿದ್ದರು. ಇಂದಿಗೂ ಕೂಡ ಕರ್ನಾಟಕದ ಅಷ್ಟೂ ಆಟೋ ಡ್ರೈವರ್ ಗಳ ಆರಾಧ್ಯ ದೈವ ಈ ನಟ. ಶಂಕರ್ ನಾಗ್ ಅವರಿಗೆ ಅವರೇ ಸಾಟಿ ಅಭಿನಯ ಮಾತ್ರ ಅಲ್ಲದೆ ಡೈರೆಕ್ಷನ್ ಜೊತೆಗೆ ಅನೇಕ ವಿಭಿನ್ನ ಬಗೆಯ ಆಲೋಚನೆಗಳು ಹಾಗೂ ಸಮಾಜಮುಖಿ ಚಿಂತನೆಗಳನ್ನು ರೂಢಿಸಿಕೊಂಡಿದ್ದ ವ್ಯಕ್ತಿ ಶಂಕರ್ ನಾಗ್.
ಶಂಕರ್ ನಾಗ್ ಅವರು ರಾಜಕೀಯಕ್ಕೆ ಬಂದಿದ್ದರೆ ಇಂದು ಕರ್ನಾಟಕದ ಚಿತ್ರಣವೇ ಬದಲಾಗಿ ಹೋಗುತ್ತಿತ್ತು. ಅವರು ಇದ್ದ ಕಾಲದಲ್ಲಿಯೇ ಮುಂಬೈ ರೀತಿ ಬೆಂಗಳೂರಿನಲ್ಲೂ ಮೆಟ್ರೋ ಮಾಡಬೇಕು ಎಂದು ತಮ್ಮ ಸ್ವಂತ ಖರ್ಚಿನಲ್ಲಿ ಸ್ಕೆಚ್ ಹಾಕಿಸಿ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದವರು, ಇಂತಹ ವ್ಯಕ್ತಿಗಳು ವಿಶೇಷದಲ್ಲಿ ವಿಶೇಷ. ಇಂತಹ ಶ್ರೇಷ್ಠ ವ್ಯಕ್ತಿತ್ವದ ಮತ್ತು ಪ್ರತಿಭಾನ್ವಿತ ನಟ ಮತ್ತು ನಿರ್ದೇಶಕನನ್ನು ಬಹು ಬೇಗ ಕಳೆದುಕೊಂಡ ಕನ್ನಡಿಗರು ದುರಾದೃಷ್ಟವಂತರು.
ಶಂಕರ್ ನಾಗ್ ಅವರ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ, ಸತ್ತ ಮೇಲೆ ಮಲಗುವುದು ಇದ್ದೇ ಇದೆ ಬದುಕಿದ್ದಾಗಲೇ ಎಚ್ಚರದಿಂದ ಏನಾದರೂ ಸಾಧಿಸು ಎಂದು ಹೇಳುತ್ತಾ ಸದಾ ಹೊಸತನಕ್ಕೆ ತುಡಿಯುತ್ತಿದ್ದ ಇವರು ಅಕ್ಕಪಕ್ಕದಲ್ಲಿದ್ದವರನ್ನು ಕೂಡ ಆಕರ್ಷಿಸಿ ಅವರು ತನ್ನಂತೆ ಆಗುವಂತೆ ಅವರ ಮನಸ್ಸಿನ ಮೇಲೆ ಪರಿಣಾಮ ಬೀರಿ ಬಿಡುತ್ತಿದ್ದರು. ರಂಗಭೂಮಿ ಕಲಾವಿದರಾಗಿದ್ದ ಇವರು ಅರುಂಧತಿ ನಾಗ್ (wife Arundhati nag) ಜೊತೆ ಪ್ರೀತಿಯಲ್ಲಿ ಬಿದ್ದು ನಂತರ ಇಬ್ಬರೂ ಸಹ ಮದುವೆಯನ್ನು ಮಾಡಿಕೊಂಡಿದ್ದರು.
ಇವರಿಬ್ಬರ ಜೋಡಿಗೆ ಕಾವ್ಯ ನಾಗ್ (daughter Kavya nag) ಎನ್ನುವ ಮುದ್ದಾದ ಮಗಳು ಇದ್ದರು. ಕರ್ನಾಟಕದಾದ್ಯಂತ ಒಳ್ಳೆ ಹೆಸರು, ಕೈತುಂಬ ಕೆಲಸ ಮೆದುಳಿನ ತುಂಬೆಲ್ಲಾ ನೂರೆಂಟು ಕ್ರಿಯೇಟಿವ್ ಐಡಿಯಾಗಳನ್ನು ತುಂಬಿಕೊಂಡಿದ್ದ ಶಂಕರ್ ನಾಗ್ ಅವರ ಬದುಕು ಒಂದು ಅಪಘಾತದಲ್ಲಿ ದುರಂತ ಅಂತ್ಯವಾಗಿ ಹೋಯಿತು. ಅಂದಿನಿಂದ ಅನೇಕ ವರ್ಷಗಳವರೆಗೆ ಅರುಂಧತಿ ಅವರು ಸಹ ಚಿತ್ರರಂಗದಿಂದ ದೂರ ಉಳಿದು ಬಿಟ್ಟರು.
