ಕಂದಾಯ ಇಲಾಖೆಯ ನೋಂದಣಿ ಹಾಗೂ ಮುದ್ರಾಂಕ ವಿಭಾಗದಲ್ಲಿ ರಾಜಸ್ವ ಸಂಗ್ರಹದ ವಿಚಾರದಲ್ಲಿ ಸೆಪ್ಟೆಂಬರ್ 27 ಬುಧವಾರದಂದು ಹೊಸ ದಾಖಲೆ ಸೃಷ್ಟಿಯಾಗಿದೆ. ಒಂದೇ ದಿನ ಆಸ್ತಿ ನೋಂದಣಿ ಸೇರಿದಂತೆ 26,058 ದಸ್ತಾವೇಜು ಪ್ರಕ್ರಿಯೆ ನಡೆದಿದ್ದು, 311 ಕೋಟಿ ರೂಪಾಯಿ ಸರ್ಕಾಲದ ಬೊಕ್ಕಸಕ್ಕೆ ಆದಾಯ ಸಂಗ್ರಹವಾಗಿದೆ.
ಇಷ್ಟು ದೊಡ್ಡ ಮಟ್ಟದಲ್ಲಿ ಆಸ್ತಿ ನೋಂದಣಿ, ದಸ್ತಾವೇಜು ಪ್ರಕ್ರಿಯ ನಡೆದು ಗರಿಷ್ಠ ಹಣ ಸಂಗ್ರಹಣೆಯಾಗಿರುವುದು ಕರ್ನಾಟಕದ ಇತಿಹಾಸದಲ್ಲಿಯೇ ಇದೇ ಮೊದಲೆನ್ನಲಾಗಿದೆ. ಕಾವೇರಿ ತಂತ್ರಾಂಶ 2 ನ ಅಳವಡಿಕೆ, ನೂತನ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಕಂದಾಯ ಇಲಾಖೆಯಲ್ಲಿ ತಂದಿರುವ ಹೊಸ ನಿಯಮಗಳು ಮತ್ತು ಇತ್ತೀಚೆಗೆ ಸರ್ಕಾರವು ನೋಂದಣಿ ಹಾಗೂ ಮುದ್ರಾಂಕ ಶುಲ್ಕವನ್ನು ಹೆಚ್ಚಳ ಮಾಡಿ ಪರಿಷ್ಕೃತ ದರ ಅಕ್ಟೋಬರ್ 1 ರಿಂದಲೇ ಜಾರಿಗೆ ಬರುವಂತೆ ಆದೇಶಿಸಿರುವುದು ಇದಕ್ಕೆ ಕಾರಣವಾಗಿದೆ.
ಈ ಮೇಲೆ ತಿಳಿಸಿದಂತೆ ಸರ್ಕಾರವು ನೋಂದಣಿ ಹಾಗೂ ಮುದ್ರಾಂಕ ಶುಲ್ಕವನ್ನು ಹೆಚ್ಚಿಗೆ ಮಾಡಿರುವುದರಿಂದ ಸೆಪ್ಟೆಂಬರ್ 30ರವರೆಗೆ ತಮ್ಮ ಆಸ್ತಿ ಪ್ರಕ್ರಿಯೆ ಮುಗಿಸಲು ಜನರು ಕಚೇರಿಗಳಿಗೆ ಜಮಾಯಿಸುತ್ತಿದ್ದಾರೆ. ಇದರಿಂದ ಜನದಟ್ಟಣೆ ಉಂಟಾಗಿದ್ದು ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ಒತ್ತಡ ಕೂಡ ಬೀಳುತ್ತಿದೆ. ಜನ ಸಾಮಾನ್ಯರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ಕಂದಾಯ ಇಲಾಖೆಯ ಕೆಲಸದ ಅವಧಿಯನ್ನು ಹೆಚ್ಚಿಗೆ ಮಾಡಲಾಗಿದೆ.
ಸೆಪ್ಟೆಂಬರ್ 21ರಿಂದ ಸೆಪ್ಟೆಂಬರ್ 30ಕ್ಕೆ ಅನ್ವಯ ಆಗುವಂತೆ ಬೆಳಿಗ್ಗೆ 8:00 ರಿಂದ ರಾತ್ರಿ 8:00 ರವರೆಗೂ ಕೂಡ ಸಮಯ ಹೆಚ್ಚಿಗೆ ಮಾಡಿ ರಜಾ ದಿನಗಳಲ್ಲಿ ಕಾರ್ಯ ನಿರ್ವಹಿಸಿದೆ ಹಾಗಾಗಿ ಈ ವಾರಗಳಲ್ಲಿ ಹೆಚ್ಚು ಆಸ್ತಿ ದಸ್ತಾವೇಜು ಪ್ರಕ್ರಿಯೆ ನಡೆದು ಹೆಚ್ಚಿನ ಹಣ ಸಂಗ್ರಹವಾಗಿದೆ ಎಂದು ಹೇಳಬಹುದಾಗಿದೆ. ಸೆಪ್ಟೆಂಬರ್ 22 ರಂದು 12,955 ಆಸ್ತಿ ನೋಂದಣಿ, ದಸ್ತಾವೇಜು ಪ್ರಕ್ರಿಯೆ ಮೂಲಕ 130.87 ಕೋಟಿ ರೂ. ಮತ್ತು ಸೆ.25ರಂದು 158.28 ಕೋಟಿ ರೂ. ಹಣ ಸರ್ಕಾರದ ಖಜಾನೆಗೆ ಸೇರಿದೆ.
ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ 3 ಬೋರ್ಡ್ ಎಕ್ಸಾಮ್ ನಡೆಸಲು ನಿರ್ಧಾರ.!
ಈಗ ರಾಜ್ಯದ ಎಲ್ಲಾ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಕಾವೇರಿ ತಂತ್ರಾಂಶ 2 ಅಳವಡಿಕೆ ಆಗಿರುವುದರಿಂದ ನೋಂದಣಿ ಸೇರಿ ಇತರೆ ಪ್ರಕ್ರಿಯೆಗೆ ಯಾವುದೇ ಮಧ್ಯವರ್ತಿಗಳ ಕಾಟವಿಲ್ಲದೆ ಆಸ್ತಿದಾರನಿಗೆ ಅನುಕೂಲವಾದ ದಿನ ಮತ್ತು ಸಮಯಕ್ಕೆ ಆಸ್ತಿ ನೋಂದಣಿ ಮಾಡಿಕೊಳ್ಳುವ ಅವಕಾಶವಾಗಿದೆ ಇದೇ ಕಾರಣವು ಆಸ್ತಿ ನೋಂದಣಿ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎನ್ನಲೂ ಬಹುದು.
ರಾಜ್ಯದ ಒಟ್ಟು 256 ಉಪನೋಂದಣಿ ಕಚೇರಿಗಳಲ್ಲಿ ಜೂ.25ರಿಂದ ಪೂರ್ಣ ಪ್ರಮಾಣದಲ್ಲಿ ಸುಧಾರಿತ ಕಾವೇರಿ ತಂತ್ರಾಂಶದ ಮೂಲಕವೇ ನೋಂದಣಿ ಮತ್ತು ದಸ್ತಾವೇಜು ಪ್ರಕ್ರಿಯೆ ನಡೆಯುತ್ತಿದೆ. ಒಂದೇ ದಿನ ಗರಿಷ್ಠ ನೋಂದಣಿ, ದಸ್ತಾವೇಜು ಪ್ರಕ್ರಿಯೆ ಯಶಸ್ವಿಯಾಗಿ ನಡೆಸುವ ಮೂಲಕ ತಂತ್ರಾಂಶ ಗರಿಷ್ಠ ಕಾರ್ಯಕ್ರಮತೆ ಸಾಬೀತು ಪಡಿಸುತ್ತಿದೆ.
ಕಾವೇರಿ ತಂತ್ರಾಂಶದ ಬಗ್ಗೆ ಆರಂಭದಲ್ಲಿ ವಿರೋಧ ವ್ಯಕ್ತವಾಗಿತ್ತು. ಇದರಲ್ಲಿರುವ ಸಮಸ್ಯೆ ಕುರಿತು ಸಾಕಷ್ಟು ದೂರುಗಳೂ ಇಲಾಖೆಗೆ ಬಂದಿದ್ದವು. ಇದೀಗ ಎಲ್ಲಾ ಸಮಸ್ಯೆಗಳನ್ನೂ ನಿವಾರಿಸಿದ್ದು, ಕಾವೇರಿ-2 ತಂತ್ರಾಂಶ ಸಾಕಷ್ಟು ಗಮನ ಸೆಳೆದಿದೆ. ಆರಂಭದಲ್ಲಿ ಕಾವೇರಿ ತಂತ್ರಾಂಶ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ, ನೆಟ್ ವರ್ಕ್ ಮತ್ತು ಸರ್ವರ್ ಸೇರಿದಂತೆ ಸಾಕಷ್ಟು ಅಡಚಣೆಗಳಿವೆ ಎನ್ನುವ ದೂರು ಕೇಳಿ ಬರುತ್ತಿತ್ತು.
ಆದರೆ ಸುಧಾರಿತ ಕಾವೇರಿ 2 ತಂತ್ರಾಶವನ್ನು ಅಡವಡಿಕೆ ಮಾಡಿದ ಮೇಲೆ ಈ ಸಮಸ್ಯೆಗೆ ಪರಿಹಾರ ದೊರಕಿದಂತಾಗಿದೆ. ಯಶಸ್ವಿಯಾಗಿ ಈಗ ಗರಿಷ್ಠ ನೋಂದಣಿ ಮತ್ತು ದಸ್ತಾವೇಜು ಹಾಗೂ ಆದಾಯ ಸಂಗ್ರಹವಾಗಿ ದಾಖಲೆಯಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ ಎನ್ನಬಹುದು.