ನಂತರ ಜೋಗಿ ಸಿನಿಮಾದ ಮೂಲಕ ಪೋಷಕ ಪಾತ್ರದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದರು. ಆದರೆ ಮಗಳು ಕಾವ್ಯನಾಗ್ ಬಗ್ಗೆ ಎಲ್ಲೂ ಕೂಡ ಹೆಚ್ಚಿನ ಸುದ್ದಿ ಆಗಲೇ ಇಲ್ಲ. ಈಗಲೂ ಸಹ ಕರುನಾಡ ಜನತೆ ಶಂಕರ್ ನಾಗ್ ಕುಟುಂಬದ ಕುಡಿಯ ಬಗ್ಗೆ ತಿಳಿದುಕೊಳ್ಳಲು ಕನ್ನಡಿಗರು ಆಸಕ್ತರಾಗಿದ್ದಾರೆ. ಶಂಕರ್ ನಾಗ್ ಮತ್ತು ಅರುಂಧತಿ ನಾಗ್ ಅವರ ಮಗಳಾದ ಕಾವ್ಯ ನಾಗ್ ಅವರು ವಿದೇಶದಲ್ಲಿ ವಿದ್ಯಾಭ್ಯಾಸಕ್ಕೆಂದು ಹೋಗಿದ್ದರು.
ನಂತರ ಈಗ ಭಾರತಕ್ಕೆ ಹಿಂದಿರುಗಿ ತನ್ನ ತಾಯಿ ನೆಲದಲ್ಲೇ ಸಾಧನೆ ಮಾಡುವ ಕಡೆ ಮುಖ ಮಾಡಿದ್ದಾರೆ. ತಂದೆಯಂತೆ ಇವರು ಸಹ ವಿಭಿನ್ನ ವ್ಯಕ್ತಿತ್ವವನ್ನು ಹೊಂದಿದ್ದು, ತನ್ನಿಂದ ಆದಷ್ಟು ಸಮಾಜಕ್ಕೆ ಒಳಿತನ್ನು ಮಾಡುವ ಬೇಕು ಎನ್ನುವ ಉದ್ದೇಶದಿಂದ ಉದ್ಯಮ ಒಂದನ್ನು ಆರಂಭಿಸಿದ್ದಾರೆ. ರಾಸಾಯನಿಕಗಳ ಬಳಕೆ ಇಲ್ಲದೆ ಶುದ್ಧವಾದ ಕೊಬ್ಬರಿ ಎಣ್ಣೆಯನ್ನು ತಯಾರಿಸಿ ಅದನ್ನ ಸಮಾಜಕ್ಕೆ ಕೊಡುವ ಆಲೋಚನೆ ಮಾಡಿ ಬೆಂಗಳೂರು ಹೊರವಲಯದಲ್ಲಿ ಫ್ಯಾಕ್ಟರಿ (Organic coconut oil) ಆರಂಭಿಸಿದ್ದಾರೆ.
ಇವರು ಇದೇ ರೀತಿ ಇನ್ನೂ ಅನೇಕ ಪ್ರಾಡಕ್ಟ್ ಗಳನ್ನು ರಾಸಾಯನಿಕ ರಹಿತವಾಗಿ ಬಳಸಬೇಕು ಎನ್ನುವುದಕ್ಕೆ ಉತ್ತೇಜನ ಕೊಡುವ ಸಲುವಾಗಿ ಆ ಪ್ರಯೋಗಗಳನ್ನು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತಂದೆ ತಾಯಿ ಹಾಗೂ ಕುಟುಂಬದ ಅನೇಕರು ಚಿತ್ರರಂಗದಲ್ಲಿ ಇದ್ದರೂ ಸಹ ಕಾವ್ಯ ನಾಗ್ ಈ ಕಡೆ ಆಕರ್ಷಿತರಾಗಲಿಲ್ಲ. ಬದಲಾಗಿ ಒಂದು ಹೊಸ ರೀತಿಯಾಗಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಇವರ ಈ ಕನಸಿಗೆ ಅವರ ಪತಿಯ ಸಂಪೂರ್ಣ ಸಹಕಾರ ಇದ್ದು, ಈಗ ದಂಪತಿಗಳಿಬ್ಬರೂ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.